ನಿರ್ಲಕ್ಷ್ಯಕ್ಕೊಳಗಾದ ಪ್ರಾಥಮಿಕ- ಪ್ರೌಢಶಾಲಾ ಶಿಕ್ಷಕರ ವಸತಿ ಸಂಕೀರ್ಣ

Team Udayavani, Jun 8, 2023, 3:07 PM IST

ನಿರ್ಲಕ್ಷ್ಯಕ್ಕೊಳಗಾದ ಪ್ರಾಥಮಿಕ- ಪ್ರೌಢಶಾಲಾ ಶಿಕ್ಷಕರ ವಸತಿ ಸಂಕೀರ್ಣ

ಮುಳಬಾಗಿಲು: ಸರ್ಕಾರಿ ಸ್ವತ್ತನ್ನು ಹಾಳು ಮಾಡಬಾರದು ಎಂದು ಸಮಾಜಕ್ಕೆ ಪಾಠ ಮಾಡುವ ಗುರುಗಳೇ, 13 ವರ್ಷಗಳ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗುರುಭವನ ಅಥವಾ ಶಿಕ್ಷಕರ ವಸತಿ ಗೃಹ ಉದ್ಘಾಟನೆಯಾಗದೇ ಶಿಥಿಲಾವಸ್ತೆ ತಲುಪುತ್ತಿವೆ!.

ಅನೈತಿಕ ಚಟುವಟಿಕೆ: ತಾಲೂಕಿನ ಸರ್ಕಾರಿ ಪ್ರಾಥಮಿಕ-ಪ್ರೌಢ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ದೂರದ ಊರುಗಳಿಂದ ಓಡಾಡುವ ಸಮಸ್ಯೆ ತಪ್ಪಿಸಲು 2009-10ನೇ ಸಾಲಿನಲ್ಲಿ ಎನ್‌.ವಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಸತಿ ಗೃಹ ಅಥವಾ ಗುರುಭವನವನ್ನು ನಿರ್ಮಿಸಲಾಗಿದೆ. ಆದರೆ, ಇದುವರೆಗೂ ಯಾವೊಬ್ಬ ಶಿಕ್ಷಕರೂ ವಾಸವಾಗದ್ದರಿಂದ ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.

ಮೂತ್ರ ವಿಸರ್ಜನೆ: ವಾಸಕ್ಕೆ ಬೇಕಾಗುವ ಎಲ್ಲಾ ಸೌಲಭ್ಯ ಕಟ್ಟಡದಲ್ಲಿದ್ದರೂ ಕಟ್ಟಡ ನಿರ್ಮಾಣವಾದ ಕಾಲದಿಂದ ಕನಿಷ್ಠ ಬಾಗಿಲನ್ನೇ ತೆರೆದಿಲ್ಲ. ಸುಮಾರು 13 ವರ್ಷದಿಂದ ಭೂತ ಬಂಗಲೆಯಂತೆ ಕಟ್ಟಡ ನಿಂತಿದೆ. ಕಟ್ಟಡದ ಎಲ್ಲಾ ಕಿಟಕಿಗಳ ಗಾಜುಗಳನ್ನು ಕಿಡಿಗೇಡಿಗಳು ಚೂರು ಮಾಡಿದ್ದಾರೆ.

ಸಂಪಿನ ಮುಚ್ಚಳ ಕದ್ದೊಯ್ದಿದ್ದಾರೆ: ಕಟ್ಟಡದ ಸುತ್ತ ಸ್ಥಳೀಯರು ಕಸ ಹಾಕಿದ್ದಾರೆ. ನೀರಿನ ಸಂಪಿನ ಮುಚ್ಚಳವನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಟ್ಟಡದ ಪಕ್ಕದಲ್ಲೇ ಟೊಮೆಟೋ ಮಾರುಕಟ್ಟೆ ಇದ್ದು ಕಸವನ್ನು ಕಾಂಪೌಂಡ್‌ನ‌ ಒಳಗೆ ಸುರಿದಿದ್ದಾರೆ. ಜನರ ಮೂತ್ರ ವಿಸರ್ಜನೆ ತಾಣವಾಗಿ ದುರ್ವಾಸನೆ ಬೀರುತ್ತಿದೆ.

