ಶಾಸಕ ಆಗದಿದ್ದರೂ ಪರವಾಗಿಲ್ಲ, ಬೇರೆ ಕಡೆ ಹೋಗಲ್ಲ


Team Udayavani, Mar 19, 2023, 4:26 PM IST

tdy-19

ಮುಳಬಾಗಿಲು: ತಾಲೂಕಿನ ಜನತೆಯೇ ಪ್ರೀತಿ ವಿಶ್ವಾಸವೇ ತಮ್ಮ ಶಕ್ತಿ, ತಮಗೆ ರಾಜಕೀಯ ಇಲ್ಲದೇ ಇದ್ದರೂ ಪರವಾಗಿಲ್ಲ, ತಾವು ಎಂಎಲ್‌ಎ ಆಗದೇ ಇದ್ದರೂ ಪರವಾಗಿಲ್ಲ, ಈ ಜನತೆಯು ತಮ್ಮ ಮೇಲಿ ಟ್ಟಿರುವ ಪ್ರೀತಿ, ಅಭಿಮಾನದಿಂದ ಎಲ್ಲೂ ಹೋಗುವುದಿಲ್ಲ ಇಲ್ಲಿಯೇ ಇರುತ್ತೇನೆಂದು ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ತಲಾ ಒಬ್ಬರಿದ್ದಾರೆ. ಕಾಂಗ್ರೆಸ್‌ನಲ್ಲಿ 15 ಜನರು ಬಿ.ಪಾರಂಗಾಗಿ ಅರ್ಜಿ ಹಾಕಿದ್ದಾರೆ.ಆದರೆ, ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ, 2003ರಿಂದ ತಾಲೂಕಿನಲ್ಲಿ ಸಮಾಜ ಸೇವೆ ಆರಂಭಿಸಿದ್ದು, ರಾಜಕೀಯ ಉದ್ದೇಶಕ್ಕಾಗಿ ಅಲ್ಲ, ಜನರಿಗೆ ಕೈಲಾದಷ್ಟು ಸಹಾಯ ಮಾಡಲು ಬಂದಿದ್ದೇನೆ. ಆದರೆ, ನಮ್ಮ ಕೆಲವು ರಾಜಕೀಯ ನಾಯಕರು ಇನ್ನೂ ಹೆಚ್ಚಿನ ಸೇವೆ ಮಾಡಲು ರಾಜಕೀಯಕ್ಕೆ ಬರಬೇಕೆಂದು ಕರೆ ತಂದರು.

ಎಲ್ಲಾ ಹಳ್ಳಿಗಳಲ್ಲೂ ತಮಗೆ ಮತ ಹಾಕುತ್ತಾರೆ, ಅಷ್ಟರ ಮಟ್ಟಿಗೆ ಜನರಿಗೆ ತಮ್ಮ ಮೇಲೆ ಪ್ರೀತಿ ವಿಶ್ವಾಸ ಇದೆ ಎಂದರು.

ಅಭ್ಯರ್ಥಿ ಆಯ್ಕೆ ತಲೆನೋವು: ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಒಬ್ಬರಿದ್ದಾರೆ, 2018 ರಲ್ಲಿ ಜೆಡಿಎಸ್‌ ಅಭ್ಯರ್ಥಿ ಸೋತಿದ್ದು, ಅವರು ಅಭ್ಯರ್ಥಿ ಎಂದು ಒಡಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ 15 ಜನರಿದ್ದು, ರೈತರು, ವ್ಯಾಪಾರಸ್ಥರು ಮತ್ತು ಕಾರ್ಗಿಲ್‌ ಯುದ್ಧದಲ್ಲಿ ಸೇವೆ ಮಾಡಿದ ಕಾರ್ಗಿಲ್‌ ವೆಂಕಟೇಶ್‌ ಸಹ ಇದ್ದಾರೆ. ಆದ್ದರಿಂದ ಅಭ್ಯರ್ಥಿಗಳ ಆಯ್ಕೆ ತಲೆನೋವಾಗಿರುವುದರಿಂದ ತಡವಾಗುತ್ತಿದೆ. ಜೆಡಿಎಸ್‌ ಮತ್ತು ಬಿಜೆಪಿ ಪಕ್ಷದಲ್ಲಿ ಇನ್ನೂ ಅಭ್ಯರ್ಥಿಗಳು ಫೈನಲ್‌ ಆಗಿಲ್ಲ, ಜೆಡಿಎಸ್‌ ಪಕ್ಷದಲ್ಲಿ ಯಾವಾಗ ಬಿ ಫಾರಂ ಬರುತ್ತೋ, ಯಾವಾಗ ಸಿ ಫಾರಂ ಬರುತ್ತೋ ಗೊತ್ತಿಲ್ಲ. 2013ರಲ್ಲಿ ಆದಿ ನಾರಾಯಣಗೆ ಕೊಟ್ಟರು, ಆಮೇಲೆ ಮುನಿಆಂಜಪ್ಪಗೆ ಕೊಟ್ಟರು, ಆಮೇಲೆ ಮುನಿಆಂಜಪ್ಪನಿಗೆ ಏನ್‌ ಕೆಲಸ ಕೊಟ್ಟರು ಅನ್ನೋದು ಎಲ್ಲರಿಗೂ ಗೊತ್ತಿದೆ.

