ಕುಷ್ಟಗಿ: ಕುಕ್ಕರ್ ಸ್ಪೋಟಗೊಂಡು ಮಹಿಳೆಗೆ ಗಾಯ
Team Udayavani, Jan 30, 2023, 1:43 PM IST
ಕುಷ್ಟಗಿ: ಕುಕ್ಕರ್ ಸ್ಪೋಟಗೊಂಡು ಮಹಿಳೆ ಗಾಯಗೊಂಡ ಘಟನೆ ಜ. 30ರ ಸೋಮವಾರ ಬೆಳಿಗ್ಗೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ 13ನೇ ವಾರ್ಡ್ನ ನಿವಾಸಿ ಮುನ್ನಿ ನಿಜಾಮ್ ಕಪಾಲಿ ಗಾಯಗೊಂಡ ಮಹಿಳೆ.
ಮುನ್ನಿ ನಿಜಾಮ್ ಕಪಾಲಿ ಎಂಬವರು ಎಂದಿನಂತೆ ಮನೆಯಲ್ಲಿ ಅಡುಗೆ ಮಾಡುವ ಸಂದರ್ಭ ಕುಕ್ಕರ್ ಸ್ಪೋಟ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಕುಕ್ಕರ್ ಮುಚ್ಚಳ ಮೇಲಕ್ಕೆ ಹಾರಿ ಅಡುಗೆ ನಿರತ ಮಹಿಳೆಯ ಮುಖಕ್ಕೆ ಅಪ್ಪಳಿಸಿದ ಪರಿಣಾಮ ಮುಖಕ್ಕೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಭಾಗಲಕೋಟೆ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿದೆ.
ಕೆಲ ದಿನಗಳ ಹಿಂದೆ 22 ನೇ ವಾರ್ಡಿನಲ್ಲಿ ಇದೇ ರೀತಿಯ ಪ್ರಕರಣ ನಡೆದಿತ್ತು. ಈ ಘಟನೆಯಲ್ಲಿ ಅಕ್ಕಮಹಾದೇವಿ ವಿಶ್ವನಾಥ ಹಿರೇಮಠ ಎಂಬವರು ಗಾಯಗೊಂಡಿದ್ದು, ಅವರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂತಹ ಪ್ರಕರಣ ಪದೇ ಪದೇ ನಡೆಯುತ್ತಿದ್ದು, ಕುಕ್ಕರ್ ನಲ್ಲಿ ಅಡುಗೆ ಮಾಡುವ ಮಹಿಳೆಯರು ಎಚ್ಚರ ವಹಿಸುವುದು ಅಗತ್ಯವಾಗಿದೆ ಎಂದು ಶಾಂತರಾಜ್ ಗೋಗಿ, ಅಮರೇಶ ಮುದೇನೂರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