ಕೊಂಚ ಸಮಾಧಾನ ಮೂಡಿಸಿದ ಹಿಂಗಾರು


Team Udayavani, Apr 12, 2021, 4:01 PM IST

ಕೊಂಚ ಸಮಾಧಾನ ಮೂಡಿಸಿದ ಹಿಂಗಾರು

ಯಲಬುರ್ಗಾ: ತಾಲೂಕಿನಲ್ಲಿ ಕಳೆದ ನಾಲ್ಕೈದು ವರ್ಷಗಳ ಬೇಸಿಗೆಗೆ ಹೋಲಿಕೆ ಮಾಡಿದರೆ ಪ್ರಸಕ್ತವರ್ಷದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದು ತೀವ್ರತೆ ಪಡೆದಿಲ್ಲ. ಆದರೆ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವವಾಗುತ್ತಿದೆ.

ತಾಲೂಕಿನ 91 ಗ್ರಾಮಗಳ ಪೈಕಿ ಎರಡು ಗ್ರಾಮಗಳಲ್ಲಿನೀರಿನ ಸಮಸ್ಯೆ ವಿಪರೀತವಾಗಿದೆ. ಲಿಂಗನಬಂಡಿ, ಹುಣಸಿಹಾಳ ತಾಂಡಾ ಖಾಯಂ ನೀರಿನ ಸಮಸ್ಯೆ ಎದುರಿಸುತ್ತಿವೆ. ಕಳೆದ ವರ್ಷದಿಂದ ಈ ಗ್ರಾಮಗಳಿಗೆ ಖಾಸಗಿ ಬೋರ್‌ ವೆಲ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಶಾಶ್ವತಪರಿಹಾರ ಈ ಗ್ರಾಮಗಳಿಗೆ ಸಿಕ್ಕಿಲ್ಲ.

ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಈ ಬಾರಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಕೆರೆಯಲ್ಲಿನೀರು ಇಲ್ಲದಂತಾಗಿದೆ. ಜನತೆ ತೊಂಡಿಹಾಳ ಹಾಗೂಹೊಲಗಳಲ್ಲಿರುವ ಕೃಷಿ ಹೊಂಡಗಳಿಗೆ ತೆರಳಿ ನೀರುತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಬರುವದಿನಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗುವಒಂಭತ್ತು ಗ್ರಾಮಗಳನ್ನು ತಾಲೂಕಾಡಳಿತ ಪಟ್ಟಿ ಮಾಡಿಕೊಂಡಿದೆ.

ಕುಡಿವ ನೀರು ಶುದ್ಧೀಕರಣ ಘಟಕ ಸ್ಥಗಿತ: ತಾಲೂಕಿನಲ್ಲಿ94 ಶುದ್ಧ ಕುಡಿವ ನೀರಿನ ಘಟಕಗಳಿವೆ. ಇವುಗಳಲ್ಲಿ 84ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 14 ಘಟಕಗಳುಕೆಟ್ಟು ನಿಂತಿವೆ. ಕೆಲ ಗ್ರಾಮಗಳಲ್ಲಿನ ಘಟಕಗಳಲ್ಲಿ ನೀರುಸರಿಯಾಗಿ ಶುದ್ಧೀಕರಣವಾಗದೇ ಇರುವುದರಿಂದಜನತೆ ಉಪಯೋಗಿಸುತ್ತಿಲ್ಲ. ತಾಲೂಕಿನ ಗುತ್ತೂರು,ತುಮ್ಮರಗುದ್ದಿ, ಮರಕಟ್‌, ಸಂಗನಾಳ, ಬೀರಲದಿನ್ನಿ,ಹುಣಸಿಹಾಳ ತಾಂಡಾ, ಜಿ. ವೀರಾಪುರ, ತಲ್ಲೂರು,ತಿಪ್ಪನಾಳ, ಗಾಣಧಾಳ, ಚಿಕ್ಕಮ್ಯಾಗೇರಿ ತಾಂಡಾ,ಬೂನಕೊಪ್ಪ, ಬಳೂಟಗಿ ಗ್ರಾಮಗಳಲ್ಲಿನ ಶುದ್ಧಕುಡಿವ ನೀರಿನ ಘಟಕಗಳು ಕೆಟ್ಟು ನಿಂತಿದ್ದು, ಇದ್ದು ಇಲ್ಲದಂತಾಗಿವೆ.

