Udayavni Special

ತಹಶೀಲ್ದಾರ್‌ ಹತ್ಯೆಗೆ ಜಿಲ್ಲಾದ್ಯಂತ ಖಂಡನೆ


Team Udayavani, Jul 11, 2020, 6:58 AM IST

ha-jille

ಕೋಲಾರ: ಕರ್ತವ್ಯದಲ್ಲಿದ್ದ ಬಂಗಾರಪೇಟೆ ತಹಶೀ ಲ್ದಾರ್‌ ಬಿ.ಕೆ.ಚಂದ್ರಮೌಳೇಶ್ವರ್‌ ಅವರನ್ನು ಹತ್ಯೆಗೈದ ಆರೋಪಿಗಳ ವಿರುದ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ನೌಕರರ ರಕ್ಷಣೆಗೆ ಕಠಿಣ ಕಾನೂನು ರೂಪಿಸು ವಂತೆ ಆಗ್ರಹಿಸಿ ಜಿಲ್ಲಾ  ಸರ್ಕಾರಿ ನೌಕರರ ಸಂಘ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟಿಸಿತು. ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ.ಅಶೋಕ್‌, ಜಮೀನು ವ್ಯಾಜ್ಯ ಸಂಬಂಧ ಸರ್ವೆ ಕಾರ್ಯ ನಡೆಸಲು ಹೋಗಿದ್ದ ತಹಶೀಲ್ದಾರ್‌  ಹತ್ಯೆಯಾಗಿರುವುದು ಖಂಡನೀಯ. ರಾಜ್ಯಾದ್ಯಂತ ಕಂದಾಯ, ಭೂ ಮಾಪನ, ಆರ್‌ಡಿಪಿಆರ್‌, ಆರೋಗ್ಯ ಇಲಾಖೆ ಸೇರಿ ಇತರೆ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿದ್ದು, ಅಧಿಕಾರಿ, ನೌಕರ ವರ್ಗ ಆತಂಕದಿಂದ  ಕರ್ತವ್ಯ ನಿರ್ವಹಿಸುವಂತಾಗಿದೆ ಎಂದು ದೂರಿದರು.

ರಕ್ಷಣೆ ನೀಡಿ: ರಾಜ್ಯದಲ್ಲಿ ಕಠಿಣ ಕಾನೂನು ಜಾರಿಯಲ್ಲಿರದ ಕಾರಣ, ಇಂತಹ ಕೃತ್ಯಗಳು ಮರುಕಳಿಸುತ್ತಿದ್ದು, ತಹಶೀಲ್ದಾರ್‌ ಚಂದ್ರಮೌಳೇಶ್ವರ್‌ ಹತ್ಯೆ ಹಿನ್ನೆಲೆಯಲ್ಲಿ ವಿಶೇಷ ಕಾನೂನು ರೂಪಿಸಬೇಕು, ಕೊಲೆ ಆರೋಪಿಯನ್ನು ಕಠಿಣ  ಶಿಕ್ಷೆಗೆ ಒಳಪಡಿಸಬೇಕು, ಸರ್ಕಾರಿ ನೌಕರರು ನಿರ್ಭೀತಿಯಿಂದ ಕಾರ್ಯನಿರ್ವ ಹಿಸುವ ವಾತಾವರಣ ನಿರ್ಮಾಣ ಮಾಡಲು ಅಗತ್ಯ ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

1 ಕೋಟಿ ರೂ. ಪರಿಹಾರ ಕೊಡಿ: ಮೃತರ ಕುಟುಂಬಕ್ಕೆ 50 ಲಕ್ಷ ರೂ.ನಿಂದ 1 ಕೋಟಿ ರೂ. ಪರಿಹಾರ ನೀಡಬೇಕು, ಸರ್ಕಾರದಿಂದ ದೊರೆಯಬೇಕಾದ ಎಲ್ಲಾ ಆರ್ಥಿಕ ಸೌಲಭ್ಯ ಗಳನ್ನು ಶೀಘ್ರವಾಗಿ ಬಿಡುಗಡೆಗೊಳಿ ಸಬೇಕು, ಆರೋಪಿಯ  ಜಮೀನನ್ನು ಸರ್ಕಾರಮುಟ್ಟುಗೋಲುಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು. ಸರಕಾರಿ ನೌಕರರ ಸಂಘದ ಪದಾಧಿಕಾರಿ ಅನಿಲ್‌ ಕುಮಾರ್‌, ತಹಶೀಲ್ದಾರ್‌ ಹತ್ಯೆ ಕಂಡರೆ ನಾವು ಕರ್ನಾಟಕದಲ್ಲಿದ್ದೇವಾ ಅಥವಾ ಬಿಹಾರಲ್ಲಿದ್ದೇವಾ  ಎಂಬ ಆತಂಕ ಕಾಡುತ್ತಿದೆ.

