ಗ್ರಾಮಗಳಲ್ಲಿ ಹೆಚ್ಚುತ್ತಿದೆ ಕುಡಿಯುವ ನೀರಿನ ಸಮಸ್ಯೆ

Team Udayavani, Mar 18, 2020, 4:16 PM IST

ಗ್ರಾಮಗಳಲ್ಲಿ ಹೆಚ್ಚುತ್ತಿದೆ ಕುಡಿಯುವ ನೀರಿನ ಸಮಸ್ಯೆ

ಸಾಂದರ್ಭಿಕ ಚಿತ್ರ

ಬಂಗಾರಪೇಟೆ: ತಾಲೂಕಿನಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ಸರ್ಕಾರ ಈಗಾಗಲೇ ಬಂಗಾರಪೇಟೆ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದರೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮ  ಕೈಗೊಳ್ಳುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಗಾರಪೇಟೆ ಹಾಗೂ ಕೆಜಿಎಫ್ ಎರಡೂ ತಾಲೂಕು ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಬಂಗಾರ ಪೇಟೆಯಿಂದ ಕೆಜಿಎಫ್ ತಾಲೂಕು ವಿಂಗಡಣೆಯಾಗಿದ್ದರೂ, ಇನ್ನೂ ಕೆಲವು ಇಲಾಖೆಗಳು ವಿಂಗಡನೆಯಾಗಿಲ್ಲ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಬಂಗಾರಪೇಟೆ ಅಧಿಕಾರಿಗಳೇ ನಿರ್ವಹಿಸಬೇಕಾಗಿದೆ.

ಎರಡೂ ತಾಲೂಕುಗಳಲ್ಲಿ ಪ್ರತಿಯೊಂದು ಗ್ರಾಪಂವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಸರ್ಕಾರ ಟ್ಯಾಂಕರ್‌ನಿಂದ ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಯಾಗಿದ್ದರೂ ಸಹ ಗ್ರಾಪಂ ಪಿಡಿಒಗಳು ಕೈಕಟ್ಟಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ: ಬಂಗಾರ ಪೇಟೆಯಲ್ಲಿ 50 ಹಾಗೂ ಕೆಜಿಎಫ್ನಲ್ಲಿ 60 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಈ ಸಂಬಂಧ 20 ಗ್ರಾಮಗಳಿಗೆ ರೈತರಿಂದ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಕೆಲ ಗ್ರಾಮಗಳಲ್ಲಿ ರೈತರಿಂದ ಪ್ರತಿತಿಂಗಳು 18 ಸಾವಿರ ನೀಡಿ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಟ್ಯಾಂಕರ್‌ನವರು ಒಂದು ಟ್ಯಾಂಕರ್‌ ನೀರು ಹಾಕಿ, 3 ಟ್ಯಾಂಕರ್‌ ಲೆಕ್ಕ ಬರೆಸು ತ್ತಿದ್ದರಿಂದ, ಡೀಸಿಯಾಗಿದ್ದ ಮಂಜುನಾಥ್‌ ನೀರು ಸರಬರಾಜು ನಿಲ್ಲಿಸಿದ್ದರು. ಇದರಿಂದಾಗಿ ಸಮಸ್ಯೆ ಹೆಚ್ಚಾಗಿದೆ.

ಟ್ಯಾಂಕರ್‌ನಿಂದ ನೀರು, ಜಿಲ್ಲಾಡಳಿ ಕಟ್ಟೆಚ್ಚರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಟ್ಯಾಂಕರ್‌ ಗಳಿಂದ ನೀರು ಹರಿಸಲು ಜಿಲ್ಲಾಡಳಿತ ತೀವ್ರ ಕಟ್ಟೆಚ್ಚರ ವಹಿಸಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ, ಮೊದಲಿಗೆ ಅದೇ ಗ್ರಾಮದ ರೈತರಿಂದ ಕುಡಿಯುವ ನೀರು ಹರಿಸಲು ಮೊದಲ ಅದ್ಯತೆ ನೀಡಿ ಕ್ರಮಕೈಗೊಳ್ಳುವುದು. ರೈತರಿಂದ ನೀರು ಬಿಡಿಸಲು ಅವಕಾಶವಿಲ್ಲದ ಸಂದರ್ಭದಲ್ಲಿ ತಹಶೀಲ್ದಾರ್‌ರಿಗೆ ಆಯಾ ಗ್ರಾಪಂ ಪಿಡಿಒಗಳಿಂದ ದೂರು ನೀಡುವುದು. ನಂತರ ತಹಶೀಲ್ದಾರ್‌ರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಡೀಸಿ ಅನುಮತಿ ಪಡೆದ ನಂತರವೇ ಮೊಬೈಲ್‌ ಆ್ಯಪ್‌ ನಿಂದ ಟ್ಯಾಂಕರ್‌ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂಬ ಸೂಚನೆಯಿದೆ. ಈ ಹಿನ್ನಲೆಯಲ್ಲಿ ಗ್ರಾಪಂ ಪಿಡಿಒ ತುರ್ತು ಕ್ರಮಕೈಗೊಳ್ಳಲು ಅವಕಾಶ ಇಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳ ವಾದವಾಗಿದೆ.

