
31ರಂದು ದೆಹಲಿಗೆ 300 ರೈತರ ಚಲೋ
Team Udayavani, Dec 27, 2020, 8:00 PM IST

ಸಾಂದರ್ಭಿಕ ಚಿತ್ರ
ಕೋಲಾರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯಿದೆಗಳನ್ನು ವಿರೋ ಧಿಸಿ ದೆಹಲಿ ಚಲೋ ಹೊರಟಿರುವ ಪಂಜಾಬ್, ಹರಿಯಾಣ ರೈತರ ಹೋರಾಟ ಬೆಂಬಲಿಸಿ ಡಿ.31ರಂದು ಕೋಲಾರ ಜಿಲ್ಲೆಯಿಂದ 300 ಮಂದಿ ರೈತರು ದೆಹಲಿ ಚಲೋ ಹೊರಡಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದಲ್ಲಿ ಶನಿವಾರ ನಡೆದ ಸಭೆಯ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೇಂದ್ರ ಸರ್ಕಾರವು ಜನಾಭಿಪ್ರಾಯವಿಲ್ಲದೆ ಜಾರಿಗೆ ತಂದಿರುವ ಕಾಯಿದೆಗಳನ್ನು ವಿರೋಧಿ ಸಿ ದೆಹಲಿ ಚಲೋ ಹೊರಟಿರುವ ಪಂಜಾಬ್, ಹರಿಯಾಣ ರೈತರು 1 ತಿಂಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಕಾಯಿದೆಗಳನ್ನು ಸಮರ್ಥಿಸಿಕೊಳ್ಳುತ್ತಿ ದೆಯೇ ಹೊರತು ಈ ಬಗ್ಗೆ ಚರ್ಚೆಗೆ ಮುಂದಾಗುತ್ತಿಲ್ಲ ಎಂದು ದೂರಿದರು.
ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜು ನಾಥ್ ಮಾತನಾಡಿ, ವಿಶೇಷ ಸಂಸತ್ ಅಧಿವೇಶನ ನಡೆಸದೆ ಏಕಾಏಕಿ ಕೃಷಿ ಕಾಯಿದೆಗಳನ್ನು ಜಾರಿಗೆ ತಂದಿರು ವುದನ್ನು ಖಂಡಿಸಿ ಹಾಗೂ ದೆಹಲಿ ಚಲೋ ಹೊರಟಿರುವ ರೈತರ ಹೋರಾಟ ಬೆಂಬಲಿಸಿ 31ರಂದು ಜಿಲ್ಲೆಯ 300 ರೈತರು ದೆಹಲಿ ಚಲೋ ಹೊರಡಲು ತೀರ್ಮಾನಿಸಿರುವುದಾಗಿ ತಿಳಿಸಿದರು.
ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐತಾಂಡಹಳ್ಳಿ ಮುನ್ನಾ, ಬಂಗಾರಪೇಟೆ ತಾ.ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಸ್ವಸ್ತಿಕ್ ಶಿವು, ಚಾಂದ್‌ಪಾಷ, ಕಿರಣ್, ಶೇಖ್ ಬಾಬಾಜಾನ್, ನವಾಜ್‌ಪಾಷ, ಘೌಸ್ ಪಾಷ, ಜಾವೀದ್, ಸುಹೇಲ್ ಪಾಷ, ಜಮೀರ್ ಪಾಷ ಇದ್ದರು.
ಸಹಕಾರ ಬ್ಯಾಂಕ್‌ನಲ್ಲೇ ವಹಿವಾಟು ನಡೆಸಿ :
ಕೋಲಾರ: ಮಹಿಳೆಯರು, ರೈತರು ತಮ್ಮ ವಹಿವಾಟನ್ನು ಸಹಕಾರಿ ಬ್ಯಾಂಕ್‌ನಲ್ಲಿ ನಡೆಸುವ ಮೂಲಕ ಮತ್ತಷ್ಟು ಸಾಲ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಸಲಹೆ ನೀಡಿದರು.
ತಾಲೂಕಿನ ಕ್ಯಾಲನೂರು ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದಿಂದ ನಡೆದ 2019-2020 ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸೊಸೈಟಿ ಮತ್ತು ಬ್ಯಾಂಕ್ ನಲ್ಲಿ ಠೇವಣಿ ಮೊತ್ತ ಹೆಚ್ಚಿಸಿದಾಗ ಹೆಚ್ಚಾಗಿ ಸಾಲ ನೀಡಲು ಸಹಕಾರಿಯಾಗುತ್ತದೆ. ರೈತರು, ಮಹಿಳೆ ಯರು ಉಳಿತಾಯ ಹಣವನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು ಎಂದು ಕೋರಿದರು.
ಸೊಸೈಟಿಗಳ ನಿರ್ವಹಣೆ ಸಮರ್ಪಕವಾಗಿ ಇದ್ದರೆ ಸಾಲ ಪಡೆದುಕೊಂಡಿರುವ ಫಲಾನುಭವಿಗಳು ಪ್ರಾಮಾಣಿಕವಾಗಿ ಮರುಪಾವತಿ ಮಾಡುತ್ತಾರೆ ಎಂದರು. ಸಂಘದ ಅಧ್ಯಕ್ಷ ರಮಾಂಜಿನಪ್ಪ ಮಾತ ನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘವೂ 11.50 ಲಕ್ಷಲಾಭಗಳಿ ಸಿದ್ದು, 13 ಕೋಟಿ ವಿವಿಧ ಸಾಲ ನೀಡಲಾಗಿದೆ. ಈ ಬಾರಿ 25 ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದ್ದು, ಕ್ಯಾಲನೂರು ಗ್ರಾಮದಲ್ಲಿನ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ವೆಂಕಟರೆಡ್ಡಿ, ನಿರ್ದೇಶಕರಾದ ಈರಪ್ಪ, ರಾಜಣ್ಣ, ಮಂಜುನಾಥ್, ರತ್ನಮ್ಮ, ಪ್ರಕಾಶ್, ಆಂಜಿನಪ್ಪ, ಶಂಕರಪ್ಪ, ಗೌರಮ್ಮ, ಮಾಜಿ ಅಧ್ಯಕ್ಷ ವೆಂಕಟರೆಡ್ಡಿ, ಸಂಘದ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ನವೀನ್ ಹಾಜರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Rahul Gandhi;ಕೇಂದ್ರದ ವಿರುದ್ಧ ರಾಹುಲ್ ಫೋನ್ ಕದ್ದಾಲಿಕೆ ಆರೋಪ

ಮಂಗಳೂರು: 12,950 ಕರುಗಳಿಗೆ ಕಂದು ರೋಗ ಲಸಿಕೆ

Manipur ಪೊಲೀಸ್ ಮುಖ್ಯಸ್ಥರ ಬದಲಾವಣೆ; ಗಲಭೆ ಹತ್ತಿಕ್ಕುವ ನಿಟ್ಟಿನಲ್ಲಿ ಮಹತ್ವದ ಕ್ರಮ

ಇಂದು ಗ್ಯಾರಂಟಿ? ಉಚಿತಗಳಿಗೆ ಷರತ್ತು ಖಚಿತ; ಘೋಷಣೆಯತ್ತ ಜನರ ಕುತೂಹಲ

ಎಲ್‌ಕೆಜಿ ಸೇರಲು 4 ವರ್ಷ ಆಗಿರಲೇಬೇಕು! ಸರಕಾರದ ನಿಯಮಕ್ಕೆ ಬೆಚ್ಚಿಬಿದ್ದ ಪಾಲಕ, ಪೋಷಕರು