
ಯಮನ ವೇಷ ಧರಿಸಿ ಜಾಗೃತಿ ಮೂಡಿಸಿದ ಪೊಲೀಸರು
Team Udayavani, Apr 22, 2020, 6:40 PM IST

ತಾವರಗೇರಾ: ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿ ಮಂಗಳವಾರ ಯಮ ಮತ್ತು ಯಮಧೂತರ ವೇಷ ಧರಿಸಿ ಕೋವಿಡ್ 19 ವೈರಸ್ ಜಾಗೃತಿ ಮೂಡಿಸಿದರು.
ಬೆಳಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಯಮನ ವೇಷ ಧರಿಸಿದ್ದ ಪೊಲೀಸ್ ಸಿಬ್ಬಂದಿ ಲಾಕ್ ಡೌನ್ ಇದ್ದರೂ ಹೊರಗೆ ಬಂದ ವಾಹನ ಸವಾರರ ಸುತ್ತುವರಿದು ಮನೆಯಿಂದ ಹೊರ ಬರದಂತೆ ಎಚ್ಚರಿಸಿದರು. ರಸ್ತೆಯಲ್ಲಿ ಕಂಡುಬಂದವರಿಗೆ ಮುತ್ತಿಗೆ ಹಾಕಿ ಕೊರೊನಾ ವೈರಸ್ ಹೋಗಲಾಡಿಸಲು ಸಹಕರಿಸಿ ಎಂದು ತಿಳಿಸಿದರು.
ಜಾಗೃತಿ ಜಾಥಾ ಹಳೆ ಬಸ್ ನಿಲ್ದಾಣ, ಶ್ಯಾಮೀದ್ ಅಲಿ ಸರ್ಕಲ್, ಪಪಂ, ಕುಂಬಾರ ಓಣಿ ಮೂಲಕ ಸಿಂಧನೂರ ಸರ್ಕಲ್ ತಲುಪಿತು. ಪಿಎಸ್‌ಐ ಗೀತಾಂಜಲಿ ಶಿಂಧೆ ನೇತೃತ್ವದಲ್ಲಿ ಜಾಗೃತಿ ಜಾಥಾ ನಡೆಯಿತು. ಸಿಬ್ಬಂದಿಗಳಾದ ಎಎಸ್‌ಐ ಮಲ್ಲಪ್ಪ ಯಮನ ವೇಷ ಧರಿಸಿದ್ದರು. ನಾಲ್ವರು ಪೇದೆಗಳಾದ ಚಂದ್ರು, ವಿರೂಪಾಕ್ಷಿ, ಬಸವರಾಜ, ಶಿವಪುತ್ರಪ್ಪ, ಯಮಧೂತರ ವೇಷ ಧರಿಸಿದ್ದರು. ಒಬ್ಬರು ಶೂರಪನಕಿ ವೇಷದಲ್ಲಿ ಇದ್ದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಕಾವೇರಿ ಶ್ಯಾವಿ, ಪಪಂ ಮುಖ್ಯಾಧಿಕಾರಿ ಶಂಕರ ಕಾಳೆ ಮತ್ತು ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kushtagi: ತೆಂಗಿನ ಸಸಿಗಳ ನಡುವೆ ಗಾಂಜಾ ಬೆಳೆದವನ ಬಂಧನ

Kota Srinivas Poojary: ರಾಜಕಾರಣದಲ್ಲಿ ಕೆಲವೊಮ್ಮೆ ಹೊಂದಾಣಿಕೆ ಅನಿವಾರ್ಯ: ಕೋಟ

Hit and Run: ಗಂಗಾವತಿಯ ಹೊಟೇಲ್ ಕಾರ್ಮಿಕ ಬೆಂಗಳೂರಿನಲ್ಲಿ ಸಾವು

Gangavati: ಗಣೇಶ ವಿಸರ್ಜನೆಗೆ ಅಕ್ರಮವಾಗಿ ಡಿಜೆ ಬಳಕೆ… ಪೋಲಿಸರಿಂದ ಸೀಜ್

Kishkinda ಅಂಜನಾದ್ರಿ ಹುಂಡಿಯಲ್ಲಿ 43 ದಿನದಲ್ಲಿ 31.77 ಲಕ್ಷ ರೂ.ಸಂಗ್ರಹ