Kolar: ಆಸ್ತಿ ಮೌಲ್ಯ ಪರಿಷ್ಕರಣೆ ಭಾರೀ ದುಬಾರಿ!


Team Udayavani, Sep 24, 2023, 4:20 PM IST

Kolar: ಆಸ್ತಿ ಮೌಲ್ಯ ಪರಿಷ್ಕರಣೆ ಭಾರೀ ದುಬಾರಿ!

ಕೋಲಾರ: ಆಸ್ತಿಗಳ ಕನಿಷ್ಠ ಮಾರಾಟ ಬೆಲೆಯನ್ನು ನಿರ್ಧರಿಸುವ ಆಸ್ತಿಯ ಮಾರ್ಗದರ್ಶಿ ಮೌಲ್ಯವನ್ನು ಸರ್ಕಾರವು ಪರಿಷ್ಕರಿಸಿ ಅ.1ರಿಂದ ಅನ್ವಯವಾಗುವಂತೆ ಜಾರಿಗೆ ತರುತ್ತಿದ್ದು, ಕೋಲಾರ ನಗರ ಮತ್ತು ತಾಲೂಕಿನ ಆಸ್ತಿಗಳ ಮೌಲ್ಯವು ಶೇ.5 ರಿಂದ ಶೇ.100ರವರೆಗೂ ಹೆಚ್ಚಳವಾಗಿದೆ.

ಮಾರ್ಗದರ್ಶಿ ಮೌಲ್ಯವು ಆಸ್ತಿಯ ನೋಂದಣಿ ಶುಲ್ಕ, ಸ್ಟಾಂಪ್‌ ಪೇಪರ್‌ ಸುಂಕ, ಆಸ್ತಿ ತೆರಿಗೆಗಳ ಮೇಲೆ ನೇರ ಪರಿಣಾಮ ಬೀರುವುದರಿಂದ ಕೋಲಾರ ತಾಲೂಕಿಗೆ ಸಂಬಂಧಿಸಿದಂತೆ ಆಸ್ತಿ ಮೌಲ್ಯಗಳ ಪರಿಷ್ಕರಣೆಯು ಸಾರ್ವಜನಿಕರಲ್ಲಿ ಮಿಶ್ರ ಭಾವನೆಯನ್ನು ಮೂಡಿಸುತ್ತಿದೆ. ಕೆಲವರು ಪರಿಷ್ಕರಣೆ ಕಾರ್ಯವನ್ನು ಸ್ವಾಗತಿಸುತ್ತಿದ್ದರೆ ಕೆಲವರು ವಿಪರೀತ ಹೆಚ್ಚಳ ಮಾಡಲಾಗಿದೆಯೆಂದು ದೂರುತ್ತಿದ್ದಾರೆ.

ಕೆಲವರು ಆಸ್ತಿ ಮೌಲ್ಯಗಳನ್ನು ಹಾಲಿ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ಪರಿಷ್ಕರಿಸುವುದರಿಂದ ಸಹಜವಾಗಿಯೇ ಆಸ್ತಿಗಳ ಮೌಲ್ಯವು ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಈಗಾಗಲೇ ಆಸ್ತಿ ಹೊಂದಿರುವ ಮಾಲೀಕರು ಮಾರ್ಗಸೂಚಿ ಮೌಲ್ಯ ಹೆಚ್ಚಳವನ್ನು ಸ್ವಾಗತಿಸಿದರೆ, ಖರೀದಿಸುವ ಉದ್ದೇಶ ಹೊಂದಿರುವವರು ಮಾರುಕಟ್ಟೆ ಮೌಲ್ಯ ಹೆಚ್ಚಾಗಿರುವ ಹೊರೆಯ ಜೊತೆಗೆ ರಿಯಲ್‌ ಎಸ್ಟೇಟ್‌ ಕಮಿಷನ್‌ ಮೌಲ್ಯ, ನೋಂದಣಿ ಶುಲ್ಕದ ಹೆಚ್ಚಳದ ಹೊರೆಯನ್ನು ಹೊತ್ತುಕೊಳ್ಳಬೇಕಾಗುತ್ತದೆಯೆಂದು ಆತಂಕಗೊಂಡಿದ್ದಾರೆ.

