Udayavni Special

ಎರಡು ಶಾಲೆ ಅಭಿವೃದ್ಧಿಗೆ 60 ಲಕ್ಷ ರೂ.

| ನಿಜಾಮರ ಕಾಲದ ಶಾಲೆ ದತ್ತು ಪಡೆದ ಶಾಸಕ | ಆನೆಗೊಂದಿ ಪ್ರೌಢಶಾಲೆಗೆ ವಿಶೇಷ ಅನುದಾನ

Team Udayavani, Dec 22, 2020, 6:58 PM IST

ಎರಡು ಶಾಲೆ ಅಭಿವೃದ್ಧಿಗೆ 60 ಲಕ್ಷ ರೂ.

ಗಂಗಾವತಿ: ಮನುಷ್ಯನ ಮೌಡ್ಯ ಕಳೆದು ಹೊಸ ಜೀವನಕ್ಕಾಗಿ ಶಿಕ್ಷಣ ಅಗತ್ಯವಾಗಿದೆ. ವಿಧಾನಸಭೆ ಕ್ಷೇತ್ರವಾರು ಎರಡು ಅಥವಾ ಮೂರು ಶಾಲೆಗಳನ್ನು ಶಾಸಕರು ದತ್ತು ಪಡೆದು ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವ ದತ್ತು ಸ್ವೀಕಾರ ಯೋಜನೆ ಅತ್ಯುತ್ತಮವಾಗಿದೆ.

ಈ ಯೋಜನೆಯಡಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಗಂಗಾವತಿಯ ಸರಕಾರಿ ಮಾದರಿಯಹಿರಿಯ ಪ್ರಾಥಮಿಕ(ಪ್ರಾಪರ್‌) ಶಾಲೆಹಾಗೂ ಇತಿಹಾಸ ಪ್ರಸಿದ್ಧ ಆನೆಗೊಂದಿಯಸರಕಾರಿ ಪ್ರೌಢಶಾಲೆ ದತ್ತು ಪಡೆದಿದ್ದಾರೆ.  ಈ ಎರಡು ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಕಲ್ಪಿಸುವ ಜತೆಗೆ ಶೈಕ್ಷಣಿಕ ಪ್ರಗತಿಗಾಗಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ನಿರ್ಧರಿಸಿದ್ದಾರೆ.

ಗಂಗಾವತಿ ನಗರದ ಮಧ್ಯೆ ಭಾಗದಲ್ಲಿರುವ ಪ್ರಾಪರ್‌ ಶಾಲೆ 1906ರಲ್ಲಿ ನಿರ್ಮಿಸಲಾಗಿದ್ದು, ಕೊಪ್ಪಳ ಜಿಲ್ಲೆಯಲ್ಲೇಪುರಾತನ ಶಾಲೆಯಾಗಿದೆ. ಈ ಶಾಲೆಯಲ್ಲಿಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಮಾಡಿ ದೇಶ, ವಿದೇಶಗಳಲ್ಲಿ ಉನ್ನತಹುದ್ದೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2006ರಲ್ಲಿ ಈ ಶಾಲೆಶತಮಾನೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹಳೆಯ ಕಟ್ಟಡ ತೆರವುಗೊಳಿಸಿ ನೂತನ ಕೊಠಡಿಗಳು ಮತ್ತು ರಂಗವೇದಿಕೆ ನಿರ್ಮಿಸಲಾಗಿದೆ. ದಾನಿಗಳ ನೆರವಿನಿಂದ ಸಣ್ಣಪುಟ್ಟ ಸಾಮಗ್ರಿ ಖರೀದಿ ಮಾಡಲಾಗಿದೆ.ಪ್ರಾಪರ್‌ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ, ಶಾಲೆಯಲ್ಲಿ 2500ಕ್ಕೂಹೆಚ್ಚು ಪುಸ್ತಕಗಳಿದ್ದು, ಗ್ರಂಥಾಲಯಕ್ಕೆ ಪ್ರತೇಕ ಕೋಣೆ ಅಗತ್ಯವಿದೆ. ಶೌಚಾಲಯ ಕಟ್ಟಡ ಶಿಥಿಲಗೊಂಡಿದೆ. ಬಿಸಿಯೂಟ ಕೋಣೆ ಸರಿಯಿಲ್ಲ. ಶಾಲೆ ನಗರದ ಮಧ್ಯೆಇರುವುದರಿಂದ ಜನರು ಶಾಲೆಯಆವರಣದಲ್ಲಿ ಹೊಲಸು ಮಾಡುತ್ತಿದ್ದಾರೆ.ಗೇಟ್‌, ಕಾಂಪೌಂಡ್‌ ನಿರ್ಮಾಣ, ಕಾವಲುಗಾರನ ನೇಮಕ ಅಗತ್ಯವಾಗಿದೆ. ಸದ್ಯ 206 ವಿದ್ಯಾರ್ಥಿಗಳಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡಲು ಕ್ರಮ ವಹಿಸಬೇಕಿದೆ.

