ಓಪನ್‌ ಕಾಸ್ಟಿಂಗ್‌ ಮೈನಿಂಗ್‌ ಕೈಬಿಡಲು ಮನವಿ 


Team Udayavani, Jan 27, 2023, 12:53 PM IST

ಓಪನ್‌ ಕಾಸ್ಟಿಂಗ್‌ ಮೈನಿಂಗ್‌ ಕೈಬಿಡಲು ಮನವಿ 

ಕೆಜಿಎಫ್‌: ಕೇಂದ್ರ ಸರ್ಕಾರ ಕೆಜಿಎಫ್‌ನಲ್ಲಿ ಗಣಿಗಾರಿಕೆ ಪುನರ್‌ ಆರಂಭಿಸುವ ನಿಟ್ಟಿನಲ್ಲಿ ಓಪನ್‌ ಕಾಸ್ಟಿಂಗ್‌ ಮೈನಿಂಗ್‌ ನಡೆಸಲು ಯೋಚಿಸುತ್ತಿದೆ. ಇದರಿಂದಇಲ್ಲಿನ ವಾತಾವರಣ ಹದಗೆಡಲಿದೆ.ಈಗಾಗಲೇ ಗಣಿಯಲ್ಲಿ ಕಾರ್ಯನಿರ್ವಹಿಸಿರುವ ಬಹಳಷ್ಟು ಕಾರ್ಮಿಕರು ಹಲವು ಬಗೆಯ ಕಾಯಿಲೆಗಳಿಗೆ ತುತ್ತಾಗಿದ್ದು, ಓಪನ್‌ ಕಾಸ್ಟಿಂಗ್‌ ಮೈನಿಂಗ್‌ ಮಾಡಿದ್ದೇಆದಲ್ಲಿ, ಆರೋಗ್ಯ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಲಿವೆ. ಇದರಿಂದ ಈ ಯೋಜನೆ ಕೈಬಿಡುವಂತೆ ಮನವಿ ಮಾಡಲಾಗುವುದು ಎಂದು ಶಾಸಕಿ ರೂಪಕಲಾ ಹೇಳಿದರು.

ನಗರದ ಮುನಿಸಿಪಲ್‌ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ತುಳಿತಕ್ಕೆಒಳಗಾದವರ ಧ್ವನಿಯಾಗಿ ಡಾ.ಬಿ.ಆರ್‌. ಅಂಬೇಡ್ಕರ್‌ ವಿಶ್ವದಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನ ರಚಿಸುವ ಮೂಲಕ

ಶೋಷಿತ ವರ್ಗದವರಿಗೆ ನ್ಯಾಯ ಒದಗಿಸಿದ್ದಾರೆ. ಆರೋಗ್ಯ, ಶಿಕ್ಷಣ, ರಕ್ಷಣೆ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ರಂಗಗಳಲ್ಲೂ ಅಭಿವೃದ್ಧಿ ಸಾಧಿ ಸಲು ಅಗತ್ಯ ಸಂವಿಧಾನ ರಚಿಸಿದ ಕೀರ್ತಿ ಅಂಬೇಡ್ಕರ್‌ ಗೆ ಸಲ್ಲುತ್ತದೆ ಎಂದು ತಿಳಿಸಿದರು.

ಅಭಿವೃದ್ಧಿ ಕಾರ್ಯ: ಕ್ಷೇತ್ರದ ಜನತೆ ತಮ್ಮ ಮೇಲೆ ನಂಬಿಕೆಯಿಟ್ಟು ಆಶೀರ್ವದಿಸಿದ್ದರಿಂದ, 5 ವರ್ಷ ರಸ್ತೆ, ಚರಂಡಿ, ಕುಡಿಯುವ ನೀರು, ಮಿನಿ ವಿಧಾನಸೌಧ, ತಾಪಂ ಕಟ್ಟಡ, ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನೂತನ ತುರ್ತು ಚಿಕಿತ್ಸಾ ಘಟಕ,ನಗರದ ಪ್ರಮುಖ ರಸ್ತೆಗಳು ದ್ವಿಪಥವಾಗಿಪರಿವರ್ತಿಸಿ, ಹತ್ತು ಹಲವು ಅಭಿವೃದ್ಧಿಕಾರ್ಯ ಮಾಡಿರುವುದಾಗಿ ಹೇಳಿದರು.

ಮಾಲಿಕತ್ವ, ನಿವೇಶನ ಹಂಚಿಕೆ: ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಇನ್ನಷ್ಟುಯೋಜನೆಗಳನ್ನು ಜಾರಿಗೊಳಿಸಲು ಯೋಚಿಸಿದ್ದು, ಕೈಗಾರಿಕೆಗಳ ಸ್ಥಾಪನೆ, ಬಿಜಿಎಂಎಲ್‌ ಕಾರ್ಖಾನೆ ಕಾರ್ಮಿಕರುವಾಸಿಸುತ್ತಿರುವ ಸ್ಥಳದ ಮಾಲಿಕತ್ವಕೊಡಿಸುವುದು, ನಿವೇಶನ ರಹಿತರಿಗೆನಿವೇಶನ ಹಂಚಿಕೆ ಮೊದಲ ಕಾರ್ಯಗಳನ್ನುಆದ್ಯತೆ ಮೇಲೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಂವಿಧಾನ ಪರಮೋತ್ಛ ಗ್ರಂಥ: ಎಸ್ಪಿ ಡಾ.ಕೆ.ಧರಣಿದೇವಿ ಮಾತನಾಡಿ,ದೇಶದ ಪ್ರತಿಯೊಬ್ಬ ಪ್ರಜೆ ಹೇಗೆಸನ್ಮಾರ್ಗದಿಂದ ವರ್ತಿಸಬೇಕೆಂಬ ಬಗ್ಗೆಅಂಬೇಡ್ಕರ್‌ ಬರೆದಿರುವ ಸಂವಿಧಾನ ದಲ್ಲಿ ತಿಳಿಸಿದ್ದಾರೆ. ಜೀವನದಲ್ಲಿ ನಾವುಹೇಗೆ ನಡೆದುಕೊಳ್ಳಬೇಕೆಂಬ ಸ್ಪಷ್ಟನಿರ್ದೇಶನವನ್ನು ತಿಳಿಸಿಕೊಟ್ಟಿದ್ದಾರೆ.ಸಂವಿಧಾನ ನಮಗೆ ಅತ್ಯಂತ ಪರಮೋತ್ಛ ಗ್ರಂಥವಾಗಿದೆ ಎಂದರು.

