ಬೇರೆ ಕಡೆಗೆ ಶಿಕ್ಷಕಿ ನಿಯೋಜನೆ; ಶಾಲೆಗೆ ಗ್ರಾಮಸ್ಥರ ಬೀಗ! 


Team Udayavani, Jun 7, 2023, 4:01 PM IST

ಬೇರೆ ಕಡೆಗೆ ಶಿಕ್ಷಕಿ ನಿಯೋಜನೆ; ಶಾಲೆಗೆ ಗ್ರಾಮಸ್ಥರ ಬೀಗ! 

ಬಂಗಾರಪೇಟೆ: ಪ್ರಸಕ್ತ ಶೈಕ್ಷಣಿಕ ವರ್ಷಾರಂಭದ ದಿನ ಮಕ್ಕಳನ್ನು ಸಂತಸದಿಂದ ಶಾಲೆಗೆ ಕಳುಹಿಸಿದ್ದ ಗ್ರಾಮಸ್ಥರು ಈಗ, ಬೇರೆಡೆ ನಿಯೋಜನೆಗೊಂಡಿದ್ದ ಶಿಕ್ಷಕಿಗಾಗಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಕೂಡಲೇ ನಿಯೋಜಿಸಿ: ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ದೋಣಿಮಡಗು ಗ್ರಾಪಂನ ಕುಂದರಸನಹಳ್ಳಿ ಗ್ರಾಮದಲ್ಲಿ 1 ರಿಂದ 5 ತರಗತಿವರೆಗೂ ಸರ್ಕಾರಿ ಶಾಲೆಯಿದೆ. ಒಟ್ಟು 32 ಮಂದಿ ಮಕ್ಕಳು ದಾಖಲಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಶಾಲೆ ಆರಂಭಕ್ಕೂ ಹಿಂದಿನ ದಿನ ಗ್ರಾಪಂ ಸದಸ್ಯರು, ಗ್ರಾಮಸ್ಥರು ಸೇರಿ ಶಾಲೆಯನ್ನು ಸ್ವಚ್ಛಗೊಳಿಸಿ ಮಕ್ಕಳ ದಾಖಲಾತಿಗೆ ಅನುವು ಮಾಡಿಕೊಟ್ಟಿದ್ದರು. ಆದರೆ, ಮರು ದಿನ ಕಾಯಂ ನುರಿತ ಶಿಕ್ಷಕಿಯನ್ನು ಬೇರೆ ಶಾಲೆಗೆ ನಿಯೋಜನೆ ಮಾಡಿ ಅತಿಥಿ ಶಿಕ್ಷಕರನ್ನು ಶಾಲೆಗೆ ಅಧಿಕಾರಿಗಳು ನಿಯೋಜಿಸಿದ್ದರು. ಹೀಗಾಗಿ ಆಕ್ರೋಶಗೊಂಡ ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಶಾಲೆಗೆ ಬೀಗ ಜಡಿದರು. ಅಲ್ಲದೇ, ಶಾಲೆಯ ಕಾಯಂ ಶಿಕ್ಷಕಿ ಶಾಂತಮ್ಮ ಎಂಬವರನ್ನೇ ಮರಳಿ ನಿಯೋಜನೆ ಮಾಡಬೇಕೆಂದು ಒತ್ತಾಯಿಸಿದರು.

