ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಂಕಲ್ಪ ಮಾಡಿ
Team Udayavani, Apr 12, 2021, 1:15 PM IST
ಕೋಲಾರ: ಡಿಕೆಶಿ, ಸಿದ್ದರಾಮಯ್ಯ ನಡುವೆ ಹೊಂದಾಣಿಕೆ ಇಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲೆಯಲ್ಲೂ ಗೊಂದಲ ಮನೆ ಮಾಡಿದೆ. ಇದರ ಲಾಭ ಪಡೆದುಜಿಪಂ, ತಾಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಗೆಲುವಿಗೆ ಶ್ರಮಿಸುವ ಸಂಕಲ್ಪ ಮಾಡಿ ಎಂದು ಸಂಸದ ಎಸ್.ಮುನಿಸ್ವಾಮಿ ಕಾರ್ಯಕರ್ತರಿಗೆ ಹೇಳಿದರು.
ಭಾನುವಾರ ಬಿಜೆಪಿ ಕಚೇರಿಯಲ್ಲಿ ನಡೆದ ಜಿಪಂ, ತಾಪಂ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಒಡೆದ ಮನೆಯಾಗಿದ್ದು,ಜೆಡಿಎಸ್‌ನಲ್ಲೂ ಗೊಂದಲ ಇರುವುದರಿಂದ ಬಿಜೆಪಿಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಬೂತ್, ಶಕ್ತಿ ಕೇಂದ್ರದ ಪದಾಧಿ ಕಾರಿಗಳು ಮನೆ ಮನೆಗೆ ಹೋಗಿ ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮಗಳಕುರಿತು ಅರಿವು ಮೂಡಿಸಬೇಕು ಎಂದರು.
ಪಾಠ ಕಲಿಸಲು ಕಾಯುತ್ತಿದ್ದಾರೆ: ಹೊಂದಾಣಿಕೆ ರಾಜಕೀಯಬೇಡ, ಪಕ್ಷದಲ್ಲಿದ್ದು ಮೋಸ ಮಾಡಿದವರನ್ನು ಸೇರಿಸಿಕೊಳ್ಳುವುದು ಬೇಡ. ಕೋಲಾರದಲ್ಲೂ ಗೆಲ್ಲುವ ಅವಕಾಶ ಇದೆ. ಕಾಂಗ್ರೆಸ್, ಜೆಡಿಎಸ್,ವರ್ತೂರು ಕಾಂಗ್ರೆಸ್ ನಡುವೆ 2 ಸೀಟು ಗೆಲ್ಲಬಹುದು.ವೇಮಗಲ್ ಪಪಂ ಚುನಾವಣೆ ಬರುತ್ತದೆ. ವಿವಿಧ ತಾಲೂಕುಗಳಲ್ಲಿ ಶಾಸಕರ ದುರಹಂಕಾರ ನೋಡಿ, ಈಗಪಾಠ ಕಲಿಸಲು ಕಾಯುತ್ತಿದ್ದಾರೆ ಎಂದು ನುಡಿದರು.ಮಾಲೂರು, ಕೆಜಿಎಫ್, ಬಂಗಾರಪೇಟೆಯಲ್ಲಿ ಪಕ್ಷಸದೃಢವಾಗಿದೆ. ಜಿಪಂನಲ್ಲಿ 10ರಿಂದ 12 ಸೀಟು ಬಂದರೆ ಅಧಿಕಾರ ಚುಕ್ಕಾಣಿ ಹಿಡಿಯಬಹುದು. ಟೀಂ ವರ್ಕ್ ಮಾಡಿಕೊಂಡು ಬೂತ್ ಬೂತ್ ಗಳಲ್ಲೂ ಪ್ರಚಾರಮಾಡ್ತೀವಿ. ಚುನಾವಣೆ ಶುರುವಾಗಿದೆ ಎಂದು ಭಾವಿಸಿ ಕಾರ್ಯಪ್ರವೃತ್ತರಾಗಿ, ತ.ನಾಡಿನಲ್ಲೂ 5 ಸೀಟು ಗೆಲ್ತೀವಿ. ಪಶ್ಚಿಮ ಬಂಗಾಲದಲ್ಲಿ ಪರಿಸ್ಥಿತಿ ಬದಲಾಗಿದೆ. ಬಿಜೆಪಿಗೆ ಒಳ್ಳೆಯ ಅವಕಾಶ ಇದೆ ಎಂದರು.
