ಮೃತ್ಯು ಕೂಪವಾಗಿ ಪರಿಣಮಿಸಿದ ಕಲ್ಲಿನ ಕ್ವಾರಿ


Team Udayavani, May 28, 2023, 3:43 PM IST

ಮೃತ್ಯು ಕೂಪವಾಗಿ ಪರಿಣಮಿಸಿದ ಕಲ್ಲಿನ ಕ್ವಾರಿ

ಮುಳಬಾಗಿಲು: ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಲ್ಯಾಂಕೋ ಕಂಪನಿ ನಡೆಸಿದ ಕಲ್ಲು ಗಣಿಗಾರಿಕೆ ಕ್ವಾರಿ ಮೃತ್ಯು ಕೂಪವಾಗಿ ಪರಿಣಮಿಸಿದ್ದು, ಶೀಘ್ರವಾಗಿ ಕಬ್ಬಿಣದ ಬೇಲಿ ಹಾಕಲು ಜಿಲ್ಲಾಧಿಕಾರಿಗಳು ಆದೇಶಿಸಿ ಕೆಲವು ತಿಂಗಳು ಕಳೆದರೂ,ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಕೂಗು ವ್ಯಾಪಕವಾಗಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ತಾಲೂಕಿನ ಆವಣಿ ಹೋಬಳಿ ದೇವರಾಯಸಮುದ್ರ ಗ್ರಾಪಂ ಕೇಂದ್ರ ಸ್ಥಾನದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿ ಸೌಕರ್ಯಗಳಿಂದ ವಂಚಿತಗೊಂಡಿರುವ 80 ದಲಿತ ಕುಟುಂಬಗಳು ವಾಸವಾಗಿರುವ ತಗ್ಗು ಪ್ರದೇಶವೇ ತಟ್ಟನಗುಂಟೆ, ಸುಮಾರು 2 ಸಾವಿರ ಎಕರೆ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಗ್ರಾಮದ ಸರಹದ್ದಿನಲ್ಲಿ ಕಲ್ಲುಬಂಡೆ, ಬೆಟ್ಟ, ಅರಣ್ಯ ಸೇರಿದಂತೆ ಬಹುತೇಕ ಸ್ವಾಭಾವಿಕ ಸಂಪನ್ಮೂಲಗಳು ಸಮೃದ್ಧಿಯಾಗಿವೆ.

ರೈತರಿಂದ ಗುತ್ತಿಗೆ ಪಡೆದ ಜಮೀನು: 2008ರಲ್ಲಿ ಅದೇ ಗ್ರಾಮಕ್ಕೆ ಚತುಷ್ಪಥ ರಸ್ತೆ ಅಭಿವೃದ್ಧಿಯ ಹೆಸರಿನಲ್ಲಿ ಬಂದ ಲ್ಯಾಂಕೋ ಕಂಪನಿಯು ದಲಿತ ಮಹಿಳೆ ಪಾಪಮ್ಮ ಎಂಬುವರಿಂದ ಸ.ನಂ.199ರ ಪೈಕಿ ಮೂರು ಎಕರೆ, ಗುಂಡಪ್ಪ ಎಂಬಾತನಿಂದ 2.17 ಎಕರೆ ಹಾಗೂ ಆಕೆಯ ಮಗಳಾದ ರತ್ನಮ್ಮಳ ಸ.ನಂ718 ರ ಪೈಕಿ 3 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದುಕೊಂಡಿದ್ದರು. ವರ್ಷಕ್ಕೆ 75 ಸಾವಿರ ಪರಿಹಾರ ನೀಡುವುದಾಗಿ ಪತ್ರ ಬರೆಸಿಕೊಂಡು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ಸಹಕಾರದೊಂದಿಗೆ ದೇವರಾಯಸಮುದ್ರ ಗ್ರಾಪಂ ನಿಂದ ಪರವಾನಗಿ ಪಡೆದುಕೊಂಡು, ಜಮೀನುಗಳಲ್ಲಿನ ಕ್ವಾರಿಯಲ್ಲಿ ಬಂಡೆ ಸ್ಫೋಟಿಸಿ ಅದನ್ನು ಕ್ರಷರ್‌ಗೆ ಹಾಕಿ ಕಲ್ಲಿನ ಪುಡಿಯನ್ನು ರಸ್ತೆ ಕಾಮಗಾರಿಗೆ ಬಳಸಿದ್ದಾರೆ.