ಅಂರ್ತಜಲ ಹೆಚ್ಚಳಕ್ಕೆ ಕ್ರಮ: ವಿಶೇಷವಾಗಿ 2019ರಲ್ಲಿ ಜಲಶಕ್ತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನಾದ್ಯಂತ ಜಲ ಜಾಗೃತಿ ಮೂಡಿಸುವಕಾರ್ಯದ ಜತೆಗೆ ಅಂತರ್ಜಲಮಟ್ಟ ಹೆಚ್ಚಳಕ್ಕೆಪೂರಕವಾದ ಜಲಶಕ್ತಿ, ಜಲಾಮೃತ, ನರೇಗಾಯೋಜನೆಯಡಿ ಬೋರ್‌ವೆಲ್‌ ರಿಚಾರ್ಜ್‌ ಫಿಟ್‌,ನಾಲಾ ಸುಧಾರಣೆ, ಕೆರೆ ಹೂಳೆತ್ತುವುದು, ಬದುಕೃಷಿಹೊಂಡ ನಿರ್ಮಾಣವಾಗಿ, ಸರ್ಮಪಕ ಮಳೆ ಸುರಿದ ಪರಿಣಾಮ ಅಂರ್ತಜಲಮಟ್ಟ ಸುಧಾರಣೆಗೊಂಡಿದೆ.

2018-19ರಲ್ಲಿ 30ಕ್ಕೂ ಅಧಿಕ ಗ್ರಾಮಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದವು. ಪ್ರಸಕ್ತ ವರ್ಷದಲ್ಲಿ ಕುಡಿವನೀರಿನ ಸಮಸ್ಯೆ ಕಡಿಮೆಯಾಗಿದೆ. ಪ್ರತಿವರ್ಷ ಮಾರ್ಚ್‌,ಏಪ್ರಿಲ್‌ ತಿಂಗಳೊಳಗೆ ಗ್ರಾಪಂ, ತಾಪಂ ಕಚೇರಿಗಳಮುಂದೆ ಜನತೆ ಕುಡಿವ ನೀರಿಗಾಗಿ ಪ್ರತಿಭಟನೆನಡೆಸುತ್ತಿದ್ದ ಪ್ರಕರಣಗಳು ಕಂಡು ಬರುತ್ತಿದ್ದವು. ಆದರೆ ಇದೀಗ ಪ್ರತಿಭಟನೆ ಕಡಿಮೆಯಾಗಿವೆ.

4 ಬೋರ್‌ವೆಲ್‌ ಸ್ಥಗಿತ: ಸ್ಥಳೀಯ ಯಲಬುರ್ಗಾಪಟ್ಟಣದಲ್ಲಿ ಒಟ್ಟು 38 ಬೋರ್‌ವೆಲ್‌ಗ‌ಳಿದ್ದು 4 ಕಾರ್ಯನಿರ್ವಸುತ್ತಿಲ್ಲ. ಅವುಗಳನ್ನು ದುರಸ್ತಿಗೊಳಿಸಬೇಕಿದೆ.ಹಿರೇಹಳ್ಳ ಡ್ಯಾಂನಿಂದ ಪಟ್ಟಣ ಹಾಗೂ ಕೆಲ ಗ್ರಾಮಗಳಿಗೆನೀರು ಪೂರೈಕೆಯಾಗುತ್ತಿದೆ. ಪಪಂ ಸಿಬ್ಬಂದಿ ಸರಿಯಾಗಿಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬುದು ಪಟ್ಟಣ ನಿವಾಸಿಗಳ ಆರೋಪವಾಗಿದೆ.

ಜಾನುವಾರು ಸ್ಥಿತಿಗತಿ: ತಾಲೂಕಿನಲ್ಲಿ 52 ಸಾವಿರಜಾನುವಾರುಗಳು, 1,38,000 ಕುರಿ, ಮೇಕೆಗಳಿವೆ.ಕಳೆದ ಹಿಂಗಾರು ಉತ್ತಮವಾಗಿ ಸುರಿದ ಪರಿಣಾಮಬೆಳೆಗಳು ಚೆನ್ನಾಗಿ ಬಂದಿವೆ. ತಾಲೂಕಿನಾದ್ಯಂತಜೋಳದ ಮೇವು, ಕಡಲೆ ಹೊಟ್ಟು, ಶೇಂಗಾ ಹೊಟ್ಟುಸಾಕಷ್ಟಿದ್ದು, ಪ್ರಸಕ್ತ ವರ್ಷದಲ್ಲಿ ಮೇವಿಗೆ ಯಾವುದೇ ಬರವಿಲ್ಲ ಎನ್ನಬಹುದು. ಬಂಡಿಹಾಳ ಗ್ರಾಮದಲ್ಲಿ ಬೋರ್‌ ವೆಲ್‌ ಕೊರೆಸಬೇಕು. ಕುಡಿವ ನೀರಿಗಾಗಿ ತೊಂಡಿಹಾಳಕ್ಕೆ ಹೋಗಬೇಕಿದೆ.ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ಈ ಹಿಂದೆ ಗ್ರಾಮದಲ್ಲಿಬೇಕಾಬಿಟ್ಟಿ ಕಳಪೆ ಪೈಪ್‌ಲೈನ್‌ ಮಾಡಲಾಗಿದೆ. – ರಾಮನಗೌಡ ಮಳಗೌಡ್ರ ಬಂಡಿಹಾಳ ಗ್ರಾಮಸ್ಥ

