ಜಿಲ್ಲೆಯಲ್ಲಿ ಜನೌಷಧಿ ಮಳಿಗೆಗೆ ಗ್ರಹಣ

Team Udayavani, May 18, 2019, 3:46 PM IST

kolar-tdy-1..

ಕೋಲಾರ ನಗರದ ಎಸ್‌ಎನ್‌ಆರ್‌ ಆಸ್ಪತ್ರೆಯ ಆವರಣದಲ್ಲಿ ಒಂದು ವರ್ಷದಿಂದಲೂ ಜನರಿಕ್‌ ಔಷಧ ಮಳಿಗೆಗೆ ಬೀಗ ಹಾಕಲಾಗಿದೆ.

ಕೋಲಾರ: ಬಡವರಿಗೆ ಸುಲಭ ದರದಲ್ಲಿ ಔಷಧಿಗಳು ಸಿಗಬೇಕೆಂಬ ಕಾರಣದಿಂದ ಕೇಂದ್ರ ಸರ್ಕಾರ ಆರಂಭಿಸಿದ ಜನರಿಕ್‌ ಔಷಧಿ ಮಳಿಗೆ ಜಿಲ್ಲಾ ಕೇಂದ್ರದಲ್ಲಿಯೇ ಮುಚ್ಚಿ ವರ್ಷ ಕಳೆದಿದೆ!. ದುಬಾರಿ ದರದ ಬ್ರಾಂಡೆಡ್‌ ಕಂಪನಿಗಳ ಔಷಧಿಗಳು ರಿಯಾಯ್ತಿ ದರದಲ್ಲಿ ಬಡ ರೋಗಿಗಳಿಗೆ ಸಿಗು ವಂತಾಗಬೇಕೆಂಬ ಸದುದ್ದೇಶದಿಂದ ಆರಂಭಿಸಲ್ಪಟ್ಟ ಈ ಯೋಜನೆಗೆ ಜಿಲ್ಲಾ ಕೇಂದ್ರದಲ್ಲೇ ಗ್ರಹಣ ಬಡಿಯು ವಂತಾಗಿದೆ.

ಜಿಲ್ಲಾ ಕೇಂದ್ರದ ಎಸ್‌.ಎನ್‌.ಆರ್‌ ಜಿಲ್ಲಾಸ್ಪತ್ರೆ ಆವರಣದಲ್ಲಿ ಜನರಿಕ್‌ ಔಷಧ ಮಳಿಗೆ ತೆರೆಯಲು ಸ್ಥಳಾವಕಾಶ ನೀಡಲಾಗುತ್ತಿತ್ತು. ಆಸ್ಪತ್ರೆ ಮಹಾದ್ವಾರದ ಎಡಭಾಗದಲ್ಲಿಯೇ ಔಷಧ ಮಳಿಗೆ ಇದ್ದುದ್ದರಿಂದ ಕೇವಲ ಆಸ್ಪತ್ರೆ ರೋಗಿ ಗಳಿಗಷ್ಟೇ ಅಲ್ಲ, ಹೊರಗಿನಿಂದ ಬಂದ ವರಿಗೂ ರಿಯಾಯ್ತಿ ದರದಲ್ಲಿ ಔಷಧಿ ಸಿಗುತ್ತಿತ್ತು.

ಮಳಿಗೆ ನಿರ್ವಹಿಸಲು ಟೆಂಡರ್‌ಪಡೆ ದವರು ಸೂಕ್ತವಾಗಿ ನಿರ್ವಹಿಸದ ಕಾರಣ ಎಸ್‌.ಎನ್‌.ಆರ್‌ ಆಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಮಾಹಿತಿಯನ್ನೂ ನೀಡದೇ ಮುಚ್ಚಿಕೊಂಡು ಹೋಗಿದ್ದಾರೆ. ಇದರಿಂದ ಬಡ ರೋಗಿಗಳಿಗೆ, ಮಧು ಮೇಹ, ರಕ್ತದೊತ್ತಡ ಇರುವವರು ದುಬಾರಿ ಬೆಲೆ ಕೊಟ್ಟು ಔಷಧಿ ಖರೀದಿಸಬೇಕಾದ ಅನಿವಾರ್ಯತೆ ಇದೆ.

ಉತ್ಸಾಹದಿಂದಲೇ ಆರಂಭ: ಕೇಂದ್ರ ಸರ್ಕಾರದ ಈ ಯೋಜನೆಗೆ ಪ್ರಾರಂಭ ದಲ್ಲಿ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿತ್ತು. ಜಿಲ್ಲಾ ಕೇಂದ್ರದ ಎಸ್‌ಎನ್‌ಆರ್‌ ಆಸ್ಪತ್ರೆ ಆವರಣದಲ್ಲಿ ಜನರಿಕ್‌ ಔಷಧ ಮಳಿಗೆ ಪ್ರಾರಂಭಕ್ಕೆ ನೂರಾರು ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಟೆಂಡರ್‌ ಪಡೆದುಕೊಂಡ ಸಂಸ್ಥೆಯು 2016-17ನೇ ಸಾಲಿನಲ್ಲಿ ಔಷಧಿ ಮಳಿಗೆ ಆರಂಭಿಸಿ, ನಾಲ್ಕೈದು ಮಂದಿ ಸಿಬ್ಬಂದಿ ನೇಮಕ ಮಾಡಿತ್ತು. ಆರಂಭದಲ್ಲಿ ಜನರಿಕ್‌ ಔಷಧಿಗೆ ಸಿಕ್ಕ ಪ್ರಚಾರದಿಂದಾಗಿ ವ್ಯಾಪಾರವೂ ಚೆನ್ನಾ ಗಿಯೇ ಆಗುತ್ತಿತ್ತು. ನಂತರ ಸಿಬ್ಬಂದಿಗೂ ವೇತನ ನೀಡಲಾಗದೇ, ಮಳಿಗೆ ನಡೆಸಲು ಸಾಧ್ಯವಾಗದೇ ಏಕಾಏಕಿ ಮುಚ್ಚಿಕೊಂಡು ಹೋಗಲಾಗಿದೆ.

ಕಮಿಷನ್‌ ಕಡಿಮೆ: ಜನರಿಕ್‌ ಔಷಧಿ ಮಳಿಗೆಯಲ್ಲಿ ಬ್ರಾಂಡ್‌ ಔಷಧಿಗಳನ್ನು ಶೇ.30 ರಿಯಾಯ್ತಿ ದರದಲ್ಲಿ ಮಾರಾಟ ಮಾಡಬೇಕೆಂಬ ನಿಯಮವಿತ್ತು. ಆದರೆ, ಔಷಧಿ ಮಳಿಗೆಗಳು ಆರಂಭವಾದ ನಂತರ ಕೆಲವು ಔಷಧಿಗಳನ್ನು ಶೇ.50 ದರದಲ್ಲಿ ಮಾರಾಟ ಮಾಡಬೇಕೆಂಬ ಸೂಚನೆ ನೀಡಲಾಯಿತು. ಇದಕ್ಕಾಗಿ ಮಾರಾಟಗಾರರಿಗೆ ಶೇ.7 ರಿಂದ 10 ರಷ್ಟು ಕಮಿಷನ್‌ ನೀಡುವುದಾಗಿಯೇ ಹೇಳಲಾಗಿತ್ತು. ಆದರೆ, ಇದನ್ನು ಸರಿ ಯಾಗಿ ಪಾಲಿಸದ ಕಾರಣದಿಂದ ಜನರಿಕ್‌ ಔಷಧಿ ಮಳಿಗೆಗೆ ಬೀಗ ಹಾಕು ವಂತಾಗಿದೆ ಎಂದು ಹೇಳಲಾಗುತ್ತಿದೆ.

ಉಚಿತ ಔಷಧಿ: ಜನರಿಕ್‌ ಔಷಧಿ ಮಳಿಗೆಗಳನ್ನು ತೆರೆಯಬೇಕೆಂದು ಸೂಚಿಸಲಾಗಿರುವ ಜಿಲ್ಲಾ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಸರ್ಕಾರ ರಾಷ್ಟ್ರೀಯ ಉಚಿತ ಔಷಧಿ ಸರಬರಾಜು ಯೋಜನೆಯಿಂದ ಗುಣಮಟ್ಟದ ಔಷಧಿಗಳನ್ನು ಸಂಪೂರ್ಣ ಉಚಿತವಾಗಿ ರೋಗಿಗಳಿಗೆ ನೀಡಲಾಗುತ್ತಿದೆ. ಇದೇ ಕಾರಣದಿಂದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಹೊರಗಿನಿಂದ ತರುವಂತೆ ಚೀಟಿ ನೀಡುವಂತಿಲ್ಲ ಎಂಬ ಸುತ್ತೋಲೆ ಸರ್ಕಾರ ಹೊರಡಿಸಿದೆ. ಈ ಸುತ್ತೋಲೆ ಹಾಗೂ ಉಚಿತ ಔಷಧಿ ವಿತರಣೆಯಿಂದಾಗಿ ಸರಕಾರಿ ಆಸ್ಪತ್ರೆ ಆವರಣದಲ್ಲಿರುವ ಜನರಿಕ್‌ ಔಷಧಿ ಮಳಿಗೆಗಳು ಖಾಲಿ ಹೊಡೆಯುವಂತಾ ಯಿತು. ಖಾಸಗಿ ಯಾಗಿಯೂ ಬಹು ತೇಕ ನರ್ಸಿಂಗ್‌ ಹೋಮ್‌, ಕ್ಲಿನಿಕ್‌ಗಳಲ್ಲಿ ಅಲ್ಲಿಯೇ ಔಷಧಿ ಮಾರಾಟ ಮಾಡು ತ್ತಿರುವುದ ರಿಂದ ಜನರಿಕ್‌ ಔಷಧ ಮಳಿಗೆಗೆ ಗ್ರಾಹಕರೇ ಇಲ್ಲದಂತಾ ಯಿತು. ಜನರಿಕ್‌ ಔಷಧಿ ಮಳಿಗೆಗೆ ನಷ್ಟ ಸಂಭ ವಿಸಲು ಈ ಅಂಶವು ಪ್ರಮುಖ ಕಾರಣವಾಗಿದೆ.

