ಕೋವಿಡ್ 19 ನೆಪದಲ್ಲಿ ಪರಿಶೀಲನೆ: 62 ಸಾವಿರ ರೂ.ದಂಡ ವಸೂಲಿ

Team Udayavani, Mar 25, 2020, 2:50 PM IST

ಕೆಜಿಎಫ್: ಕೋವಿಡ್ 19 ವೈರಸ್‌ ಹಿನ್ನೆಲೆಯಲ್ಲಿ ಸ್ವಯಂ ನಿರ್ಬಂಧ ಹೇರಿಕೊಂಡು ಮನೆಯಲ್ಲಿರಬೇಕಾದ ಬೈಕ್‌ ಸವಾರರು ಬೀದಿಗೆ ಬಂದ ಕಾರಣ, ಅವರಿಗೆ ದಾಖಲೆ ಪರಿಶೀಲಿಸಿ ಪೊಲೀಸರು ಬೃಹತ್‌ ಮಟ್ಟದ ದಂಡ ವಸೂಲಿ ಮಾಡಿದರು.

ನಗರದ ರಾಬರ್ಟಸನ್‌ಪೇಟೆ ಸೂರಜ್‌ ಮಲ್‌ ವೃತ್ತದಲ್ಲಿ ಬೈಕ್‌ ಸವಾರರನ್ನು ಅಡ್ಡಗಟ್ಟುತ್ತಿದ್ದ ಪೊಲೀಸರು, ಅವರಿಂದ ದಾಖಲೆಗಳನ್ನು ಕೇಳಿದರು. ದಾಖಲೆ ಇಲ್ಲದ ಬೈಕ್‌ ಸವಾರರಿಗೆ ಸ್ಥಳದಲ್ಲಿಯೇ ದಂಡ ವಿಧಿಸಿದರು. ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೊರಬರಬಾರದು ಎಂದು ತಿಳಿವಳಿಕೆ ನೀಡಿದರು.

ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 124 ಪ್ರಕರಣಗಳಿಗೆ ಸಂಬಂಧಿಸಿದಂತೆ 62 ಸಾವಿರ ರೂ. ದಂಡ ವಸೂಲಿ ಮಾಡಲಾಯಿತು. ಸರ್ಕಲ್‌ ಇನ್ಸ್‌ಪೆಕ್ಟರ್‌ ಸೂರ್ಯಪ್ರಕಾಶ್‌ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