ಐದು ವರ್ಷಗಳ ನಂತರ: ಸರ್ಕಾರವು ನಿಯಮಿತವಾಗಿ ಆಸ್ತಿ ಮಾರ್ಗಸೂಚಿ ಮೌಲ್ಯವನ್ನು ಹೆಚ್ಚಳ ಮಾಡುತ್ತಿರುತ್ತದೆ. ಆದರೆ, ಕರ್ನಾಟಕ ರಾಜ್ಯ ಸರ್ಕಾರವು 2018 ರಲ್ಲಿ ಆಸ್ತಿ ಮಾರ್ಗಸೂಚಿ ಮೌಲ್ಯವನ್ನು ಪರಿಷ್ಕರಿಸಿದ್ದು, ಆನಂತರ ಕೋವಿಡ್‌ ಮತ್ತಿತರ ಕಾರಣಗಳಿಂದಾಗಿ ಪರಿಷ್ಕರಣೆ ಮಾಡಿರಲಿಲ್ಲ. ಇದೀಗ 5 ವರ್ಷದ ನಂತರ ಆಸ್ತಿಗಳ ಹಾಲಿ ಮಾರುಕಟ್ಟೆ ಮೌಲ್ಯವು ಗಣನೀಯವಾಗಿ ಏರಿಕೆಯಾಗಿರುವುದರಿಂದ ಅವುಗಳ ಆಧಾರದ ಮೇಲೆ ಮಾರ್ಗಸೂಚಿ ಮೌಲ್ಯವನ್ನು ಪರಿಷ್ಕರಿಸಲು ಸರ್ಕಾರ ಸೂಚನೆ ನೀಡಿತ್ತು. ಸರ್ಕಾರ ನೀಡಿದ ಮಾರ್ಗಸೂಚಿ ಮಾನದಂಡಗಳ ಆಧಾರದ ಮೇಲೆಯೇ ಮಾರ್ಗಸೂಚಿ ಮೌಲ್ಯವನ್ನು ಪರಿಷ್ಕರಿಸಲಾಗಿದೆ ಎಂದು ಕಂದಾಯ ಮತ್ತು ನೋಂದಣಿ ಇಲಾಖೆಯ ಮೂಲಗಳು ತಿಳಿಸುತ್ತಿವೆ.

ಈ ಹಿಂದೆ ಶೇ.20 ಹೆಚ್ಚಳ: ಹಿಂದಿನ ವರ್ಷಗಳಲ್ಲಿ ಸಾಮಾನ್ಯವಾಗಿ ಹಾಲಿ ಮಾರ್ಗಸೂಚಿ ಮೌಲ್ಯಕ್ಕಿಂತಲೂ ಸರಾಸರಿಯಾಗಿ ಶೇ.5 ರಿಂದ ಶೇ.20 ರವರೆವಿಗೂ ಹೆಚ್ಚಳ ಮಾಡಲಾಗುತ್ತಿತ್ತು. ಆದರೆ, ಈ ಬಾರಿ 5 ವರ್ಷಗಳ ನಂತರ ಮಾರ್ಗಸೂಚಿ ಮೌಲ್ಯವನ್ನು ಪರಿಷ್ಕರಣೆ ಮಾಡುತ್ತಿರುವುದರಿಂದ ಸಾಕಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪರಿಷ್ಕರಣೆ ಮಾಡಲಾಗಿದೆ. ಕೋಲಾರದ ಕೆಲವು ಪ್ರದೇಶಗಳಲ್ಲಿ 5 ವರ್ಷಕ್ಕೂ ಹಿಂದೆ ಒಂದು ಎಕರೆ ಭೂಮಿಯ ಬೆಲೆ 3 ಲಕ್ಷ ರೂ.ಗಳಿತ್ತು. ಆದರೆ, ಈಗ ಕೋಲಾರ ತಾಲೂಕಿನಲ್ಲಿ 3 ಲಕ್ಷ ರೂ.ಗಳಿಗೆ ಒಂದು ಎಕರೆ ಭೂಮಿಯೇ ಸಿಗುತ್ತಿಲ್ಲ. ಹಾಲಿ ಕೋಲಾರ ತಾಲೂಕಿನಲ್ಲಿ ಆಯಾ ಪ್ರದೇಶವನ್ನಾಧರಿಸಿ 30 ಲಕ್ಷ ರೂ. ಮೇಲ್ಪಟ್ಟು 3 ಕೋಟಿಯವರೆಗೂ ಎಕರೆ ಭೂಮಿ ಮಾರಾಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಮಾರ್ಗಸೂಚಿ ಮೌಲ್ಯವನ್ನು ಸರಾಸರಿ ಹೆಚ್ಚಿಸದೆ ಆಯಾ ಪ್ರದೇಶಗಳ ಮಾರುಕಟ್ಟೆ ಮೌಲ್ಯಆಧರಿಸಿ ಪರಿಷ್ಕರಿಸಲಾಗಿದೆ. ಆದ್ದರಿಂದ, ಇದು ಶೇ.5ರಿಂದ ಶೇ.100 ವರೆಗೂ ಹೆಚ್ಚಳವಾಗುವಂತಾಗಿದೆ.