7-8 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಹೊಂಡ: ಲ್ಯಾಂಕೋ ಕಂಪನಿಯು ಕಲ್ಲು ಪುಡಿ ತಯಾರಿಕೆಗಾಗಿ ಮಾಡಿಕೊಂಡಿದ್ದ ನೂರಾರು ಅಡಿಗಳ ಆಳದ ಬೃಹತ್‌ ಕ್ವಾರಿಯಲ್ಲಿ ಕಲ್ಲು ತೆಗೆದ ನಂತರ ಅದನ್ನು ಮಣ್ಣಿನಿಂದ ಮುಚ್ಚುವುದಾಗಿ ತಿಳಿಸಿದ್ದರು. ಆದರೆ, ಕಂಪನಿಯು ತಮ್ಮ ಕೆಲಸ ಮುಗಿಸಿಕೊಂಡ ನಂತರ ಜಮೀನಿನ ಮಾಲೀಕರಿಗೆ ಕೊಟ್ಟ ಮಾತು ಮರೆತು ಕೃಷಿ ಜಮೀನು ಹಾಳು ಮಾಡಿದ್ದಾರೆ. ಅಲ್ಲದೇ 7-8 ಎಕರೆ ಜಮೀನಿನಲ್ಲಿ ಉಂಟಾಗಿರುವ ಬೃಹತ್‌ ಹೊಂಡದಲ್ಲಿ ಮಳೆಗಾಲ ಸಮಯದಲ್ಲಿ ನೀರು ನಿಂತು ನೂರಾರು ಅಡಿಗಳ ಆಳದ ಸಣ್ಣ ಕೆರೆಯೆಂತೆ ನಿರ್ಮಾಣವಾಗಿದೆ. ಹೊಂಡದ ಸಮೀಪದಲ್ಲಿಯೇ ಇತರೇ ಕೃಷಿ ಜಮೀನುಗಳು, ಅರಣ್ಯ, ಬಂಡೆಗಳಿರುವುದರಿಂದ ಈ ಮಾರ್ಗವಾಗಿ ಜನರು ಸಂಚರಿಸುವಾಗ ಆಯ ತಪ್ಪಿ ಹಳ್ಳಕ್ಕೆ ಬಿದ್ದರೆ ಪ್ರಾಣ ಹಾನಿಯಾಗುವುದಂತೂ ಖಚಿತ. ಹೊಂಡದಲ್ಲಿ ಕೆಲ ವರ್ಷಗಳ ಹಿಂದೆ ಮಹಿಳೆಯೊಬ್ಬರು ಬಿದ್ದು ತೀವ್ರವಾಗಿ ಗಾಯಗೊಂಡಿದ್ದಲ್ಲದೇ, 10-15 ಕುರಿಗಳು ಬಿದ್ದು ಸಾವನ್ನಪ್ಪಿವೆ. ಇದರ ನಡುವೆಯೇ ಇತ್ತೀಚಿನ ವರ್ಷಗಳಲ್ಲಿ ಲ್ಯಾಂಕೋ ಕಂಪನಿಯು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್‌ ಸಂಗ್ರಹ ಕಾರ್ಯಕ್ಕೆ ತಿಲಾಂಜಲಿ ಹಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಶಕ್ಕೆ ಬಿಟ್ಟು ಹೋಗಿದ್ದಾರೆ.

ಜಿಲ್ಲಾಡಳಿತ ಇತ್ತ ಗಮನ ಹರಿಸಲಿ: ಹೆದ್ದಾರಿ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಮಾಡಿರುವ ಬೃಹತ್‌ ಹೊಂಡವನ್ನು ಲ್ಯಾಂಕೋ ಕಂಪನಿಯಾಗಲೀ ಅಥವಾ ಜಿಲ್ಲಾಡಳಿತವಾಗಲೀ ಮುಚ್ಚುವ ಕಾರ್ಯಕ್ಕೆ ಮುಂದಾಗಿಲ್ಲ. ಕಲ್ಲಿನ ಕ್ವಾರಿಗೆ ಜನವರಿ ತಿಂಗಳಿನಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಕಬ್ಬಿಣದ ಬೇಲಿ ಹಾಕಲು ಆದೇಶಿಸಿದ್ದರೂ, ಸ್ಥಳೀಯ ಅಧಿಕಾರಿಗಳು ಮಾತ್ರ ಕೆಲವು ತಿಂಗಳು ಕಳೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ರೀತಿ ಬಿಟ್ಟರೆ ಮುಂದೊಂದು ದಿನ ಮತ್ತಷ್ಟು ಪ್ರಾಣಹಾನಿಯಾಗುವ ಸಂಭವವಿರುವುದರಿಂದ ಜಿಲ್ಲಾಡಳಿತ ಇತ್ತ ಕಡೆ ಗಮನಹರಿಸಬೇಕಾಗಿದೆ.

ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಲ್ಯಾಂಕೋ ಕಂಪನಿಯು ಕೊರೆದಿರುವ ಕಲ್ಲಿನ ಕ್ವಾರಿಯ ಬೃಹತ್‌ ಹೊಂಡದಿಂದ ಮೃತ್ಯುಕೂಪವಾಗಿ ಪರಿಣಮಿಸಿರುವುದರಿಂದ ಸದರೀ ಹೊಂಡಕ್ಕೆ ತುರ್ತಾಗಿ ಕಬ್ಬಿಣದ ಬೇಲಿ ಹಾಕಬೇಕು. – ಕೀಲುಹೊಳಲಿ ಸತೀಶ್‌, ಪರಶುರಾಮ್‌ಸೇನೆ ಸಂಸ್ಥಾಪಕ

ಅಧಿಕಾರಿಗಳೊಂದಿಗೆ ಚರ್ಚಿಸಿ ಲ್ಯಾಂಕೋ ಕಂಪನಿಯು ಹೆದ್ದಾರಿ ನಿರ್ಮಾಣಕ್ಕಾಗಿ ಕೊರೆಸಿರುವ ಕಲ್ಲಿನ ಕ್ವಾರಿಯ ಬೃಹತ್‌ ಹೊಂಡದ ಸುತ್ತ ಕಬ್ಬಿಣದ ಬೇಲಿ ಹಾಕಲು ಕ್ರಮ ತೆಗೆದುಕೊಳ್ಳಲಾಗುವುದು. – ವೈ.ರವಿ, ತಹಶೀಲ್ದಾರ್‌