ಕಾಂಗ್ರೆಸ್‌ ಮುಖಂಡರಿಂದ ಗೆಲುವು: 2008ರಲ್ಲಿ ಅಮರೇಶ್‌ ಗೆದ್ದಿದ್ದಾರೆ, 2013ರಲ್ಲಿ ನಾವು (ಕೊತ್ತೂರು ಜಿ.ಮಂಜುನಾಥ್‌) ಗೆದ್ದಿದ್ದೇವಿ, 2018ರಲ್ಲಿ ಎಚ್‌. ನಾಗೇಶ್‌ ಗೆಲ್ಲಿಸಿದ್ದೀವಿ, ತಾವು ಗೆದ್ದಿದ್ದು ಪಕ್ಷೇತರ ವಾದರೂ, ಕಾಂಗ್ರೆಸ್‌ ಪಕ್ಷದ ಅಂದಿನ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಶಾಬಾಸ್‌ಖಾನ್‌ ಮತ್ತು ಜಿ. ರಾಮಲಿಂಗಾರೆಡ್ಡಿ, ಕೆಪಿಸಿಸಿ ಸದಸ್ಯ ಉತ್ತನೂರು ಶ್ರೀನಿವಾಸ್‌, ನೀಲಕಂಟೇಗೌಡ, ರಾಜೇಂದ್ರಗೌಡ, ಗುಮ್ಮಕಲ್‌ ರಾಮರೆಡ್ಡಿ ಮತ್ತು ಎಂ.ವಿ.ಕೃಷ್ಣಪ್ಪ ಮತ್ತು ಎಂವಿ.ವೆಂಕಟಪ್ಪ ಅವರ ಕುಟುಂಬ ಅಶೋಕ್‌ ಕೃಷ್ಣಪ್ಪ ಸೇರಿದಂತೆ ಕಾಂಗ್ರೆಸ್‌ ಎಲ್ಲಾ ಹಿರಿಯ ಮುಖಂಡರು ತಮಗೆ ಸಹಕಾರ ನೀಡಿ ಗೆಲ್ಲಿಸಿದ್ದರು. ಅದೇ ತಂಡ ಎಚ್‌.ನಾಗೇಶ್‌ ಗೆಲ್ಲಿಸಿದರು, ಅದೇ ರೀತಿ ಈ ಚುನಾವಣೆಯಲ್ಲಿ ಸಹ ನಾವೇ ಗೆಲ್ಲುತ್ತೇವೆ ಎಂದರು.

ಚಿಕ್ಕಬಳ್ಳಾಪುರ ಜನತೆಯು ತಮ್ಮ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಅವರ ಪಾದಕ್ಕೆ ನಮಸ್ಕರಿಸುವೆ, ಆದರೆ ಚಿಕ್ಕಬಳ್ಳಾಪುರಕ್ಕೆ ಹೋಗಲು ತಮ್ಮ ಮನಸ್ಸು ಒಪ್ಪುತ್ತಿಲ್ಲ, ಮುಳಬಾಗಿಲು ತಾಲೂಕು ಪುಣ್ಯ ಕ್ಷೇತ್ರ, ಅಲ್ಲದೇ ತಮ್ಮ ಹುಟ್ಟೂರು, ಈ ಜನತೆಯೇ ಪ್ರೀತಿ ವಿಶ್ವಾಸವೇ ತಮ್ಮ ಶಕ್ತಿ, ಇವರು ಜನತೆಯು ತಮ್ಮ ಮೇಲಿಟ್ಟಿರುವ ಪ್ರೀತಿ, ಅಭಿಮಾನವನ್ನು ಬಿಟ್ಟು ದೂರ ಹೋಗುವುದಿಲ್ಲ, ತಾವು ಎಂಎಲ್‌ಎ ಆಗದೇ ಇದ್ದರೂ ಪರವಾಗಿಲ್ಲ, ಇಲ್ಲಿಯೇ ಇರುತ್ತೇನೆ ಹೊರತು ಇಂತಹ ದೂರ ಹೋಗುವುದಿಲ್ಲವೆಂದು ಸ್ಪಷ್ಟಪಡಿಸಿದರು.

ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ರಾಜೇಂದ್ರಗೌಡ, ಮಾಜಿ ತಾ.ಪಂ. ಅಧ್ಯಕ್ಷೆ ತ್ರಿವೇಣಮ್ಮ, ಮಲ್ಲಿಕಾರ್ಜುನ್‌, ಮಲ್ಲಪನಹಳ್ಳಿ ಶ್ರೀನಿವಾಸ್‌ ಸೇರಿದಂತೆ ಹಲವರಿದ್ದರು. 15ವರ್ಷದಿಂದ ಕಾಂಗ್ರೆಸ್‌ಗೆ ಜಯ : ಶಿಡ್ಲಘಟ್ಟದಲ್ಲಿ ಮೇಲೂರು ರವಿಗೆ ಬಿ ಫಾರಂ ಕೊಟ್ಟರು, ಆಮೇಲೆ ರಾಜಣ್ಣಗೆ ಸಿ ಫಾರಂ ಕೊಟ್ಟರು, ಯಾವ ಸಂದರ್ಭದಲ್ಲಿ ಜೆಡಿಎಸ್‌ನಲ್ಲಿ ಏನಾಗುತ್ತೋ ಹೇಳ್ಳೋಕ್ಕಾಗಲ್ಲ, ಬಿಜೆಪಿ ಪಕ್ಷದವರು ಅಭ್ಯರ್ಥಿ ಫೈನಲ್‌ ಅಂತಾರೆ, ಇನ್ನೂ ಘೋಷಣೆ ಮಾಡಿಲ್ಲ, ಬೇರೆ ಪಕ್ಷಗಳ ಬಗ್ಗೆ ಮಾತಾಡುವುದಕ್ಕಿಂತ ಕಾಂಗ್ರೆಸ್‌ ಪಕ್ಷ ಮುಳ ಬಾಗಿಲಿನಲ್ಲಿ ಬಲಿಷ್ಠವಾಗಿದೆ. 15 ವರ್ಷಗಳಿಂದ ಕಾಂಗ್ರೆಸ್‌ ಜಯಿಸಿಕೊಂಡು ಬಂದಿದೆ ಎಂದರು.

ಟಾಪ್ ನ್ಯೂಸ್

enWorld Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

World Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

1-goa

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

vijayendra

PSI ಹಗರಣ; ನನ್ನ ಹೆಸರು ತೇಲಿ ಬಿಟ್ಟಿದ್ದಾರೆ‌, ತನಿಖೆ ಮಾಡಲಿ:ಬಿ‌.ವೈ.ವಿಜಯೇಂದ್ರ

1-scsad

KSOU ಶೀಘ್ರದಲ್ಲಿ ಮುಕ್ತ ವಿವಿಯಿಂದ ಆನ್ ಲೈನ್ ಕೋಸ್೯ : ಕುಲಪತಿ ಪ್ರೊ ಹಲ್ಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಡಾನೆಗಳ ದಾಳಿಯಿಂದ ರೈತರಿಗೆ ಮುಕ್ತಿ ಎಂದು?

ಕಾಡಾನೆಗಳ ದಾಳಿಯಿಂದ ರೈತರಿಗೆ ಮುಕ್ತಿ ಎಂದು?

ಆಮೆಗತಿಯಲ್ಲಿ ರೈಲು ನಿಲ್ದಾಣ ಕಾಮಗಾರಿ

ಆಮೆಗತಿಯಲ್ಲಿ ರೈಲು ನಿಲ್ದಾಣ ಕಾಮಗಾರಿ

ಅನುಷ್ಠಾನವಾಗಲಿಲ್ಲ ಮಂಜೂರಾಗಿದ್ದ ಯೋಜನೆ

ಅನುಷ್ಠಾನವಾಗಲಿಲ್ಲ ಮಂಜೂರಾಗಿದ್ದ ಯೋಜನೆ

ಮೂರು ತಿಂಗಳಿಂದ ಅಂಗನವಾಡಿ ಮಕ್ಕಳಿಗಿಲ್ಲ ಹಾಲು

ಮೂರು ತಿಂಗಳಿಂದ ಅಂಗನವಾಡಿ ಮಕ್ಕಳಿಗಿಲ್ಲ ಹಾಲು

tdy-15

ಮಕ್ಕಳ ಸ್ವಾಗತಕ್ಕೆ ಶಿಕ್ಷಕರಿಂದ ಸಕಲ ಸಿದ್ಧತೆ

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ

enWorld Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

World Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

Perampalli: ಡಿವೈಡರ್‌ ಮೇಲೇರಿದ ಕಾರು!

Perampalli: ಡಿವೈಡರ್‌ ಮೇಲೇರಿದ ಕಾರು!

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

1-goa

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು