
ಮತದಾನಕ್ಕೆ ಆಮಂತ್ರಣ ಪತ್ರಿಕೆ
Team Udayavani, Apr 18, 2023, 4:41 PM IST

ಕೋಲಾರ: ಜಿಲ್ಲಾ ಸ್ವೀಪ್ ಸಮಿತಿಯು ಮತದಾನಕ್ಕೆ ಮದುವೆ ಮಾದರಿಯ ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವ ಮೂಲಕ ಮತದಾರರ ಗಮನ ಸೆಳೆಯುವ ಪ್ರಯತ್ನ ಮಾಡಿದೆ.
ಭಾರತ ಸರಕಾರದ ಚುನಾವಣಾ ಆಯೋಗದ ಹೆಸರಿನಲ್ಲಿ ಈ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದು, ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿ ವಾಹನ ಶಕ 1945 ಕ್ಕೆ ಸರಿಯಾದ ಶ್ರೀಶೋಭಕೃತ್ ನಾಮಸಂವತ್ಸರ ದಿನಾಂಕ 10.5.2023 ರ ಬುಧವಾರ ಬೆಳಿಗ್ಗೆ 7ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಲ್ಲುವ ಶುಭ ಘಳಿಗೆಯಲ್ಲಿ ಮತದಾನ ಎಂಬ ಚುನಾವಣೋತ್ಸವ ನೆರವೇರುವಂತೆ ಭಾರತ ಸರ್ಕಾರ ನಿಶ್ಚಯಿಸಿರುವುದರಿಂದ ತಾವು ಸಕುಟುಂಬ ಸಮೇತರಾಗಿ ಆಗಮಿಸಿ, ತಮ್ಮ ಸ್ವಇಚ್ಛೆಯಂತೆ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಭಾರತದ ಭವಿಷ್ಯವನ್ನು ರೂಪಿಸಬೇಕೆಂದು ಕೋರುವ, ತಮ್ಮ ಆಗಮನಾಭಿಲಾಷಿಗಳು ಭಾರತಚುನಾವಣಾ ಆಯೋಗ, ಸ್ಥಳ ಮತಗಟ್ಟೆ ಕೇಂದ್ರ ಎಂದು ಆಹ್ವಾನ ಕೋರಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್: ವಿಶೇಷ ಸೂಚನೆ ಯಾಗಿ ಹಣಕೇಳದೆ ಮತ ನೀಡಿ ಆಶೀರ್ವದಿಸಿ ಸುಖಾಗಮನ ಬಯಸುವವರು ಎಲ್ಲಾ ಪಕ್ಷಗಳು ಎಂದು ಮುದ್ರಿಸಲಾಗಿದೆ. ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಈಗಾಗಲೇ ವಿವಿಧ ವೈವಿಧ್ಯಮ ಸ್ಪೀಪ್ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಚುನಾವಣಾಆಯೋಗವು ಮುದ್ರಿಸಿರುವ ಈ ಆಮಂತ್ರಣ ಪತ್ರಿಕೆಯು ಸಾಮಾಜಿಕ ಜಾಲ ತಾಣಗಳ ಮೂಲಕ ಮತದಾರರಿಗೆ ಹಂಚಿಕೆಯಾಗುತ್ತಿದೆ.
ಇದೇ ರೀತಿಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ನೂತನ ಮತದಾರರಿಗೆ ಜಿಲ್ಲಾ ಚುನಾವಣಾಧಿಕಾರಿ ಸಹಿ ಹೊಂದಿರುವ ಪತ್ರವೊಂದನ್ನು ಅಂಚೆ ಮೂಲಕ ಮತದಾರರ ಸ್ಮಾರ್ಟ್ ಕಾರ್ಡ್‌ನೊಂದಿಗೆ ಕಳುಹಿಸಲಾಗುತ್ತಿದ್ದು, ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆಯೂ ಮನವಿ ಮಾಡುತ್ತಿರುವುದು ಮತದಾರರ ಗಮನ ಸೆಳೆಯುತ್ತಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Asian Games: ಸೈಲಿಂಗ್ ನಲ್ಲಿ ಭಾರತಕ್ಕೆ ಚೊಚ್ಚಲ ಪದಕ; ರಜತ ಗೆದ್ದ ನೇಹಾ ಠಾಕೂರ್

Bandh; ಕಾವೇರಿಗಾಗಿ ಬೆಂಗಳೂರು ಬಂದ್; ಹಲವೆಡೆ ಪ್ರತಿಭಟನೆ, ರೈತ ಮುಖಂಡರು ಪೊಲೀಸ್ ವಶಕ್ಕೆ

Mumbai Police: 26/11ರ ಮುಂಬೈ ದಾಳಿ… ತಹವ್ವುರ್ ರಾಣಾ ವಿರುದ್ಧ 400 ಪುಟಗಳ ಚಾರ್ಜ್ ಶೀಟ್

Buzz: ಒಂದೇ ದಿನ ʼಸಲಾರ್-ಡಂಕಿʼ ರಿಲೀಸ್: ವರ್ಷಾಂತ್ಯಕ್ಕೆ ದೊಡ್ಡ ಬಾಕ್ಸ್ ಆಫೀಸ್ ದಂಗಲ್?

Road mishap: ಕಾರಿಗೆ ಬೈಕ್ ಡಿಕ್ಕಿ: ಹೆಲ್ಮೆಟ್ ಧರಿಸದ ಯುವಕ ಸಾವು