ಸಾಮಾನ್ಯಳಂತೆ ತಾಲೂಕು ಕಚೇರಿಗೆ ಆಗಮಿಸಿದ ಉಪವಿಭಾಗಾಧಿಕಾರಿ!

ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಪರದಾಟ ಖುದ್ದು ವೀಕ್ಷಣೆ ; ಅಧಿಕಾರಿಗಳಿಗೆ ತರಾಟೆ

Team Udayavani, Nov 18, 2022, 6:15 PM IST

1-wwqwqe

ಕೋಲಾರ: ತಾಲೂಕು ಕಚೇರಿಯಲ್ಲಿ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ನಿತ್ಯವೂ ಹೇಗೆಲ್ಲಾ ಅಲೆದಾಡುತ್ತಾರೆ ಎಂಬುದನ್ನು ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಮ್ಮ ಶುಕ್ರವಾರ ಮಧ್ಯಾಹ್ನ ಖುದ್ದು ಅನುಭವಿಸಿದರು.

ನಗರದ ಮೆಕ್ಕೆ ವೃತ್ತದಲ್ಲಿರುವ ತಾಲೂಕು ಕಚೇರಿಗೆ ಶುಕ್ರವಾರ ಮಧ್ಯಾಹ್ನ ೪ ಗಂಟೆ ಸುಮಾರಿಗೆ ತನ್ನ ಕಚೇರಿ ಸಿಬ್ಬಂದಿ ಜೊತೆ ದ್ವಿಚಕ್ರ ವಾಹನದಲ್ಲಿ ಖುದ್ದು ಸಾಮಾನ್ಯಳಂತೆ ಆಗಮಿಸಿದ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಮ್ಮರಿಗೂ ಜನರ ಕಷ್ಟ ಅರಿವಾಯಿತು. ಸಾರ್ವಜನಿಕರು ತಾಲೂಕು ಕಚೇರಿಯಿಂದ ಕೆಲಸ ಕಾರ್ಯ ಮಾಡಿಸಿಕೊಳ್ಳಲು, ಅಗತ್ಯದಾಖಲೆಗಳನ್ನು ಪಡೆದುಕೊಳ್ಳಲು ಹೇಗೆಲ್ಲಾ ಪರದಾಟ ನಡೆಸುತ್ತಾರೆ, ಏನೆಲ್ಲಾ ಪಡಿಪಾಟಲು ಬೀಳಬೇಕಾಗುತ್ತದೆಯೆಂಬುದನ್ನು ಸ್ವತಹ ತಾವೇ ಅನುಭವಿಸಿದರು.

ಸಾಮಾನ್ಯಳಂತೆ ಆಗಮಿಸಿದ ಉಪ ವಿಭಾಗಾಧಿಕಾರಿ ತಮಗೆ ಬೇಕಾದ ಮಾಹಿತಿಯನ್ನು ಕೇಳಿದಾಗ ಕಚೇರಿಯ ಮಹಿಳಾ ಸಿಬ್ಬಂದಿಯೊಬ್ಬರು ಅಲ್ಲೋಗು, ಇಲ್ಲೋಗು ಎಂಬಂತೆ ಉತ್ತರ ನೀಡಿದ್ದು ಉಪ ವಿಭಾಗಾಧಿಕಾರಿಯನ್ನು ಕೆರಳಿಸಿತು. ದಾಖಲೆ ವಿಭಾಗಕ್ಕೆ ತೆರಳಿದ ಉಪ ವಿಭಾಗಾಧಿಕಾರಿಗೆ ಅಲ್ಲಿನ ಸಿಬ್ಬಂದಿಯಿಂದಲೂ ಅದೇ ದಾಟಿಯ ಉತ್ತರ ಸಿದ್ದವಾಗಿತ್ತು. ಒಂದು ದಾಖಲೆಗಾಗಿ ಸಾರ್ವಜನಿಕರು ಏನೆಲ್ಲಾ ಅವ್ಯವಸ್ಥೆ ಬೀಳಬೇಕು ಎಂಬುದು ಖುದ್ದು ಉಪವಿಭಾಗಾಧಿಕಾರಿಯವರ ಅರಿವಿಗೆ ಬಂದಿತು.