ರಾಷ್ಟ್ರ ರಕ್ಷಣೆಗೆ ಬಳಸಿಕೊಳ್ಳಿ: ಐಕ್ಯತೆ ಎನ್ನುವುದು ದೇಶದ ಶಕ್ತಿ ಎನ್ನುವುದಕ್ಕೆ ಸಂಬಂಧಿಸಿದ್ದರೆ, ಸಮಗ್ರತೆ ಎನ್ನುವುದು ದೇಶದಲ್ಲಿನ ಮೌಲ್ಯಗಳ ವ್ಯವಸ್ಥೆಗೆಸಂಬಂಧಿಸಿದ್ದಾಗಿದೆ. ಈ ಶಕ್ತಿ ಎನ್ನುವುದುವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತುನಾಗರಿಕರಿಂದ ಬರುವಂತದ್ದಾಗಿದೆ. ಈಶಕ್ತಿಯನ್ನು ಸಂವಿಧಾನದಲ್ಲಿ ಉಲ್ಲೇಖೀಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಷ್ಟ್ರ ರಕ್ಷಣೆಗೆ ಬಳಸಿಕೊಳ್ಳಬೇಕಾಗಿದೆ ಎಂದರು.

ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿ  ,ಸ್ವಾಮಿ, ಉಪಾಧ್ಯಕ್ಷೆ ದೇವಿಗಣೇಶ್‌,ತಹಶೀಲ್ದಾರ್‌ ಕೆ.ಎನ್‌.ಸುಜಾತ, ಇಒಮಂಜುನಾಥ್‌, ಪೌರಾಯುಕ್ತೆ ಅಂಬಿಕಾ, ಬಿಇಒ ಚಂದ್ರಶೇಖರ್‌, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಹೀರ್‌ ಅಬ್ಟಾಸ್‌, ಡಿವೈಎಸ್‌ಪಿ ರಮೇಶ್‌ ಮೊದಲಾದವರು ಇದ್ದರು.

 

ಟಾಪ್ ನ್ಯೂಸ್

police siren

ಗಾಂಜಾ ಮಾರಾಟ : ಮೂವರು ಪೊಲೀಸ್‌ ವಶ

arrest

ತಂಬುತಡ್ಕದಲ್ಲಿ ಜೂಜಾಟ: ಆರು ಮಂದಿಯ ಬಂಧನ

arrest 3

ಚಿನ್ನಾಭರಣ ಕಳ್ಳತನ: ಆರೋಪಿ ಬಂಧನ

DOCTOR

ಅಸ್ವಸ್ಥ ಮಹಿಳೆಯ ರಕ್ಷಣೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ

ಹಾವೇರಿ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ

ಹಾವೇರಿ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ

accident 2

ಉದ್ಯಾವರ : ಅಪರಿಚಿತ ವಾಹನ ಢಿಕ್ಕಿ : ವ್ಯಕ್ತಿ ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-20

ಕೋಲಾರ: ಸಿದ್ದು ಸ್ಪರ್ಧೆ ಘೋಷಣೆಗೆ ಏ.5ರ ಗಡುವು

ಏ.5ಕ್ಕೆ ಕೋಲಾರಕ್ಕೆ ರಾಹುಲ್‌ ಗಾಂಧಿ

ಕೋಲಾರಕ್ಕೆ ಏ.5 ರಂದು ರಾಹುಲ್‌, ಕಾಂಗ್ರೆಸ್‌ ಶಕ್ತಿ ಪ್ರದರ್ಶನ

tdy-16

ಸಿದ್ದು ಬೆಂಬಲಿಗರ ಪಾಳೆಯದಲ್ಲಿ ನೀರವ ಮೌನ

tdy-15

ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ಮಾಡೋಣ

tdy-18

ರಾಜ್ಯದ ಸಮಗ್ರ ಅಭಿವೃದ್ಧಿ ಎಚ್‌ಡಿಕೆ ಪಣ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

police siren

ಗಾಂಜಾ ಮಾರಾಟ : ಮೂವರು ಪೊಲೀಸ್‌ ವಶ

arrest

ತಂಬುತಡ್ಕದಲ್ಲಿ ಜೂಜಾಟ: ಆರು ಮಂದಿಯ ಬಂಧನ

arrest 3

ಚಿನ್ನಾಭರಣ ಕಳ್ಳತನ: ಆರೋಪಿ ಬಂಧನ

DOCTOR

ಅಸ್ವಸ್ಥ ಮಹಿಳೆಯ ರಕ್ಷಣೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