ತಾಲೂಕಿನಲ್ಲಿ ಅಂರ್ತಜಲ ಹೆಚ್ಚಳಕ್ಕೆ ಪೂರಕವಾದ ಕೆರೆ, ಕಟ್ಟೆ, ಚೆಕ್‌ ಡ್ಯಾಂ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇನೆ.ಕಳೆದ ಬಾರಿ ಉತ್ತಮ ಮಳೆಯಾಗಿದ್ದರಿಂದ ತಾಲೂಕಿನಲ್ಲಿನೀರಿನ ಸಮಸ್ಯೆಯಾಗಿಲ್ಲ. ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡುಬಂದರೆ ತಕ್ಷಣವೇ ಸ್ಪಂದಿಸುವಂತೆತಾಲೂಕಾಡಳಿತಕ್ಕೆ ಸೂಚಿಸಿದ್ದೇನೆ. ಇತರೆ ತಾಲೂಕುಗುಳಿಗೆ ಹೋಲಿಸಿದರೆ ನಮ್ಮ ತಾಲೂಕಿನಲ್ಲಿ ನೀರಿನ ಸಮಸ್ಯೆ ಇಲ್ಲ, ಹಾಲಪ್ಪ ಆಚಾರ, ಯಲಬುರ್ಗಾ ಶಾಸಕ

ಕೆಲ ಗ್ರಾಮಗಳಲ್ಲಿ ಮಾತ್ರ ನೀರಿನಸಮಸ್ಯೆ ಇದೆ. ಸಮಸ್ಯೆ ಕಂಡುಬಂದರೆತಕ್ಷಣ ಸ್ಪಂದಿಸಿ ಸಮಸ್ಯೆ ನೀಗಿಸುತ್ತೇವೆ. ಶುದ್ಧಕುಡಿವ ನೀರಿನ ಘಟಕಗಳು ಚಾಲ್ತಿಯಲ್ಲಿವೆ.ಕೆಲ ಘಟಕಗಳು ಕೆಟ್ಟಿದ್ದು ಶೀಘ್ರದಲ್ಲಿ ದುರಸ್ತಿಗೊಳಿಸಲಾಗುತ್ತದೆ. ನೀರಿನ ಸಮಸ್ಯೆನಿವಾರಣೆಗೆ ತಾಲೂಕಡಳಿತ ಸಿದ್ಧವಿದೆ. ಡಾ| ಜಯರಾಂ ಚವ್ಹಾಣ, ತಾಪಂ ಇಒ

 

ಮಲ್ಲಪ್ಪ ಮಾಟರಂಗಿ

ಟಾಪ್ ನ್ಯೂಸ್

1-fgdfg

ಹೊರಟ್ಟಿಗೆ ಮಣೆ: ಬಿಜೆಪಿ ಟಿಕೆಟ್ ವಂಚಿತ ಮೋಹನ ಲಿಂಬಿಕಾಯಿ ತೀವ್ರ ಅಸಮಾಧಾನ

ಮೂರು ದಿನಗಳ ಬಳಿಕ ಮತ್ತೆ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 503 ಅಂಕ ಜಿಗಿತ; ನಿಫ್ಟಿಯೂ ಏರಿಕೆ

ಮೂರು ದಿನಗಳ ಬಳಿಕ ಮತ್ತೆ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 503 ಅಂಕ ಜಿಗಿತ; ನಿಫ್ಟಿಯೂ ಏರಿಕೆ

19arrest

ಕ್ಷುಲ್ಲಕ ಕಾರಣಕ್ಕೆ ಕೊಲೆಗೈದ ಸೈಕೋ ಕಿಲ್ಲರ್‌ ಬಂಧನ

army

ಕಾಶ್ಮೀರದಲ್ಲಿ ಈ ವರ್ಷ 26 ವಿದೇಶಿ ಭಯೋತ್ಪಾದಕರ ಸಂಹಾರ

1hh

ಸಿಕ್ಕ ಸಿಕ್ಕವರನ್ನು ಬೈಯುವ,ಭಿಕ್ಷೆ ಬೇಡುವ ಆದಿವಾಸಿಗಳ ವಿಶಿಷ್ಟವಾದ ಹಬ್ಬ!!

