

Team Udayavani, Sep 19, 2022, 7:25 PM IST
ಕೊಪ್ಪಳ: ಕೊಪ್ಪಳದಲ್ಲಿ ಮೊಟ್ಟ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯರ ಮದುವೆಯ ರಕ್ಷಣೆ ಕಾಯ್ದೆಯಡಿ ಖಾಜೀದಾ ಬೇಗಂ ಅವರು ಗಂಡನ ವಿರುದ್ಧ ತ್ರಿವಳಿ ತಲಾಖ್‌ನಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೊಪ್ಪಳದ ಮರಿಶಾಂತ ನಗರದ ಖಾಜೀದಾ ಬೇಗಂ ಅವರು ಪತಿ ಸೈಯದ್ ವಾಹೀದ್ ಆತ್ತಾರ್ ಹಾಗೂ ಅವರ ಮನೆಯವರ ಕೌಟುಂಬಿಕ ಕಿರುಕುಳ ನೀಡಿದ ವಿಷಯವಾಗಿ 2021 ರಲ್ಲಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ಪತಿ ಹಾಗೂ ಅವರ ಮನೆಯವರ ಮೇಲೆ ದೂರು ದಾಖಲಾಗಿ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿತ್ತು.
ಖಾಜೀದಾ ಬೇಗಂ ಅವರು ಕೊಪ್ಪಳದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಗಂಡನ ವಿರುದ್ಧ ಡೊಮೆಸ್ಟಿಕ್ ವೈಲೆನ್ಸ್ ಪ್ರಕರಣದ ದಾಖಲು ಮಾಡಿದ್ದರ ಕುರಿತಂತೆ ಸೆ.15 ರಂದು ಮುದ್ದತ್ತು ಇತ್ತು. ನೊಂದ ಮಹಿಳೆ ತನ್ನ ತಂದೆಯೊಂದಿಗೆ ಕೋರ್ಟ್‌ಗೆ ಆಗಮಿಸಿದ್ದ ವೇಳೆ ಕೋರ್ಟ್ ಗೇಟ್ ಬಳಿ ಪತಿ ಸೈಯದ್ ವಾಹೀದ್ ಆತ್ತಾರ ತಡೆದು ನಿಲ್ಲಿಸಿ ನಾನು ಷರಿಯತ್ ಪ್ರಕಾರ ಬೇರೆ ಮದುವೆಯಾಗುತ್ತೇನೆ. ನಿನಗೆ ತಲಾಖ್ ಕೊಡುತ್ತೇನೆ. ನಿನಗೂ ನನಗೂ ಯಾವುದೇ ಸಂಬಂಧವಿಲ್ಲ. ತಂಟೆಗೆ ಬಂದರೆ ಸಾಯಿಸಿ ಬಿಡುತ್ತೇನೆ ಎಂದು ಹೇಳಿ ಮೂರು ಬಾರಿ ತಲಾಖ್ ಶಬ್ದ ಉಚ್ಚಾರ ಮಾಡಿ ಹೋಗಿರುವ ಕುರಿತು ಖಾಲೀದಾ ಬೇಗಂ ಅವರು ಗಂಡ ಸೈಯದ್ ವಾಹೀದ್ ಅವರ ಮೇಲೆ ಮತ್ತೆ ಸೆ.18 ರಂದು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಮಹಿಳೆಯರ ಮದುವೆಯ ರಕ್ಷಣೆ ಕಾಯ್ದೆಯಡಿಯಲ್ಲಿ ಗಂಡನ ವಿರುದ್ಧ ಪ್ರಕರಣ ದಾಖಲಾಗಿದ್ದಾರೆ.
ಇದು ಕೊಪ್ಪಳದಲ್ಲಿ ಮೊಟ್ಟ ಮೊದಲ ಬಾರಿಗೆ ತ್ರಿವಳಿ ತಲಾಖ್ ನಡಿ ದಾಖಲಾದ ಪ್ರಕರಣವಾಗಿದೆ.
Ad
Gadag: ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ರೋಹನ್ ಜಗದೀಶ್ ನೇಮಕ
Chamarajanagar: ಹುಲಿಗಳ ಸಾ*ವು ಪ್ರಕರಣದಲ್ಲಿ ಕರ್ತವ್ಯಲೋಪ… ಡಿಸಿಎಫ್ ಚಕ್ರಪಾಣಿ ಅಮಾನತು
ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ
Koppala: 40 ದಿನದಲ್ಲಿ ಹುಲಿಗೆಮ್ಮ ದೇವಿಗೆ 1.17 ಕೋಟಿ ಆದಾಯ
ಬೆಳ್ಳಿಪರದೆಯ ಬೆರಗು ಕರುನಾಡಿನ ಮಹಿಳಾ ಸೂಪರ್‌ಸ್ಟಾರ್ ಬಿ.ಸರೋಜಾ ದೇವಿ
AUS vs WI : ಕೇವಲ 27 ರನ್‌ಗೆ ಆಲೌಟ್ ಆದ ವೆಸ್ಟ್ ಇಂಡೀಸ್ – ತವರಿನಲ್ಲೇ ವೈಟ್ ವಾಶ್
Gadag: ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ರೋಹನ್ ಜಗದೀಶ್ ನೇಮಕ
Chamarajanagar: ಹುಲಿಗಳ ಸಾ*ವು ಪ್ರಕರಣದಲ್ಲಿ ಕರ್ತವ್ಯಲೋಪ… ಡಿಸಿಎಫ್ ಚಕ್ರಪಾಣಿ ಅಮಾನತು
Odisha: ಕಾಲೇಜಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಸಾ*ವು
ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ
You seem to have an Ad Blocker on.
To continue reading, please turn it off or whitelist Udayavani.