ತುಂಬಿ ಹರಿದ ನದಿ ತೊರೆಗಳು,ಬೆಟ್ಟ,ಗುಡ್ಡ,ಬರೆ ಕುಸಿಯುವ ಆತಂಕ​​​​​​​


Team Udayavani, Aug 18, 2018, 6:00 AM IST

16spt3.jpg

ಸೋಮವಾರಪೇಟೆ: ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಗ್ರಾಮೀಣ ಭಾಗದಲ್ಲಿ ನದಿ ತೊರೆಗಳು ಭೋರ್ಗರೆಯುತ್ತಿದ್ದು, ಬೆಟ್ಟ, ಗುಡ್ಡ, ಬರೆಗಳು ಕುಸಿಯುವ ಆತಂಕದಲ್ಲಿ ನಿವಾಸಿಗಳು ಗ್ರಾಮ ತೊರೆಯುತ್ತಿದ್ದಾರೆ. 

ಬರೆ ಕುಸಿತಕ್ಕೆ ಹೆದರಿ ಊರುಬಿಟ್ಟರು
ಮಾದಾಪುರ ಸಮೀಪದ ಶಿರಂಗಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಗುಡ್ಡ ಕುಸಿಯುತ್ತಿರುವ ಮುನ್ಸೂಚನೆ ಸಿಕ್ಕಿದ ಗ್ರಾಮದ 150ಕ್ಕೂ ಹೆಚ್ಚು ಮಂದಿ, ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಗ್ರಾಮ ತೊರೆದಿದ್ದಾರೆ. ರಸ್ತೆಗೆ ಬರೆ ಕುಸಿದ ಪರಿಣಾಮ ಪಟ್ಟಣಕ್ಕೆ ತಲುಪಲು ಸಾಧ್ಯವಾಗದೆ ಸಹಾಯಕ್ಕಾಗಿ ಅಂಗಲಾಚು ತ್ತಿದ್ದಾರೆ. ಈಗಾಗಲೆ ಅಲ್ಲಿನ ಅಂಚೆ ಕಚೇರಿಯ ಸಮೀಪದ ತಂಗುದಾಣದಲ್ಲಿ ಆಶ್ರಯ ಪಡೆದಿದ್ದಾರೆ.

ಬರೆ ಕುಸಿತ: ಮೂವರಿಗೆ ಗಾಯ
ಮೂವತ್ತೂಕ್ಲು ಗ್ರಾಮದಲ್ಲಿ ಮನೆ ಮೇಲೆ ಬರೆ ಕುಸಿದ ಪರಿಣಾಮ, ಮನೆಯೊಳಗಿದ್ದ ಪ್ರಕೃತಿ, ಪ್ರೇಮಾ, ಬೋಪಯ್ಯ ಗಾಯಗೊಂಡಿದ್ದಾರೆ. ಗ್ರಾಮಸ್ಥರು ಅವರನ್ನು ರಕ್ಷಣೆ ಮಾಡಿ, ಸುಂಠಿಕೊಪ್ಪ ಆಸ್ಪತ್ರೆಗೆ ಸಾಗಿಸಿದ್ದಾರೆ.

ನೂರಾರು ಎಕರೆ 
ಕೃಷಿಭೂಮಿ ಜಲಾವೃತ

ಶಾಂತಳ್ಳಿ ಹೋಬಳಿಯ ಬಹುತೇಕ ಗ್ರಾಮಗಳ ನೂರಾರು ಎಕರೆ ಭತ್ತ ಭೂಮಿ ಜಲಾವೃತಗೊಂಡಿದೆ. ಕುಡಿಗಾಣ ಗ್ರಾಮ ಸಂಪರ್ಕ ಕಡಿತಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ಗ್ರಾಮದ ಸೇತುವೆ ಜಲಾವೃತ ಗೊಂಡಿದ್ದು, ಪಟ್ಟಣಕ್ಕೆ ತಲುಪಲು ಗ್ರಾಮಸ್ಥರು ಇನ್ನೊಂದು ದಾರಿಯನ್ನು ಆಶ್ರಯಿಸಿದ್ದರು. ಆದರೆ ಗುರುವಾರ ಬೆಳಗ್ಗೆ ಆ ರಸ್ತೆ ಮೇಲೆ ಬರೆ ಕುಸಿದ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ.

ಚೋರನಹೊಳೆ ತುಂಬಿ ಹರಿಯು ತ್ತಿದ್ದು, ಐಗೂರು ಗ್ರಾಮದ ಹೊಳೆದಂಡೆಯ ಮನೆಗಳು ಜಲಾವೃತಗೊಳ್ಳುವ ಆತಂಕ ಎದುರಾಗಿದೆ. ಮೋಹನ್‌ದಾಸ್‌, ವಿಶ್ವನಾಥ್‌, ಲೋಕನಾಥ್‌, ಇಂದಿರಾ ಅವರ ಮನೆಗಳು ನೀರಿನಿಂದ ಅವೃತವಾಗಿವೆ.
 