ನಗರ: ಮಲಿಕ್ ಗೆ ಶಿಕ್ಷೆ, ದೇಶದ್ರೋಹ ಘೋಷಣೆ; 10 ಮಂದಿ ಬಂಧನ, UAPA ಕಾಯ್ದೆ ದಾಖಲು

ಶ್ರೀನಗರ: ಮಲಿಕ್ ಗೆ ಶಿಕ್ಷೆ, ದೇಶದ್ರೋಹ ಘೋಷಣೆ; 10 ಮಂದಿ ಬಂಧನ, UAPA ಕಾಯ್ದೆ ದಾಖಲು

1-f-ffs

ಬಿಬಿಎಂಪಿ ಚುನಾವಣೆ : ಮೇ 28ಕ್ಕೆ ಆಮ್‌ ಆದ್ಮಿ ಪಾರ್ಟಿ ಕಾರ್ಯಕಾರಿಣಿ ಸಭೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23

ನಂದಿಹಳ್ಳಿಯಲ್ಲಿ ಮಹನೀಯರ ನಾಮಫಲಕ ತೆರವು

22

ಬೀಜ- ರಸಗೊಬ್ಬರ ಕಳಪೆ ಪರಿಶೀಲಿಸಿ

1-ffdsf

ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಅನುದಾನದ ಕೊರತೆ: ಕೆ.ರವೀಂದ್ರ ಶೆಟ್ಟಿ

3JDS

ಕುಷ್ಟಗಿ ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಕಾಂಗ್ರೆಸ್ ನಲ್ಲಿ ಇರ್ತಾರ? ಜೆಡಿಎಸ್ ಸೇರ್ತಾರ!

ದತ್ತ ಪೀಠದ ಹೆಸರಲ್ಲಿ ಅಧಿಕಾರಕ್ಕೇರಿದವರು ಏನ್ಮಾಡ್ತಿದ್ದಾರೆ ?: ಮುತಾಲಿಕ್ ಕಿಡಿ

ದತ್ತ ಪೀಠದ ಹೆಸರಲ್ಲಿ ಅಧಿಕಾರಕ್ಕೇರಿದವರು ಏನ್ಮಾಡ್ತಿದ್ದಾರೆ ?: ಮುತಾಲಿಕ್ ಕಿಡಿ

MUST WATCH

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

udayavani youtube

Wheel Chair Romeo actor exclusive interview | RELEASING ON MAY 27TH

udayavani youtube

ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

udayavani youtube

ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?

ಹೊಸ ಸೇರ್ಪಡೆ

ಮೇ 27ರಿಂದ ಮಾವು, ಹಲಸು ಮೇಳ; 50ಕ್ಕೂ ಹೆಚ್ಚು ವಿವಿಧ ತಳಿಯ ಮಾವು ಪ್ರದರ್ಶನ

ಮೇ 27ರಿಂದ ಮಾವು, ಹಲಸು ಮೇಳ; 50ಕ್ಕೂ ಹೆಚ್ಚು ವಿವಿಧ ತಳಿಯ ಮಾವು ಪ್ರದರ್ಶನ

24

ಮೇಲ್ಸೇತುವೆಯೂ ಇಲ್ಲ -ಚತುಷ್ಪಥವೂ ಇಲ್ಲ!

22appeal

ರೈತರ ಸಂಕಷ್ಟಕ್ಕೆ ಸ್ಪಂದಿಸಲು ಜೆಡಿಎಸ್‌ ಮನವಿ

21releft

ಜಲಕ್ಷಾಮ: ಪರಿಹಾರಕ್ಕೆ ಆಗ್ರಹಿಸಿ ಸಭೆ ಬಹಿಷ್ಕಾರ

ಆಡಂಬರದ ಮದುವೆಗೆ ಕಡಿವಾಣ ಹಾಕಿ; ಸಚಿವ ಎಂಟಿಬಿ

ಆಡಂಬರದ ಮದುವೆಗೆ ಕಡಿವಾಣ ಹಾಕಿ; ಸಚಿವ ಎಂಟಿಬಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.