ಮಕ್ಕಳ ಸ್ವಾಗತಕ್ಕೆ ಶಿಕ್ಷಕರಿಂದ ಸಕಲ ಸಿದ್ಧತೆ


Team Udayavani, May 30, 2023, 3:02 PM IST

tdy-15

ಕೋಲಾರ: ಬೇಸಿಗೆಯ ರಜೆಯ ಮಜಾ ಮುಗಿಸಿ ಮೇ 31 ರಿಂದ ಶಾಲೆಯತ್ತ ಹೆಜ್ಜೆ ಹಾಕಲಿರುವ ಚಿಣ್ಣರನ್ನು ಸ್ವಾಗತಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಕಲ ಸಿದ್ದತೆ ನಡೆಸಿದ್ದು, ಮೇ 29 ರಿಂದಲೇ ಶಿಕ್ಷಕರು ಶಾಲೆಯಲ್ಲಿ ಹಾಜರಿದ್ದು, ಶಾಲಾಕೊಠಡಿ, ಆವರಣ, ಶೌಚಾಲಯ, ಅಡುಗೆ ಮನೆ ಸ್ವಚ್ಚತೆಯೊಂದಿಗೆ ಶಾಲೆ ಪ್ರಾರಂಭೋತ್ಸವಕ್ಕೆ ನಡೆಸಿರುವ ಸಿದ್ದತೆಗಳ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಖುದ್ದು ಭೇಟಿ ನೀಡಿ ಪರೀಶೀಲಿಸಿದರು.

ಸೋಮವಾರ ಜಿಲ್ಲೆಯ ವಿವಿಧ ಶಾಲೆಗಳಿಗೆ ದಿಢೀರ್‌ ಭೇಟಿ ನೀಡಿ, ಶಾಲಾರಂಭಕ್ಕಾಗಿ ನಡೆಸುತ್ತಿರುವ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದ ಅವರು, ಶಾಲಾ ಆರಂಭೋತ್ಸವವನ್ನು ಹಬ್ಬದಂತೆ ಆಚರಿಸುತ್ತಿದ್ದು, ಮಕ್ಕಳಿಗೆ ಆಹ್ಲಾದಕರ ವಾತಾವರಣ ಸೃಷ್ಟಿಗೆ ಸೂಚನೆ ನೀಡಿದರು.

ಮಕ್ಕಳನ್ನು ಶಾಲೆಗಳತ್ತ ಸೆಳೆಯುವ ಕಾರ್ಯ: ಕಲಿಕೆ, ಪರೀಕ್ಷೆ, ಫಲಿತಾಂಶದ ನಂತರ ಸಿಕ್ಕ ವಾರ್ಷಿಕ ಬೇಸಿಗೆ ರಜೆ ಮುಗಿಸಿ ಇದೀಗ ಶಾಲೆಗಳತ್ತ ಮುಖ ಮಾಡಿರುವ ಚಿಣ್ಣರು, ಹೊಸ ಪಠ್ಯಪುಸ್ತಕಗಳನ್ನು ಪಡೆದು ಮತ್ತೆ ಕಲಿಕೆಯಲ್ಲಿ ಮಗ್ನರಾಗಲು ಸಿದ್ದರಾಗಿದ್ದು, ಇದೇ ಮೊದಲ ಬಾರಿಗೆ ಶಾಲಾ ಆರಂಭದ ದಿನವೇ ಮಕ್ಕಳಿಗೆ ಹೊಸ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲು ಇಲಾಖೆ ಸಕಲ ಸಿದ್ದತೆ ನಡೆಸಿದೆ ಎಂದು ತಿಳಿಸಿದರು. ತರಗತಿ ಶಿಕ್ಷಕರು ಮೇ 31ರಿಂದಲೇ ಕಡ್ಡಾಯವಾಗಿ ಶಾಲೆಗೆ ಮಕ್ಕಳು ಬರುವಂತೆ ಮೊಬೈಲ್‌ ಮೆಸೇಜ್‌ ಅನ್ನು ಪೋಷಕರಿಗೆ ಕಳುಹಿಸುವ ಮೂಲಕ ಅರಿವು ಮೂಡಿಸಿ ಎಂದು ತಿಳಿಸಿದರು.

ಮಕ್ಕಳ ವ್ಯಾಸಂಗದ ಅವಧಿಯಲ್ಲಿ ಶಾಲಾ ಪ್ರಾರಂಭದ ದಿನವನ್ನು ಮಕ್ಕಳ ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲುವ ರೀತಿ ಹಬ್ಬದಂತೆ ಆಚರಿಸಿ ಅವರಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸುವುದೇ ಶಿಕ್ಷಣ ಇಲಾಖೆ ಉದ್ದೇಶವಾಗಿದ್ದು, ಮಕ್ಕಳನ್ನು ಶಾಲೆಗಳತ್ತ ಸೆಳೆಯುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.

ಚಿಣ್ಣರಿಗೆ ಸ್ವಾಗತ ಕೋರಲು ಸಜ್ಜು: ಜಿಲ್ಲೆಯಲ್ಲಿ 1 ರಿಂದ 7ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಗಳು ಒಟ್ಟು 1802 ಇವೆ, ಹಾಗೂ 125 ಸರ್ಕಾರಿ ಪ್ರೌಢಶಾಲೆಗಳಿದ್ದು, ಇಲಾಖೆ ಮಾರ್ಗಸೂಚಿಯಂತೆ ಶಾಲೆಗಳಿಗೆ ತಳಿರು ತೋರಣಗಳಿಂದ ಅಲಂಕರಿಸಿ ಮಕ್ಕಳನ್ನು ಶಾಲೆಗೆ ಆಹ್ವಾನಿಸಲು ಸಿದ್ಧತೆ ನಡೆಸಲು ಸೂಚಿಸಲಾಗಿದೆ ಎಂದರು. ಉಳಿದಂತೆ ಅನುದಾನಿತ 44 ಪ್ರಾಥಮಿಕ ಹಾಗೂ 59 ಪ್ರೌಢಶಾಲೆಗಳು, ಅನುದಾನರಹಿತ 359 ಪ್ರಾಥಮಿಕ ಹಾಗೂ 203 ಪ್ರೌಢಶಾಲೆಗಳು ಸೇರಿದಂತೆ ಒಟ್ಟಾರೆ 1204 ಕಿರಿಯ ಪ್ರಾಥಮಿಕ, 1035ಹಿರಿಯ ಪ್ರಾಥಮಿಕ ಹಾಗೂ 420 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 2659 ಶಾಲೆಗಳು ಜಿಲ್ಲೆಯಲ್ಲಿದ್ದು, ಎಲ್ಲಾ ಶಾಲೆಗಳಲ್ಲೂ ಶಾಲಾ ಪ್ರಾರಂಭೋತ್ಸವಕ್ಕೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಇವುಗಳ ಜತೆಗೆ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 16 ಮೊರಾರ್ಜಿದೇಸಾಯಿ, 4 ಕಿತ್ತೂರು ರಾಣಿ ಚೆನ್ನಮ್ಮ, 3 ಅಂಬೇಡ್ಕರ್‌ ಹಾಗೂ 1 ಏಕಲವ್ಯ ವಸತಿ ಶಾಲೆಗಳಿದ್ದು, ಇಲ್ಲಿಯೂ 1200ಕ್ಕೂ ಹೆಚ್ಚು ಮಕ್ಕಳು ಶಾಲೆಯತ್ತ ಮೇ 31 ರಂದು ಆಗಮಿಸಲಿದ್ದಾರೆ. ಶ್ರೀನಿವಾಸಪುರ, ಬಂಗಾರಪೇಟೆ, ಮುಳಬಾಗಿಲು ತಾಲ್ಲೂಕುಗಳಲ್ಲಿ ತಲಾ ಒಂದೊಂದು ಕಸ್ತೂರಿ ಬಾ ಶಾಲೆ ಹಾಗೂ ಆದರ್ಶ ಶಾಲೆಗಳು ಇದ್ದು, ಅವುಗಳಲ್ಲೂ ಸಹಾ ಮೇ 29,30 ರಂದು ಸಿದ್ದತೆ ನಡೆಸಿ ಮೇ 31 ರಂದೇ ಶಾಲಾ ಪ್ರಾರಂಭೋತ್ಸವ ಆಚರಿಸಲು ಸೂಚಿಸಲಾಗಿದೆ.

