
ಮತ್ತೆ ಕೈವಾರ ತಾತಯ್ಯನವರು ಹುಟ್ಟಿ ಬರುವ ಸೂಚನೆ ಸಿಕ್ಕಿದೆ!
Team Udayavani, Jun 9, 2023, 3:57 PM IST

ಕೋಲಾರ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೋಡಿಮಠದ ಸ್ವಾಮೀಜಿ ನುಡಿದಿದ್ದ ಭವಿಷ್ಯ ನಿಜವಾಗಿದೆ. ಯಾವುದೇ ಪಕ್ಷಗಳು ಒಟ್ಟಾಗಿ ಹೋಗುವುದಿಲ್ಲ. ಪಕ್ಷಾಂತರ ಹೆಚ್ಚಲಿವೆ. ಆದರೆ, ಒಂದೇ ಪಕ್ಷ ಅಧಿಕಾರವನ್ನು ಹಿಡಿಯಲಿದೆ ಎಂದು ಹೇಳಿದ್ದರು.
ಅದರಂತೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಮಾತ್ರ ಏಕಾಂಗಿಯಾಗಿ ಅಧಿಕಾರಕ್ಕೆ ಬಂದಿದೆ. ಇದರ ಮಧ್ಯೆ ಇದೀಗ ಕೋಡಿ ಮಠದ ಡಾ.ಶಿವಾನಂದ ಮಹಾ ಸ್ವಾಮೀಜಿ ಮತ್ತೂಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಈ ಹಿಂದೆ ಹೇಳಿದಂತೆ ದುರಂತ ನಡೆದಿದೆ: ಗುರುವಾರ ತಾಲೂಕಿನ ಸುಗಟೂರು ಗ್ರಾಮದ ಯೋಗಿ ನಾರೇಯಣ ಮಠಕ್ಕೆ ಕೋಡಿಮಠದ ಶ್ರೀಗಳು ಭೇಟಿ ನೀಡಿದ್ದ ವೇಳೆ ಮಾತನಾಡಿದರು. ಈ ಹಿಂದೆ ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ. ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತೆ ಎಂದು ಹೇಳಿದ್ದೆ ಅದರಂತೆ ರೈಲು ದುರಂತ ನಡೆದಿದೆ ಎಂದು ಹೇಳಿದರು.
ಹಾಗೆಯೇ ಇನ್ನೂ ಒಂದು ಗಂಡಾಂತರ ದೇಶಕ್ಕೆ ಕಾದಿದೆ. ಈ ವರ್ಷ ಅಚಾನಕ್ಕಾಗಿ ಗುಡುಗು ಮಿಂಚು, ಬರಲಿದೆ. 2-3 ರಾಷ್ಟ್ರಗಳು ನೀರಿನಲ್ಲಿ ಮುಳುಗಡೆ ಯಾಗಲಿವೆ. ಎಲ್ಲೋ ನಡೆದ ಬಾಂಬ್ ದಾಳಿಯಿಂದ ಸಾಕಷ್ಟು ನಮಗೆ ಅನಾಹುತ ಸಂಭವಿಸಲಿದೆ ಎಂದು ಆಘಾತಕಾರಿ ಭವಿಷ್ಯ ನುಡಿದರು.
ರಾಜ್ಯದಲ್ಲಿ ಆಧ್ಯಾತ್ಮಿಕವಾಗಿ ಸಿದ್ದರಾಮಯ್ಯ ಸರ್ಕಾರ ನಡೆಯುತ್ತಿದೆ. ಹಾಗಾಗಿ ಅವರಿಗೆ ಒಳ್ಳೆಯದಾಗಲಿ, ಆಧ್ಯಾತ್ಮ ಬಿಟ್ಟು ಹೋದರೆ ಅವರಿಗೆ ದೈವವೇ ಉತ್ತರ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಬಗ್ಗೆ ಅಭಿಪ್ರಾಯ ತಿಳಿಸಿದರು.
ಗಿಡ, ಮರ, ದೈವದ, ಆರಾಧ್ಯದ ಸಂಕೇತ. ಮತ್ತೆ ಕೈವಾರ ತಾತಯ್ಯನವರು ಹುಟ್ಟಿ ಬರುವ ಸಂಕೇತ ಇದೆ. ಅಂತಹ ಸೂಚನೆ ಈಗಾಗಲೇ ಸಿಕ್ಕಿದೆ. ಅದರಂತೆ ಕೈವಾರ ಬೆಟ್ಟದಲ್ಲಿ ಮೂನ್ಸೂಚನೆ ಸಿಕ್ಕಿದೆ. ● ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ, ಕೋಡಿ ಮಠ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ: ಸಿಎಂ ಸಿದ್ದರಾಮಯ್ಯ

ಪುಟ್ಟಕ್ಕನ ಮಕ್ಕಳ ಔಟಿಂಗ್

AsianGames: ಒಂದು ಮೊಬೈಲ್ಗಾಗಿ ಸಾವಿರಾರು ಕಸದಬ್ಯಾಗ್ ಹುಡುಕಾಡಿದ ಸಿಬ್ಬಂದಿ: ಆಗಿದ್ದೇನು?

Haryana ಬೈಕ್ನಲ್ಲೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

Kalaburagi; ಡಿವೈಡರ್ ಗೆ ಬೈಕ್ ಡಿಕ್ಕಿ; ಇಬ್ಬರು ವಿದ್ಯಾರ್ಥಿಗಳ ಸಾವು