

Team Udayavani, Apr 30, 2019, 2:10 PM IST
ಕೋಲಾರ ನಗರದ ತಿರುಮಲ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮ್ಯಾನೇಜರ್ ಶ್ರೀನಿವಾಸ್ ಸಾರ್ವಜನಿಕರಿಂದ ಥಳಿತಕ್ಕೊಳಗಾಗಿದ್ದು, ಬಳಿಕ ಅವರನ್ನು ಪೊಲೀಸರಿಗೆ ಒಪ್ಪಿಸಲಾಯಿತು.
ಕೋಲಾರ: ನಗರದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ ಒಂದೂವರೆ ಕೋಟಿ ರೂ.ಗಳ ವಂಚನೆ ನಡೆದಿದ್ದು, ಮೋಸಕ್ಕೊಳಗಾದವರು ಮಾಲೀಕನಿಗೆ ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಜರುಗಿದೆ.
ತಿರುಮಲ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಲಿಮಿಟೆಡ್‌ನ ಮಾಲೀಕ ಶ್ರೀನಿವಾಸ್ ಸಾರ್ವಜನಿಕರಿಂದ ಥಳಿತಕ್ಕೊಳಗಾಗಿ ಸದ್ಯಕ್ಕೆ ವೇಮಗಲ್ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ತಾಲೂಕಿನ ವೇಮಗಲ್ ಗ್ರಾಮದಲ್ಲಿ ಮೂರು ವರ್ಷಗಳ ಹಿಂದೆ ಸೌಹಾರ್ದ ಕ್ರೇಡಿಟ್ ಕೋ-ಅಪರೇಟಿವ್ ಬ್ಯಾಂಕ್ ಸ್ಥಾಪಿಸಿದ ನರಸಾಪುರದ ಶ್ರೀನಿವಾಸ್ ಮತ್ತು ಪದ್ಮಾವತಿ ಎಂಬುವರು ಬ್ಯಾಂಕ್ ನಲ್ಲಿ ಸುಮಾರು 3 ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದರು. ಬ್ಯಾಂಕ್ ನಲ್ಲಿ ಸದಸ್ಯತ್ವ ಪಡೆದು ಚೀಟಿ ಹಾಕಿರುವ ವ್ಯಕ್ತಿಗಳಿಗೆ ಸುಮಾರು 200 ಜನರಿಗೆ ಒಂದೂವರೆ ಕೋಟಿ ರೂ.ಗಳಷ್ಟು ವಂಚನೆ ಮಾಡಿದ್ದರೆಂದು ದೂರಲಾಗಿದೆ.
ವೇಮಗಲ್ ಸುತ್ತಮುತ್ತಲ ಜನತೆ 10ಲಕ್ಷ ರೂ. ಚೀಟಿನಲ್ಲಿ 200 ಜನ, 5ಲಕ್ಷ ರೂ. ಚೀಟಿಯಲ್ಲಿ 50ಜನ, 2ಲಕ್ಷ ರೂ. ಚೀಟಿಯಲ್ಲು 40 ಜನ, 60 ಸಾವಿರ ರೂ. ಚೀಟಿಯಲ್ಲಿ 20ಜನ, 50ಸಾವಿರ ರೂ. ಚೀಟಿಯಲ್ಲಿ 20 ಜನರು ಹಣ ತೊಡಗಿಸಿದ್ದರು.
ಪ್ರತಿ ತಿಂಗಳು ಕುಲುಕು ಚೀಟಿ ಎಂಬಂತೆ ವ್ಯವಹಾರ ನಡೆಯುತ್ತಿದ್ದು, ಸ್ಥಳೀಯವಾಗಿ ಒಂಬತ್ತು ಮಂದಿಯನ್ನು ಬ್ಯಾಂಕ್ ನಲ್ಲಿ ಕೆಲಸ ಕೊಡಲಾಗಿತ್ತು. ಬ್ಯಾಂಕ್ ನ ಸಿಬ್ಬಂದಿ ಎಂದು ನೇಮಕ ಮಾಡಿ ಇವರ ಮೂಲಕ ಚೀಟಿ ಹಾಕಿಸಿಕೊಂಡು ಸುಮಾರು 1-50 ಕೋಟಿ ರೂನಷ್ಟು ಬ್ಯಾಂಕ್ ಮ್ಯಾನೇಜರ್ ನರಸಾಪುರ ಶ್ರೀನಿವಾಸ್ ಮತ್ತು ಪದ್ಮಾವತಿ ಎಂಬುವರು ವಂಚನೆ ಮಾಡಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಶ್ರೀನಿವಾಸ್ ಮತ್ತು ಪದ್ಮಾವತಿ ವೇಮಗಲ್ ನಲ್ಲಿ ಸ್ಥಾಪಿಸಿದ್ದ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಬ್ಯಾಂಕ್‌ನ್ನು ರಾತ್ರೋರಾತ್ರಿ ಮುಚ್ಚಿಕೊಂಡು ಹೋಗಿ ಈಗ ಕೋಲಾರದ ಟೊಮೇಟೋ ಮಾರುಕಟ್ಟೆ ಸಮೀಪ ಮಾಲೂರು ರಸ್ತೆಯ ಪೂಜಾ ಕಲ್ಯಾಣ ಮಂಟಪದ ಬಳಿ ನೂತನವಾಗಿ ಉದ್ದೇಶಿತ ಕೋಲಾರ ತಿರುಮಲ ಸೌಹಾರ್ದ ಕ್ರೇಡಿಟ್ ಆಪರೇಟಿವ್ ಲಿ ಎಂಬ ಹೆಸರನ್ನು ಇಟ್ಟುಕೊಂಡು ಬ್ಯಾಂಕ್ ಸ್ಥಾಪನೆ ಮಾಡಿದ್ದನು.
