
ಸೆಸ್ ಮನ್ನಾಗೆ ಸಿಎಂ ಜೊತೆ ಚರ್ಚೆ
Team Udayavani, Jul 5, 2020, 6:20 AM IST

ಕೋಲಾರ: ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಗಳಲ್ಲಿ ಸರ್ಕಾರ ವಿಧಿಸಿರುವ ಸೆಸ್ ಅಥವಾ ತೆರಿಗೆಯನ್ನು ಮತ್ತಷ್ಟು ಮನ್ನಾ ಮಾಡುವ ಕುರಿತು ಮುಖ್ಯಮಂತ್ರಿ ಜೊಗೆ ಚರ್ಚಿಸುವುದಾಗಿ ರಾಜ್ಯ ಅಬ ಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಿಳಿಸಿದರು. ನಗರ ಹೊರವಲಯದ ಎಪಿಎಂಸಿ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೋವಿಡ್ 19 ಹಿನ್ನೆಲೆಯಲ್ಲಿ ಈ ಹಿಂದೆ ಮೂರು ತಿಂಗಳ ಕಾಲ ಸೆಸ್ ಮನ್ನಾ ಮಾಡಲಾಗಿತ್ತು,
ಇನ್ನಷ್ಟು ಕಾಲ ಮನ್ನಾ ಮಾಡುವಂತೆ ದಲ್ಲಾಳರ ಕ್ಷೇಮಾಭಿವೃದಿಟಛಿ ಸಂಘ ಬೇಡಿಕೆ ಇಟ್ಟಿದೆ. ಸೆಸ್ ಮನ್ನಾ ಮುಂದುವರಿಸ ಬೇಕೆಂಬುದು ನನ್ನ ವೈಯಕ್ತಿಕ ಅನಿಸಿಕೆ. ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ವಿಚಾರ ಪ್ರಸ್ತಾಪಿಸುವುದಾಗಿಯೂ ತಿಳಿಸಿ ದರು. ಎಪಿಎಂಸಿ ಮಾರುಕಟ್ಟೆ ನಿರ್ವ ಹಣೆಗೆ 10 ರಿಂದ 12 ಲಕ್ಷ ರೂ. ವೆಚ್ಚ ತಗಲುತ್ತದೆ. ಸಂಗ್ರಹವಾಗುವ ಹಣದಲ್ಲಿ ಅಭಿವೃದಿಟಛಿ ಕಾರ್ಯವನ್ನೂ ನಡೆಸಬೇಕು. ಸೆಸ್ ಮನ್ನಾ ಬಗ್ಗೆ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರೂ ಒಂದೇ ದಾರಿಯಲ್ಲಿ ಹೋಗಬೇಕು ಎಂದು ತಿಳಿಸಿದರು.
ಎಪಿಎಂಸಿ ಬಂದ್ ಇಲ್ಲ: ಒಂದು ದಿನ ಎಪಿಎಂಸಿ ಬಂದ್ ಮಾಡಿದರೂ ರೈತರಿಗೆ ತೊಂದರೆಯಾಗಿ 15 ರಿಂದ 20 ಕೋಟಿ ರೂ. ನಷ್ಟ ಆಗುತ್ತದೆ. ಹೀಗಾಗಿ ತರಕಾರಿ ಬೆಲೆ ಕುಸಿಯುತ್ತದೆ. ಈ ಬಗ್ಗೆ ಡೀಸಿ ಗಮನಕ್ಕೆ ತಂದಾಗ ಎಪಿಎಂಸಿಗೆ ಲಾಕ್ ಡೌನ್‌ನಿಂದ ವಿನಾಯಿತಿ ನೀಡಿದ್ದಾರೆ ಎಂದು ತಿಳಿಸಿದರು
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