ಜನತಾ ಬಜಾರ್‌: ಕೋಲಾರ ಎಸ್‌ಎನ್‌ಆರ್‌ ಆಸ್ಪತ್ರೆಯ ಆವರಣದಲ್ಲಿ 10 ವರ್ಷಗಳ ಹಿಂದೆಯೇ ಟಿಎಪಿಸಿಎಂಸ್‌ ಮೂಲಕ ಜನತಾ ಬಜಾರ್‌ ಔಷಧ ಮಳಿಗೆ ನಡೆಯುತ್ತಿದೆ. ಇಲ್ಲಿ ಸಾರ್ವ ಜನಿಕರಿಗೆ ಹತ್ತು ವರ್ಷ ಗಳಿಂದಲೂ ಶೇ.10 ರಿಯಾಯ್ತಿ ದರದಲ್ಲಿ ಔಷಧಿ ಮಾರಾಟ ಮಾಡಲಾಗುತ್ತಿದೆ. ಜನರಿಕ್‌ ಔಷಧಿ ಮಳಿಗೆ ಕೋಲಾರದಲ್ಲಿ ಜನ ಪ್ರಿಯ ವಾಗದಿರಲು ಜನತಾ ಬಜಾರ್‌ ಜನ ಪ್ರಿಯವಾಗಿರುವುದೂ ಕಾರಣ ವಾಗಿದೆ.

ತಾಲೂಕಿಗೊಂದು ಜನೌಷಧ ಮಳಿಗೆ: ಜಿಲ್ಲಾ ಕೇಂದ್ರದ ಜನರಿಕ್‌ ಔಷಧಿ ಮಳಿಗೆಯ ಪರಿಸ್ಥಿತಿಯೇ ಹೀಗಿರುವಾಗ ಇನ್ನು ತಾಲೂಕಿಗೊಂದರಂತೆ ತೆರೆದಿರುವ ಜನರಿಕ್‌ ಔಷಧಿ ಮಳಿಗೆಗಳು ತೆವಳುತ್ತಾ ಸಾಗಿವೆ. ಬಂಗಾರಪೇಟೆ ಹೊರತುಪಡಿಸಿ ಉಳಿದ ತಾಲೂಕು ಆಸ್ಪತ್ರೆಗಳಲ್ಲಿಯೂ ಜನರಿಕ್‌ ಔಷಧಿ ಮಳಿಗೆಗಳಿವೆ. ಆದರೂ ಇವು ಎಡವುತ್ತಾ ಸಾಗುತ್ತಿವೆ. ಆಸ್ಪತ್ರೆ ಆವರಣಗಳಲ್ಲಿರುವ ಜನರಿಕ್‌ ಔಷಧಿ ಮಳಿಗೆಗಿಂತಲೂ ಪ್ರತಿ ತಾಲೂಕಿಗೊಂದರಂತೆ ಖಾಸಗಿಯವರಿಗೆ ನೀಡಿರುವ ಜನೌಷಧ ಮಳಿಗೆಗಳಲ್ಲಿ ಸುಲಭ ದರದಲ್ಲಿ ಔಷಧಿಗಳು ಸಿಗು ವಂತಾಗಿದೆ. ಕೋಲಾರದ ಬ್ರಾಹ್ಮಣರ ಬೀದಿಯಲ್ಲಿರುವ ಜನೌಷಧ ಮಳಿಗೆ ಈ ನಿಟ್ಟಿನಲ್ಲಿ ಜನರ ಕೈಗೆಟುಕುತ್ತಿದೆ.

ಪತ್ರ ಬರೆದರೂ ಪ್ರತಿಕ್ರಿಯೆ ಇಲ್ಲ: ಕೋಲಾರ ಎಸ್‌ಎನ್‌ಆರ್‌ ಆಸ್ಪತ್ರೆಯ ಆವರಣದಲ್ಲಿದ್ದ ಜನರಿಕ್‌ ಔಷಧಿ ಮಳಿಗೆ ಯನ್ನು ಏಕಾಏಕಿ ಮುನ್ಸೂಚನೆ ಇಲ್ಲದೆ ಮುಚ್ಚಿಕೊಂಡು ಹೋಗಿರುವ ಕುರಿತು ಜಿಲ್ಲಾ ಶಸ್ತ್ರ ಚಿಕಿತ್ಸಕರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಟೆಂಡರ್‌ ಪಡೆದವರಿಗೂ ಪತ್ರ ಬರೆದಿದ್ದಾರೆ. ಆದರೆ, ಯಾವುದಕ್ಕೂ ಸ್ಪಂದನೆ ವ್ಯಕ್ತವಾಗಿಲ್ಲ. ಇದರಿಂದಾಗಿ ಕಳೆದ ವರ್ಷದಿಂದಲೂ ಜನಸಂಜೀವಿನಿ ಜನರಿಕ್‌ ಔಷಧ ಮಳಿಗೆಗೆ ಬೀಗ ಬೀಳುವಂತಾಗಿದೆ.

● ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.