ಕಿರಗಂದೂರು ಗ್ರಾ.ಪಂ. ವ್ಯಾಪ್ತಿಯ ಮುರುಗ, ರಾಮು, ಪನ್ನಿರು, ಸುಬ್ರಮಣಿ, ಚಂದ್ರ, ಮಣಿ, ಗಣೇಶ್‌, ರಾಜೇಂದ್ರ, ಓಡಿ, ಸುಂದರರಾಜು, ಪಾಪಣ್ಣ, ಗಣೇಶ್‌, ಮುತ್ತಪ್ಪ ಅವವರ ಮನೆಗಳು ಜಲಾವೃತಗೊಂಡಿವೆ. ಇವರನ್ನು ಕಾಜೂರಿನ ಶಾಲೆಯಲ್ಲಿ ತೆರೆಯಲಾಗಿರುವ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಗ್ರಾಮ ಸಂಪರ್ಕಕ್ಕೆ ತೆಪ್ಪವನ್ನು ಉಪಯೋಗಿಸಲಾಗುತ್ತಿದೆ. ಹರಗ ಗ್ರಾಮದಲ್ಲಿ ಮುಖ್ಯ ರಸ್ತೆಯ ಮೋರಿ ಕುಸಿದ ಪರಿಣಾಮ ಸಂಪರ್ಕ ಕಡಿತದೊಂಡಿದೆ. ಯಡೂರು ಗ್ರಾಮದ ಕೃಷಿ ಭೂಮಿಯ ಸಮೀಪ ಹರಿಯುವ ತೊರೆಯ ಮೇಲೆ ಭೂಕುಸಿತವಾಗಿದ್ದು, ನೀರು ಗದ್ದೆಯ ಮೇಲೆ ಹರಿಯುತ್ತಿದ್ದು, ಬಹಳಷ್ಟು ನಷ್ಟವಾಗಿದೆ.

ಸರಣಿ ಮನೆ ಕುಸಿತ
ಬಜೆಗುಂಡಿ ಕಾಲನಿಯಲ್ಲಿ ಸರಣಿ ಮನೆ ಕುಸಿತವಾಗುತ್ತಿದ್ದು, ಬುಧವಾರ ರಾತ್ರಿ ಮತ್ತೆರಡು ಮನೆಗಳು ಕುಸಿದಿವೆ. ಚೆನ್ನಾ ಮತ್ತು ಪ್ರಿಯಾ ರತೀಶ್‌ ಅವರ ಮನೆಗಳು ಕುಸಿದಿವೆ. ಕಮಲ ಮತ್ತು ದೇವಕ್ಕಿ ಅವರ ಮನೆ ಪಕ್ಕ ಬರೆ ಕುಸಿದು ಹಾನಿಯಾಗಿದೆ. ಕ್ಯಾತೆ ಗ್ರಾಮದ ಪುಟ್ಟಸ್ವಾಮಿ, ರಾಮೇಗೌಡ, ಮಸಗೋಡು ಗ್ರಾಮದ ಸರೋಜಾ, ಜಾನಕಿ, ಅರೆಯೂರು ಗ್ರಾಮದ ರಮೇಶ್‌, ಹಾನಗಲ್ಲು ಗ್ರಾಮದ ಚಂದ್ರಕಲಾ, ಕಲ್ಕಂದೂರು ಗ್ರಾಮದ ಉಮಾ ಅವರ ಮನೆಗಳ ಗೋಡೆ ಕುಸಿದು ಹಾನಿಯಾಗಿದೆ. ಕಿರಿಕೊಡ್ಲಿ ಗ್ರಾಮದಲ್ಲಿ ಬರೆ ಕುಸಿದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಐಗೂರಿನ ಶೋಭಾ ಅವರ ಮನೆಯ ಮೇಲೆ ಮರಬಿದ್ದು ಹೆಚ್ಚಿನ ಹಾನಿಯಾಗಿದೆ. 

ಟಾಪ್ ನ್ಯೂಸ್

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

15-subrahmanya

ರಾಜ್ಯ ಸರಕಾರ ಜನಹಿತ ಮರೆತಿದೆ- ಕುಕ್ಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

writer Kakkappadi Shankaranarayan Bhat passes away

Kasaragod; ಹಾಸ್ಯ ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್‌ ನಿಧನ

8

Madikeri: ಕಾಫಿ ತೋಟದ ಕೆರೆಗೆ ಬಿದ್ದು ಕಾಡಾನೆ ಸಾವು

Kasaragod ಪತ್ನಿಯ ಕೊಂದಾತನಿಗೆ ಜೀವಾವಧಿ ಸಜೆ

Kasaragod ಪತ್ನಿಯ ಕೊಂದಾತನಿಗೆ ಜೀವಾವಧಿ ಸಜೆ

Karadka Society Fraud Case: ಆರೋಪಿ ಮನೆಯಿಂದ ಡೈರಿ ಪತ್ತೆ

Karadka Society Fraud Case: ಆರೋಪಿ ಮನೆಯಿಂದ ಡೈರಿ ಪತ್ತೆ

Madikeri: ಕುಸಿದು ಬಿದ್ದ ಹಳೆಯ ಕಟ್ಟಡ… ಅವಶೇಷಗಳಡಿ ಮೂವರು ಸಿಲುಕಿರುವ ಶಂಕೆ

Madikeri: ಕುಸಿದು ಬಿದ್ದ ಹಳೆಯ ಕಟ್ಟಡ.. ಅವಶೇಷಗಳಡಿ ಮೂವರು ಸಿಲುಕಿರುವ ಶಂಕೆ, ಮೂವರ ರಕ್ಷಣೆ

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

19-fusion

Father: ನಮಗಾಗಿ ದುಡಿದ ನಾಯಕ ನಮ್ಮ ಜನಕ

18-koratagere

Koratagere ಬಂದ್‌ಗೆ ಕರೆ ನೀಡಿದ ನೀರಾವರಿ ಸಂಘಟನೆ

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.