ರಾಜ್ಯಪಾಲ ಗೆಹ್ಲೋಟ್ ಅಂಜನಾದ್ರಿ ಭೇಟಿ; ಪೂಜೆ ನೆರವೇರಿಸುವ ಕುರಿತು ಅರ್ಚಕ-ಅಧಿಕಾರಿಗಳ ಮಧ್ಯೆ ವಾಗ್ವಾದ
Team Udayavani, Dec 9, 2022, 11:59 AM IST
ಗಂಗಾವತಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿಗೆ ಭೇಟಿ ನೀಡಿ ಶ್ರೀ ಆಂಜನೇಯಸ್ವಾಮಿ ದರ್ಶನ ಪಡೆದರು. ರಾಜ್ಯಪಾಲರು ಆಗಮಿಸುವ ಅರ್ಧ ಗಂಟೆಗೂ ಮುಂಚೆ ಪೂಜೆ ನೆರವೇರಿಸುವ ಕುರಿತು ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಮತ್ತು ಅಧಿಕಾರಿಗಳ ಮಧ್ಯೆ ಕೆಲಹೊತ್ತು ವಾಗ್ದಾದ ನಡೆದು ಬಾಬಾ ಅವರನ್ನು ಪೊಲೀಸರು ಎತ್ತಿಕೊಂಡು ಹೋಗಿ ಹೊರಗೆ ಕಳಿಸಿದ ಘಟನೆ ನಡೆಯಿತು.
ರಾಜ್ಯಪಾಲ ಗೆಹ್ಲೋಟ್ ಅವರು ಅಂಜನಾದ್ರಿಯ ಬೆಟ್ಟದ ಕೆಳಗಿನ ಬಲಭಾಗದಲ್ಲಿರುವ ಪಾದಗಟ್ಟೆ ಶ್ರೀ ಆಂಜನೇಯಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸುವ ವ್ಯವಸ್ಥೆ ಮಾಡಲಾಗಿತ್ತು. ದೇಗುಲದ ಕಮಿಟಿ ಕೆಳಗೆ ಪೂಜೆ ನೆರವೇರಿಸಲು ಅನ್ಯ ಪುರೋಹಿತರನ್ನು ನಿಯೋಜನೆ ಮಾಡಿದ್ದನ್ನು ವಿರೋಧಿಸಿ ತಾವು ಅಂಜನಾದ್ರಿಯ ಅರ್ಚಕರಾಗಿ ಎರಡು ದಶಕಗಳಿಂದ ಪೂಜೆ ಮಾಡುತ್ತಿದ್ದು, ಧಾರವಾಡ ಹೈಕೋರ್ಟ್ ಪೂಜೆ ಮಾಡಲು ಅವಕಾಶ ಕಲ್ಪಿಸುವ ಅವಕಾಶ ನೀಡಿದೆ. ಅಧಿಕಾರಿಗಳು ಹೈಕೋರ್ಟ್ ಆದೇಶ ಉಲ್ಲಂಘಿಸಿ ಅನ್ಯರನ್ನು ರಾಜ್ಯಪಾಲರು ಆಗಮಿಸುವ ಸಂದರ್ಭ ಪೂಜೆ ಮಾಡಲು ನಿಯೋಜನೆ ಮಾಡಲಾಗಿದೆ. ಈ ಕಾರಣ ಅರ್ಚಕ ತಾವೇ ಪೂಜೆ ಮಾಡುವುದಾಗಿ ಹಠ ಹಿಡಿದ ಸಂದರ್ಭದಲ್ಲಿ ಎಸಿ ಹಾಗೂ ದೇಗುಲ ಕಮಿಟಿ ಆಡಳಿತಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಹಾಗೂ ಸಿಪಿಐ ಮಂಜುನಾಥ ಮಧ್ಯೆ ಪ್ರವೇಶ ಮಾಡಿದಾಗ ಅರ್ಚಕ ಬಾಬಾ ಹಾಗೂ ಅಧಿಕಾರಿಗಳ ಮಧ್ಯೆ ವಾಗ್ದಾದ ನಡೆಯಿತು.
ಪೊಲೀಸರು ವಿದ್ಯಾದಾಸ ಬಾಬಾ ಅವರನ್ನು ಎತ್ತಿಕೊಂಡು ಹೋಗಿ ಬೇರೆ ಸ್ಥಳಕ್ಕೆ ಕಳುಹಿಸಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ
ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್ ಜೋಷಿ ಸಂವಾ
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಹೊಸ ಸೇರ್ಪಡೆ
ಫೆ.11, 12: ನಮ್ಮ ಸಂತೆಯಲ್ಲಿ ನಿಮ್ಮ ಮಳಿಗೆಯೂ ಇರಲಿ
ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR
ಚೀನಾದ ಗೂಢಚಾರಿಕೆ ಬಲೂನ್ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ
“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು
ಇನ್ನೂ ಜನಿಸದ ಕಂದಮ್ಮನಿಗಾಗಿ ಮಿಡಿದ ಸುಪ್ರೀಂಕೋರ್ಟ್!