ಮನವಿ ಸ್ವೀಕರಿಸದ ಸಚಿವ ಮಾಧುಸ್ವಾಮಿ

Team Udayavani, Oct 10, 2021, 4:22 PM IST

ಮನವಿ ಸ್ವೀಕರಿಸದ ಸಚಿವ ಮಾಧುಸ್ವಾಮಿ

ಕೋಲಾರ: ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಶನಿವಾರ ಜಿಲ್ಲೆಗೆ ಆಗಮಿಸಿದ್ದ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ರೈತ ಮುಖಂಡರಿಂದ ವಿವಿಧ ಸಮಸ್ಯೆಗಳ ಕುರಿತ ಮನವಿ ಸ್ವೀಕರಿಸದೆ ತೆರಳಿದ ಹಿನ್ನೆಲೆಯಲ್ಲಿ ತಾಲೂಕಿನ ರಾಮಸಂದ್ರ ಗಡಿಯಲ್ಲಿ ರೈತಪರ ಮುಖಂಡರು ಪ್ರತಿಭಟನೆ ನಡೆಸಿ, ಸಚಿವರ ರಾಜೀನಾಮೆಗೆ ಆಗ್ರಹಿಸಿದರು.

ಜಿಲ್ಲೆಯ ಮುಳಬಾಗಿಲು ಹಾಗೂ ಕೋಲಾರ ದಲ್ಲಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಶನಿವಾರ ಸಚಿವ ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಹಾಗಾಗಿ ಸಚಿವರಿಗೆ ಮನವಿ ಸಲ್ಲಿಸುವ ನಿಟ್ಟಿನಲ್ಲಿ ರೈತ ಸಂಘಟನೆಗಳ ಮುಖಂಡರು ರಾಮಸಂದ್ರ ಗಡಿಯಲ್ಲಿ ಕಾದು ನಿಂತಿದ್ದರು.

ಆದರೆ, ಸಚಿವ ಮಾಧುಸ್ವಾಮಿ ರೈತಸಂಘಟನೆಗಳ ಮುಖಂಡರಿಂದ ಮನವಿ ಸ್ವೀಕರಿಸಲು ನಿರಾಕರಿಸಿದ್ದಲ್ಲದೆ ಕನಿಷ್ಠ ಕಾರಿನಿಂದಲೂ ಕೆಳಗಿಳಿದು ಮಾತನಡದೆ ಹಾಗೆಯೇ ಹೊರಟು  ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತ ಸಂಘಗಳ ಮುಖಂಡರು ಸಚಿವರು ಈ ರೀತಿ ಅಗೌರವದಿಂದ ನಡೆದು ಕೊಂಡಿರುವ ಕ್ರಮ ಸರಿಯಲ್ಲವೆಂದು ಕಿಡಿಕಾರಿದರು.

ಇದನ್ನೂ ಓದಿ:- ಅಂತರ್ಜಲ ಮಾಹಿತಿ ರೈತರ ಬೆರಳ ತುದಿಗೆ

ಕೆ.ಸಿ.ವ್ಯಾಲಿ ಯೋಜನೆಯಡಿ ಜಿಲ್ಲೆಗೆ ನೀರು ಪ್ರವೇಶಿಸುವ ಜಾಗದ ಸಮೀಪ ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಕೋಲಾರ, ಹೊಸಕೋಟೆ ಸೇರಿ ವಿವಿಧ ಸ್ಥಳೀಯ ಸಂಸ್ಥೆಯವರು ತ್ಯಾಜ್ಯವನ್ನು ಕ್ವಾರಿಯಲ್ಲಿ ಸುರಿಯುತ್ತಿದ್ದು, ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಸಚಿವರಿಗೆ ಮನವಿ ನೀಡಲು ಕಾದಿದ್ದರು.

