2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲು ಖಚಿತ


Team Udayavani, Feb 4, 2023, 4:18 PM IST

TDY-18

ಬಂಗಾರಪೇಟೆ: ಡಿಡಿ ಕಾಂಗ್ರೆಸ್‌ನ ಹಾಲಿ ಶಾಸಕ ಎಸ್‌. ಎನ್‌.ನಾರಾಯಣಸ್ವಾಮಿ ಹೆಗಲ ಮೇಲೆ ಶನಿಮಹಾತ್ಮದೇವರು ಕುಳಿತಿರುವುದರಿಂದ ಮುಂದಿನ ಚುನಾವಣೆಯಲ್ಲಿಸೋಲುವುದು ಖಚಿತವಾಗಿದ್ದು, ಶನಿಮಹಾತ್ಮ ದೇವರನ್ನು ಹೆಗಲ ಮೇಲಿಂದ ಇಳಿಸಿಕೊಳ್ಳಲು ದೇವಾಲಯಗಳು ಸುತ್ತಿದ್ದರೂ ಏನೂ ಪ್ರಯೋಜನವಾಗುವುದಿಲ್ಲ ಎಂದು ಸಂಸದ ಎಸ್‌.ಮುನಿಸ್ವಾಮಿ ಕಾಂಗ್ರೆಸ್‌ ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ ವಿರುದ್ಧ ಟೀಕಾ ಪ್ರಹಾರ ಮಾಡಿದರು.

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ 4ನೇ ಹಂತದ 4.54 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಜನರು ಮತ ನೀಡಿ ಗೆಲ್ಲಿಸಿದರೆ ಸರ್ಕಾರದ ಗೋಮಾಳ, ಗುಂಡುತೋಪುಗಳನ್ನು ಕಬಳಿಕೆ ಮಾಡಿದರೆ ಹೇಗೆ, ಜನರ ಆಸ್ತಿ ದೋಚಿದರೆ ಸೋಲು ಖಚಿತ ಎಂದರು.

ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಶೇ. 40 ಕಮೀಷನ್‌ ಸರ್ಕಾರವೆಂದು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಬಂಗಾರಪೇಟೆ ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿ ಗಳ ಮೇಲೆ ಗುತ್ತಿಗೆದಾರರಿಂದ ಎಷ್ಟೆಷ್ಟು ಕಮೀಷನ್‌ ಪಡೆಯುತ್ತಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದರು.

ಬಂಗಾರಪೇಟೆ ಪಟ್ಟಣದಲ್ಲಿ 30 ವರ್ಷಗಳ ಹಿಂದೆ ಇದ್ದ ಹಾಗೇಯೇ ಈಗಲೂ ರಸ್ತೆಗಳು ಇದ್ದು, ಅಭಿವೃದ್ಧಿ ಮರೀಚಿಕೆಯಾಗಿವೆ. 10 ವರ್ಷಗಳಿಂದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ನೀಡಿರುವ ಅನುದಾನಗಳಲ್ಲಿ ಕಳಪೆ ಕಾಮಗಾರಿಗಳನ್ನು ಹಣ ಲೂಟಿ ಮಾಡಿರುವ ಬಗ್ಗೆ ಮಾಹಿತಿ ಇದೆ ಎಂದರು. ಇದೇವ ವೇಳೆ ಸಂಸದ ಮುನಿ ಸ್ವಾಮಿ ಅವರು ಜಿಲ್ಲಾಧಿಕಾರಿ ಕರ್ತವ್ಯ ನೈಪುಣ್ಯತೆಯನ್ನು ಪ್ರಶಂಸಿಸಿದರು.

ಅಧ್ಯಕ್ಷತೆಯನ್ನು ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯಛಲವಾದಿ ನಾರಾ ಯಣಸ್ವಾಮಿ, ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಎಂ.ನಾರಾಯಣ ಸ್ವಾಮಿ, ಮಾವು ನಿಗಮದ ಅಧ್ಯಕ್ಷವಾಸುದೇವ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್‌, ಜಿಲ್ಲಾ ಉಪಾಧ್ಯಕ್ಷ ಬಿ.ವಿ.ಮಹೇಶ್‌,ತಾಲೂಕು ಅಧ್ಯಕ್ಷ ನಾಗೇಶ್‌, ವಿ.ಶೇಷು, ತಹಶೀಲ್ದಾರ್‌ಎಂ.ದಯಾನಂದ್‌, ತಾಪಂ ಇಓ ಎನ್‌.ವೆಂಕಟೇಶಪ್ಪ, ಪುರಸಭೆ ಮುಖ್ಯಾಧಿಕಾರಿ ಜಿ.ಎನ್‌.ಚಲಪತಿ, ಸದಸ್ಯರಾದ ಕಪಾಲಿ ಶಂಕರ್‌, ಪ್ರಭಾಕರ್‌ ರಾವ್‌, ವೆನ್ನೆಲಾ, ದೇಶಿಹಳ್ಳಿಶ್ರೀನಿವಾಸ್‌, ಬಿಪಿ.ಮಹೇಶ್‌, ಬಿಂದು ಮಾಧವ್‌, ಶೋಭ,ಮುಖಂಡರಾದ ಬಿ.ಹೊಸ ರಾಯಪ್ಪ, ಎಂ;ಪಿ. ಶ್ರೀನಿವಾಸಗೌಡ, ಮಾರ್ಕಂಡೇಯಗೌಡ, ಹನುಮಪ್ಪ ಇತರರಿದ್ದರು

