
ಅಜ್ಮೀರ್ ದರ್ಗಾ: ಗಂಗಾವತಿ ಕಾಂಗ್ರೆಸ್ ಮುಖಂಡರಿಂದ ಹೂ-ಚಾದರ್ ಸಲ್ಲಿಕೆ
Team Udayavani, Feb 3, 2023, 5:45 PM IST

ಗಂಗಾವತಿ: ಅಜ್ಮೀರ್ ಇತಿಹಾಸ ಪ್ರಸಿದ್ಧ ಹಜರತ್ ಖ್ವಾಜಾ ಮೋಹಿನುದ್ದೀನ್ ಚಿಸ್ತಿ ರವರ ದರ್ಗಾದಲ್ಲಿ 811ನೇ ಉರುಸ್ ನಿಮಿತ್ಯ ನಗರದ ಕಾಂಗ್ರೆಸ್ ಅಲ್ಪಸಂಖ್ಯಾತರ ರಾಜ್ಯ ಮುಖಂಡ ಶೇಖ್ ಇಲಿಯಾಸ್ ಬಾಬಾ ನೇತೃತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ದರ್ಗಾಕ್ಕೆ ಹೂ-ಚಾದರ್ ಸಮರ್ಪಿಸಲಾಯಿತು.
ದೇಶದೆಲ್ಲೆಡೆ ಜನತೆ ಸುಖ, ಶಾಂತಿ, ನೆಮ್ಮದಿಯಿಂದ ಬದುಕಬೇಕು. ಎಲ್ಲರಲ್ಲೂ ಸಹೋದರತ್ವ ಬಾಂಧವ್ಯ ಬೆಸೆಯಬೇಕು. ರೈತರಿಗೆ ಉತ್ತಮ ಮಳೆ, ಬೆಳೆ ಉತ್ತಮವಾಗಿ, ಸೌಹಾರ್ದತೆ ಎಲ್ಲರ ಬಾಳಿನಲ್ಲಿ ಸಮೃದ್ಧಿಯಾಗಬೇಕೆಂದು ಪ್ರಾರ್ಥಿಸಲಾಯಿತು.
ಖ್ವಾಜಾಸಾಹೇಬ್ ದರ್ಗಾ ಅವರ ಸುಪುತ್ರರಾದ ಅಲಿಬಾಬಾ, ವಲಿಬಾಬಾ, ಹಖ್‌ಬಾಬಾ, ಹಿರಿಯ ಪತ್ರಕರ್ತ ಎಸ್.ಎಂ. ಪಟೇಲ್, ಕಾಂಗ್ರೆಸ್ ಮುಖಂಡ ಶೇಖ್ ಇಲಿಯಾಸ್ ಬಾಬಾ, ರಾಯಚೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಅಹೆಮದ್ ಬಾಬಾ ಹಟ್ಟಿ, ನಿಸಾರ ಅಹಮದ್, ಶಹಬಾದ್, ಹುಸೇನಸಾಬ್ ಗುಲಬುರ್ಗಾ, ಮನ್ನನ್, ಜುಬೇರ್, ಜಾಕೀರ್ ಹುಸೇನ್, ಚಾಂದ್‌ಪಾಷ ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆನೆ ಹೊತ್ತ ಹೆಚ್.ಆರ್.ಚನ್ನಕೇಶವ ; ಗಂಗಾವತಿಯಿಂದ ಕಣಕ್ಕೆ

ಕುಷ್ಟಗಿ: ಅಪಾಯದ ವಿದ್ಯುದ್ದಿಪದ ಕಂಬ ತೆರವುಗೊಳಿಸಿದ ಪುರಸಭೆ

ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಪಾಯವನ್ನು ಆಹ್ವಾನಿಸುತ್ತಿದೆ ವಿದ್ಯುತ್ ಕಂಬ

ಅಂಜನಾದ್ರಿ ಬೆಟ್ಟ ಹತ್ತುವ ವೇಳೆ ಹೃದಯಾಘಾತ: ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತ್ಯು

ಎರಡನೇ ಪಟ್ಟಿಯಲ್ಲಿ ಹೆಸರು ಖಂಡಿತ: ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಚಿವ ಅನ್ಸಾರಿ ಆಡಿಯೋ ವೈರಲ್