ಅಲ್ಲದೆ, ಕೆ.ಸಿ.ವ್ಯಾಲಿ ಹರಿಯುತ್ತಿರುವ ಭಾಗಳಲ್ಲಿ ಬೆಳೆಗಳು ರೋಗಗಳಿಗೆ ಒಳಗಾಗುತ್ತಿರುವ ಆತಂಕ ಎದುರಾಗಿದ್ದು, ಅದನ್ನು ವಿಶೇಷ ತಂಡರಚಿಸುವ ಜತೆಗೆ 3ನೇ ಹಂತದ ಶುದ್ಧೀಕರಣಕ್ಕೂ ಹೆಚ್ಚಿನ ಒತ್ತು ನೀಡಬೇಕೆಂದು ಮನವಿ ಸಲ್ಲಿಸಲುನಾವು ಆಗಮಿಸಿದ್ದೆವು. ಅದಕ್ಕೆ ಆಸ್ಪದ ನೀಡದೆ ಅಗೌರವದಿಂದ ಸಚಿವರು ತೆರಳಿದರು ಎಂದು ಅಸಮಧಾನ ವ್ಯಕ್ತಪಡಿಸಿದರು.

ರೈತ ಮುಖಂಡರಾದ ರಾಮುಶಿವಣ್ಣ, ಜಿ. ನಾರಾಯಣಸ್ವಾಮಿ, ಕೆ.ನಾರಾಯಣಗೌಡ,ಈಕಂಬಳ್ಳಿ ಮಂಜುನಾಥ್‌, ಮೂರಂಡಹಳ್ಳಿ ಶಿವಾರೆಡ್ಡಿ, ಕಲ್ವಮಂಜಲಿ ಶಿವಣ್ಣ, ಕರವೇ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್‌ ಮತ್ತಿತರರಿದ್ದರು.

ಟಾಪ್ ನ್ಯೂಸ್

ರೆಡ್ಮಿ ನೋಟ್‌ 11ಟಿ ಬಿಡುಗಡೆ ; ಮೂರು ಬಣ್ಣಗಳಲ್ಲಿ ಲಭ್ಯ

ರೆಡ್ಮಿ ನೋಟ್‌ 11ಟಿ ಬಿಡುಗಡೆ ; ಮೂರು ಬಣ್ಣಗಳಲ್ಲಿ ಲಭ್ಯ

ಸ್ವರ್ಣಪಲ್ಲಕ್ಕಿಯಲ್ಲಿ ಶ್ರೀ ಮಂಜುನಾಥ ಸ್ವಾಮಿ ವಿಹಾರ

ಸ್ವರ್ಣಪಲ್ಲಕ್ಕಿಯಲ್ಲಿ ಶ್ರೀ ಮಂಜುನಾಥ ಸ್ವಾಮಿ ವಿಹಾರ

ಮ.ಪ್ರದೇಶ: ಚಿರತೆಯೊಂದಿಗೆ ಹೋರಾಡಿ ಮಗನನ್ನು ರಕ್ಷಣೆ ಮಾಡಿದ ತಾಯಿ

ಮ.ಪ್ರದೇಶ: ಚಿರತೆಯೊಂದಿಗೆ ಹೋರಾಡಿ ಮಗನನ್ನು ರಕ್ಷಣೆ ಮಾಡಿದ ತಾಯಿ

ಬೂಸ್ಟರ್‌ ಡೋಸ್‌ ಲಸಿಕೆ: ಕೇಂದ್ರಕ್ಕೆ ಬೇಡಿಕೆ

ಬೂಸ್ಟರ್‌ ಡೋಸ್‌ ಲಸಿಕೆ: ಕೇಂದ್ರಕ್ಕೆ ಬೇಡಿಕೆ

ಎಐಎಂಡಿಕೆ ಪಕ್ಷದ ಮಾಜಿ ನಾಯಕಿ ಶಶಿಕಲಾ ಕನಸು ಭಗ್ನ

ಎಐಎಂಡಿಕೆ ಪಕ್ಷದ ಮಾಜಿ ನಾಯಕಿ ಶಶಿಕಲಾ ಕನಸು ಭಗ್ನ

ಬೆಳ್ತಂಗಡಿ ಸುತ್ತಮುತ್ತ ಉತ್ತಮ ಮಳೆ

ಬೆಳ್ತಂಗಡಿ ಸುತ್ತಮುತ್ತ ಉತ್ತಮ ಮಳೆ

ಲಸಿಕೆ ಅಭಿಯಾನ: ಸೌಲಭ್ಯಗಳಿಗೆ ಲಸಿಕೆ ಕಡ್ಡಾಯ

ಲಸಿಕೆ ಅಭಿಯಾನ: ಸೌಲಭ್ಯಗಳಿಗೆ ಲಸಿಕೆ ಕಡ್ಡಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಹಾರದ ಕೊರತೆ ಇಲ್ಲ