ಶಾಲೆಗಳು ಆರಂಭಕ್ಕೆ ಹಬ್ಬದಂತೆ ಸಿಹಿ ಊಟ : ಪ್ರಾರಂಭೋತ್ಸವದಂದು ಶಾಲಾ ಆವರಣ, ಕೊಠಡಿಗಳನ್ನು ಸ್ವಚ್ಚಗೊಳಿಸುವುದು, ಕುಡಿಯಲು ನೀರು ಒದಗಿಸುವುದು, ಶೌಚಾಲಯವನ್ನು ಸುಸ್ಥಿತಿಯಲ್ಲಿಡುವುದು, ಬಿಸಿಯೂಟದ ವ್ಯವಸ್ಥೆ ಹಾಗೂ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸುವ ಕಾರ್ಯ ಮಾಡುವಂತೆ ಸೂಚಿಸಲಾಗಿದೆ. ಒಂದನೇ, ಆರನೇ ಹಾಗೂ 8ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭದ ದಿನ ಆಹ್ಲಾದಕರ ಸಂದರ್ಭವಾಗಿರುವಂತೆ ಶಿಕ್ಷಕರು ಗಮನಹರಿಸಬೇಕು, ಇದು ಮಕ್ಕಳ ವ್ಯಾಸಂಗದ ಅವಧಿಯಲ್ಲಿ ಲವಲವಿಕೆಯಿಂದ ಕಳೆಯಲು ಪ್ರೇರಣೆ ನೀಡುತ್ತದೆ ಎಂದು ಇಲಾಖೆ ಸೂಚಿಸಿದೆ ಎಂದರು.

ಪಠ್ಯಪುಸ್ತಕ , ಸಮವಸ್ತ್ರ ವಿತರಣೆ: ಶಾಲಾ ಹಬ್ಬಕ್ಕೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಗ್ರಾಮದ ಗಣ್ಯರನ್ನು ಕರೆಸಿ ಶಾಲಾ ಹಬ್ಬವನ್ನು ಸಡಗರದಿಂದ ಆಚರಿಸಬೇಕು ಮತ್ತು ಅಂದು ಮಕ್ಕಳಿಗೆ ಸಿಹಿ ಹಂಚುವುದು ಜತೆಗೆ ಇಲಾಖೆ ನೀಡಿರುವ ಪಠ್ಯಪುಸ್ತಕ, ಸಮವಸ್ತ್ರ ಮೊದಲ ದಿನವೇ ವಿತರಿಸಲು ಸೂಚಿಸಲಾಗಿದೆ. ಈ ನಡುವೆ ಇಲಾಖೆ ಮಿಂಚಿನ ಸಂಚಾರಕ್ಕಾಗಿ ಅಧಿಕಾರಿಗಳ ತಂಡಗಳನ್ನು ರಚಿಸಿದ್ದು, ಜೂ.1 ರಿಂದ 15 ರವರೆಗೂ ತಂಡಗಳು ದಿಢೀರ್‌ ಶಾಲೆಗಳಿಗೆ ಭೇಟಿ ನೀಡಲಿವೆ, ಶಾಲೆಗಳಲ್ಲಿ ಶಾಲಾ ಆರಂಭೋತ್ಸವ ಮಾಡಿರುವ ಕುರಿತು, ಪಠ್ಯಪುಸ್ತಕ,ಬಟ್ಟೆ ವಿತರಣೆ ಕುರಿತು ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.

