ನೆಲ್ಲಿಯರ ಕಾಲನಿ: 11 ಕುಟುಂಬಗಳಿಗೆ ಸರಕಾರದ ನೆರಳಲ್ಲಿ ಹೊಸಬಾಳು
Team Udayavani, Jul 6, 2019, 5:24 AM IST
ಕಾಸರಗೋಡು: ಜಿಲ್ಲೆಯ ನೆಲ್ಲಿಯರ ಕಾಲನಿಯ ಹನ್ನೊಂದು ಕುಟುಂಬಗಳಿಗೆ ಸರಕಾರದ ನೆರಳು ಹೊಸಬಾಳು ಒದಗಿಸು ತ್ತಿದೆ. ಲೋಕಸಭೆ ಚುನಾವಣೆಯ ಬಿರುಸಿ ನಲ್ಲಿದ್ದ ವೇಳೆ ಜಿಲ್ಲೆಯ ಮಲೆನಾಡ ಪ್ರದೇಶದಲ್ಲಿ ಸುರಿದ ಭಾರೀ ಗಾಳಿಮಳೆಗೆ ಎಲ್ಲವನ್ನೂ ಕಳೆದುಕೊಂಡು ಕಂಗೆಟ್ಟಿದ್ದ 11 ಕುಟುಂಬಗಳ 47 ಮಂದಿಗೆ ರಾಜ್ಯ ಸರಕಾರ ಶಾಶ್ವತ ಪುನರ್ವಸತಿ ಒದಗಿಸುವ ಯತ್ನದಲ್ಲಿ ಮುಂದುವರಿಯುತ್ತಿದೆ.
ಕಿನಾನೂರು-ಕರಿಂದಳಂ ಗ್ರಾಮ ಪಂಚಾ ಯತ್ ವ್ಯಾಪ್ತಿಯ ನೆಲ್ಲಿಯರ ಕಾಲನಿಯಲ್ಲಿ ವಾಸಿಸುತ್ತಿದ್ದ 11 ಕುಟುಂಬಗಳು ಈ ಪ್ರಯೋಜನ ಪಡೆಯಲಿವೆ. ಕೂಲಿ ಕಾಯಕ ನಡೆಸುತ್ತಿರುವವರ ಸಹಿತ ಬಡವರೇ ವಾಸಿಸುತ್ತಿರುವ ಈ ಕಾಲನಿಯಲ್ಲಿ ಇದು ನುಂಗಲಾರದ ತುತ್ತಾಗಿತ್ತು. ಕಳೆದ ಎ. 23ರಂದು ಅನಿರೀಕ್ಷಿತವಾಗಿ ಅಪ್ಪಳಿಸಿದ ಬೇಸಗೆ ಮಳೆಯ ಬಿರುಸಿಗೆ ಈ ಮಂದಿ ಸರ್ವಸ್ವವನ್ನೂ ಕಳೆದುಕೊಂಡು ಅನಾಥರಾಗಿದ್ದರು. ಇಲ್ಲೇ ಹುಟ್ಟಿ, ಇಲ್ಲೇ ಬೆಳೆದ ಈ ಮಂದಿ ಬದುಕಿನಲ್ಲಿ ಮಾಡಿಕೊಂಡಿದ್ದ ಮನೆ ಮತ್ತು ಬದುಕು ಒಂದೇ ದಿನದಲ್ಲಿ ನೆಲಸಮವಾಗಿತ್ತು.
