ನಿರ್ವಹಣೆ ಇಲ್ಲದೇ ಸಿಆರ್‌ಸಿ ಕೇಂದ್ರ ಹಾಳು

ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ,ಕೇಂದ್ರದಲ್ಲಿ ಕಾರ್ಯಚಟುವಟಿಕೆ ಇಲ್ಲ

Team Udayavani, Dec 12, 2020, 4:50 PM IST

ನಿರ್ವಹಣೆ ಇಲ್ಲದೇ ಸಿಆರ್‌ಸಿ ಕೇಂದ್ರ ಹಾಳು

ಮುಳಬಾಗಿಲು: ಶಾಲೆಗಳಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರೊಂದಿಗೆ ಸರ್ಕಾರಿ ಸೌಲಭ್ಯಗಳನ್ನು ಅತಿ ಶೀಘ್ರವಾಗಿ ಶಾಲೆಗಳಿಗೆ ತಲುಪಿಸುವ ಉದ್ದೇಶಕ್ಕಾಗಿ ನಿರ್ಮಿಸಿರುವ ಸಂಪನ್ಮೂಲ ಕೇಂದ್ರವೊಂದು ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೂಕ್ತ ನಿರ್ವಹಣೆಯಿಲ್ಲದೇ ಹಾಳು ಕೊಂಪೆಯಂತಾಗಿದೆ.

ತಾಲೂಕಿನ ಎನ್‌.ವಡ್ಡಹಳ್ಳಿಯಲ್ಲಿ ಸರ್ಕಾರ ಕಳೆದ 14 ವರ್ಷಗಳ ಹಿಂದೆಯೇ ಶಾಲೆಗಳಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದ ರೊಂದಿಗೆ ಸರ್ಕಾರದಿಂದ ಶಾಲಾ ಮಕ್ಕಳಿಗೆ ಪುಸ್ತಕ ಸಮವಸ್ತ್ರ ಸೇರಿದಂತೆ ಇತರೇ ಸೌಲಭ್ಯಗಳನ್ನು ಶಾಲೆಗಳಿಗೆ ಅತಿ ಶೀಘ್ರವಾಗಿ ತಲುಪಿಸುವ ಉದ್ದೇಶಕ್ಕಾಗಿ ಮುಳಬಾಗಿಲು ತಾಲೂಕಿನ ಎನ್‌. ವಡ್ಡಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ 2006ರಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಸಂಪನ್ಮೂಲ ಕೇಂದ್ರ ನಿರ್ಮಿಸಿದ್ದು, ಅಂದಿನ ಶಾಸಕ ಆಲಂಗೂರು ಶ್ರೀನಿವಾಸ್‌ ಉದ್ಘಾಟನೆ ಸಹ ಮಾಡಿದ್ದರು.

ಕಾರ್ಯ ಚಟುವಟಿಕೆಗೆ ಅನುಕೂಲ:

ಕಪ್ಪಲಮಡಗು, ಎನ್‌.ವಡ್ಡಹಳ್ಳಿ, ಅನೆಹಳ್ಳಿ, ಪದ್ಮಘಟ್ಟ, ಸೀಗೇನಹಳ್ಳಿ, ಎಂ.ಹೊಸಹಳ್ಳಿ, ಶ್ರೀರಂಗಪುರ, ಗುಡಿಪಲ್ಲಿ, ಹೊನ್ನಿಕೆರೆ, ಕಾಂಸಾನಹಳ್ಳಿ, ಕಲ್ಲರಸನಹಳ್ಳಿ, ಕಂಭಂದಿನ್ನೆ, ಕಗ್ಗಲನತ್ತ, ನಾಗೇನಹಳ್ಳಿ, ಒಳಗೇರನಹಳ್ಳಿ, ಬೈನಹಳ್ಳಿ, ಜಿ.ವಡ್ಡಹಳ್ಳಿ, ಗಂಗನಹಳ್ಳಿ, ರಾಜೇಂದ್ರಹಳ್ಳಿ, ಬ್ಯಾಡರಹಳ್ಳಿ, ಕಿರುಮಣಿ, ಸೀಕೂರು, ಸಿ.ಹೊಸಹಳ್ಳಿ, ಸಿ.ಗುಂಡ್ಲಹಳ್ಳಿ, ನಾಗನ ಹಳ್ಳಿ, ದೊಡ್ಡ ಅತ್ತಿಹಳ್ಳಿ, ಬಿ.ಗಡ್ಡೂರು, ದಾಸಾರ‌್ಲಹಳ್ಳಿ, ಯುಎಲ್‌ಪಿಎಸ್‌ ಕಪ್ಪಲಮಡಗು, ಸೀಗೇನಹಳ್ಳಿ, ಪದ್ಮಘಟ್ಟ ಸೇರಿದಂತೆ 31 ಶಾಲೆಗಳ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ನಲಿಕಲಿ ಶಿಕ್ಷಕರ ಸಭೆಗಳು ಮತ್ತು ಎಲ್ಲಾ ತರಬೇತಿ ನಡೆಸಲು ಸಿಆರ್‌ಪಿ ಒಬ್ಬರನ್ನು ನೇಮಿಸಿ ಕಚೇರಿಗೆ ಅಗತ್ಯವುಳ್ಳ ಪಾಠೊಪಕರಣ, ಪೀಠೊಪಕರಣಗಳು, ಕಾರ್ಪೆಟ್ಸ್‌, ಬೀರು ಸೇರಿದಂತೆ ಅಗತ್ಯ ವಸ್ತುಗಳನ್ನುನೀಡಿ ಕಾರ್ಯ ಚಟುವಟಿಕೆ ನಡೆಸಲು ಅನುವು ಮಾಡಿಕೊಡಲಾಗಿತ್ತು.