ಉಪ ವಿಭಾಗಾಧಿಕಾರಿಯವರನ್ನು ಅಷ್ಟರೊಳಗಾಗಲೇ ಕೆಲವರು ಗುರುತು ಹಚ್ಚಿದ್ದರು. ಕಚೇರಿಯಲ್ಲೇ ಇದ್ದ ತಹಶೀಲ್ದಾರ್ ನಾಗರಾಜ್‌ಗೂ ಮಾಹಿತಿ ಹೋಯಿತು. ಸ್ಥಳಕ್ಕೆ ದೌಡಾಯಿಸಿ ಬಂದ ಅವರನ್ನು ಉಪ ವಿಭಾಗಾಧಿಕಾರಿ ಸಾರ್ವಜನಿಕರ ಸಮ್ಮುಖದಲ್ಲೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಮಹಿಳೆಯೊಬ್ಬರು ಅಗತ್ಯ ಭೂದಾಖಲೆಗಾಗಿ ಹತ್ತಾರು ದಿನಗಳಿಂದ ಓಡಾಡುತ್ತಿದ್ದಾರೆ, ಅವರಿಗೆ ದಾಖಲೆ ಸಿಕ್ಕಿಲ್ಲ. ಆ ಮಹಿಳೆಯ ದೂರಿನ ಆಧಾರದ ಮೇಲೆ ತಾವೇ ಖುದ್ದು ಬಂದಾಗ ತಮಗೂ ಅದೇ ಅನುಭವವಾಯಿತು. ಸಾರ್ವಜನಿಕರನ್ನು ಹೇಗೆಲ್ಲಾ ಅಲೆದಾಡಿಸುತ್ತಾರೆ, ಸಮರ್ಪಕವಾದ ಮಾಹಿತಿ ನೀಡಲು ಕಷ್ಟ, ಕೇಳಿದ ಮಾಹಿತಿಗೂ ಹಾರಿಕೆಯ ಉಢಾಪೆಯ ಉತ್ತರ ನೀಡಿದರೆ ಹೇಗೆಂದು ತರಾಟೆಗೆ ತೆಗೆದುಕೊಂಡರು.

ತಲೆ ತಗ್ಗಿಸಿಕೊಂಡು ನಿಲ್ಲುವ ಮೂಲಕ ತಹಶೀಲ್ದಾರ್ ನಾಗರಾಜ್ ಮತ್ತವರ ಸಿಬ್ಬಂದಿ ಕಚೇರಿಯ ಅವ್ಯವಸ್ಥೆಗಳಿಗೆ ಮೌನ ಸಮ್ಮತಿಯನ್ನೊತ್ತಿದರು. ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ಲೋಪವೆಸಗಿರುವ ಅಧಿಕಾರಿ, ಸಿಬ್ಬಂದಿಗೆ ಶೋಕಾಸ್ ನೋಟೀಸ್ ನೀಡುವುದಾಗಿ ಎಚ್ಚರಿಕೆ ನೀಡಿ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಮ್ಮ ಅಲ್ಲಿಂದ ತೆರಳಿದರು.

ಕೋಲಾರ ತಾಲೂಕು ಕಚೇರಿಯ ಅವ್ಯವಸ್ಥೆಗಳ ಕುರಿತಂತೆ ಅದರಲ್ಲೂ ದಾಖಲೆ ವಿಭಾಗದಲ್ಲಿನ ಅಕ್ರಮಗಳ ಕುರಿತಂತೆ ಸಾರ್ವಜನಿಕರು ಸಾಕಷ್ಟು ಆರೋಪಗಳನ್ನು ಮಾಡುತ್ತಲೇ ಇದ್ದರು. ಆದರೂ, ಕಚೇರಿಯ ಕಾರ್ಯಕಲಾಪಗಳಲ್ಲಿ ಯಾವುದೇ ಜನಸ್ನೇಹಿ ಬದಲಾವಣೆಗಳಾಗಿರಲಿಲ್ಲ. ಇದೀಗ ಉಪ ವಿಭಾಗಾಧಿಕಾರಿ ವೆಂಕಟಕ್ಷ್ಮಮ್ಮನವರೇ ಸಾಮಾನ್ಯರಂತೆ ಬಂದು ಸಾರ್ವಜನಿಕರ ಕಷ್ಟಗಳನ್ನು ಖುದ್ದು ಅನುಭವಿಸಿ, ಸಂಬಂಧಪಟ್ಟವರನ್ನು ತರಾಟೆಗೂ ತೆಗೆದುಕೊಂಡಿದ್ದಾರೆ. ಇನ್ನಾದರೂ ಕೋಲಾರ ತಾಲೂಕು ಕಚೇರಿ ಅವ್ಯವಸ್ಥೆ ಬದಲಾದೀತೇ ಎಂದು ಸಾರ್ವಜನಿಕರು ಆಶಿಸುತ್ತಿದ್ದಾರೆ