ದೇಶದಲ್ಲಿ ಆಹಾರ ಪದಾರ್ಥಗಳ ಕೊರತೆ ಇಲ್ಲ

kolara politics

“ಕೈ’ ಅಭ್ಯರ್ಥಿ ಸೋಲಿಸುವುದೇ ನನ್ನ ಗುರಿ..!

ಬಿಕ್ಷುಕ ಸಾವು

ಚಳಿಗಾಳಿ ತಾಳಲಾರದೇ ನಿಲ್ದಾಣದಲ್ಲಿ ಭಿಕ್ಷುಕ ಸಾವು ..!

ವರ್ತೂರ್‌ ಪ್ರಕಾಶ್‌ಗೂ ಬಿಜೆಪಿ ಗಾಳ

ವರ್ತೂರ್‌ ಪ್ರಕಾಶ್‌ಗೂ ಬಿಜೆಪಿ ಗಾಳ

ಚೇಳೂರು ಮಾರುಕಟೆಯಲ್ಲಿ ತರಕಾರಿ ಬೆಲೆ ಗಗನಮುಖಿ

ಚೇಳೂರು ಮಾರುಕಟೆಯಲ್ಲಿ ತರಕಾರಿ ಬೆಲೆ ಗಗನಮುಖಿ

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

ರೆಡ್ಮಿ ನೋಟ್‌ 11ಟಿ ಬಿಡುಗಡೆ ; ಮೂರು ಬಣ್ಣಗಳಲ್ಲಿ ಲಭ್ಯ

ರೆಡ್ಮಿ ನೋಟ್‌ 11ಟಿ ಬಿಡುಗಡೆ ; ಮೂರು ಬಣ್ಣಗಳಲ್ಲಿ ಲಭ್ಯ

ಸ್ವರ್ಣಪಲ್ಲಕ್ಕಿಯಲ್ಲಿ ಶ್ರೀ ಮಂಜುನಾಥ ಸ್ವಾಮಿ ವಿಹಾರ

ಸ್ವರ್ಣಪಲ್ಲಕ್ಕಿಯಲ್ಲಿ ಶ್ರೀ ಮಂಜುನಾಥ ಸ್ವಾಮಿ ವಿಹಾರ

ಮ.ಪ್ರದೇಶ: ಚಿರತೆಯೊಂದಿಗೆ ಹೋರಾಡಿ ಮಗನನ್ನು ರಕ್ಷಣೆ ಮಾಡಿದ ತಾಯಿ

ಮ.ಪ್ರದೇಶ: ಚಿರತೆಯೊಂದಿಗೆ ಹೋರಾಡಿ ಮಗನನ್ನು ರಕ್ಷಣೆ ಮಾಡಿದ ತಾಯಿ

ಬೂಸ್ಟರ್‌ ಡೋಸ್‌ ಲಸಿಕೆ: ಕೇಂದ್ರಕ್ಕೆ ಬೇಡಿಕೆ

ಬೂಸ್ಟರ್‌ ಡೋಸ್‌ ಲಸಿಕೆ: ಕೇಂದ್ರಕ್ಕೆ ಬೇಡಿಕೆ

ಎಐಎಂಡಿಕೆ ಪಕ್ಷದ ಮಾಜಿ ನಾಯಕಿ ಶಶಿಕಲಾ ಕನಸು ಭಗ್ನ

ಎಐಎಂಡಿಕೆ ಪಕ್ಷದ ಮಾಜಿ ನಾಯಕಿ ಶಶಿಕಲಾ ಕನಸು ಭಗ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.