ಚುನಾವಣೆಯಲ್ಲಿ ಹಣ ಹಂಚುವ ಸಂಸ್ಕೃತಿ ಕಾಂಗ್ರೆಸ್ಸಿನದ್ದು : ಮಾಜಿ ಶಾಸಕ ದೊಡ್ಡನಗೌಡ ಪಾಟೀಲ

Team Udayavani, Dec 8, 2021, 5:42 PM IST

ಚುನಾವಣೆಯಲ್ಲಿ ಹಣ ಹಂಚುವ ಸಂಸ್ಕೃತಿ ಕಾಂಗ್ರೆಸ್ಸಿನದ್ದು : ಮಾಜಿ ಶಾಸಕ ದೊಡ್ಡನಗೌಡ ಪಾಟೀಲ

ಕುಷ್ಟಗಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಮಧ್ಯರಾತ್ರಿ ಮತದಾರರಿಗೆ ಹಣ ಹಂಚುವುದು ಕತಲ್ ರಾತ್ರಿ ಸಂಸ್ಕೃತಿ ಕಾಂಗ್ರೆಸ್ಸಿನದ್ದು ಎಂದೇ ಬಿಂಬಿತವಾಗಿದೆ. ಬಿಜೆಪಿಯ ಕೆಲಸ ಕಾರ್ಯಗಳನ್ನು ನೋಡಿ ಮತ ಚಲಾವಣೆಯಾಗಲಿದ್ದು, ನಮ್ಮ ಪಕ್ಷದಿಂದ ಬೆಳ್ಳಿ, ಬಂಗಾರ, ನಾಣ್ಯ ಇದ್ಯಾವುದು ಹಂಚಿಕೆ ಇಲ್ಲವೇ ಇಲ್ಲ. ಬಂಗಾರ ಕೊಟ್ಟರೆ ಇಲ್ಲ ಎನ್ನುವುದಿಲ್ಲ ತೆಗೆದುಕೊಳ್ತೇವೆ ಎಂದು ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಹೇಳಿದರು.

ಇಲ್ಲಿನ ಎ.ಎಚ್. ಪಲ್ಲೇದ್ ವಕೀಲರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಅಭ್ಯರ್ಥಿ ಎಷ್ಟು ಖರ್ಚು ಮಾಡಬೇಕೋ ಅಷ್ಟನ್ನು ಖರ್ಚು ಮಾಡುವುದು ಅನಿವಾರ್ಯವಾಗಿದೆ. ಹಣ ಎಲ್ಲದಕ್ಕೂ ಕಾರಣವಾಗುದಿಲ್ಲ ಹಾಗಾದರೆ ದುಡ್ಡು ಇರುವ ಟಾಟಾ, ಬಿರ್ಲಾ, ಅಂಬಾನಿ ದೇಶದ ಪ್ರಧಾನಿಯಾಗಬಹುದಿತ್ತುಲ್ಲವೇ? ಪ್ರಶ್ನಿಸಿದರು.

ಚುನಾವಣೆಗಳಲ್ಲಿ ಜಾತಿ, ಆಮಿಷವೊಡ್ಡುವುದು ಕಾಂಗ್ರೆಸ್ಸನಲ್ಲಿದೆ:

ಸ್ಥಳೀಯ ಸಂಸ್ಥೆಗಳಿಂದ ಘನತೆ ಗೌರವಗಳಿಂದ ಸಂವಿಧಾನಿಕ ಮಹತ್ವದ ಹಿನ್ನೆಲೆಯಲ್ಲಿ ಮೇಲ್ಮನೆಯ ಘನತೆ ಹೆಚ್ಚಿಸಲು ಸಜ್ಜನ ಅವಶ್ಯಕತೆ ಇದೆ. ನಮ್ಮ  ಅಭ್ಯರ್ಥಿ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸ್ವಭಾವತಃ ಒರಟು. ಸದರಿ ಅಭ್ಯರ್ಥಿ ಯ ಅಬ್ಬಗಡ ಕೆಲಸಗಳು ಬಹಳಷ್ಟಿವೆ. ದೊಡ್ಡವರು ಸಣ್ಣವರೆನ್ನುವ ವ್ಯತ್ಯಾಸ ಗೊತ್ತಿಲ್ಲ. ದೇಶದ ಪ್ರಧಾನಿಗೆ ಏಕ ವಚನದಲ್ಲಿ ಮಾತನಾಡಿರುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ವ್ಯಕ್ತಿತ್ವ ತೋರಿಸಿದೆ. ಸಾರ್ವಜನಿಕ ಸಭೆಯಲ್ಲಿ ಹೇಗೆ ಮಾತನಾಡುತ್ತಾರೆನ್ನುವುದೇ ಗೊತ್ತಿಲ್ಲ. ಇನ್ನು ಬುದ್ದಿ ಜೀವಿಗಳ ಮೇಲ್ಮನೆ ಇನ್ನು ಹೇಗೆ ಮಾತನಾಡಬಹುದು? ಅಲ್ಲಿ ಹಿಡಿ, ಹೊಡಿ, ಬಡಿ, ಕಡಿ ಸಂಸ್ಕೃತಿ ನಡೆಯದು.

ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಸದಸ್ಯರಾಗಿದ್ದ ಬಸವರಾಜ ಪಾಟೀಲ ಇಟಗಿ ಒಮ್ಮೆಯೂ ಸದನದಲ್ಲಿ ಧ್ವನಿ ಎತ್ತಲಿಲ್ಲ ಸ್ಥಳೀಯ ಸಂಸ್ಥೆಗಳ ಬಗ್ಗೆ ಸದನದಲ್ಲಿ ಚಕಾರವೆತ್ತಲಿಲ್ಲ. ಬಿಜೆಪಿಯಲ್ಲಿ Forwards v/s Backwards ಚುನಾವಣೆ ಎಂದೇ ಪ್ರಚಾರ ಮಾಡುತ್ತಿದ್ದು ಅದು ಹಾಗೆ ಅಲ್ಲ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನೇರ ಚುನಾವಣೆಯಾಗಿದೆ ಎಂದರು. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಅವರನ್ನು ಸ್ಥಳೀಯರಲ್ಲ ಎನ್ನಲಾಗುತ್ತಿದೆ. ಸ್ಥಳೀಯರು ಎಂದು ಪ್ರಶ್ನಿಸುವುದಾರೆ ಹೆಳವರನ್ನು ಕೇಳಿ ಮೂಲತಃ ಯಾರೂ ಸ್ಥಳೀಯರಲ್ಲ ಬೇರೆಡೆಯಿಂದ ಬಂದವರಾಗಿದ್ದು, ಕುಷ್ಟಗಿ ಕ್ಷೇತ್ರದ ಹಾಲಿ ಶಾಸಕರು ಎಲ್ಲಿಯವರು ಎಂದು ಖಾರವಾಗಿ ಪ್ರಶ್ನಿಸಿದರು.

ಜಿ.ಪಂ.ಮಾಜಿ ಸದಸ್ಯ ಕೆ.ಮಹೇಶ, ನಾಗರಾಜ ಮೇಲಿನಮನಿ ಹಾಜರಿದ್ದರು.

ಟಾಪ್ ನ್ಯೂಸ್

8-social-anxiety-disorder

Health: ಸೋಶಿಯಲ್‌ ಆ್ಯಂಕ್ಸೈಟಿ ಡಿಸಾರ್ಡರ್‌

Karachi; ಗುಂಡಿನ ದಾಳಿಯಲ್ಲಿ ಲಷ್ಕರ್-ಎ-ತೈಬಾ ಸ್ಥಾಪಕ ಸದಸ್ಯ ಖೈಸರ್ ಫಾರೂಕಿ ಹತ್ಯೆ

Karachi; ಗುಂಡಿನ ದಾಳಿಯಲ್ಲಿ ಲಷ್ಕರ್-ಎ-ತೈಬಾ ಸ್ಥಾಪಕ ಸದಸ್ಯ ಖೈಸರ್ ಫಾರೂಕಿ ಹತ್ಯೆ

hivanna

GHOST: ಶಿವಣ್ಣನ ಘೋಸ್ಟ್ ಅವತಾರಕ್ಕೆ ಫ್ಯಾನ್ಸ್ ಫಿದಾ; ಟ್ರೇಲರ್ ನೋಡಿ

Bengaluru; ನಟ ನಾಗಭೂಷಣ ಕಾರು ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು

Bengaluru; ನಟ ನಾಗಭೂಷಣ ಕಾರು ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು

7-belthanagdy

Belthangady: ಎಕ್ರೆ ಪ್ರದೇಶದಲ್ಲಿ ಭತ್ತದ ಗದ್ದೆಗೆ ಆನೆ ದಾಳಿ

Sandalwood ; 7 movies releasing on October 6

Sandalwood ಸಿನಿಜಾತ್ರೆ; ಅಕ್ಟೋಬರ್‌ 6ಕ್ಕೆ 7 ಸಿನಿಮಾಗಳು ಬಿಡುಗಡೆ

6-vitla

Vitla: ಪೇಟೆಯ ಮೂರು ಕಡೆ ಸರಣಿ ಕಳ್ಳತನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dadas

Kushtagi : ವೈಯಕ್ತಿಕ ಸಿಟ್ಟಿಗೆ ಸ್ನೇಹಿತನ ಹತ್ಯೆಗೈದ ಇಬ್ಬರ ಬಂಧನ

1-sadadasd

Panchamasali ಸಮುದಾಯದವರು ಸಿಎಂ ಆದರೂ 2-ಎ ಹೋರಾಟ ನಿಲ್ಲದು

1-aa

Kishkindha ಜಿಲ್ಲೆ ಘೋಷಣೆ ಅಸಾಧ್ಯ,ಆದರೂ ಹೋರಾಟ ಅಗತ್ಯ: ಜನಾರ್ದನ ರೆಡ್ಡಿ

CM ಸಿದ್ದರಾಮಯ್ಯ ಅರಸು ಆಗಲು ಸಾಧ್ಯವಿಲ್ಲ: ಜಿಟಿ.ದೇವೇಗೌಡ

CM ಸಿದ್ದರಾಮಯ್ಯ ಅರಸು ಆಗಲು ಸಾಧ್ಯವಿಲ್ಲ: ಜಿಟಿ.ದೇವೇಗೌಡ

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

MUST WATCH

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

ಹೊಸ ಸೇರ್ಪಡೆ

Dr. TMA Pai Convention Centre; 3 ದಿನಗಳ “ಬಿಗ್‌ ಬ್ರ್ಯಾಂಡ್ಸ್‌ ಎಕ್ಸ್‌ಪೋಗೆ’ ಚಾಲನೆ

Dr. TMA Pai Convention Centre; 3 ದಿನಗಳ “ಬಿಗ್‌ ಬ್ರ್ಯಾಂಡ್ಸ್‌ ಎಕ್ಸ್‌ಪೋಗೆ’ ಚಾಲನೆ

8-social-anxiety-disorder

Health: ಸೋಶಿಯಲ್‌ ಆ್ಯಂಕ್ಸೈಟಿ ಡಿಸಾರ್ಡರ್‌

Karachi; ಗುಂಡಿನ ದಾಳಿಯಲ್ಲಿ ಲಷ್ಕರ್-ಎ-ತೈಬಾ ಸ್ಥಾಪಕ ಸದಸ್ಯ ಖೈಸರ್ ಫಾರೂಕಿ ಹತ್ಯೆ

Karachi; ಗುಂಡಿನ ದಾಳಿಯಲ್ಲಿ ಲಷ್ಕರ್-ಎ-ತೈಬಾ ಸ್ಥಾಪಕ ಸದಸ್ಯ ಖೈಸರ್ ಫಾರೂಕಿ ಹತ್ಯೆ

hivanna

GHOST: ಶಿವಣ್ಣನ ಘೋಸ್ಟ್ ಅವತಾರಕ್ಕೆ ಫ್ಯಾನ್ಸ್ ಫಿದಾ; ಟ್ರೇಲರ್ ನೋಡಿ

Bengaluru; ನಟ ನಾಗಭೂಷಣ ಕಾರು ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು

Bengaluru; ನಟ ನಾಗಭೂಷಣ ಕಾರು ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.