ಶಾಲೆಗೆ ಬೀಗ: ನಲಿ-ಕಲಿಗೆ ತರಬೇತಿ ಪಡೆದ ಶಿಕ್ಷಕರು ಇಲ್ಲದ ಕಾರಣ ಕುಂದರಸನಹಳ್ಳಿ ಶಾಲೆಯ ಶಿಕ್ಷಕಿಯನ್ನು ದೋಣಿಮಡಗು ಶಾಲೆಗೆ ನಿಯೋಜನೆ ಮಾಡಲಾಗಿತ್ತು. ಕುಂದರಸನಹಳ್ಳಿ ಶಾಲೆಗೆ ಮತ್ತೂಬ್ಬ ಕಾಯಂ ಶಿಕ್ಷಕಿ ಜತೆಗೆ ಒಬ್ಬ ಅತಿಥಿ ಶಿಕ್ಷಕಿಯನ್ನು ನಿಯೋಜನೆ ಮಾಡಲಾಗಿದೆ. ಆದರೆ, ಈ ಹಿಂದೆ ಇದ್ದ ಶಿಕ್ಷಕಿಯನ್ನು ಮರಳಿ ಕುಂದರಸನಹಳ್ಳಿ ಶಾಲೆಗೆ ನಿಯೋಜನೆ ಮಾಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದು ಶಾಲೆಗೆ ಬೀಗ ಹಾಕಿದರು.

ಪ್ರತಿಭಟನೆ: ತಾಲೂಕಿನ ಗಡಿಭಾಗದ ದೋಣಿ ಮಡಗು ಗ್ರಾಮದಲ್ಲಿ ನಲಿ-ಕಲಿಗೆ ತರಬೇತಿ ಪಡೆದ ಶಿಕ್ಷಕರು ಇಲ್ಲದ ಕಾರಣ ಕುಂದರಸನಹಳ್ಳಿ ಶಾಲೆ ಶಿಕ್ಷಕಿಯನ್ನು ಅಲ್ಲಿಗೆ ಕಳುಹಿಸಲಾಗಿತ್ತು. ಕುಂದರಸನಹಳ್ಳಿ ಶಾಲೆಗೆ ಒಬ್ಬ ಕಾಯಂ ಮತ್ತು ಒಬ್ಬ ಅತಿಥಿ ಶಿಕ್ಷಕರ ನಿಯೋಜನೆ ವಿರೋಧಿಸಿ ವಿದ್ಯಾರ್ಥಿಗಳ ಪೋಷಕರು ಪ್ರತಿಭಟಿಸಿದರು.

2023-24ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ವಿದ್ಯಾರ್ಥಿಗಳ ದಾಖಲಾತಿ ಆಧಾರದ ಮೇಲೆ ಶಿಕ್ಷಕರನ್ನು ನಿಯೋಜನೆ ಮಾಡುವುದು ಸಹಜ. ಈ ಹಿಂದೆ ಇದ್ದ ಶಾಂತಮ್ಮ ಎಂಬ ಶಿಕ್ಷಕಿ ನಲಿ-ಕಲಿ ತರಬೇತಿ ಪಡೆದಿದ್ದರಿಂದ ಈ ಶಿಕ್ಷಕಿಯ ಅನುಮತಿ ಮೇರೆಗೆ ದೋಣಿಮಡಗು ಶಾಲೆಗೆ ನಿಯೋಜನೆ ಮಾಡಲಾಗಿತ್ತು. ಗ್ರಾಮಸ್ಥರು ಈ ಶಿಕ್ಷಕರೇ ಬೇಕು ಎಂದು ಪಟ್ಟು ಹಿಡಿದಿರುವ ಕಾರಣ ಶಿಕ್ಷಕಿ ಶಾಂತಮ್ಮ ಅವರನ್ನು ಮತ್ತೆ ಕುಂದರಸನಹಳ್ಳಿ ಶಾಲೆಗೆ ನಿಯೋಜನೆ ಮಾಡಲಾಗಿದೆ. ಸಮಸ್ಯೆ ಬಗೆಹರಿಸಲಾಗಿದೆ. – ಡಿ.ಎನ್‌.ಸುಕನ್ಯಾ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಂಗಾರಪೇಟೆ

ಟಾಪ್ ನ್ಯೂಸ್

DROUPADI MURMU (2)

Women’s Reservation Bill ; ಒಪ್ಪಿಗೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Uttar Pradesh: ತಪ್ಪಾದ ಇಂಜೆಕ್ಷನ್‌ ನಿಂದ ಬಾಲಕಿ ಸಾವು; ಶವ ಎಸೆದು ವೈದ್ಯ, ಸಿಬಂದಿ ಪರಾರಿ!

