
ಮಡಿಕೇರಿ: ಲಾರಿಯಿಂದ ಜೀಪಿನ ಗಾಜು ಸೀಳಿ ಒಳ ಹೊಕ್ಕ ದಿಮ್ಮಿ!
Team Udayavani, Jan 29, 2023, 6:15 AM IST

ಮಡಿಕೇರಿ: ಟಿಂಬರ್ ಸಾಗಾಟದ ಸಂದರ್ಭ ಮರದ ದಿಮ್ಮಿಯೊಂದು ಲಾರಿಯಿಂದ ಜಾರಿ ಪಿಕ್‌ಅಪ್ ಜೀಪಿನ ಗಾಜನ್ನು ಸೀಳಿ ಒಳಹೊಕ್ಕ ಘಟನೆ ಸಂಪಾಜೆ ರಸ್ತೆಯ ಜೋಡುಪಾಲ ಸಮೀಪ ಸಂಭವಿಸಿದೆ.
ಶುಕ್ರವಾರ ರಾತ್ರಿ 14 ಚಕ್ರದ ಲಾರಿಯೊಂದರಲ್ಲಿ ಭಾರೀ ಗಾತ್ರದ ಮರದ ದಿಮ್ಮಿಗಳನ್ನು ಮಂಗಳೂರು ಕಡೆಗೆ ಸಾಗಿಸಲಾಗುತ್ತಿತ್ತು. ಜೋಡುಪಾಲ ಸಮೀಪ ಹಗ್ಗ ತುಂಡರಿಸಲ್ಪಟ್ಟ ಪರಿಣಾಮ ದಿಮ್ಮಿಗಳು ರಸ್ತೆಗೆ ಉರುಳಿದವು.
ಜೋಡುಪಾಲದಿಂದ ಮದೆನಾಡು ಕಡೆಗೆ ಬರುತ್ತಿದ್ದ ಪಿಕ್‌ಅಪ್ ವಾಹನಕ್ಕೆ ಮರದ ದಿಮ್ಮಿ ಅಪ್ಪಳಿಸಿ ಗಾಜನ್ನು ಸೀಳಿ ಒಳಹೊಕ್ಕಿತು. ಚಾಲಕ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನ ಜಖಂಗೊಂಡಿದ್ದು, ಕೆಲ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