ಆನೆಗೊಂದಿ ಸರಕಾರಿ ಪ್ರೌಢಶಾಲೆ: 1984ರಲ್ಲಿ ತಾಲೂಕಿನ ಆನೆಗೊಂದಿಯಲ್ಲಿ ಸರಕಾರಿ ಪ್ರೌಢಶಾಲೆ ಆರಂಭ ಮಾಡಿದ್ದು, ಸಂಗಾಪೂರದಿಂದ ಹಿಟ್ನಾಳ ಭಾಗದ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದಿದ್ದಾರೆ. ಈ ಶಾಲೆಯಲ್ಲೂ ಮೂಲ ಸೌಕರ್ಯದ ಕೊರತೆ ಇದೆ. ಪ್ರತೇಕ ಗ್ರಂಥಾಲಯ, ಊಟದ ಹಾಲ್‌, ಕ್ರೀಡಾಂಗಣ ಅಭಿವೃದ್ಧಿ, ಬಿಸಿಯೂಟದ ಕೋಣೆಯ ನಿರ್ಮಾಣದ ಅಗತ್ಯವಿದೆ.

ಕ್ಷೇತ್ರದ ಎಲ್ಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿಮೂಲ ಸೌಕರ್ಯದ ಅಗತ್ಯವಿದೆ. ಸದ್ಯ ಪ್ರಾಪರ್‌ ಶಾಲೆ ಮತ್ತುಆನೆಗೊಂದಿ ಸರಕಾರಿ ಪ್ರೌಢಶಾಲೆ ದತ್ತು ಸ್ವೀಕಾರಕ್ಕೆ ಆಯ್ಕೆ ಮಾಡಲಾಗಿದೆ. ಪ್ರಾಪರ್‌ ಶಾಲೆ 114 ವರ್ಷಗಳ ಇತಿಹಾಸ ಹೊಂದಿದೆ.ಶಾಲೆಗೆ ಭೇಟಿ ನೀಡಿ ಅಗತ್ಯ ಸೌಕರ್ಯಗಳ ಕುರಿತು ಮುಖ್ಯಗುರುಗಳು ಮತ್ತು ವಿದ್ಯಾರ್ಥಿ ಪಾಲಕರ ಜತೆ ಚರ್ಚೆ ನಡೆಸಲಾಗಿದೆ. ಮೂರು ವರ್ಷಗಳಲ್ಲಿ ಎರಡು ಶಾಲೆಗಳಿಗೆ ಪ್ರತಿವರ್ಷ 10 ಲಕ್ಷದಂತೆ 60 ಲಕ್ಷ ರೂ. ವೆಚ್ಚದಲ್ಲಿಯೋಜನೆ ರೂಪಿಸಿ ಗ್ರಂಥಾಲಯ, ಡೈನಿಂಗ್‌ ಹಾಲ್‌, ಶೌಚಾಲಯ, ಶುದ್ಧ ಕುಡಿಯುವನೀರಿನ ಘಟಕ, ಕಾಂಪೌಂಡ್‌ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತದೆ. ಇಡೀ ಕ್ಷೇತ್ರದಲ್ಲಿರುವ ಸರಕಾರಿ ಶಾಲೆಗಳಿಗೂ ಅನುದಾನ ಮಂಜೂರಿ ಮಾಡಲಾಗುತ್ತದೆ. ಗಂಗಾವತಿ ತಾಲೂಕಿನಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ಆದರ್ಶ ಶಾಲೆಗಳಿಲ್ಲ. ಈ ಶಾಲೆಗಳನ್ನು ಮಂಜೂರಿ ಮಾಡುವಂತೆ ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ.-ಪರಣ್ಣ ಮುನವಳ್ಳಿ, ಗಂಗಾವತಿ ಶಾಸಕರು

ಪ್ರಾಪರ್‌ ಶಾಲೆ ದತ್ತು ಯೋಜನೆಯಲ್ಲಿ ಆಯ್ಕೆಯಾಗಿರುವುದಕ್ಕೆ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ವಿದ್ಯಾರ್ಥಿ, ಪಾಲಕರು ಸೇರಿ ಶಿಕ್ಷಕ ವೃಂದದ ಪರವಾಗಿ ಅಭಿನಂದನೆಗಳು. ಶಾಲೆಗೆ ಈಗಾಗಲೇ ಭೇಟಿ ನೀಡಿ ಅಗತ್ಯವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ, ಗ್ರಂಥಾಲಯ ಕೋಣೆ, ಶೌಚಾಲಯ ಬಿಸಿಯೂಟದ ಕೋಣೆ, ಕಟ್ಟಡ ಪುನರ್‌ ನಿರ್ಮಾಣಕ್ಕೆ ಈಗಾಗಲೇ ಬಿಇಒ ಮೂಲಕ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.  -ಜಯಲಕ್ಷ್ಮೀ ಮುಖ್ಯ ಶಿಕ್ಷಕಿ, ಪ್ರಾಪರ್‌ ಶಾಲೆ