1.14 ಲಕ್ಷ ಜನರಿಗೆ ಲಸಿಕೆ: ಕಾಂಗ್ರೆಸ್, ಜೆಡಿಎಸ್ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವವರಿಗೆ ಸಹಾಯಮಾಡಲು ಹೋಗಲ್ಲ. ಅದು ನಮಗೆ ಕ್ರೆಡಿಟ್, ಜಿಲ್ಲೆಯಲ್ಲಿ 1.14 ಲಕ್ಷ ಜನರಿಗೆ ಲಸಿಕೆಹಾಕಲಾಗಿದೆ.ಇವರನ್ನು ಬದಲಾಯಿಸುವ ಕೆಲಸ ಆಗಬೇಕು.ಬಡವರನ್ನು ಆಸ್ಪತ್ರೆಗೆ ಜತೆಗೆ ಕರೆದುಕೊಂಡು ಹೋಗಿ ಲಸಿಕೆ ಹಾಕಿಸಿ ವಾಪಸ್ ಬಿಟ್ಟುಬನ್ನಿ, ಇದರಿಂದ ಪಕ್ಷಕ್ಕೆ ಅನುಕೂಲ ಆಗಲಿದೆ ಎಂದರು.
ಏ.14ರಂದು ಎಲ್ಲ ಬೂತ್‌ಗಳಲ್ಲೂ ಅಂಬೇಡ್ಕರ್ ಜಯಂತಿ ಆಚರಿಸಿ, ಅಂಬೇಡ್ಕರ್ ಕಾಂಗ್ರೆಸ್ ಆಸ್ತಿಎಂದುಕೊಂಡಿದ್ದಾರೆ. ಆದರೆ, ಅವರು ದೇಶದ,ಪ್ರಪಂಚದ ಆಸ್ತಿ. ಪ್ರಪಂಚದಲ್ಲಿ ಹೆಚ್ಚು ಪ್ರತಿಮೆಇರೋದು ಅಂಬೇಡ್ಕರ್ ಅವರದ್ದು. ಅಂಬೇಡ್ಕರ್‌ಗೆಅತೀ ಹೆಚ್ಚು ತೊಂದರೆ ಕೊಟ್ಟಿದ್ದು ಕಾಂಗ್ರೆಸ್. ಈ ಬಗ್ಗೆಜನತೆಗೆ ಅರಿವು ಮೂಡಿಸಿ ಎಂದರು.
ಎತ್ತಿನಹೊಳೆಗೆ ಅನುದಾನ: ಕೆಸಿ ವ್ಯಾಲಿಯೋಜನೆಯಡಿ ಹಿಂದಿನ ಸರ್ಕಾರ 126 ಕೆರೆಗಳಿಗೆನೀರು ಹರಿಸುವ ಕಾರ್ಯ ಕೈಗೆತ್ತಿಕೊಂಡಿದೆ. ಆದರೆ, ಬಿಜೆಪಿ ಸರ್ಕಾರ ಎರಡನೇ ಹಂತದಲ್ಲಿ 275 ಕೆರೆಗಳಿಗೆ ನೀರು ಹರಿಸಲು 455 ಕೋಟಿ ಮಂಜೂರು ಮಾಡಿಟೆಂಡರ ಕರೆದಿದೆ. ಎತ್ತಿನಹೊಳೆ ಯೋಜನೆಗೆ ಅನುದಾನ ಮೀಸಲಿಟ್ಟಿದೆ ಎಂದು ನುಡಿದರು.
