ವಚನಕಾರರ ಆದರ್ಶಗಳು ಇಂದಿಗೂ ಮಾದರಿ : ಜಿಲ್ಲಾಧಿಕಾರಿ

Team Udayavani, Jul 18, 2019, 5:57 AM IST

ಮಡಿಕೇರಿ : ಶಿವಶರಣ ಹಡಪದ ಅಪ್ಪಣ್ಣ ಸೇರಿದಂತೆ ಹಲವು ವಚನಕಾರರು ಸಮಾಜ ಸುಧಾರಣೆಗೆ ಶ್ರಮಿಸಿದ್ದು, ಹಡಪದ ಅಪ್ಪಣ್ಣ ಅವರ ವಚನ ತತ್ವ ಮತ್ತು ಆದರ್ಶಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಂಗಳವಾರ ನಡೆದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರಕಾರಿ ಕೆಲಸ ದೇವರ ಕೆಲಸವಾಗಿದ್ದು, ಕಾಯಕ ನಿಷ್ಠೆಯ ಬಗ್ಗೆ ಶರಣರು ಸಂದೇಶ ಸಾರಿದ್ದಾರೆ. ಆದ್ದರಿಂದ ವಚನಗಳನ್ನು ಅಧ್ಯಯನ ಮಾಡುವಂತಾಗಬೇಕು. ಅದರಂತೆ ನಡೆದುಕೊಳ್ಳುವಂತಾಗಬೇಕು ಮತ್ತು ಸಮಾಜ ಸುಧಾರಕರನ್ನು ಸ್ಮರಿಸು ವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ‌ ಅಧ್ಯಕ್ಷ ಬಿ.ಎಸ್‌.ಲೋಕೇಶ್‌ ಸಾಗರ್‌ ಅವರು ಮಾತನಾಡಿ , ಹಡಪದ ಅಪ್ಪಣ್ಣ ಅವರು ಶ್ರೇಷ್ಠ ವಚನಕಾರರು , ಇವರು 12ನೇ ಶತಮಾನದಲ್ಲಿ ಬಸವಣ್ಣರವರ ಅನುಭವ ಮಂಟಪದಲ್ಲಿ ಬಸವಣ್ಣರವರ ನೆಚ್ಚಿನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 250 ಕ್ಕೂ ವಚನ ಬರೆದಿದ್ದಾರೆ, ಇಂತಹ ಅನೇಕ ಸಂತರು ರಾಜ್ಯದಲ್ಲಿ ನೆಲೆಸಿದರೆಂಬುದು ಕರ್ನಾಟಕದ ಜನತೆಯ ಹೆಮ್ಮೆಯಾಗಿದೆ ಎಂದು ಅವರು ತಿಳಿಸಿದರು.

ಸರಕಾರದ ವಿವಿಧ ಜಯಂತಿಗಳನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿ ಸುವ ನಿಟ್ಟಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ವಚನ ಗಾಯನ ಕಾರ್ಯಕ್ರಮ ಏರ್ಪಡಿಸಲು ಚಿಂತನೆ ಮಾಡಲಾಗಿದೆ ಎಂದರು.

ಜಿ.ಪಂ.ಸಿಇಒ. ಕೆ.ಲಕ್ಷ್ಮೀಪ್ರಿಯ ಅವರು ಮಾತನಾಡಿ, ಭಾರತದಲ್ಲಿ ಹಲವಾರು ಶ್ರೇಷ್ಠ ಸಂತರು ಉತ್ತಮ ಮಾನವೀಯ ಮೌಲ್ಯವನ್ನು ತಿಳಿಸಿದ್ದಾರೆ. ಅವರ ಆದರ್ಶ ಜೀವನವನ್ನು ಜನರು ಅನುಕರಣೆ ಮಾಡುವ ಮೂಲಕ ಸಮಾಜದ ಏಳಿಗೆಗಾಗಿ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎಚ್‌.ಎನ್‌.ವೆಂಕಟೇಶ್‌ ಅವರು ಮಾತನಾಡಿ , ಶಿವಶರಣ ಹಡಪದ ಅಪ್ಪಣ್ಣ ಅವರ ಜೀವನ ಚರಿತ್ರೆ ತಿಳಿದುಕೊಳ್ಳುವಂತಾಗಬೇಕು. ಸಮಾಜ ಅಭಿವೃದ್ಧಿ ಹೊಂದಲು ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ, ಸವಿತಾ ಸಮಾಜದ ಜಿಲ್ಲಾ ಪ್ರತಿನಿಧಿ ಪುಟ್ಟರಾಜು, ಜಿ.ಪಂ.ಮುಖ್ಯಲೆಕ್ಕಾಧಿಕಾರಿ ನಂದ, ಯೋಜನಾ ನಿರ್ದೇಶಕರಾದ ಶ್ರೀಕಂಠಮೂರ್ತಿ, ಸಹಾಯಕ ಕಾರ್ಯದರ್ಶಿ ಬಾಬು, ಲೋಕೋಪಯೋಗಿ ಇಲಾಖೆ ಇಇ ಇಬ್ರಾಹಿಂ, ಜಿಲ್ಲಾ ಐಟಿಡಿಪಿ ಇಲಾಖೆಯ ಅಧಿಕಾರಿ ಶಿವಕುಮಾರ್‌, ನಾನಾ ಇಲಾಖೆಯ ಅಧಿಕಾರಿಗಳು, ಸಿಬಂದಿಗಳು ಹಾಗೂ ಇತರರು ಹಾಜರಿದ್ದರು.

ಸತೀಶ್‌ ಮತ್ತು ಪಂಚಮ್‌ ಬೋಪಣ್ಣ ತಂಡದವರಿಂದ ವಚನ ಗಾಯನ ಕಾರ್ಯಕ್ರಮಗಳು ನಡೆದವು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ ಅವರು ಸ್ವಾಗತಿಸಿದರು, ಎಚ್‌.ಜಿ.ಕುಮಾರ್‌ ನಿರೂಪಿಸಿದರು, ಮಣಜೂರು ಮಂಜುನಾಥ್‌ ಅವರು ವಂದಿಸಿದರು.

ಕಾಯಕ ನಿಷ್ಠೆ
ದಾಸ ಸಂತರನ್ನು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತಗೊಳಿಸಬಾರದು. ಬದಲಾಗಿ ಸಮಾಜದ ಎಲ್ಲ ಜನರು ಕೂಡ ಮಹಾನ್‌ ಸಂತರ ಆದರ್ಶ ಜೀವನ ಅಳವಡಿಸಿಕೊಳ್ಳಬೇಕು. ಮಾನವೀಯ ತತ್ವದ ನೆಲೆಯಲ್ಲಿ ಸಮಾಜದಲ್ಲಿ ಉತ್ತಮ ಕಾಯಕ ನಿಷ್ಠೆಯಿಂದ ಜೀವನ ಸಾಗಿಸಬೇಕಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ‌ ಅಧ್ಯಕ್ಷ ಬಿ.ಎಸ್‌.ಲೋಕೇಶ್‌ ಸಾಗರ್‌ ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