Uttar Pradesh: ತಪ್ಪಾದ ಇಂಜೆಕ್ಷನ್‌ ನಿಂದ ಬಾಲಕಿ ಸಾವು; ಶವ ಎಸೆದು ವೈದ್ಯ, ಸಿಬಂದಿ ಪರಾರಿ!

BJP MP ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್

BJP MP ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್

1-sasadas

Karwar; ರಾ.ಹೆ.66 ರ ಟನಲ್ ನಲ್ಲಿ ಸಂಚಾರ ಪುನರಾರಂಭಕ್ಕೆ ಆಗ್ರಹಿಸಿ ದಿನವಿಡೀ ಪ್ರತಿಭಟನೆ

1-asdasdas

Belagavi;ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ: ಪೂರಕ ವಾತಾವರಣ

upendra

Cauvery ಮತ್ತು ನಂಬಿಕೆ… ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ?

1-sadasd

World Cup; ಲೆಗ್ ಸ್ಪಿನ್ನರ್ ಚಾಹಲ್ ರನ್ನು ಕಡೆಗಣಿಸಿರುವುದು ತಪ್ಪು : ಯುವರಾಜ್ ಸಿಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-6

Horticultural crop: ತೋಟಗಾರಿಕಾ ಬೆಳೆಗಳಿಗೆ ತೇವಾಂಶದ ಭೀತಿ!

tdy-16

ರಾಗಿ ಬೆಳೆಗೆ ಯೂರಿಯಾ ರಸಗೊಬ್ಬರದ ಕೊರತೆ!

Kolar: ಆಸ್ತಿ ಮೌಲ್ಯ ಪರಿಷ್ಕರಣೆ ಭಾರೀ ದುಬಾರಿ!

Kolar: ಆಸ್ತಿ ಮೌಲ್ಯ ಪರಿಷ್ಕರಣೆ ಭಾರೀ ದುಬಾರಿ!

Kolara: ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತಾ ಗುರಿ ವಿಫಲ!

Kolara: ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತಾ ಗುರಿ ವಿಫಲ!

Srinivaspur: ಕೊಲೆ ಪ್ರಕರಣ; ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಎಫ್ಐಆರ್‌!

Srinivaspur: ಕೊಲೆ ಪ್ರಕರಣ; ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಎಫ್ಐಆರ್‌!

MUST WATCH

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

ಹೊಸ ಸೇರ್ಪಡೆ

1-sadas

World Heart Day: ಮಣಿಪಾಲ ಡಿಸಿ ಕಚೇರಿ ನೌಕರರಿಗೆ ಉಚಿತ ಹೃದಯ ತಪಾಸಣಾ ಶಿಬಿರ

accident

Karwar; ಓವರ್ ಟೇಕ್ ವೇಳೆ ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಮೃತ್ಯು

DROUPADI MURMU (2)

Women’s Reservation Bill ; ಒಪ್ಪಿಗೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

1———-wweqw

Delhi: ಏಷ್ಯಾದಲ್ಲೇ ಅತಿದೊಡ್ಡ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಭಾರೀ ಬೆಂಕಿ

Uttar Pradesh: ತಪ್ಪಾದ ಇಂಜೆಕ್ಷನ್‌ ನಿಂದ ಬಾಲಕಿ ಸಾವು; ಶವ ಎಸೆದು ವೈದ್ಯ, ಸಿಬಂದಿ ಪರಾರಿ!

Uttar Pradesh: ತಪ್ಪಾದ ಇಂಜೆಕ್ಷನ್‌ ನಿಂದ ಬಾಲಕಿ ಸಾವು; ಶವ ಎಸೆದು ವೈದ್ಯ, ಸಿಬಂದಿ ಪರಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.