Udayavni Special

ಕೆರೆ ಕೋಡಿ ಹರಿಯಲು ಕೇವಲ 1 ಅಡಿ ಬಾಕಿ


Team Udayavani, Sep 26, 2021, 3:56 PM IST

ಕೆರೆ ಕೋಡಿ ಹರಿಯಲು ಕೇವಲ 1 ಅಡಿ ಬಾಕಿ

ಕೆಜಿಎಫ್: ತಾಲೂಕಿನ ಬೇತಮಂಗಲ ಕೆರೆ ಕೋಡಿ ಹರಿಯಲು ಕೇವಲ ಒಂದು ಅಡಿ ಮಾತ್ರವೇ ಬಾಕಿ ಇದ್ದು, ಈ ಸಂತಸದ ಕ್ಷಣವನ್ನು ಕಣ್ತುಂಬಿಕೊಳ್ಳಲು ಹೋಬಳಿಯ ಜನರು ಕಾತರದಿಂದ ಕಾಯುತ್ತಿದ್ದಾರೆ.

2017ರಲ್ಲಿ ಕೋಡಿ ಹರಿದಿದ್ದ ಕೆರೆ ಈಗ ಬಹುತೇಕ ಭರ್ತಿಯಾಗಿದೆ. ಶನಿವಾರದವರೆಗೆ ಕೋಡಿ ಹರಿಯಲು ಕೇವಲ ಒಂದು ಅಡಿ ಮಾತ್ರವೇ ಬಾಕಿ ಇತ್ತು. ಈವರೆಗೂ ಒಳ ಹರಿವು ಕಡಿಮೆ ಇದ್ದು ನೀರು ನಿಧಾನವಾಗಿ ಬೇರೆಕೆರೆಗಳಿಂದ ಹರಿದು ಬರುತ್ತಿದೆ. ಆದರೆ, ಶನಿವಾರಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಬಿದ್ದಿರುವುದರಿಂದ ಹಾಗೂ ಹೊಳಲಿ ಕೆರೆ ಕೋಡಿ ಬಿದ್ದಿರುವ ಕಾರಣ, ನೀರು ಹೆಚ್ಚಾಗಿ ಹರಿದು ಯಾವುದೇ ಕ್ಷಣದಲ್ಲಾದರೂ ಕೋಡಿ ಹರಿಯುವ ಸಾಧ್ಯತೆ ಇದೆ. ಇದಕ್ಕಾಗಿ ಜಲಮಂಡಳಿ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ.

ನೋಡುವುದೇ ಖುಷಿ: ಬೇತಮಂಗಲ ಕೆರೆ (ಪಾಲಾರ್‌ ಕೆರೆ) ನೀರು ಹೆಚ್ಚಾದರೆ ಬೇತಮಂಗಲದ ವಿಜಯೇಂದ್ರ ಸ್ವಾಮಿ ದೇವಾಲಯದ ಹಿಂಭಾಗ ದಲ್ಲಿರುವ ಕಾಲುವೆಯಲ್ಲಿ ಹರಿದುಹೋಗುತ್ತದೆ. ಮತ್ತೂಂದೆಡೆ ಕೋಡಿಹಳ್ಳಿಯಲ್ಲಿರುವ ಕೋಡಿಯ ನೀರು ಹರಿದುಹೋಗುತ್ತದೆ. ಈ ಸ್ಥಳ ಅತ್ಯಂತ ಪ್ರೇಕ್ಷಣೀಯವಾಗಿದ್ದು, ಕೆರೆಯಲ್ಲಿ ನೀರು ತುಂಬಿದರೆ ನೋಡುವುದೇ ಒಂದು ಸೊಬಗು, ಇದಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಕೋಡಿ ನೀರು ಬಂಡೆಕಲ್ಲುಗಳ ಮೇಲೆ ಹರಿದು ಹೋಗುವುದು ನೋಡಲು ರಮಣೀಯವಾಗಿರುತ್ತದೆ.

ಕೆರೆ ನೋಡಲು ಜನ ಸಾಗರ: 2017ರಲ್ಲಿ ಕೆರೆ ತುಂಬಿದಾಗ ಪ್ರತಿನಿತ್ಯ ಸಾವಿರಾರು ಮಂದಿ ಕುಟುಂಬ ಸಮೇತರಾಗಿ ಆಗಮಿಸಿ ಕಣ್ತುಂಬಿಕೊಳ್ಳುತ್ತಿದ್ದರು. ಕೋಡಿಹಳ್ಳಿಯ ಸಣ್ಣ ರಸ್ತೆ ವಾಹನಗಳಿಂದ ತುಂಬಿ ಹೋಗಿತ್ತು. ಕಿ.ಮೀ. ಗಟ್ಟಲೆ ವಾಹನಗಳನ್ನು ನಿಲ್ಲಿಸಲಾಗುತ್ತಿತ್ತು. ಈಗ ಕೆರೆ ಕೋಡಿ ಹೋಗುವ ಸನ್ನಿವೇಶ ಉದ್ಭವವಾಗಿರುವುದರಿಂದ ಕೋಡಿಹಳ್ಳಿಗೆ ಜನಸಾಗರ ಹರಿದುಬರುವ ನಿರೀಕ್ಷೆ ಇದೆ.