ತಾಲೂಕು ದಂಡಾಧಿಕಾರಿಗೆ ಈ ಗತಿಯಾದರೆ ಸಾಮಾನ್ಯ ನೌಕರರ ಪಾಡೇನು ಎಂದು ಪ್ರಶ್ನಿಸಿದರು. ಕಂದಾಯ ನಿರೀಕ್ಷಕ ರಮೇಶ್‌ ಮಾತನಾಡಿ, ಕಂದಾಯ ಇಲಾಖೆ ಮಾತೃ ಇಲಾಖೆ. ತಾಯಿ ಮೇಲೆ ಕೈಮಾಡುವುದು ದೇಶ ದ್ರೋಹದ ಕೆಲಸ. ನಿವೃತ್ತ ಶಿಕ್ಷಕ ವೆಂಕಟಾಚಲಪತಿಗೆ ಕಠಿಣ ಶಿಕ್ಷೆ ಆಗುವವರೆಗೆ ಹೋರಾಟ ಮುಂದುವರಿ ಯಬೇಕೆಂದರು.ಬಂಗಾರ ಪೇಟೆ ತಾಲೂಕು ನೌಕರರ ಸಂಘದ ಪದಾಧಿಕಾರಿ ಶಂಕರಪ್ಪ, ಉಪ ಪ್ರಾಂಶುಪಾಲ ರುದ್ರಪ್ಪ ಮಾತನಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ತಹಶೀಲ್ದಾರ್‌ ಹತ್ಯೆ ಖಂಡನೀಯ ವಾದುದು. ರಾಜ್ಯದ ಕೆಎಎಸ್‌ ಅಧಿಕಾರಿಗಳ ಸಂಘದಿಂದ ಈಗಾಗಲೇ ಸಿಎಂಗೆ ಮನವಿ ಸಲ್ಲಿಸ ಲಾಗಿದ್ದು,  ವಿಶೇಷ ಕಾನೂನು ರೂಪಿಸಲು ಒತ್ತಾಯಿಸಲಾಗಿದೆ ಎಂದರು. ಸಂಘದ ಪ್ರತಿನಿಧಿ ಗಳಾದ ನಂದೀಶ್‌, ಮುರಳಿ ಮೋಹನ್‌, ಸದಾಶಿವರೆಡ್ಡಿ, ಜಯಪ್ರಕಾಶ್‌, ಪುರುಪೋತ್ತಮ್‌, ಮುಕುಂದ, ಗೌತಮ್‌, ಶ್ರೀರಾಮ್‌, ವಿವಿಧ ಇಲಾಖೆಗಳ ನೌಕರರು  ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಕೇರಳ ಮಳೆಗೆ 8 ಸಾವು; 12ಕ್ಕೂ ಅಧಿಕ ಮಂದಿ ಕಣ್ಮರೆ

ಕೇರಳ ಮಳೆಗೆ 8 ಸಾವು; 12ಕ್ಕೂ ಅಧಿಕ ಮಂದಿ ಕಣ್ಮರೆ

ಪ್ರಾಚ್ಯವಸ್ತು ಸಂರಕ್ಷಣೆಗೆ ವಿಶ್ವದರ್ಜೆಯ ತಂತ್ರಜ್ಞಾನ

ಪ್ರಾಚ್ಯವಸ್ತು ಸಂರಕ್ಷಣೆಗೆ ವಿಶ್ವದರ್ಜೆಯ ತಂತ್ರಜ್ಞಾನ

cmಮನೆ ಬಾಗಿಲಿಗೆ ಜನಸೇವಕ; ಉನ್ನತ ಅಧಿಕಾರಿಗಳ ಭೇಟಿ, ಸಮಸ್ಯೆಗೆ ಪರಿಹಾರ

ಮನೆ ಬಾಗಿಲಿಗೆ ಜನಸೇವಕ; ಉನ್ನತ ಅಧಿಕಾರಿಗಳ ಭೇಟಿ, ಸಮಸ್ಯೆಗೆ ಪರಿಹಾರ

ಪ್ರವಾಸಕ್ಕೆ ರಜೆ ಇಂಬು; ಕರಾವಳಿಯ ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಜನಸಂದಣಿ

ಪ್ರವಾಸಕ್ಕೆ ರಜೆ ಇಂಬು; ಕರಾವಳಿಯ ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಜನಸಂದಣಿ

ಉಗ್ರರ ದಾಳಿಗೆ ಮತ್ತಿಬ್ಬರು ಬಲಿ; ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರ ಅಟ್ಟಹಾಸ

ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರ ಅಟ್ಟಹಾಸ; ಉಗ್ರರ ದಾಳಿಗೆ ಮತ್ತಿಬ್ಬರು ಬಲಿ

ಉಗ್ರರಿಂದ 200 ಮಂದಿಯ ಹಿಟ್‌ ಲಿಸ್ಟ್‌!

ಉಗ್ರರಿಂದ 200 ಮಂದಿಯ ಹಿಟ್‌ ಲಿಸ್ಟ್‌!

ಮತ್ತಷ್ಟು ಕಂಗೊಳಿಸಲಿದೆ ಕೇದಾರನಾಥ

ಮತ್ತಷ್ಟು ಕಂಗೊಳಿಸಲಿದೆ ಕೇದಾರನಾಥ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಾಳಿಯಲಿ ಗುಂಡು ಹಾರಿಸಿ ಉತ್ಸವಕ್ಕೆ ಚಾಲನೆ

ಗಾಳಿಯಲ್ಲಿ ಗುಂಡು ಹಾರಿಸಿ ಉತ್ಸವಕ್ಕೆ ಚಾಲನೆ

ಕೋಲಾರ ದಸರಾ

ಕೋಲಾರದಲ್ಲಿ ಸಂಭ್ರಮದ ವಿಜಯದಶಮಿ

ಕೆಜಿಎಫ್ ಎಸ್ಪಿ ಕಚೇರಿ ವರ್ಗಾವಣೆಗೆ ಪೊಲೀಸರ ಕುಟುಂಬದವರ ವಿರೋಧ

ನೂರಾರು ಪೊಲೀಸ್‌ ಕುಟುಂಬಗಳ ಮಹಿಳೆಯರು, ಮಕ್ಕಳಿಂದ ಎಸ್ಪಿ ಭೇಟಿ

ಮಹಾನ್‌ ನಾಯಕರು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾಜಿ ಸ್ಪಿಕರ್‌ ರಮೇಶ್‌ಕುಮಾರ್‌ ಟೀಕೆ

ವಚನಗಳಿಗೆ ಬೀಗ ಹಾಕಿ ಮಠಾಧಿಪತಿಗಳ ರಾಜಕೀಯ

ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾನ ಹಕ್ಕುಗಳಿವೆ

ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾನ ಹಕ್ಕುಗಳಿವೆ

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

ಎರಡು ಕೋಟಿ ಮಂದಿ ಕೋವಿಡ್‌ ಲಸಿಕೆ ಪೂರ್ಣ

ಎರಡು ಕೋಟಿ ಮಂದಿ ಕೋವಿಡ್‌ ಲಸಿಕೆ ಪೂರ್ಣ

ಕಾಂಗ್ರೆಸ್‌, ದೇಶದ್ರೋಹಿಗಳಿಗೆ ಜಾಗವಿಲ್ಲ: ಸಂಸದೆ ಪ್ರಜ್ಞಾ ಠಾಕೂರ್‌

ಕಾಂಗ್ರೆಸ್‌, ದೇಶದ್ರೋಹಿಗಳಿಗೆ ಜಾಗವಿಲ್ಲ: ಸಂಸದೆ ಪ್ರಜ್ಞಾ ಠಾಕೂರ್‌

ಕೇರಳ ಮಳೆಗೆ 8 ಸಾವು; 12ಕ್ಕೂ ಅಧಿಕ ಮಂದಿ ಕಣ್ಮರೆ

ಕೇರಳ ಮಳೆಗೆ 8 ಸಾವು; 12ಕ್ಕೂ ಅಧಿಕ ಮಂದಿ ಕಣ್ಮರೆ

ಪ್ರಾಚ್ಯವಸ್ತು ಸಂರಕ್ಷಣೆಗೆ ವಿಶ್ವದರ್ಜೆಯ ತಂತ್ರಜ್ಞಾನ

ಪ್ರಾಚ್ಯವಸ್ತು ಸಂರಕ್ಷಣೆಗೆ ವಿಶ್ವದರ್ಜೆಯ ತಂತ್ರಜ್ಞಾನ

CMಅ.19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ?

ಅ.19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.