ಅಮಾಯಕರ ಪರ ನಾವು: ಸಂಸದ


Team Udayavani, Dec 21, 2020, 4:10 PM IST

ಅಮಾಯಕರ ಪರ ನಾವು: ಸಂಸದ

ಕೋಲಾರ: ಸಿಪಿಎಂನವರು ಮಾತ್ರ ಕಾರ್ಮಿಕರ ಪರವಾ ಎಂದು ಪ್ರಶ್ನಿಸಿದ ಸಂಸದ ಎಸ್‌.ಮುನಿಸ್ವಾಮಿ, ನಾವೂ ತಪ್ಪು ಮಾಡದ ಅಮಾಯಕ ಕಾರ್ಮಿಕರ ಪರ ನಿಲ್ಲಲು ಬದ್ಧ, ಆದರೆ ಉದ್ದೇಶಪೂರ್ವಕವಾಗಿ ದಾಂಧಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳದೇ ಬಿಡಲು ಸಾಧ್ಯವೇ ಎಂದರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಕಾರ್ಮಿಕರ ಪರ ಎಂದು ಹೇಳಿಕೊಂಡು ಉದ್ದೇಶಪೂರ್ವಕವಾಗಿ ದುಷ್ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ, ಸಂಘಟನೆಗಳವರು ಏನೇನು ಮಾಡಿದ್ದಾರೆ ಎಂದು ನನಗೆ ಗೊತ್ತಿದೆ ಎಂದರು.

ಏಳು ಸಾವಿರ ಕಾರ್ಮಿಕರ ಮೇಲೆ ಎಫ್‌ ಐಆರ್‌ ಹಾಕಿದ್ದರೆ ಅದನ್ನು ತೆಗೆಸುತ್ತೇವೆ, ತಪ್ಪು ಮಾಡದವರು ಹೆದರುವ ಅಗತ್ಯವಿಲ್ಲ. ಯುವಕರು, ನಿರುದ್ಯೋಗಿಗಳ ಪರ ಕೇಂದ್ರ, ರಾಜ್ಯ ಸರ್ಕಾರಗಳು ಇವೆ. ಡೀಸಿ ಆಫೀಸ್‌ಮುಂದೆ ಪ್ರತಿಭಟನೆ ಮಾಡಿದವರು ಮಾತ್ರ ಕಾರ್ಮಿಕರ ಪರ ಅಲ್ಲ ಎಂದರು.

ಕಂಪನಿಯೂ ಕ್ರಮ, ಉಪಾಧ್ಯಕ್ಷರ ವಜಾ:ನೌಕರರಿಗೆ ವೇತನ ಸಿಗುವಲ್ಲಿ ಆಗಿರುವ ಅನ್ಯಾಯಕ್ಕೆ ಸಂಬಂಧಿಸಿದಂತೆ ಕಂಪನಿ ತನ್ನ  ಉಪಾಧ್ಯಕ್ಷರನ್ನು ವಜಾ ಮಾಡಿದೆ. ಕಂಪನಿ ಕಡೆಯಿಂದ ಆಗಿರುವ ಲೋಪಕ್ಕೆ ಕ್ಷಮೆ ಕೋರಿದೆ ಎಂದ ಅವರು, ನಾವೂ ಕಾರ್ಮಿಕ ಗುತ್ತಿಗೆದಾರರ ಮೇಲು ಕೇಸ್‌ ಹಾಕುತ್ತೇವೆ ಎಂದರು.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ಕೋಲಾರದಲ್ಲಿ ಹಾದು ಹೋಗುವುದರಿಂದ ಕೈಗಾರಿಕೆಗಳು ಹೆಚ್ಚಾಗಿ ಕೋಲಾರದತ್ತ ಬರುತ್ತವೆ ಘಟನೆಯಿಂಕೈಗಾರಿಗಳು ಬರುವುದಕ್ಕೆ ಯಾವುದೇ  ತೊಂದರೆಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಸ್ಯೆ ಪರಿಹಾರಕ್ಕೆ ಶೀಘ್ರ ಸಭೆ-ಭರವಸೆ: ವಿಸ್ಟ್ರಾನ್‌ ಕಂಪನಿ ಸಮಸ್ಯೆ ಪರಿಹಾರಕ್ಕೆ ಶೀಘ್ರಬೃಹತ್‌ ಕೈಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ಕಂಪನಿ ಹೆಚ್‌ಆರ್‌ಗಳು, ಎಂಡಿಗಳ ಸಭೆ ಹಾಗೂ ಕಾರ್ಮಿಕರ ಸಭೆಗಳನ್ನು ಪ್ರತ್ಯೇಕವಾಗಿ ಕರೆದು ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಹನುಮಪ್ಪ, ಕೆಯುಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ, ನಗರಸಭೆ ಸದಸ್ಯ ಮುರಳಿ ಗೌಡ, ನಗರಾಭಿವೃದ್ದಿ ಪ್ರಾಕಾರದ ಸದಸ್ಯ ಅಪ್ಪಿನಾರಾಯಣಸ್ವಾಮಿ ಮತ್ತಿತರರಿದ್ದರು.

ಕೋಲಾರ ಜಿಲ್ಲೆಯ ಭವಿಷ್ಯಕ್ಕೆ ಕುತ್ತು :

ಇಂತಹ ಘಟನೆಗಳು ಕೋಲಾರ ಜಿಲ್ಲೆಯ ಭವಿಷ್ಯಕ್ಕೆ ಕುತ್ತು ತರುತ್ತವೆ. ಜಿಲ್ಲೆಯಲ್ಲಿಕೈಗಾರಿಕಾಭಿವೃದ್ಧಿಗೆ6 ಸಾವಿರ ಎಕರೆ ಜಾಗಗುರುತಿಸಿದ್ದೇವೆ. ಇನ್ನೂ ಕೈಗಾರಿಕೆಗಳುಬರಲಿವೆ ಎಂದು ಸಂಸದರು ತಿಳಿಸಿದರು. ಚೀನಾ ಮಾಧ್ಯಮಗಳು ಭಾರತಕ್ಕೆ ಹೋದರೆ ಇಂತಹ ಗತಿ ಬರುತ್ತವೆ ಎಂದುವಿಸ್ಟ್ರಾನ್‌ ಕಂಪನಿ ಘಟನೆ ಉದಾಹರಿಸಿ ಇತರೆ ಕಂಪನಿಗಳಿಗೆ ಎಚ್ಚರಿಕೆ ನೀಡಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಭಾರತದಲ್ಲಿ ಉದ್ಯೋಗದಾತರ ಪರ ಸರ್ಕಾರಗಳಿವೆ, ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಅಶೋಕ್‌, ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೂಡಿಕೆದಾರರೊಂದಿಗೆ ಮಾತನಾಡಿ ಸೌಹಾರ್ದತೆಕಾಪಾಡಿಕೊಂಡಿದ್ದಾರೆ ಯಾವುದೇ ಕಂಪನಿಗಳು ಎಲ್ಲೂಹೋಗಲ್ಲ ಎಂದರು.

ಟಾಪ್ ನ್ಯೂಸ್

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!

ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಕುರಿತ ಅರ್ಜಿಗಳು : ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಕುರಿತ ಅರ್ಜಿಗಳು :ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಜಗತ್ತಿನಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳು ಭಾರತದಲ್ಲಿ!

ಜಗತ್ತಿನಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳು ಭಾರತದಲ್ಲಿ!

ಬೆಂಕಿಗೂ ಹೆದರಲ್ಲ, ಜನರಿಗೂ ಬೆದರಲ್ಲ :ನಾಗರಹೊಳೆ ರಸ್ತೆಯಲ್ಲಿ 2 ಗಂಟೆ ಜನರನ್ನು ಕಾಡಿದ ಸಲಗ

ಬೆಂಕಿಗೂ ಹೆದರಲ್ಲ, ಜನರಿಗೂ ಬೆದರಲ್ಲ :ನಾಗರಹೊಳೆ ರಸ್ತೆಯಲ್ಲಿ 2 ಗಂಟೆ ಜನರನ್ನು ಕಾಡಿದ ಸಲಗ

1-ffdsfd

ಕದ್ರಿ ಗೋಪಾಲನಾಥ್ ಪುಣ್ಯಸ್ಮರಣೆ ; ಪತ್ನಿ ಆರೋಗ್ಯ ಏರುಪೇರು; ಡಿಸಿಯಿಂದಲೇ ಚಿಕಿತ್ಸೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆದ್ದಾರಿ ಪಕ್ಕದಲ್ಲಿ ಅಕ್ರಮವಾಗಿ ತೆರೆದಿದ್ದ ಅಂಗಡಿಗಳ ತೆರವು

ಹೆದ್ದಾರಿ ಪಕ್ಕದಲ್ಲಿ ಅಕ್ರಮವಾಗಿ ತೆರೆದಿದ್ದ ಅಂಗಡಿಗಳ ತೆರವು

ರೈತರಿಗೆ ಇ-ಪಾವತಿ ವ್ಯವಸ್ಥೆ ಪರಿಶೀಲನೆ

ರೈತರಿಗೆ ಇ-ಪಾವತಿ ವ್ಯವಸ್ಥೆ ಪರಿಶೀಲನೆ

ಕರಾವಳಿ ಸಂಸ್ಕೃತಿ, ಆಚಾರ ವಿಚಾರ ಪ್ರಸಿದ್ಧ

ಕರಾವಳಿ ಸಂಸ್ಕೃತಿ, ಆಚಾರ ವಿಚಾರ ಪ್ರಸಿದ್ಧ

alugadde

ಮಳೆ: ಆಲೂಗಡ್ಡೆಗೆ ಅಂಗಮಾರಿ ಕಾಟ

ದರೋಡೆ

ಪೊಲೀಸರ ಮೇಲೆಯೇ ದರೋಡೆ ಆರೋಪ..!

MUST WATCH

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

ಹೊಸ ಸೇರ್ಪಡೆ

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!

ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಕುರಿತ ಅರ್ಜಿಗಳು : ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಕುರಿತ ಅರ್ಜಿಗಳು :ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಜಗತ್ತಿನಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳು ಭಾರತದಲ್ಲಿ!

ಜಗತ್ತಿನಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳು ಭಾರತದಲ್ಲಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.