ತಾತ್ಕಾಲಿಕ ಪುನರ್ವಸತಿಯಾಗಿ ಪರಪ್ಪ ಶಾಲೆಯಲ್ಲಿ ಈ ಮಂದಿಗೆ ಆಸರೆ ಒದಗಿಸ ಲಾಗಿತ್ತು. ಅನಂತರ ಇಲ್ಲಿನ ಸಮುದಾಯ ಸಭಾಂಗಣಕ್ಕೆ ಇವರನ್ನು ಸ್ಥಳಾಂತರಿಸ ಲಾಗಿತ್ತು. ಆದರೆ ಎಷ್ಟು ದಿನ ಇದೇ ಸ್ಥಿತಿಯಲ್ಲಿ ಬದುಕ ಬೇಕು ಎಂಬ ಚಿಂತೆ ಆಬಾಲವೃದ್ಧರನ್ನು ಕಾಡ ತೊಡಗಿತ್ತು. ಆದರೆ ಈ ದುಃಸ್ಥಿತಿಯನ್ನು ಗಮನಿ ಸಿದ ರಾಜ್ಯ ಸರಕಾರ ತತ್‌ಕ್ಷಣ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಂಡಿತ್ತು. ಪರಿಶಿಷ್ಟ ಪಂಗಡ ಅಭಿವೃದ್ಧಿ ನೇತೃತ್ವದಲ್ಲಿ ಕಿನಾನೂರು- ಕರಿಂದಳಂ ಗ್ರಾ. ಪಂ. ಮತ್ತು ಸಾರ್ವಜನಿಕರು ಪರಿಹಾರಕ್ಕೆ ಯತ್ನಿಸಿದ್ದರು. ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯ 2019-20 ವರ್ಷದ ಕಾರ್ಪ್ ನಿಧಿಯಲ್ಲಿ ಅಳವಡಿಸಿ ಮೊದಲ ಹಂತವಾಗಿ ವಿವಿಧೋದ್ದೇಶ ಸಮುದಾಯ ಸಭಾಂಗಣ ನಿರ್ಮಿಸಿದೆ. ಕೆಲವು ತಾಂತ್ರಿಕ ಸಮಸ್ಯೆಗಳಿ ದ್ದರೂ, ಪ್ರಾಮಾಣಿಕ ಯತ್ನಗಳ ಫಲವಾಗಿ ಕೇವಲ 27 ದಿನಗಳಲ್ಲಿ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ. ಜೂ.16ರಂದು ಈ ಕುಟುಂಬಗಳ ಮಂದಿ ಈ ಕಟ್ಟಡಕ್ಕೆ ಸ್ಥಳಾಂತರ ಗೊಂಡಿದ್ದಾರೆ. ರೆಡ್ ಕ್ರಾಸ್ ಸಂಸ್ಥೆಯ ವತಿ ಯಿಂದ ಒಂದೊಂದು ಕುಟುಂಬಕ್ಕೂ ತಲಾ 2 ಮಂಚ, ಹಾಸುಗೆ, ತಲೆದಿಂಬು, ಗ್ಯಾಸ್ ಸ್ಟವ್ ಇತ್ಯಾದಿ ಒದಗಿಸಲಾಗಿದೆ.
ಮುಂದಿನ ಒಂದೇ ವರ್ಷದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಯಾ ರಾಜ್ಯ ಸರಕಾರದ ಲೈಫ್ ಯೋಜನೆ ಪ್ರಕಾರ ಈ ಮಂದಿಗೆ ಸ್ವಂತ ಮನೆ ನಿರ್ಮಿಸಿ ನೀಡ ಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ
IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್
Wheel Chair Romeo actor exclusive interview | RELEASING ON MAY 27TH
ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ
ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?
ಹೊಸ ಸೇರ್ಪಡೆ
ಕೂಲ್ಡ್ರಿಂಕ್ಸ್ನಲ್ಲಿ ಹಲ್ಲಿ! ಅಹ್ಮದಾಬಾದ್ ಮೆಕ್ಡೊನಾಲ್ಡ್ ವಿರುದ್ಧ ಆರೋಪ
ಮಂಗಳಕ್ಕೆ ವಿಜ್ಞಾನಿಗಳ 30 ದಿನಗಳ ಟ್ರಿಪ್! ಅಮೆರಿಕ ಬಾಹ್ಯಾಕಾಶ ಸಂಸ್ಥೆಯ ವಿಶಿಷ್ಟ ಸಾಹಸ
ಈತ ಒಬ್ಬ ವಿಶಿಷ್ಟ ಕಳ್ಳ..ಕದ್ದ ಮೇಲೆ “ಐ ಲವ್ ಯೂ’ ಎಂದ!
ಏಷ್ಯನ್ ಕಪ್ ಹಾಕಿ: ಇಂಡೋನೇಶ್ಯ ಎದುರಾಳಿ: ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
ಭಾರತೀಯ ರೈಲ್ವೆಯಿಂದ ಜೂ. 21ರಿಂದ “ಶ್ರೀ ರಾಮಾಯಣ ಯಾತ್ರೆ’