ಮಾರ್ಗಸೂಚಿ ಪರಿಷ್ಕರಣೆಗೆ ವಿವಿಧ ಮಾನದಂಡಗಳು: ಆಸ್ತಿಯ ಮಾರ್ಗಸೂಚಿ ಮೌಲ್ಯವನ್ನು ಪರಿಷ್ಕರಿಸಲು ಈ ಬಾರಿ ಹಲವಾರು ಮಾನದಂಡ ಬಳಸಲಾಗಿದೆ. ಕೃಷಿ ಭೂಮಿ, ಖುಷ್ಕಿ, ನೀರಾವರಿ, ಕೈಗಾರಿಕಾ ಪ್ರದೇಶ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆಗಳು, ವಾಣಿಜ್ಯ ಪ್ರದೇಶಗಳು, ವಸತಿ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಆಸ್ತಿ ಮೌಲ್ಯವನ್ನು ಪರಿಷ್ಕರಿಸಲಾಗಿದೆ. ಹಿಂದಿನ 5 ವರ್ಷಗಳಲ್ಲಿ ಆಯಾ ಪ್ರದೇಶಗಳಲ್ಲಿ ನಡೆದಿರುವ ಆಸ್ತಿಗಳ ಮಾರಾಟ ಮೌಲ್ಯವನ್ನು ಪರಿಷ್ಕರಣೆ ಸಂದರ್ಭದಲ್ಲಿ ಗಮನಿಸಲಾಗಿದೆ. ಕೋಲಾರ 35 ವಾರ್ಡ್‌ಗಳಲ್ಲಿ 16 ನೇ ವಾರ್ಡು ಸೇರಿದಂತೆ 10 ವಾಣಿಜ್ಯ ವಾರ್ಡುಗಳಲ್ಲಿ ಮಾತ್ರವೇ ಆಸ್ತಿ ಮೌಲ್ಯವನ್ನು ಶೇ.25 ರಷ್ಟು ಹೆಚ್ಚಿಸಲಾಗಿದೆ. ಉಳಿದ ವಾರ್ಡುಗಳಲ್ಲಿ ಇದರ ಹೆಚ್ಚಳದ ಪ್ರಮಾಣ ಕೇವಲ ಶೇ.5 ರಷ್ಟಾಗಿದೆ. ನರಸಾಪುರ ಮತ್ತು ವೇಮಗಲ್‌ ನಡುವೆ ಬರುವ ಗ್ರಾಮಗಳ ಆಸ್ತಿ ಮೌಲ್ಯಗಳಲ್ಲಿ ಶೇ.25 ರಿಂದ 50ರಷ್ಟು ಹೆಚ್ಚಳವಾಗಿದೆ. ಹಾಗೆಯೇ ಕೋಲಾರ ಮುಳಬಾಗಿಲು, ಬಂಗಾರಪೇಟೆ ಮತ್ತಿತರೆಡೆ ಶೇ.20ರಷ್ಟು ಮೌಲ್ಯ ಹೆಚ್ಚಾಗಿದೆ. ಕೆಲವೆಡೆ ಶೇ.58ರಿಂದ 100ರ ಆಸುಪಾಸಿನಲ್ಲಿ ಮೌಲ್ಯ ಪರಿಷ್ಕರಿಸಲಾಗಿದೆ.