ಬಂಗಾರಪೇಟೆ ಹಾಗೂ ಕೆಜಿಎಫ್ ತಾಲೂಕುಗಳು ನನ್ನ ವ್ಯಾಪ್ತಿಗೆ ಬರುತ್ತವೆ. ಒಟ್ಟು 85 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು, ಒಟ್ಟು 29 ಗ್ರಾಮಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸದ್ಯ 20 ಕೊಳವೆ ಬಾವಿ ಕೊರೆಯಿಸಲು ಅನುಮತಿ ಸಿಕ್ಕಿದ್ದು, ಅಗತ್ಯವಿದ್ದಲ್ಲಿ ಕೊರೆಯಿಸಲು ಕ್ರಮಕೈಗೊಳ್ಳಲಾಗಿದೆ. ಎಚ್‌.ಡಿ.ಶೇಷಾದ್ರಿ, ಎಇಇ

-ಎಂ.ಸಿ.ಮಂಜುನಾಥ್‌

Ad

ಟಾಪ್ ನ್ಯೂಸ್

ENG vs IND: 3ನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ ಪ್ರಕಟ; 4 ವರ್ಷದ ಬಳಿಕ ಮರಳಿದ ಘಾತಕ ವೇಗಿ

ENG vs IND: 3ನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ ಪ್ರಕಟ; 4 ವರ್ಷದ ಬಳಿಕ ಮರಳಿದ ಘಾತಕ ವೇಗಿ

Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ

Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ

ಆ ನಟಿ ʼಬಿಗ್‌ ಬಾಸ್‌ʼ ಮನೆಯಲ್ಲೇ ಆತ್ಮಹ*ತ್ಯೆಗೆ ಯತ್ನಿಸಿದ್ದರು-  ಶಾಕಿಂಗ್‌ ಸಂಗತಿ ರಿವೀಲ್

ಆ ನಟಿ ʼಬಿಗ್‌ ಬಾಸ್‌ʼ ಮನೆಯಲ್ಲೇ ಆತ್ಮಹ*ತ್ಯೆಗೆ ಯತ್ನಿಸಿದ್ದರು- ಶಾಕಿಂಗ್‌ ಸಂಗತಿ ರಿವೀಲ್

Kejriwal: ಉತ್ತಮ ಆಡಳಿತಕ್ಕಾಗಿ ನನಗೆ ನೊಬೆಲ್‌ ಪ್ರಶಸ್ತಿ ಸಿಗಬೇಕು!: ಕೇಜ್ರಿವಾಲ್

Kejriwal: ಉತ್ತಮ ಆಡಳಿತಕ್ಕಾಗಿ ನನಗೆ ನೊಬೆಲ್‌ ಪ್ರಶಸ್ತಿ ಸಿಗಬೇಕು!: ಕೇಜ್ರಿವಾಲ್

Kalaburagi: ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್

Kalaburagi: ರಸ್ತೆ ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್

Madenuru Manu: ಅತ್ಯಾಚಾ*ರ ಪ್ರಕರಣ ರದ್ದು ಕೋರಿ ಹೈಕೋರ್ಟ್​ ಮೊರೆ ಹೋದ ಮಡೆನೂರು ಮನು

Madenuru Manu: ಅತ್ಯಾಚಾ*ರ ಪ್ರಕರಣ ರದ್ದು ಕೋರಿ ಹೈಕೋರ್ಟ್​ ಮೊರೆ ಹೋದ ಮಡೆನೂರು ಮನು

Actress:‌ ಕೊಳೆತ ಸ್ಥಿತಿಯಲ್ಲಿ ಖ್ಯಾತ ನಟಿ, ಮಾಡೆಲ್‌ನ ಶವ ಪತ್ತೆ – ಫ್ಯಾನ್ಸ್‌ ಶಾಕ್

Actress:‌ ಕೊಳೆತ ಸ್ಥಿತಿಯಲ್ಲಿ ಖ್ಯಾತ ನಟಿ, ಮಾಡೆಲ್‌ನ ಶವ ಪತ್ತೆ – ಫ್ಯಾನ್ಸ್‌ ಶಾಕ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suicide

ಮಾಜಿ ಸ್ಪೀಕರ್‌ ತೋಟದಲ್ಲಿ ಮೇವು ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

Kol-Mango

Kolara: ಮಾವಿಗೆ ಬೆಂಬಲ ಬೆಲೆಗಾಗಿ ಹೆದ್ದಾರಿ ತಡೆ; ರಸ್ತೆಯಲ್ಲೇ ಮಾವು ಸುರಿದು ಪ್ರತಿಭಟನೆ

ಎಕ್ಸೆಪ್ರೆಸ್‌ ಹೈವೇನಲ್ಲಿ ಲಘು ವಾಹನಗಳ ಅಕ್ರಮ ಪ್ರವೇಶ!

ಎಕ್ಸೆಪ್ರೆಸ್‌ ಹೈವೇನಲ್ಲಿ ಲಘು ವಾಹನಗಳ ಅಕ್ರಮ ಪ್ರವೇಶ!

ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ 18 ಮೈನಸ್‌ ಆಗುತ್ತೆ: ಜಮೀರ್‌

Karnataka: ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ 18 ಮೈನಸ್‌ ಆಗುತ್ತೆ: ಜಮೀರ್‌

ಬಿಜೆಪಿಯವರು ಒಂದೇ ಒಂದು ಮನೆ ನೀಡಿದ್ದರೆ ರಾಜಕೀಯ ನಿವೃತ್ತಿ: ಜಮಿರ್‌

Karnataka: ಬಿಜೆಪಿಯವರು ಒಂದೇ ಒಂದು ಮನೆ ನೀಡಿದ್ದರೆ ರಾಜಕೀಯ ನಿವೃತ್ತಿ: ಜಮಿರ್‌ ಖಾನ್‌

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ENG vs IND: 3ನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ ಪ್ರಕಟ; 4 ವರ್ಷದ ಬಳಿಕ ಮರಳಿದ ಘಾತಕ ವೇಗಿ

ENG vs IND: 3ನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ ಪ್ರಕಟ; 4 ವರ್ಷದ ಬಳಿಕ ಮರಳಿದ ಘಾತಕ ವೇಗಿ

Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ

Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ

ಆ ನಟಿ ʼಬಿಗ್‌ ಬಾಸ್‌ʼ ಮನೆಯಲ್ಲೇ ಆತ್ಮಹ*ತ್ಯೆಗೆ ಯತ್ನಿಸಿದ್ದರು-  ಶಾಕಿಂಗ್‌ ಸಂಗತಿ ರಿವೀಲ್

ಆ ನಟಿ ʼಬಿಗ್‌ ಬಾಸ್‌ʼ ಮನೆಯಲ್ಲೇ ಆತ್ಮಹ*ತ್ಯೆಗೆ ಯತ್ನಿಸಿದ್ದರು- ಶಾಕಿಂಗ್‌ ಸಂಗತಿ ರಿವೀಲ್

Kejriwal: ಉತ್ತಮ ಆಡಳಿತಕ್ಕಾಗಿ ನನಗೆ ನೊಬೆಲ್‌ ಪ್ರಶಸ್ತಿ ಸಿಗಬೇಕು!: ಕೇಜ್ರಿವಾಲ್

Kejriwal: ಉತ್ತಮ ಆಡಳಿತಕ್ಕಾಗಿ ನನಗೆ ನೊಬೆಲ್‌ ಪ್ರಶಸ್ತಿ ಸಿಗಬೇಕು!: ಕೇಜ್ರಿವಾಲ್

Kalaburagi: ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್

Kalaburagi: ರಸ್ತೆ ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.