ಕೆ.ಎಸ್.ಗಣೇಶ್

ಟಾಪ್ ನ್ಯೂಸ್

ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ

ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ

death

ಜ್ವರದಿಂದ ಎಸೆಸೆಲ್ಸಿ ವಿದ್ಯಾರ್ಥಿ ಸಾವು

ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ.2.2ಕ್ಕಿಳಿಕೆ; ಆರ್‌ಬಿಐ

ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ.2.2ಕ್ಕಿಳಿಕೆ; ಆರ್‌ಬಿಐ

ಮುಸ್ಲಿಮರ ಮೀಸಲು ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಮುಸ್ಲಿಮರ ಮೀಸಲು ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಸೆನ್ಸೆಕ್ಸ್‌ ಏರಿಕೆ: ಹೂಡಿಕೆದಾರರ ಮೊಗದಲ್ಲಿ ನಗು

ಸೆನ್ಸೆಕ್ಸ್‌ ಏರಿಕೆ: ಹೂಡಿಕೆದಾರರ ಮೊಗದಲ್ಲಿ ನಗು

private buas

ಮಂಗಳೂರು ಸ್ಟೇಟ್‌ಬ್ಯಾಂಕ್‌: ಇಂದಿನಿಂದ ಸರ್ವಿಸ್‌ ನಿಲ್ದಾಣದಿಂದಲೇ ಸಿಟಿ ಬಸ್‌ ಸಂಚಾರ

ಹೈಕಮಾಂಡ್‌ ಸೂಚನೆ ಮೀರಿದರೇ ಬಿಎಸ್‌ವೈ?

ಹೈಕಮಾಂಡ್‌ ಸೂಚನೆ ಮೀರಿದರೇ ಬಿಎಸ್‌ವೈ?



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TDY-15

ರಾಹುಲ್‌ ಕೋಲಾರಕ್ಕೆ ಬಂದರೇನು ಬದಲಾವಣೆ ಆಗಲ್ಲ

tdy-20

ಕೋಲಾರ: ಸಿದ್ದು ಸ್ಪರ್ಧೆ ಘೋಷಣೆಗೆ ಏ.5ರ ಗಡುವು

ಏ.5ಕ್ಕೆ ಕೋಲಾರಕ್ಕೆ ರಾಹುಲ್‌ ಗಾಂಧಿ

ಕೋಲಾರಕ್ಕೆ ಏ.5 ರಂದು ರಾಹುಲ್‌, ಕಾಂಗ್ರೆಸ್‌ ಶಕ್ತಿ ಪ್ರದರ್ಶನ

tdy-16

ಸಿದ್ದು ಬೆಂಬಲಿಗರ ಪಾಳೆಯದಲ್ಲಿ ನೀರವ ಮೌನ

tdy-15

ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ಮಾಡೋಣ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ

ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ

death

ಜ್ವರದಿಂದ ಎಸೆಸೆಲ್ಸಿ ವಿದ್ಯಾರ್ಥಿ ಸಾವು

ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ.2.2ಕ್ಕಿಳಿಕೆ; ಆರ್‌ಬಿಐ

ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ.2.2ಕ್ಕಿಳಿಕೆ; ಆರ್‌ಬಿಐ

ಮುಸ್ಲಿಮರ ಮೀಸಲು ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಮುಸ್ಲಿಮರ ಮೀಸಲು ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಸೆನ್ಸೆಕ್ಸ್‌ ಏರಿಕೆ: ಹೂಡಿಕೆದಾರರ ಮೊಗದಲ್ಲಿ ನಗು

ಸೆನ್ಸೆಕ್ಸ್‌ ಏರಿಕೆ: ಹೂಡಿಕೆದಾರರ ಮೊಗದಲ್ಲಿ ನಗು