ಟಾಪ್ ನ್ಯೂಸ್

Varanasi ಕ್ರಿಕೆಟ್ ಸ್ಟೇಡಿಯಂಗೆ ಶಿವಸ್ಪರ್ಷ; ತ್ರಿಶೂಲದ ಆಕಾರದ ಫ್ಲಡ್‌ಲೈಟ್‌

Varanasi ಕ್ರಿಕೆಟ್ ಸ್ಟೇಡಿಯಂಗೆ ಶಿವಸ್ಪರ್ಷ; ಫ್ಲಡ್ ಲೈಟ್, ಛಾವಣಿ ಎಲ್ಲವೂ ಶಿವಮಯ

4-vitla

Waste disposal: ರಾ.ಹೆದ್ದಾರಿ ಬದಿ ಕಸ ಎಸೆಯುತ್ತಿದ್ದ ವಾಹನ ತಡೆದು ದಂಡ ವಿಧಿಸಿದ ಪಂಚಾಯತ್

kannada movie 13

ಗೆಲುವಿನ ಹಾದಿಯಲ್ಲಿ ‘13’ ಸಿನಿಮಾ

Goa Karnataka Border: ಅಕ್ರಮ ಮದ್ಯ ಸಾಗಣೆ… ಗೋವಾ ಕರ್ನಾಟಕ ಗಡಿಯಲ್ಲಿ ಬಿಗಿ ತಪಾಸಣೆ

Goa Karnataka Border: ಅಕ್ರಮ ಮದ್ಯ ಸಾಗಣೆ… ಗೋವಾ ಕರ್ನಾಟಕ ಗಡಿಯಲ್ಲಿ ಬಿಗಿ ತಪಾಸಣೆ

South Africa Squad; ಗಾಯಗೊಂಡ ಇಬ್ಬರು ವೇಗಿಗಳು; ವಿಶ್ವಕಪ್ ತಂಡದಲ್ಲಿ ಮಹತ್ವದ ಬದಲಾವಣೆ

South Africa Squad; ಗಾಯಗೊಂಡ ಇಬ್ಬರು ವೇಗಿಗಳು; ವಿಶ್ವಕಪ್ ತಂಡದಲ್ಲಿ ಮಹತ್ವದ ಬದಲಾವಣೆ

Actor Akhil Mishra: ಅಡುಗೆ ಮನೆಯಲ್ಲಿ ಜಾರಿಬಿದ್ದು ಖ್ಯಾತ ಬಾಲಿವುಡ್ ನಟ ನಿಧನ

Actor Akhil Mishra: ಅಡುಗೆ ಮನೆಯಲ್ಲಿ ಜಾರಿಬಿದ್ದು ಖ್ಯಾತ ಬಾಲಿವುಡ್ ನಟ ನಿಧನ

Tragedy: ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ಯುವಕನಿಗೆ ನೃತ್ಯ ಮಾಡುವಾಗಲೇ ಹೃದಯಾಘಾತ… ವಿಡಿಯೋ

Tragedy: ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ಯುವಕನಿಗೆ ನೃತ್ಯ ಮಾಡುವಾಗಲೇ ಹೃದಯಾಘಾತ… ವಿಡಿಯೋ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Srinivaspur: ಕೊಲೆ ಪ್ರಕರಣ; ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಎಫ್ಐಆರ್‌!

Srinivaspur: ಕೊಲೆ ಪ್ರಕರಣ; ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಎಫ್ಐಆರ್‌!

tdy-15

Land: ಪರರ ಪಾಲಾಗಿರುವ ಪೊಲೀಸ್‌ ಠಾಣೆ ಜಮೀನು

TDY-17

KGF: ತಾಲೂಕು ಕಚೇರಿಯಲ್ಲಿ ಪಾರ್ಕಿಂಗ್‌ ಅವ್ಯವಸ್ಥೆ!

tdy-17

Kolara politics: 4 ದಶಕ ಬಳಿಕ ಕೋಲಾರದ ಮೇಲೆ ಜೆಡಿಎಸ್‌ ಕಣ್ಣು!

01

Lok Adalat: ವಿಚ್ಛೇದನ ತೊರೆದು ಅದಾಲತ್‌ನಲ್ಲಿ  ಒಂದಾದ 2 ಕುಟುಂಬ

MUST WATCH

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

udayavani youtube

ನಾಪತ್ತೆಯಾಗಿದ್ದ ಬಾಲಕನೋರ್ವನ ಮೃತದೇಹ ನೀರಿನ ಟ್ಯಾಂಕಿನಲ್ಲಿ ಪತ್ತೆ |

ಹೊಸ ಸೇರ್ಪಡೆ

6-panaji

Panaji: ರಾಜ್ಯದೆಲ್ಲೆಡೆ ವಿಜೃಂಭಣೆಯ ಗೌರಿ ಗಣೇಶ ಹಬ್ಬ; ಪಟಾಕಿ ಖರೀದಿ ಭಾರಿ ಇಳಿಕೆ

Varanasi ಕ್ರಿಕೆಟ್ ಸ್ಟೇಡಿಯಂಗೆ ಶಿವಸ್ಪರ್ಷ; ತ್ರಿಶೂಲದ ಆಕಾರದ ಫ್ಲಡ್‌ಲೈಟ್‌

Varanasi ಕ್ರಿಕೆಟ್ ಸ್ಟೇಡಿಯಂಗೆ ಶಿವಸ್ಪರ್ಷ; ಫ್ಲಡ್ ಲೈಟ್, ಛಾವಣಿ ಎಲ್ಲವೂ ಶಿವಮಯ

5-hunsur

Missing Case; ಹುಣಸೂರು: ಕೆಲಸಕ್ಕೆ ಹೋಗಿದ್ದ ಗೃಹಿಣಿ ನಾಪತ್ತೆ

4-vitla

Waste disposal: ರಾ.ಹೆದ್ದಾರಿ ಬದಿ ಕಸ ಎಸೆಯುತ್ತಿದ್ದ ವಾಹನ ತಡೆದು ದಂಡ ವಿಧಿಸಿದ ಪಂಚಾಯತ್

kannada movie 13

ಗೆಲುವಿನ ಹಾದಿಯಲ್ಲಿ ‘13’ ಸಿನಿಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.