ಮಂತ್ರಿಯ ದುಡ್ಡು, ಚೆಕ್ ಚಿಲುಮೆ ಕಚೇರಿಯಲ್ಲಿ ಏಕಿತ್ತು?
Team Udayavani, Nov 20, 2022, 11:15 AM IST
ಬಂಗಾರಪೇಟೆ: ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಚಿಲುಮೆ ಕಚೇರಿ ಮೇಲೆ ನಡೆದ ದಾಳಿ ವೇಳೆ ದುಡ್ಡು, ಮಂತ್ರಿಯೊಬ್ಬರ ಖಾಲಿ ಚೆಕ್ ಸಿಕ್ಕಿದೆ ಅನ್ನುವ ಮಾಹಿತಿ ಇದೆ. ಮಂತ್ರಿಯ ದುಡ್ಡು, ಚೆಕ್ ಅಲ್ಲಿ ಏಕಿತ್ತು. ಆ ಮಂತ್ರಿಯನ್ನು ಇಟ್ಟುಕೊಂಡು ಯಾವ ತನಿಖೆ ನಡೆಸುತ್ತೀರಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆಯಾಗಿ ಕೆಲಸ ಮಾಡಬಾರದು. ಜೆಡಿಎಸ್, ಕಾಂಗ್ರೆಸ್ ಮತ ಹೆಚ್ಚಿರುವ ಕಡೆ ಮತದಾರರನ್ನು ಕೈಬಿಟ್ಟಿ¨ªಾರೆ. ಕಾಂಗ್ರೆಸ್ ಈಗಾಗಲೇ ದೂರನ್ನು ಕೊಟ್ಟಿದೆ. ನಮ್ಮ ಪಕ್ಷದಿಂದಲೂ ಚುನಾವಣಾ ಆಯೋಗಕ್ಕೆ ದೂರು ಕೊಡಲು ಹೇಳಿದ್ದೇನೆ ಎಂದು ಹೇಳಿದರು.
ತಾಲೂಕಿನ ನಾಯಕರಹಳ್ಳಿ ಗ್ರಾಮದಲ್ಲಿ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಮಾಜಿ ಸಿಎಂ, ಕಾಂಗ್ರೆಸ್ ಅಧಿಕಾರಕ್ಕೆ ಬರೋದಕ್ಕೆ ಜೆಡಿಎಸ್ ಪಂಚರತ್ನ ಯಾತ್ರೆ ಮಾಡುತ್ತಿದೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ಅಧಿಕಾರಕ್ಕೆ ಬರದೆ, ಕಾಂಗ್ರೆಸ್ ಅಧಿಕಾರಕ್ಕೆ ಬರದೆ ಇನ್ನು ಯಾರು ಅಧಿಕಾರಕ್ಕೆ ಬರಬೇಕು? ಇನ್ನೊಂದು ವಿಡಿಯೋ ಮಾಡುವುದಕ್ಕೆ ಅವರು ಅಧಿಕಾರಕ್ಕೆ ಬರಬೇಕಾ? ಅಂತ ರಮೇಶ್ ಜಾರಕಿಹೊಳಿ ವಿರುದ್ಧ ವ್ಯಂಗ್ಯವಾಗಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮತ್ತೆ ಬಂಧನ ಭೀತಿ: ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಇಲ್ಲಿದೆ ಐಪಿಎಲ್ -2023 ಕಮೆಂಟೇಟರ್ ಗಳ ಪಟ್ಟಿ: ಬಿಗ್ ಬಾಸ್ ವಿನ್ನರ್ ಈಗ ವೀಕ್ಷಕ ವಿವರಣೆಗಾರ
ದಾಖಲೆಗಳನ್ನು ತೋರಿಸಲಿ; ರಾಹುಲ್ ಗಾಂಧಿಗೆ ಸಾವರ್ಕರ್ ಮೊಮ್ಮಗ ಸವಾಲು
ಆಕಾಂಕ್ಷಾ ದುಬೆ ಪ್ರಕರಣ: ಮಗಳ ಸಾವಿಗೆ ಇವರಿಬ್ಬರೇ ಕಾರಣವೆಂದ ತಾಯಿ
ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗುಬ್ಬಿ ಶ್ರೀನಿವಾಸ್