ಗ್ರಾಪಂ ಚುನಾವಣೆ ಸರ್ಕಾರ ಅಂತ್ಯಕ್ಕೆ ದಿಕ್ಸೂಚಿ
Team Udayavani, Dec 13, 2020, 7:22 PM IST
ಬಂಗಾರಪೇಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತಕ್ಕೆ ಅಂತ್ಯ ಹಾಡಲು ಗ್ರಾಪಂ ಚುನಾವಣೆ ದಿಕ್ಸೂಚಿಯಾಗಿದ್ದು,ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಗ್ರಾಪಂಗಳು ಕಾಂಗ್ರೆಸ್ ವಶವಾಗುವುದು ಖಚಿತಎಂದು ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ.ನಾಗರಾಜ್ ಭವಿಷ್ಯ ನುಡಿದರು.
ತಾಲೂಕಿನ ಬೂದಿಕೋಟೆ ಬ್ಲಾಕ್ ವ್ಯಾಪ್ತಿಗೆ ಬರುವ 16 ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿಗರನ್ನು ಕಣಕ್ಕಿಳಿಸಿ ಬಳಿಕ ಮಾತನಾಡಿದ ಅವರು,ಬಿಜೆಪಿ ಸರ್ಕಾರದ ಮೇಲೆ ಯುವಕರು ಹೆಚ್ಚಿನ ಒಲವನ್ನಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಅವರ ಕೈಗೆ ನೀಡಿದರು. ಆದರೆ ಜನರ ನಿರೀಕ್ಷೆಯಂತೆ ಕೆಲಸ ಮಾಡದೆ ಬದಲಿಗೆ ಜನವಿರೋಧಿ ಸರ್ಕಾರಗಳೆಂದು ಗುರುತಿಸಿಕೊಂಡಿದೆ ಎಂದು ದೂರಿದರು.
ಇತ್ತೀಚಿಗೆ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿ ರೈತರಿಂದ ಹಾಗೂ ಜನರಿಂದ ಮತ್ತಷ್ಟು ದೂರಉಳಿಯುವಂತಾಗಿದೆ. ಇದರಿಂದ ಯುವಕರು ಬಿಜೆಪಿ ಮೇಲಿನ ನಂಬಿಕೆ ಕಳೆದುಕೊಂಡಿದೆ. ಕ್ಷೇತ್ರದಲ್ಲಿ ಶಾಸಕ ಎಸ್. ಎನ್.ನಾರಾಯಣಸ್ವಾಮಿ ಜಿಲ್ಲೆಯಲ್ಲೇ ಮಾದರಿಯಾಗುವಂತಹ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡು ಗಮನ ಸಳೆದಿರುವುದು ಕಾಂಗ್ರೆಸ್ ಪಕ್ಷಕ್ಕೆ ವರವಾಗಿದೆ ಎಂದರು.
ತಾಲೂಕಿನ ಬೂದಿಕೋಟೆ ಬ್ಲಾಕ್ ವ್ಯಾಪ್ತಿಯ16ಗ್ರಾಪಂಗಳಲ್ಲಿ16ರಲ್ಲಿಯೂ ಕಾಂಗ್ರೆಸ್ ಬೆಂಬಲಿಗರೇ ಆಯ್ಕೆಯಾಗಿ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆಂದರು.ಕೆ.ವಿ.ನಾಗರಾಜ್‌ತಮ್ಮ ಬೆಂಬಲಿಗರೊಂದಿಗೆ ಬಂದುನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಮಂಜುನಾಥ, ಆರ್. ಚಲಪತಿ,ಎಪಿಎಂಸಿ ನಿರ್ದೇಶಕಕೊಂಡಪ್ಪ ನಾಯಕ, ವೆಂಕಟೇಶಪ್ಪ, ಬಡ್ಡೇಗೌಡ, ಕೃಷ್ಣೇಗೌಡ, ಉಜಾಲ ಶಂಕರ್ ಹಾಜರಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444