 

­ಕೆ. ನಿಂಗಜ್ಜ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎಂಬುಲ್ದೇನಿಯ-ರೂಟ್‌ ಗ್ರೇಟ್‌ ಫೈಟ್‌

ಎಂಬುಲ್ದೇನಿಯ-ರೂಟ್‌ ಗ್ರೇಟ್‌ ಫೈಟ್‌

ಮಂಗಳೂರು ಪ್ಲಾಸ್ಟಿಕ್‌ ಪಾರ್ಕ್‌ಗೆ ಕೇಂದ್ರದಿಂದ 40 ಕೋ.ರೂ. : ಡಿವಿಎಸ್‌

ಮಂಗಳೂರು ಪ್ಲಾಸ್ಟಿಕ್‌ ಪಾರ್ಕ್‌ಗೆ ಕೇಂದ್ರದಿಂದ 40 ಕೋ.ರೂ. : ಡಿವಿಎಸ್‌

Untitled-1

ನಮ್ಮ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಓದಬೇಕು : ಬಿ.ಸಿ.ಪಾಟೀಲ್

ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು

ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು

Untitled-1

ಭಾರೀ ಚರ್ಚೆಗೆ ಗ್ರಾಸವಾದ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರ ಮೈತ್ರಿ ಧರ್ಮಪಾಲನೆ ಆಣೆ ಪ್ರಮಾಣ

Downloadable e-version of voter id card to be launched on Monday

ಮತದಾರರ ಕೈ ಸೇರಲಿದೆ ಡಿಜಿಟಲ್ ಓಟರ್ ಕಾರ್ಡ್

mapple

ಐಪೋನ್-12 ಸೇರಿದಂತೆ ಹಲವು ಸ್ಮಾರ್ಟ್ ಪೋನ್ ಗಳಿಗೆ ಭರ್ಜರಿ ಡಿಸ್ಕೌಂಟ್: ಇಲ್ಲಿದೆ ಮಾಹಿತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯಸ್ವಾಮಿ ದರ್ಶನ ಪಡೆದ ಶಾಸಕ ಯತ್ನಾಳ್

ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯಸ್ವಾಮಿ ದರ್ಶನ ಪಡೆದ ಶಾಸಕ ಯತ್ನಾಳ್

Sports are helpful for physical and mental fitness

ದೈಹಿಕ-ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ

ಅಕ್ರಮ ಗಣಿಗಾರಿಕೆ ಆರಂಭವಾಗಿದ್ದೇ ಸಿದ್ದರಾಮಯ್ಯ ಕಾಲದಲ್ಲಿ : ಕಟೀಲ್

ಅಕ್ರಮ ಗಣಿಗಾರಿಕೆ ಆರಂಭವಾಗಿದ್ದೇ ಸಿದ್ದರಾಮಯ್ಯ ಕಾಲದಲ್ಲಿ : ಕಟೀಲ್

Hanumazagara: Awareness rally

ಹನುಮಸಾಗರ: ಜಾಗೃತಿ ಜಾಥಾ

The safetic tank is full

ತುಂಬಿ ಹರಿಯುತ್ತಿದೆ ಸೇಫ್ಟಿಕ್‌ ಟ್ಯಾಂಕ್‌

MUST WATCH

udayavani youtube

ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

ಹೊಸ ಸೇರ್ಪಡೆ

ಕತ್ತಲ ಸಂಚಾರ ಪ್ರಾಣಕ್ಕೆ ಸಂಚಕಾರ

ಕತ್ತಲ ಸಂಚಾರ ಪ್ರಾಣಕ್ಕೆ ಸಂಚಕಾರ

ಕೃಷ್ಣಾಪುರ: ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಕೆ

ಕೃಷ್ಣಾಪುರ: ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಕೆ

Untitled-1

ನೂತನ ಕಟ್ಟಡ ಉದ್ಘಾಟನೆಗೆ ಸಿದ್ಧ

ಸ್ತ್ರೀ ಕಥನ ಕೌಶಲಕ್ಕೆ ಬಹುಮಾದರಿಗಳು

ಸ್ತ್ರೀ ಕಥನ ಕೌಶಲಕ್ಕೆ ಬಹುಮಾದರಿಗಳು

ಥಳಿತ: ಮೃತ ವ್ಯಕ್ತಿಯ ವಿರುದ್ಧವೇ ಕೇಸು ದಾಖಲು!

ಥಳಿತ: ಮೃತ ವ್ಯಕ್ತಿಯ ವಿರುದ್ಧವೇ ಕೇಸು ದಾಖಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.