ಅಂಬೇಡ್ಕರ್ ಜಯಂತಿ ಆಚರಿಸಿ: ಬಿಜೆಪಿ ಜಿಲ್ಲಾಧ್ಯಕ್ಷವೇಣುಗೋಪಾಲ್ ಮಾತನಾಡಿ, ಏ.18ರಂದು ರಾಜ್ಯಕಾರ್ಯಕಾರಣಿ ಇರುವುದರಿಂದ ಎಲ್ಲ ಕಡೆ ಮಂಡಲಪ್ರಶಿಕ್ಷಣ, ಮಂಡಲ್ ಸಹಲ್, ಜಿಲ್ಲಾ, ವಿವಿಧಮೋರ್ಚಾಗಳ ಸಹಲ್‌ಗಳನ್ನು ಮುಗಿಸಬೇಕು. ಬೂತ್‌ಅಧ್ಯಕ್ಷರ ಪಟ್ಟಿ ಸಲ್ಲಿಸಿ, ಅಧ್ಯಕ್ಷರ ನೇಮ್‌ಬೋರ್ಡ್‌ಪಕ್ಷದಿಂದಲೇ ಸಿದ್ಧವಾಗಿ ತಲುಪಿಸಲಾಗುತ್ತದೆ. ಮನೆಮುಂದೆ ನಾಮಫಲಕ ಹಾಕಬೇಕು. ಅಂಬೇಡ್ಕರ್ ಜಯಂತಿವನ್ನು ಜಿಲ್ಲೆಯ 131 ಪರಿಶಿಷ್ಟ ಕಾಲೋನಿಗಳಲ್ಲಿ ಆಚರಿಸಲು ಸೂಚನೆ ಬಂದಿದೆ.
ಬಿಜೆಪಿ ಮೀಸಲು ವಿರೋಧಿ ಎಂಬ ಪ್ರತಿಪಕ್ಷಗಳು ಬಿಂಬಿಸುತ್ತಿರುವುದರಿಂದ ಜನತೆಗೆ ನಿಜಾಂಶ ತಿಳಿಸಿ, ಅವರ ಒಲವು ಗಳಿಸಬೇಕು ಎಂದು ತಿಳಿಸಿದರು.
ಧೈರ್ಯವಾಗಿ ಕೆಲಸ: ಮಾಜಿ ಅಧ್ಯಕ್ಷ ಬಿ.ಪಿ.ವೆಂಕ ಟಮುನಿಯಪ್ಪ, ಈ ಬಾರಿ ಚುನಾವಣೆ ಯಲ್ಲಿ ಪಕ್ಷದಕಾರ್ಯಕರ್ತರು ಧೈರ್ಯವಾಗಿ ಕೆಲಸ ಮಾಡಬಹುದು.ನಾಯಕರು ಇದ್ದಾರೆ. ಪ್ರತಿ ತಾಲೂಕಿನಲ್ಲಿ ಜಿಪಂನಲ್ಲಿ3ರಿಂದ 4 ಸದಸ್ಯರನ್ನು ಗೆದ್ದರೆ ಆಡಳಿತ ಹಿಡಿಯಬಹುದು ಎಂದರು.
ಮಾಜಿ ಅಧ್ಯಕ್ಷ ಎಸ್.ಎನ್.ಶ್ರೀರಾಮ್, ಮಾಜಿಪ್ರಧಾನ ಕಾರ್ಯ ದರ್ಶಿ ವಾಸು, ಮಾಜಿ ಅಧ್ಯಕ್ಷಕೃಷ್ಣಾರೆಡ್ಡಿ, ಜಿಲ್ಲಾ ಉಸ್ತುವಾರಿ ಹೇಮಾರೆಡ್ಡಿ, ಜಿಪಂಸದಸ್ಯರಾದ ಅಶ್ವಿನಿ, ಮಹೇಶ್, ಜಯಪ್ರಕಾಶ್, ಬಿ.ಪಿ.ವೆಂಕಟಮುನಿಯಪ್ಪ, ಕೆಂಬೋಡಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ ಇದ್ದರು.