ಉಸ್ತುವಾರಿ ಸಚಿವರು, ಶಾಸಕರು ಗೈರು :  ಪುರಸಭೆ ವ್ಯಾಪ್ತಿ ವಾರ್ಡ್‌ಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ನಗರೋತ್ಥಾನ ಯೋಜನಯಡಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸಲು ಹಮ್ಮಿಕೊಂಡಿದ್ದ ಭೂಮಿ ಪೂಜೆ ಕಾರ್ಯಕ್ರಮವನ್ನು ಜ.23 ರಂದು ಸಮಯ ನಿಗದಿಪಡಿಸಲಾಗಿತ್ತು. ಈ ವೇಳೆ ಕೋಲಾರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಪ್ರಜಾಧ್ವನಿ ಕಾರ್ಯಕ್ರಮ ಇರುವುದರಿಂದ ಫೆ. 3ಕ್ಕೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಕೋರಿಕೆಯಂತೆ ಮುಂದೂಡಲಾಗಿತ್ತು. ಆದರೂ ಈ ಕಾರ್ಯಕ್ರಮಕ್ಕೆ ಶಾಸಕ ಎಸ್‌. ಎನ್‌.ನಾರಾಯಣಸ್ವಾಮಿ ಗೈರಾಗಿದ್ದರು. ಪುರಸಭೆ ಅಧ್ಯಕ್ಷೆ ಫ‌ರ್ಜಾನ ಸುಹೇಲ್‌, ಉಪಾಧ್ಯಕ್ಷೆ ಶಾರದ ವಿವೇಕಾನಂದ್‌ ಸೇರಿದಂತೆ 22ಕ್ಕೂ ಹೆಚ್ಚು ಕಾಂಗ್ರೆಸ್‌ ಬೆಂಬಲಿತ ಸದಸ್ಯರಿದ್ದರೂ ಯಾರೂ ಬಂದಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಈ ಕಾರ್ಯಕ್ರಮದ ಜವಾಬ್ದಾರಿ ಹೊಂದಿದ್ದರೂ ಗೈರಾಗಿದ್ದರು. ಉಸ್ತುವಾರಿ ಸಚಿವರು ಗೈರಾಗಿದ್ದು ಕೇವಲ ಪ್ರಚಾರಕ್ಕೆ ಮಾತ್ರ ಎನ್ನುವುದು ನಿಜವಾಗಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದವು.

ಟಾಪ್ ನ್ಯೂಸ್

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಇಂದಿನ ಸ್ಥಿತಿ “ಮನೆಯೊಂದು 100 ಬಾಗಿಲು’: ಮುನಿಸ್ವಾಮಿ ವ್ಯಂಗ್ಯ

Congress ಇಂದಿನ ಸ್ಥಿತಿ “ಮನೆಯೊಂದು 100 ಬಾಗಿಲು’: ಮುನಿಸ್ವಾಮಿ ವ್ಯಂಗ್ಯ

Students: ಗೋಡೆ ಒಡೆಯಲು ಎಸ್ಸೆಸ್ಸೆಲ್ಸಿ ಮಕ್ಕಳ ಬಳಕೆ: ಕ್ರಮಕ್ಕೆ ಆಗ್ರಹ

Students: ಗೋಡೆ ಒಡೆಯಲು ಎಸ್ಸೆಸ್ಸೆಲ್ಸಿ ಮಕ್ಕಳ ಬಳಕೆ: ಕ್ರಮಕ್ಕೆ ಆಗ್ರಹ

KGF: ಅಪ್ರಾಪ್ತ ವಯಸ್ಸಿನ ಗರ್ಭಿಣಿಯರು;  98 ಕೇಸ್‌ ದಾಖಲು

KGF: ಅಪ್ರಾಪ್ತ ವಯಸ್ಸಿನ ಗರ್ಭಿಣಿಯರು;  98 ಕೇಸ್‌ ದಾಖಲು

ಕಾಡು ಪ್ರಾಣಿ ದಾಳಿ: ಕೋಲಾರದ ಯೋಧ ಗುಜರಾತ್‌ನಲ್ಲಿ ಸಾವು

ಕಾಡು ಪ್ರಾಣಿ ದಾಳಿ: ಕೋಲಾರದ ಯೋಧ ಗುಜರಾತ್‌ನಲ್ಲಿ ಸಾವು

Kolar Lok Sabha constituency: ಅಲೆಗಳು ಗೌಣ, ಸ್ಥಳೀಯ ಲೆಕ್ಕಾಚಾರಗಳೇ ನಿರ್ಣಾಯಕ

Kolar Lok Sabha constituency: ಅಲೆಗಳು ಗೌಣ, ಸ್ಥಳೀಯ ಲೆಕ್ಕಾಚಾರಗಳೇ ನಿರ್ಣಾಯಕ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.