ಸಂಚಾರಕ್ಕೆ ಅಡ್ಡಿಯಾಗಿದ್ದ ಕಟ್ಟಡ ಅವಶೇಷ ತೆರವು

Team Udayavani, Sep 29, 2019, 2:35 PM IST

ಕೆಜಿಎಫ್: ನಗರದ ಅಶೋಕ ನಗರದ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳ ಬೇಕಿರುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿದ್ದ ಕಟ್ಟಡಗಳ ಅವಶೇಷಗಳನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶನಿವಾರ ತೆರವು ಗೊಳಿಸಿದರು.

ಜೆಸಿಬಿ ಯಂತ್ರದ ಸಹಾಯದಿಂದ ಕೆಡವಲಾಗಿದ್ದ ಕಟ್ಟಡದ ತ್ಯಾಜ್ಯವನ್ನು ಟ್ರಕ್‌ಗೆ ತುಂಬಿ ಹೊರಗಡೆ ಸಾಗಿಸ ಲಾಯಿತು. ಕಂಬಿಗಳನ್ನು ಗ್ಯಾಸ್‌ ಕಟರ್‌ ನಿಂದ ತುಂಡರಿಸಲಾಯಿತು. ಸಂಪಂಗಿ ಶಾಸಕರಾಗಿದ್ದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಿದ್ದರು.

ರಸ್ತೆಗೆ ನೂರಾರು ಮನೆ ತೆರವು ಮಾಡಲಾಗಿತ್ತು. ಆದರೆ, 230 ಮೀಟರ್‌ ರಸ್ತೆಯಲ್ಲಿದ್ದ ಮನೆಗಳ ಮಾಲಿಕರು ರಸ್ತೆ ಅಗಲೀಕರಣಕ್ಕೆ ತಡೆ ಯೊಡ್ಡಿದ್ದರು. ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಅವರೆಲ್ಲರ ಅಹವಾಲು ಕೇಳಿ ಅರ್ಜಿಯನ್ನು ವಿಲೇವಾರಿ ಮಾಡುವಂತೆ ಸೂಚಿಸಿತ್ತು. ಶುಕ್ರವಾರ ನಗರಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಜಿ.ಮಂಜುನಾಥ್‌, ಅಶೋಕ ನಗರ ರಸ್ತೆಗೆ ಭೇಟಿ ನೀಡಿ ಪರಿಶೀಲಿಸಿದರು. ಕೆಲವು ಕಟ್ಟಡ ಮಾಲಿಕರ ಜೊತೆ ಮಾತನಾಡಿದರು.

ಸಹಮತ ಪಡೆದು ಕಟ್ಟಡ ತೆರವು ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು.ಶಾಸಕಿ ರೂಪಕಲಾ ಅವರ ಮನವಿ ಮೇರೆಗೆ ಶೀಘ್ರ ವ್ಯಾಜ್ಯವನ್ನು ಇತ್ಯರ್ಥಮಾಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