ಸುಗಮ ರಸ್ತೆ ಅಗತ್ಯ: ಶನಿವಾರದಂದೇ ನೂರಾರು ಜನ ಕೋಡಿ ಹರಿಯುವುದಕ್ಕೆ ಇನ್ನು ಎಷ್ಟು ನೀರು ಬರಬೇಕು ಎಂದು ತವಕದಿಂದ ಬಂದು ನೋಡುತ್ತಿದ್ದರು. ಆದರೆ, ಈ ಗ್ರಾಮ ಸೇರುವ ಹುಲ್ಕೂರು ಗ್ರಾಪಂನವರು ಇನ್ನೂ ರಸ್ತೆ ದುರಸ್ತಿ ಮಾಡಿಲ್ಲ. ಸಾವಿರಾರು ಜನ ಮತ್ತು ನೂರಾರು ಸಂಖ್ಯೆಯ ವಾಹನಗಳು ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಟ್ಟಿಲ್ಲ. ಕಳೆದ ಬಾರಿ ಗ್ರಾಪಂನಿಂದ ಕೋಡಿವರೆಗೂ ಕಾಂಕ್ರೀಟ್‌ ಹಾಕಲಾಗಿತ್ತು. ಇನ್ನೂ ಸ್ವಲ್ಪ ಕಾಮಗಾರಿ ಬಾಕಿ ಇತ್ತು ಎಂದು ಹುಲ್ಕೂರು ಗ್ರಾಪಂ ಮಾಜಿ ಅಧ್ಯಕ್ಷ ಪ್ರಸನ್ನ ಹೇಳುತ್ತಾರೆ. ಕೆರೆ ಕೋಡಿ ನೀರು ನೋಡಲು ಬರುವವರುತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಕಳೆದ ಬಾರಿ ಇಡೀ ಪ್ರದೇಶ ತ್ಯಾಜ್ಯಮಯ ವಾಗಿತ್ತು. ಈ ಬಾರಿ ಪಂಚಾಯ್ತಿ ಅಧಿಕಾರಿಗಳು ಎಚ್ಚರವಹಿಸ ಬೇಕೆಂದು ಪರಿಸರವಾದಿಗಳು ಹೇಳುತ್ತಾರೆ.

-ಬಿ.ಆರ್‌.ಗೋಪಿನಾಥ್‌

ಟಾಪ್ ನ್ಯೂಸ್

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

gfgfdg

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

gvhfghft

ಚಿಂತಾಮಣಿ : ಅಪರಿಚಿತ ವಾಹನ ಡಿಕ್ಕಿ | ಪಾದಚಾರಿ ಸಾವು

hjgutyuty

ಆರ್​​ಎಸ್​ಎಸ್​​​  ಬಾಂಬ್ ಹಾಕುವವರನ್ನ ತಯಾರು ಮಾಡುವುದಿಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ

ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಕೊರಟಗೆರೆ ಪೊಲೀಸರು

ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಕೊರಟಗೆರೆ ಪೊಲೀಸರು

ಸೋಮಣ್ಣ, ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ : ಆರ್‌. ಅಶೋಕ್‌ ಸ್ಪಷ್ಟನೆ

ಸೋಮಣ್ಣ, ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ : ಆರ್‌. ಅಶೋಕ್‌ ಸ್ಪಷ್ಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಾಳಿಯಲಿ ಗುಂಡು ಹಾರಿಸಿ ಉತ್ಸವಕ್ಕೆ ಚಾಲನೆ

ಗಾಳಿಯಲ್ಲಿ ಗುಂಡು ಹಾರಿಸಿ ಉತ್ಸವಕ್ಕೆ ಚಾಲನೆ

ಕೋಲಾರ ದಸರಾ

ಕೋಲಾರದಲ್ಲಿ ಸಂಭ್ರಮದ ವಿಜಯದಶಮಿ

ಕೆಜಿಎಫ್ ಎಸ್ಪಿ ಕಚೇರಿ ವರ್ಗಾವಣೆಗೆ ಪೊಲೀಸರ ಕುಟುಂಬದವರ ವಿರೋಧ

ನೂರಾರು ಪೊಲೀಸ್‌ ಕುಟುಂಬಗಳ ಮಹಿಳೆಯರು, ಮಕ್ಕಳಿಂದ ಎಸ್ಪಿ ಭೇಟಿ

ಮಹಾನ್‌ ನಾಯಕರು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾಜಿ ಸ್ಪಿಕರ್‌ ರಮೇಶ್‌ಕುಮಾರ್‌ ಟೀಕೆ

ವಚನಗಳಿಗೆ ಬೀಗ ಹಾಕಿ ಮಠಾಧಿಪತಿಗಳ ರಾಜಕೀಯ

ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾನ ಹಕ್ಕುಗಳಿವೆ

ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾನ ಹಕ್ಕುಗಳಿವೆ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಚೆನ್ನೈಯಲ್ಲೇ ಉಳಿಯಲಿದ್ದಾರೆ ಮಹೇಂದ್ರ ಸಿಂಗ್‌ ಧೋನಿ

ಚೆನ್ನೈಯಲ್ಲೇ ಉಳಿಯಲಿದ್ದಾರೆ ಮಹೇಂದ್ರ ಸಿಂಗ್‌ ಧೋನಿ

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

gfgfdg

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

gvhfghft

ಚಿಂತಾಮಣಿ : ಅಪರಿಚಿತ ವಾಹನ ಡಿಕ್ಕಿ | ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.