ಗುಡಿಪಲ್ಲಿಯಲ್ಲಿ ಮತ್ತೂಂದು ಸಂಪನ್ಮೂಲ ಕೇಂದ್ರ:ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆಗಳು ಮತ್ತು ತರಬೇತಿಗಳಿಗಾಗಿ ಸದರಿ ಕಟ್ಟಡವನ್ನು ಉಪಯೋಗಿಸಿಕೊಳ್ಳದೇ ಎನ್‌.ವಡ್ಡಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಕೈಗೊಳ್ಳುತ್ತಾ ನಿರ್ಲಕ್ಷಿಸಿರುತ್ತಾರೆ.ಆದರೆ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಸದರಿ ಸಂಪನ್ಮೂಲ ಕೇಂದ್ರದ ಕಾರ್ಯ ವ್ಯಾಪ್ತಿ ಕಡಿತಗೊಳಿಸಿ ಸೌಕರ್ಯಗಳನ್ನು ಮತ್ತಷ್ಟು ಶೀಘ್ರವಾಗಿ ಶಾಲೆಗಳಿಗೆತಲುಪಿಸುವ ಉದ್ದೇಶದಿಂದ ಗುಡಿಪಲ್ಲಿಯಲ್ಲಿ ಮತ್ತೂಂದುಸಂಪನ್ಮೂಲ ಕೇಂದ್ರವನ್ನಾಗಿ ಮಾಡಿ ಹೊನ್ನಿಕೆರೆ, ಕಾಂಸಾನಹಳ್ಳಿ, ಕಲ್ಲರಸನಹಳ್ಳಿ, ಗುಡಿಪಲ್ಲಿ, ಕಂಭಂದಿನ್ನೆ, ಕಗ್ಗಲನತ್ತ,ನಾಗೇನಹಳ್ಳಿ, ಒಳಗೇರನಹಳ್ಳಿ, ಬೈನಹಳ್ಳಿ, ಜಿ.ವಡ್ಡಹಳ್ಳಿ, ಗಂಗನಹಳ್ಳಿ, ರಾಜೇಂದ್ರಹಳ್ಳಿ, ಬ್ಯಾಡರಹಳ್ಳಿ, ಕಿರುಮಣಿ,ಸೀಕೂರು, ಸಿ.ಹೊಸಹಳ್ಳಿ, ಸಿ.ಗುಂಡ್ಲಹಳ್ಳಿ, ನಾಗನಹಳ್ಳಿ, ದೊಡ್ಡ ಅತ್ತಿಹಳ್ಳಿ, ಬಿ.ಗಡೂxರು, ದಾಸಾರ‌್ಲಹಳ್ಳಿ ಶಾಲೆಗಳನ್ನುಸದರಿ ಕೇಂದ್ರಕ್ಕೆ ಸೇರಿಸಲಾಗಿದೆ.

ತರಬೇತಿ, ಚಟುವಟಿಕೆ ಇಲ್ಲ: ಉಳಿದಂತೆ ಅನಹಳ್ಳಿ, ಎಂ.ಹೊಸಹಳ್ಳಿ, ಸೀಗೇನಹಳ್ಳಿ, ಕಪ್ಪಲಮಡಗು, ಶ್ರೀರಂಗಪುರ, ಎನ್‌.ವಡ್ಡಹಳ್ಳಿ, ಪದ್ಮಘಟ್ಟ ಶಾಲೆಗಳು ಮಾತ್ರ ಪ್ರಸ್ತುತ ಎನ್‌.ವಡ್ಡಹಳ್ಳಿ ಸಂಪನ್ಮೂಲ ಕೇಂದ್ರಕ್ಕೆ ಉಳಿದು ಕಾರ್ಯವ್ಯಾಪ್ತಿ ಕಡಿಮೆಯಾಗಿದ್ದರೂ ಕಳೆದ 10 ವರ್ಷಗಳಿಂದಲೂ ಸಿಆರ್‌ಪಿಗಳು ಮಾತ್ರ ಸದರಿ ಕೇಂದ್ರದಲ್ಲಿ ತರಬೇತಿ ಹಾಗೂ ಯಾವುದೇ ಕಾರ್ಯಚಟುವಟಿಕೆ ನಡೆಸುತ್ತಿಲ್ಲ.

ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಾ ಸಂಪನ್ಮೂಲ ಕೇಂದ್ರದ ಕಡೆ ಯಾರು ಸುಳಿಯದೇ ಸದಾ ಬೀಗ ಹಾಕಿರುವುದರಿಂದ ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ ಸೋರಿಕೆಯಾಗಿ ಗೋಡೆಗಳು ಕಪ್ಪು ಬಣ್ಣಕ್ಕೆಬದಲಾಗಿದೆ. ಅಲ್ಲದೇ ಬಾಗಿಲು ತೆಗೆಯಲು ಹೋಗಲು ಆಗದಷ್ಟರ ಮಟ್ಟಿಗೆ ಮುಳ್ಳುಗಿಡಗಳು ಬಾಗಿಲಿನಲ್ಲಿಯೇ ಬೆಳೆದಿದ್ದು, ಕಟ್ಟಡವು ಹಾಳು ಕೊಂಪೆಯಂತಾಗಿದೆ.

ಕೇಂದ್ರದ ಬಾಗಿಲು ತೆರೆದಿಲ್ಲ :  ಎನ್‌.ವಡ್ಡಹಳ್ಳಿ ಗ್ರಾಮದಲ್ಲಿ ಶಿಕ್ಷಣ ಇಲಾಖೆ ಸಂಪನ್ಮೂಲ ಕೇಂದ್ರ ನಿರ್ಮಿಸಿದರೂ ಅಧಿಕಾರಿಗಳು ಬಾಗಿಲು ತೆರೆದಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಶಿಕ್ಷಕರೊಬ್ಬರು ತಿಳಿಸಿದರು. ಸದರಿ ಸಂಪನ್ಮೂಲ ಕೇಂದ್ರದಲ್ಲಿ ದಶಕಗಳಿಂದ ಯಾವುದೇ ಕಾರ್ಯಚಟುವಟಿಕೆ ಗಳನ್ನು ಶಿಕ್ಷಣ ಇಲಾಖೆಕೈಗೊಳ್ಳದೇ ಸದಾ ಬೀಗ ಹಾಕಿರುವುದರಿಂದ ಗಿಡಗಂಟಿಗಳು ಬೆಳೆದು ಹಾಳುಕೊಂಪೆಯಾಗಿದೆ ಎಂದು ಗ್ರಾಮದ ಮುಖಂಡ ಚಂದ್ರಶೇಖರ್‌ ದೂರಿದರು.

ನಿರ್ವಹಣೆ ಆಗುತ್ತಿದ್ದರೆ ಗಿಡಗಂಟಿ, ಶಿಥಿಲಾವಸ್ಥೆ ಸಾಧ್ಯವೇ? :

ಸಿಆರ್‌ಪಿ ವಾಸಪ್ಪ ಮತ್ತು ಬಿಇಒ ಗಿರಿಜೇಶ್ವರಿದೇವಿ ಅವರು ಹೇಳುವ ಪ್ರಕಾರ ಸದರಿ ಕಟ್ಟಡ ನಿರ್ವಹಣೆ ಮಾಡುತ್ತಿರುವುದು ನಿಜವೇ ಆದರೆ ಕಟ್ಟಡದ ಮುಂಭಾಗದಲ್ಲಿ ಆಳುದ್ದದ ಮುಳ್ಳು ಗಿಡಗಳು ಹುಲ್ಲು, ಗಿಡಗಂಟಿಗಳು ಬೆಳೆಯಲು ಹೇಗೆ ಸಾಧ್ಯ? ಅಲ್ಲದೇ ಕಟ್ಟಡವು ಶಿಥಿಲಾವಸ್ತೆಗೆ ತಲುಪುತ್ತಿತ್ತೇ ಎಂಬುದನ್ನು ಇನ್ನಾದರೂ ಉಪ ನಿರ್ದೇಶಕರು ಇತ್ತ ಕಡೆ ಗಮನಹರಿಸಿ ಕಟ್ಟಡದ ನಿರ್ವಹಣೆಗೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮುಳಬಾಗಿಲು ತಾಲೂಕಿನ ಎನ್‌.ವಡ್ಡಹಳ್ಳಿ ಸಿಆರ್‌ಸಿ ಕೇಂದ್ರಕಟ್ಟಡದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಸಿಆರ್‌ಪಿ ವಾಸಪ್ಪ ರಿಂದ ಮಾಹಿತಿ ಪಡೆದುಕೊಳ್ಳಲಾಗುವುದು. ಗಿರಿಜೇಶ್ವರಿದೇವಿ, ಬಿಇಒ

ಶೀಘ್ರದಲ್ಲಿಯೇ ಸಿಆರ್‌ಪಿಗಳ ಸಭೆಕರೆದು ಸಂಪನ್ಮೂಲ ಕೇಂದ್ರಗಳ ನಿರ್ವಹಣೆ ಮಾಡಲುಕ್ರಮ ತೆಗೆದುಕೊಳ್ಳಲಾಗುವುದು. ಕೃಷ್ಣಮೂರ್ತಿ, ಉಪ ನಿರ್ದೇಶಕರು

 

ಎಂ.ನಾಗರಾಜಯ್ಯ

ಟಾಪ್ ನ್ಯೂಸ್

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

20

Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.