ಈ ಬ್ಯಾಂಕ್‌ಗೆ ಸಂಬಂಧಿಸಿದಂತೆ ಪಾಂಪ್ಲೆಟ್ ಗಳಲ್ಲಿ ಯಾವುದೇ ರೀತಿಯ ಮೊಬೈಲ್ ನಂಬರ್ ಇಲ್ಲದೆ ಸುಮಾರು 1000 ಸಾವಿರ ಪಾಂಪ್ಲೆಟ್ ಹಂಚಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ವೇಮಗಲ್ ಬ್ಯಾಂಕ್ ಸಿಬ್ಬಂದಿಯವರೆ ಬ್ಯಾಂಕ್ ಮ್ಯಾನೇಜರ್ ಶ್ರೀನಿವಾಸ್‌ರನ್ನು ಮೋಸಕ್ಕೊಳಗಾದವರ ಸಹಾಯದಿಂದ ಕೋಲಾರದ ಕಚೇರಿಗೆ ನುಗ್ಗಿ ಅವರನ್ನು ಎಳೆದಾಡಿ, ಥಳಿಸಿದ್ದಾರೆ. ನಂತರ ಶ್ರೀನಿವಾಸ್‌ರನ್ನು ಕೋಲಾರದಿಂದ ಕರೆದುಕೊಂಡು ಬಂದು ವೇಮಗಲ್ ಠಾಣೆಗೆ ತಂದು ಒಪ್ಪಿಸಿದ್ದಾರೆ.
ವೇಮಗಲ್ ಠಾಣೆಗೆ ಸಾರ್ವಜನಿಕರು ದೂರು ನೀಡಿದ್ದು, ಆರೋಪಿ ಶ್ರೀನಿವಾಸ್‌ರನ್ನು ತಮ್ಮ ವಶದಲ್ಲಿಟ್ಟುಕೊಂಡಿರುವ ವೇಮಗಲ್ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Ad
ಮಾಜಿ ಸ್ಪೀಕರ್ ತೋಟದಲ್ಲಿ ಮೇವು ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು
Kolara: ಮಾವಿಗೆ ಬೆಂಬಲ ಬೆಲೆಗಾಗಿ ಹೆದ್ದಾರಿ ತಡೆ; ರಸ್ತೆಯಲ್ಲೇ ಮಾವು ಸುರಿದು ಪ್ರತಿಭಟನೆ
ಎಕ್ಸೆಪ್ರೆಸ್ ಹೈವೇನಲ್ಲಿ ಲಘು ವಾಹನಗಳ ಅಕ್ರಮ ಪ್ರವೇಶ!
Karnataka: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 18 ಮೈನಸ್ ಆಗುತ್ತೆ: ಜಮೀರ್
Karnataka: ಬಿಜೆಪಿಯವರು ಒಂದೇ ಒಂದು ಮನೆ ನೀಡಿದ್ದರೆ ರಾಜಕೀಯ ನಿವೃತ್ತಿ: ಜಮಿರ್ ಖಾನ್
DRDO: 125 ಕೆ.ಜಿ. ಭಾರ ತಡೆವ ಅಗ್ಗದ ಕೃತಕ ಕಾಲು ತಯಾರಿಸಿದ ಡಿಆರ್‌ಡಿಒ
Udupi: ಗೀತಾರ್ಥ ಚಿಂತನೆ-322: ಸ್ವಭಾವ-ಪ್ರಭಾವಕ್ಕನುಸಾರ ವರ್ತಿಸುವ ಜೀವಿಗಳು
Mangaluru; ಸೋಲಾರ್ ಸೂರ್ಯಘರ್ ಯೋಜನೆ: 13 ಗ್ರಾಮಗಳ ಆಯ್ಕೆ
Malpe: ಮೀನುಗಾರ ಸಹಕಾರಿ ಸಂಘ ಅಶಕ್ತರ ಬಾಳಿನ ಆಶಾಕಿರಣವಾಗಲಿ: ಡಾ| ಜಿ. ಶಂಕರ್
Koteshwara: ಶ್ರೀ ಸಂಯಮೀಂದ್ರತೀರ್ಥರ ಚಾತುರ್ಮಾಸ ವ್ರತ ಸ್ವೀಕಾರ
You seem to have an Ad Blocker on.
To continue reading, please turn it off or whitelist Udayavani.