ಕಟ್ಟಡದ 3 ಕಡೆ ಗಿಡ-ಗಂಟಿ: ಪ್ರೌಢ ಶಾಲೆಗೆ ಹೊಂದಿಕೊಂಡ ಭಾಗದಲ್ಲಿ ಮಾತ್ರ ಕಟ್ಟಡ ಸುಂದರವಾಗಿ ಕಾಣಲಿದ್ದು ಉಳಿದ 3ಕಡೆ ಗಿಡ-ಗಂಟಿ ಬೆಳೆದಿವೆ. ಕಬೋರ್ಡು, ಫ್ಯಾನ್‌ಗಳಲ್ಲಿ ಜೇಡರ ಹುಳು ಗೂಡುಗಳನ್ನು ಕಟ್ಟಿಕೊಂಡಿವೆ. ಈ ಕುರಿತು ಕಟ್ಟಡವನ್ನು ಸುಸ್ಥಿತಿಯಲ್ಲಿಡಲು ಇಲಾಖೆ ಮುಂದಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ವಾಸಿಸಲು ಶಿಕ್ಷಕರು ಬರುತ್ತಿಲ್ಲ: ಬಿಇಒ : ಈ ಕಟ್ಟಡಕ್ಕೆ ಸಂಬಂಧಿಸಿದ ಯಾವುದೇ ಕಡತ ನಮ್ಮ ಇಲಾಖೆಯಲ್ಲಿ ಇಲ್ಲ. ಆದರೆ, ಎನ್‌. ವಡ್ಡಹಳ್ಳಿಯಿಂದ ಕೇವಲ 6 ಕಿ.ಮೀ. ಅಂತರದಲ್ಲಿ ಮುಳಬಾಗಲು ನಗರ ಕೇಂದ್ರವಿದೆ. ಹೀಗಾಗಿ ವಡ್ಡಹಳ್ಳಿಯಲ್ಲಿರುವ ವಸತಿ ಗೃಹಗಳಲ್ಲಿ ವಾಸಿಸಲು ಶಿಕ್ಷಕರು ಯಾರೂ ಮುಂದೆ ಬರುತ್ತಿಲ್ಲ. ಅಲ್ಲದೇ, ಬೇರೆ ಜಿಲ್ಲೆಗಳಿಂದ ನೇಮಕವಾಗಿ ಬಂದಿರುವ ಶಿಕ್ಷಕರಾದರೂ ವಸತಿ ಗೃಹಗಳಲ್ಲಿ ವಾಸಿಸುವಂತೆ ಹೇಳಿದರೂ ಅವರೂ ವಾಸ ಮಾಡಲು ಮುಂದಾಗುತ್ತಿಲ್ಲ. ಆದ್ದರಿಂದ ಕಟ್ಟಡ ಖಾಲಿಯಾಗಿ ಉಳಿದುಕೊಂಡಿದ್ದು ಉದ್ಘಾಟನೆ ಭಾಗ್ಯವಿಲ್ಲದೇ, ಸರಿಯಾಗಿ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆ ತಲುಪುತ್ತಿದೆ ಎಂದು ಬಿಇಒ ಗಂಗರಾಮಯ್ಯ ತಿಳಿಸಿದ್ದಾರೆ.

ಸರ್ಕಾರ ಶಿಕ್ಷಕರಿಗಾಗಿ ಉತ್ತಮ ಕಟ್ಟಡ ನಿರ್ಮಿಸಿದ್ದರೂ ಯಾರೂ ವಾಸ ಮಾಡುತ್ತಿಲ್ಲ. ಕೂಡಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಇಒ ಗಂಗರಾಮಯ್ಯ ಅವರು ಇತ್ತ ಕಡೆ ಗಮನಹರಿಸಬೇಕು. ● ಚಂದ್ರಶೇಖರ್‌, ಎನ್‌.ವಡ್ಡಹಳ್ಳಿ ಗ್ರಾಮಸ್ಥರು

-ಎಂ.ನಾಗರಾಜಯ್ಯ

ಟಾಪ್ ನ್ಯೂಸ್

MOSSAD 4

ಪುಟ್ಟ ದೇಶದ ಈ ಇಂಟೆಲಿಜೆನ್ಸ್‌ ಏಜೆನ್ಸಿ ಭಾರತದ ʻರಾʼ ಗಿಂತಲೂ ಪವರ್‌ಫುಲ್‌..!

ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ: ಸಿಎಂ ಸಿದ್ದರಾಮಯ್ಯ

ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ: ಸಿಎಂ ಸಿದ್ದರಾಮಯ್ಯ

tdy-18

AsianGames: ಒಂದು ಮೊಬೈಲ್‌ಗಾಗಿ ಸಾವಿರಾರು ಕಸದಬ್ಯಾಗ್‌ ಹುಡುಕಾಡಿದ ಸಿಬ್ಬಂದಿ: ಆಗಿದ್ದೇನು?

Haryana ಬೈಕ್‌ನಲ್ಲೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

Haryana ಬೈಕ್‌ನಲ್ಲೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

Kalaburagi; ಡಿವೈಡರ್ ಗೆ ಬೈಕ್ ಡಿಕ್ಕಿ; ಇಬ್ಬರು ವಿದ್ಯಾರ್ಥಿಗಳ ಸಾವು

Kalaburagi; ಡಿವೈಡರ್ ಗೆ ಬೈಕ್ ಡಿಕ್ಕಿ; ಇಬ್ಬರು ವಿದ್ಯಾರ್ಥಿಗಳ ಸಾವು

delta

Goa: ಕ್ಯಾಸಿನೊ ಆಪರೇಟರ್ ಡೆಲ್ಟಾ ಕಾರ್ಪ್‍ಗೆ GST ಬಾಕಿ ಕುರಿತು ನೋಟಿಸ್

Politics: 32 ಎಎಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಪ್ರತಾಪ್ ಸಿಂಗ್ ಬಾಜ್ವಾ

Politics: 32 ಆಪ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಕೇಜ್ರಿವಾಲ್ ಗೆ ಬಾಜ್ವಾ ಸಂದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-16

ರಾಗಿ ಬೆಳೆಗೆ ಯೂರಿಯಾ ರಸಗೊಬ್ಬರದ ಕೊರತೆ!

Kolar: ಆಸ್ತಿ ಮೌಲ್ಯ ಪರಿಷ್ಕರಣೆ ಭಾರೀ ದುಬಾರಿ!

Kolar: ಆಸ್ತಿ ಮೌಲ್ಯ ಪರಿಷ್ಕರಣೆ ಭಾರೀ ದುಬಾರಿ!

Kolara: ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತಾ ಗುರಿ ವಿಫಲ!

Kolara: ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತಾ ಗುರಿ ವಿಫಲ!

Srinivaspur: ಕೊಲೆ ಪ್ರಕರಣ; ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಎಫ್ಐಆರ್‌!

Srinivaspur: ಕೊಲೆ ಪ್ರಕರಣ; ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಎಫ್ಐಆರ್‌!

tdy-15

Land: ಪರರ ಪಾಲಾಗಿರುವ ಪೊಲೀಸ್‌ ಠಾಣೆ ಜಮೀನು

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

MOSSAD 4

ಪುಟ್ಟ ದೇಶದ ಈ ಇಂಟೆಲಿಜೆನ್ಸ್‌ ಏಜೆನ್ಸಿ ಭಾರತದ ʻರಾʼ ಗಿಂತಲೂ ಪವರ್‌ಫುಲ್‌..!

ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ: ಸಿಎಂ ಸಿದ್ದರಾಮಯ್ಯ

ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ: ಸಿಎಂ ಸಿದ್ದರಾಮಯ್ಯ

puttakkana makkalu team outing

ಪುಟ್ಟಕ್ಕನ ಮಕ್ಕಳ ಔಟಿಂಗ್

tdy-18

AsianGames: ಒಂದು ಮೊಬೈಲ್‌ಗಾಗಿ ಸಾವಿರಾರು ಕಸದಬ್ಯಾಗ್‌ ಹುಡುಕಾಡಿದ ಸಿಬ್ಬಂದಿ: ಆಗಿದ್ದೇನು?

Haryana ಬೈಕ್‌ನಲ್ಲೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

Haryana ಬೈಕ್‌ನಲ್ಲೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.