-ಎಂ.ನಾಗರಾಜಯ್ಯ

ಟಾಪ್ ನ್ಯೂಸ್

Actress: 17ಕ್ಕೆ ಹೀರೋಯಿನ್‌,19ಕ್ಕೆ ಸೂಪರ್ ಸ್ಟಾರ್‌, 24ರ ವಯಸ್ಸಿಗೆ ನಟನೆ ತೊರೆದ ನಟಿ

Actress: 17ಕ್ಕೆ ಹೀರೋಯಿನ್‌,19ಕ್ಕೆ ಸೂಪರ್ ಸ್ಟಾರ್‌, 24ರ ವಯಸ್ಸಿಗೆ ನಟನೆ ತೊರೆದ ನಟಿ

Explained: ಸಾವಿರಾರು ಜನರ ಸಾವು…ಈಗ ಕದನ ವಿರಾಮ: ಏನಿದು ಅಜರ್‌ ಬೈಜಾನ್‌-ಅರ್ಮೇನಿಯಾ ಸಂಘರ್ಷ

Explained:ಸಾವಿರಾರು ಜನರ ಸಾವು…ಈಗ ಕದನ ವಿರಾಮ: ಏನಿದು ಅಜರ್‌ ಬೈಜಾನ್‌-ಅರ್ಮೇನಿಯಾ ಸಂಘರ್ಷ

Varanasi ಕ್ರಿಕೆಟ್ ಸ್ಟೇಡಿಯಂಗೆ ಶಿವಸ್ಪರ್ಷ; ತ್ರಿಶೂಲದ ಆಕಾರದ ಫ್ಲಡ್‌ಲೈಟ್‌

Varanasi ಕ್ರಿಕೆಟ್ ಸ್ಟೇಡಿಯಂಗೆ ಶಿವಸ್ಪರ್ಷ; ಫ್ಲಡ್ ಲೈಟ್, ಛಾವಣಿ ಎಲ್ಲವೂ ಶಿವಮಯ

4-vitla

Waste disposal: ರಾ.ಹೆದ್ದಾರಿ ಬದಿ ಕಸ ಎಸೆಯುತ್ತಿದ್ದ ವಾಹನ ತಡೆದು ದಂಡ ವಿಧಿಸಿದ ಪಂಚಾಯತ್

kannada movie 13

ಗೆಲುವಿನ ಹಾದಿಯಲ್ಲಿ ‘13’ ಸಿನಿಮಾ

Goa Karnataka Border: ಅಕ್ರಮ ಮದ್ಯ ಸಾಗಣೆ… ಗೋವಾ ಕರ್ನಾಟಕ ಗಡಿಯಲ್ಲಿ ಬಿಗಿ ತಪಾಸಣೆ

Goa Karnataka Border: ಅಕ್ರಮ ಮದ್ಯ ಸಾಗಣೆ… ಗೋವಾ ಕರ್ನಾಟಕ ಗಡಿಯಲ್ಲಿ ಬಿಗಿ ತಪಾಸಣೆ

South Africa Squad; ಗಾಯಗೊಂಡ ಇಬ್ಬರು ವೇಗಿಗಳು; ವಿಶ್ವಕಪ್ ತಂಡದಲ್ಲಿ ಮಹತ್ವದ ಬದಲಾವಣೆ

South Africa Squad; ಗಾಯಗೊಂಡ ಇಬ್ಬರು ವೇಗಿಗಳು; ವಿಶ್ವಕಪ್ ತಂಡದಲ್ಲಿ ಮಹತ್ವದ ಬದಲಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Srinivaspur: ಕೊಲೆ ಪ್ರಕರಣ; ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಎಫ್ಐಆರ್‌!

Srinivaspur: ಕೊಲೆ ಪ್ರಕರಣ; ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಎಫ್ಐಆರ್‌!

tdy-15

Land: ಪರರ ಪಾಲಾಗಿರುವ ಪೊಲೀಸ್‌ ಠಾಣೆ ಜಮೀನು

TDY-17

KGF: ತಾಲೂಕು ಕಚೇರಿಯಲ್ಲಿ ಪಾರ್ಕಿಂಗ್‌ ಅವ್ಯವಸ್ಥೆ!

tdy-17

Kolara politics: 4 ದಶಕ ಬಳಿಕ ಕೋಲಾರದ ಮೇಲೆ ಜೆಡಿಎಸ್‌ ಕಣ್ಣು!

01

Lok Adalat: ವಿಚ್ಛೇದನ ತೊರೆದು ಅದಾಲತ್‌ನಲ್ಲಿ  ಒಂದಾದ 2 ಕುಟುಂಬ

MUST WATCH

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

udayavani youtube

ನಾಪತ್ತೆಯಾಗಿದ್ದ ಬಾಲಕನೋರ್ವನ ಮೃತದೇಹ ನೀರಿನ ಟ್ಯಾಂಕಿನಲ್ಲಿ ಪತ್ತೆ |

ಹೊಸ ಸೇರ್ಪಡೆ

Actress: 17ಕ್ಕೆ ಹೀರೋಯಿನ್‌,19ಕ್ಕೆ ಸೂಪರ್ ಸ್ಟಾರ್‌, 24ರ ವಯಸ್ಸಿಗೆ ನಟನೆ ತೊರೆದ ನಟಿ

Actress: 17ಕ್ಕೆ ಹೀರೋಯಿನ್‌,19ಕ್ಕೆ ಸೂಪರ್ ಸ್ಟಾರ್‌, 24ರ ವಯಸ್ಸಿಗೆ ನಟನೆ ತೊರೆದ ನಟಿ

Explained: ಸಾವಿರಾರು ಜನರ ಸಾವು…ಈಗ ಕದನ ವಿರಾಮ: ಏನಿದು ಅಜರ್‌ ಬೈಜಾನ್‌-ಅರ್ಮೇನಿಯಾ ಸಂಘರ್ಷ

Explained:ಸಾವಿರಾರು ಜನರ ಸಾವು…ಈಗ ಕದನ ವಿರಾಮ: ಏನಿದು ಅಜರ್‌ ಬೈಜಾನ್‌-ಅರ್ಮೇನಿಯಾ ಸಂಘರ್ಷ

vinod prabhakar fighter movie release date

Sandalwood; ವಿನೋದ್‌ ಪ್ರಭಾಕರ್‌ ನಟನೆಯ ‘ಫೈಟರ್‌’ ರಿಲೀಸ್ ದಿನಾಂಕ ಘೋಷಣೆ

6-panaji

Panaji: ರಾಜ್ಯದೆಲ್ಲೆಡೆ ವಿಜೃಂಭಣೆಯ ಗೌರಿ ಗಣೇಶ ಹಬ್ಬ; ಪಟಾಕಿ ಖರೀದಿ ಭಾರಿ ಇಳಿಕೆ

Varanasi ಕ್ರಿಕೆಟ್ ಸ್ಟೇಡಿಯಂಗೆ ಶಿವಸ್ಪರ್ಷ; ತ್ರಿಶೂಲದ ಆಕಾರದ ಫ್ಲಡ್‌ಲೈಟ್‌

Varanasi ಕ್ರಿಕೆಟ್ ಸ್ಟೇಡಿಯಂಗೆ ಶಿವಸ್ಪರ್ಷ; ಫ್ಲಡ್ ಲೈಟ್, ಛಾವಣಿ ಎಲ್ಲವೂ ಶಿವಮಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.