ಕೋವಿಡ್ 19 ಭೀತಿಯಲ್ಲೂ ನಗರಸಭೆ ನಿರ್ಲಕ್ಷ್ಯ : ಮಾಂಸ -ತರಕಾರಿ ಮಾರುಕಟ್ಟೆಯಲ್ಲಿ ಅಶುದ್ಧತೆ
Team Udayavani, Mar 18, 2020, 10:41 AM IST
ಗಂಗಾವತಿ: ಇಡೀ ವಿಶ್ವದಲ್ಲಿಕೋವಿಡ್ 19 ಹರಡಿದ್ದು, ಕರ್ನಾಟಕದಲ್ಲೂ ಸೋಂಕು ಶಂಕಿತರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಸೋಂಕು ಹರಡಂತೆ ದೇಶದಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೂ ಗಂಗಾವತಿ ನಗರಸಭೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಗಂಗಾವತಿ ನಗರದ ವ್ಯಾಪ್ತಿಯಲ್ಲಿ ಕೋವಿಡ್ 19 ಮುನ್ನೆಚ್ಚರಿಕೆ ಬಗ್ಗೆ ನಗರಸಭೆ ನಿರ್ಲಕ್ಷ್ಯ ವಹಿಸಿದೆ. ನಗರದಲ್ಲಿ ಎಲ್ಲೆಂದರಲ್ಲಿ ಮಾಂಸ, ತರಕಾರಿ ಮಾರುಕಟ್ಟೆಗಳಿದ್ದು ಇದುವರೆಗೂ ಸ್ವಚ್ಚತೆ ಕುರಿತು ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.
ರಸ್ತೆಯ ತುಂಬಾ ಕಸದ ರಾಶಿ ಕಾಣ ಸಿಗುತ್ತದೆ. ಡೈಲಿ ಮಾರ್ಕೆಟ್ ಸೇರಿ ವಾರದ ಸಂತೆ ಬಯಲು ಇಸ್ಲಾಂಪೂರ ಅಂಬೇಡ್ಕರ್ ವೃತ್ತ ಆನೆಗೊಂದಿ ರಸ್ತೆ ಮತ್ತು ಗಾಂಧಿನಗರ ಪ್ರದೇಶದಲ್ಲಿ ಮಾಂಸ ಮಾರಾಟ ಮಾಡಲಾಗುತ್ತಿದೆ.
ಕೊರೊನಾ ವೈರಸ್ ಹೆದರಿಕೆ ಇದ್ದರೂ ನಗರಸಭೆ ಸ್ವಚ್ಛತೆ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮಕೊಂಡಿಲ್ಲ. ಮಾಂಸ ಮತ್ತು ತರಕಾರಿ ಮಾರುವ ಸ್ಥಳದ ಸುತ್ತಲಿನ ಪ್ರದೇಶದಲ್ಲಿ ಕಸದ ರಾಶಿ ಇದೆ. ಚರಂಡಿಗಳು ತುಂಬಿದ್ದು ಕಳೆದ ಹಲವು ಪೌರಕಾರ್ಮಿಕರ ಕೊರತೆಯಿಂದ ಸ್ವಚ್ಛತೆ ಮಾಡಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಮಾಂಸದ ಮಾರುಕಟ್ಟೆ ಹತ್ತಿರ ರಕ್ತ ಮಾಂಸದ ತುಂಡು ಕುರಿ ಮೇಕೆ ಚರ್ಮ, ಕೋಳಿ ಪುಕ್ಕ ಬಿದಿದ್ದು ಚರಂಡಿಗಳು ತ್ಯಾಜ್ಯ ದಿಂದ ತುಂಬಿವೆ. ನೊಣ ಸೊಳ್ಳೆಗಳು, ದುರ್ವಾಸನೆ ಇಡೀ ಪ್ರದೇಶದಲ್ಲಿ ಹರಡಿದೆ. ನಗರದ ಮಧ್ಯೆಭಾಗದಲ್ಲಿ ಹರಿಯುವ ದುರುಗಮ್ಮನ ಹಳ್ಳದಲ್ಲಿ ತರಕಾರಿ ಕೊಳೆತ ಮಾಂಸ ಚರಂಡಿ ನೀರು ಹರಿಬಿಡಲಾಗುತ್ತಿದ್ದು ಹಳ್ಳದ ಅಕ್ಕಪಕ್ಕದಲ್ಲಿ ವಾಸ ಮಾಡುವವರು ದುರ್ವಾಸನೆಯಿಂದ ಮುಖ ಮುಚ್ಚುವಂತಾಗಿದೆ.
ಪೌರಕಾರ್ಮಿಕರ ಕೊರತೆ: ಗಂಗಾವತಿ ನಗರದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು 35ವಾರ್ಡುಗಳಿದ್ದು ನೈರ್ಮಲ್ಯ ಕಾಪಾಡಲು ಆಗುತ್ತಿಲ್ಲ. ಇರುವ ಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಚತಾ ಕಾರ್ಯ ಮಾಡಲಾಗುತ್ತದೆ ಎಂದು ಪೌರಾಯುಕ್ತ ಶೇಖರಪ್ಪ ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ: ಓರ್ವನ ಸ್ಥಿತಿ ಗಂಭೀರ
ಕುಷ್ಟಗಿ: ಡಿಎಪಿ ಹೆಸರಿನಲ್ಲಿ ಸಾವಯವ ಗೊಬ್ಬರ ಮಾರಾಟ ಮಾಡಿ ವಂಚನೆ ; 70 ಚೀಲಗಳು ವಶಕ್ಕೆ
ಗಂಗಾವತಿ: ಹೊಸಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಅಂಗಡಿ ಬಂದ್ ಗೆ ಆಗ್ರಹಿಸಿ ಪ್ರತಿಭಟನೆ
ಶಿಕ್ಷಣದಿಂದ ಬದಲಾವಣೆ ಸಾಧ್ಯ: ಪರಶುರಾಮ
ನಾಯಕತ್ವ ಗುಣ ