

Team Udayavani, May 5, 2019, 11:17 AM IST
ಕೆಜಿಎಫ್ ನಗರದಲ್ಲಿ ಸಂಭ್ರಮ್ ಆಸ್ಪತ್ರೆಯಿಂದ ಆಯೋಜಿಸಿದ್ದ ಆರೋಗ್ಯ ತಪಾ ಸಣೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಜನರಿಗೆ ತಹಶೀಲ್ದಾರ್ ರಮೇಶ್ ಔಷಧಿ ವಿತರಿಸಿದರು.
ಕೆಜಿಎಫ್: ಜನರ ದಿನನಿತ್ಯ ಕಾರ್ಯದೊತ್ತಡ ಮಧ್ಯೆ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ತಹಶೀಲ್ದಾರ್ ರಮೇಶ್ ಹೇಳಿದರು.
ನಗರದ ಶ್ರೀಪ್ರಸನ್ನ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸಂಭ್ರಮ್ ಆಸ್ಪತ್ರೆ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಮನೆಯಲ್ಲಿ ಎಲ್ಲಾ ಕೆಲಸಗಳನ್ನು ಮಾಡಿಟ್ಟು ಕುಟುಂಬ ಸದಸ್ಯರ ಸೇವೆಯಲ್ಲಿ ದಿನವಿಡೀ ನಿರತರಾಗುತ್ತಾರೆ, ದಿನಗೂಲಿ ನೌಕರರು ಬೆಳಗ್ಗೆಯಿಂದ ಸಂಜೆವರೆಗೆ ದುಡಿಯುವುದರಿಂದ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ವೃದ್ಧರು ಯಾವುದೇ ವ್ಯಾಯಾಮವಿಲ್ಲದೆ ಖುರ್ಚಿಯಲ್ಲಿ, ಹಾಸಿಗೆಯಲ್ಲಿ ಮಲಗಿರುತ್ತಾರೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವುದರಿಂದ ವ್ಯಾಯಾಮ ಅಥವಾ ಯೋಗದಲ್ಲಿ ಪಾಲ್ಗೊಳ್ಳದೇ ಇರುವುದರಿಂದ ಆರೋಗ್ಯದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ತಮ್ಮ ಆರೋಗ್ಯ ಪರೀಕ್ಷಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಲು ಮುಂದಾಗಬೇಕು ಎಂದು ತಿಳಿಸಿದರು. ಕೆಜಿಎಫ್ ಎಕ್ಸ್‌ರೇಯಿಂದ ಲ್ಯಾಬ್ ಪರೀಕ್ಷೆ, ಪ್ರಧಾನಿ ಜನ ಔಷಧಿ ಹಾಗೂ ಮೋಯ್ದು ಮೆಡಿಕಲ್ಸ್ನಿಂದ ಉಚಿತ ಔಷಧಿ ವ್ಯವಸ್ಥೆ ಒದಗಿಸಲಾಗಿತ್ತು. ವೈದ್ಯ ರಾದ ಡಾ.ಮಹಾಲಿಂಗಮ್, ಡಾ.ಗುರುದತ್, ಡಾ.ಮುಖೇಶ್, ಜನ ಔಷಧಿಯ ಲಯನ್ ಜೆ.ಸುರೇಶ್, ಕಮಲ್ ಮುನಿಸ್ವಾಮಿ, ಆನಂದಕೃಷ್ಣನ್, ಸುಜಾ ತಾಬಾಬು, ಕರ್ಣ, ಉಮಾ, ಸತೀಶ್ ಪಾಲ್ಗೊಂಡಿದ್ದರು.
Ad
ಮಾಜಿ ಸ್ಪೀಕರ್ ತೋಟದಲ್ಲಿ ಮೇವು ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು
Kolara: ಮಾವಿಗೆ ಬೆಂಬಲ ಬೆಲೆಗಾಗಿ ಹೆದ್ದಾರಿ ತಡೆ; ರಸ್ತೆಯಲ್ಲೇ ಮಾವು ಸುರಿದು ಪ್ರತಿಭಟನೆ
ಎಕ್ಸೆಪ್ರೆಸ್ ಹೈವೇನಲ್ಲಿ ಲಘು ವಾಹನಗಳ ಅಕ್ರಮ ಪ್ರವೇಶ!
Karnataka: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 18 ಮೈನಸ್ ಆಗುತ್ತೆ: ಜಮೀರ್
Karnataka: ಬಿಜೆಪಿಯವರು ಒಂದೇ ಒಂದು ಮನೆ ನೀಡಿದ್ದರೆ ರಾಜಕೀಯ ನಿವೃತ್ತಿ: ಜಮಿರ್ ಖಾನ್
Gundlupete: ಪಾಠ ಕೇಳುತಿದ್ದ ವೇಳೆ ಹೃದಯಾಘಾತವಾಗಿ ವಿದ್ಯಾರ್ಥಿ ಸಾ*ವು
Mumbai: ಮನೆಗೆ ಊಟಕ್ಕೆ ಬರುವುದಾಗಿ ಹೇಳಿ ಸೇತುವೆಯಿಂದ ಜಿಗಿದು ವೈದ್ಯ ಆತ್ಮಹತ್ಯೆಗೆ ಶರಣು!
Rajasthan: ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ; ಪೈಲಟ್ ಸೇರಿ ಇಬ್ಬರು ಸಾವು
ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು
Kota: ಟಿಲ್ಲರ್‌ನಿಂದ ಟ್ಯಾಕ್ಟರ್ ಕಡೆಗೆ ಮುಖ ಮಾಡಿದ ರೈತರು
You seem to have an Ad Blocker on.
To continue reading, please turn it off or whitelist Udayavani.