ಗುರಿ ಮೀರಿ ಆದಾಯ :

ಆಸ್ತಿಗಳ ಮಾರ್ಗಸೂಚಿ ಮೌಲ್ಯವು ಪರಿಷ್ಕರಣೆಯಾಗುತ್ತಿರುವುದರಿಂದ ಅ.1 ರಿಂದ ಆರಂಭದ ಕೆಲವು ತಿಂಗಳುಗಳು ನೋಂದಣಿ ಕಾರ್ಯವು ಕೊಂಚ ಕಡಿಮೆಯಾಗುವ ಸಾಧ್ಯತೆಗಳಿವೆ. ಆನಂತರ ಪರಿಷ್ಕೃತ ದರಗಳಿಗೆ ಜನರು ಹೊಂದಿ ಕೊಳ್ಳುವ ಸಾಧ್ಯತೆಗಳಿವೆ. ಪರಿಷ್ಕೃತ ದರಗಳಿಂದಾಗಿ ರಾಜ್ಯದಲ್ಲಿ 20 ಸಾವಿರ ಕೋಟಿ ಆದಾಯ ಹೆಚ್ಚಳ ನಿರೀಕ್ಷೆ ಮಾಡಲಾಗಿದೆ. ಈಗಾಗಲೇ ಉಪ ನೋಂದಣಾಧಿಕಾರಿಗಳ ಕಚೇರಿಗೆ ನಿಗದಿಪಡಿಸಿರುವ ವಾರ್ಷಿಕ ಗುರಿಯನ್ನು ಮೀರಿ ನೋಂದಣಿ ಕಾರ್ಯ ನಡೆದು ಆದಾಯ ಸಂಗ್ರಹಣೆಯಲ್ಲೂ ಗುರಿ ಮೀರಿ ಸಾಧನೆ ಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ನೋಂದಣಿಗೆ ತರಾತುರಿ:

ಸರ್ಕಾರವು ಅ.1ರಿಂದ ಹೊಸ ಪರಿಷ್ಕೃತ ದರಗಳಲ್ಲಿ ಆಸ್ತಿ ನೋಂದಣಿ ನಡೆಸಲು ಆದೇಶಿಸಿರುವುದರಿಂದ ಉಳಿದಿ ರುವ ದಿನಗಳಲ್ಲಿ ಹಿಂದಿನ ಕಡಿಮೆ ದರಗಳಲ್ಲಿಯೇ ಆಸ್ತಿ ನೋಂದಣಿ ಮಾಡಿಕೊಳ್ಳಲು ಖರೀದಿದಾರರು ಮುಗಿ ಬೀಳುತ್ತಿದ್ದಾರೆ. ಇದೇ ಕಾರಣಕ್ಕಾಗಿಯೇ ರಾಜ್ಯ ಸರ್ಕಾರವು ನಾಲ್ಕನೇ ಶನಿವಾರವಾದ ಸೆ.23 ರಂದು ರಜೆ ನೀಡದೆ ನೋಂದಣಿ ಕಚೇರಿಯನ್ನು ತೆರೆದಿಟ್ಟಿತ್ತು. ಕಚೇರಿಯ ವೇಳಾಪಟ್ಟಿಯನ್ನು ಬೆಳಗ್ಗೆ 8 ರಿಂದ ರಾತ್ರಿ 8 ರವರೆವಿಗೂ ನಡೆಸಲು ಅವಕಾಶ ಕಲ್ಪಿಸಿದೆ.

ಆಕ್ಷೇಪಣೆಗಳಿಗೆ ಅವಕಾಶ:

ಸರ್ಕಾರವು ವಿವಿಧ ಮಾನದಂಡಗಳ ಆಧಾರದ ಮೇಲೆ ಆಸ್ತಿಗಳ ಮಾರ್ಗಸೂಚಿ ಮೌಲ್ಯವನ್ನು ಪರಿಷ್ಕರಿಸಿ ಅದರ ಪಟ್ಟಿಯನ್ನು ಈಗಾಗಲೇ ರಾಜ್ಯದ ಆಯಾ ಉಪನೋಂದಣಾಧಿಕಾರಿಗಳ ಕಚೇರಿಯ ನೋಟಿಸ್‌ ಬೋರ್ಡಿನಲ್ಲಿ ಪ್ರಕಟಿಸಿದೆ. ಈ ಮೌಲ್ಯಗಳ ಕುರಿತು ಯಾರಿಗಾದರೂ ಆಕ್ಷೇಪಣೆಗಳಿದ್ದರೆ ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಇದೀಗ ಆಕ್ಷೇಪಣೆ ಸಲ್ಲಿಕೆಯ ಅವಧಿಯೂ ಪೂರ್ಣಗೊಂಡಿದೆ. ಕೋಲಾರ ತಾಲೂಕಿಗೆ ಸಂಬಂಧ ಪಟ್ಟಂತೆ ಕೇವಲ ಒಂದೆರೆಡು ಆಕ್ಷೇಪಣೆಗಳು ಮಾತ್ರವೇ ಸಲ್ಲಿಕೆಯಾಗಿರುವುದರಿಂದ ಬಹುತೇಕ ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಮಾರ್ಗಸೂಚಿ ಮೌಲ್ಯಗಳು ಅ.1 ರಿಂದ ಜಾರಿಗೆ ಬರುವುದು ಖಚಿತವಾಗಿದೆ.

ಆಯಾ ಕಾಲಕ್ಕೆ ತಕ್ಕಂತೆ ಆಸ್ತಿಗಳ ಮಾರ್ಗಸೂಚಿ ಮೌಲ್ಯವನ್ನು ಸರ್ಕಾರ ಪರಿಷ್ಕರಿಸುತ್ತಿರುವುದು ಸ್ವಾಗತ. ಆದರೆ, ಹಿಂದಿನಂತೆ ಸರಾಸರಿ ಶೇ.5ರಿಂದ ಶೇ.20 ಪರಿಷ್ಕರಿ ಸದೆ, ಇದನ್ನೂ ಮೀರಿ ಶೇ.100 ವರೆಗೂ ಹೆಚ್ಚಳ ಮಾಡಿ ಪರಿಷ್ಕರಣೆ ಮಾಡಿ ರುವುದರ ಹೊರೆ ಅಕ್ಟೋಬರ್‌ 1ರಿಂದ ಸಾರ್ವಜನಿಕರ ಮೇಲೆಯೇ ಬೀಳುತ್ತದೆ. -ಶ್ರೀನಿವಾಸ್‌, ನಾಗರಿಕ, ಕೋಲಾರ

5 ವರ್ಷಗಳ ಆಸ್ತಿ ಮಾರಾಟ ವಹಿವಾಟು ಇನ್ನಿತರ ಅನೇಕ ಮಾನದಂಡಗಳ ಆಧಾರದ ಮೇಲೆ ಆಸ್ತಿಗಳ ಮಾರ್ಗಸೂಚಿ ಮೌಲ್ಯಗಳನ್ನು ಪರಿಷ್ಕರಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳ ಆಹ್ವಾನಿಸಲಾಗಿತ್ತು. ಆಕ್ಷೇಪಣೆಗಳ ಅವಧಿ ಮುಕ್ತಾಯವಾಗಿದ್ದು, ಅ.1ರಿಂದ ಪರಿಷ್ಕೃತ ದರಗಳಲ್ಲಿಯೇ ನೋಂದಣಿ ಕಾರ್ಯ ನಡೆಯುತ್ತದೆ. ಆಸ್ತಿಗಳ ಮಾರುಕಟ್ಟೆ ವಹಿವಾಟು ಆಧಾರದ ಮೇಲೆ ಶೇ.5 ರಿಂದ ಶೇ.100ರವರೆಗೂ ಮಾರ್ಗಸೂಚಿ ಮೌಲ್ಯ ಪರಿಷ್ಕರಿಸಲಾಗಿದೆ. ಇದರಿಂದ ಸರ್ಕಾರ ನಿಗದಿಪಡಿಸಿರುವ ಗುರಿ ಮೀರಿ ನೋಂದಣಿ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ. -ಎಂ.ಪ್ರಸಾದ್‌ ಕುಮಾರ್‌, ಹಿರಿಯ ಉಪನೋಂದಣಾಧಿಕಾರಿ, ಕೋಲಾರ ತಾಲೂಕು.

– ಕೆ.ಎಸ್‌.ಗಣೇಶ್‌

 

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.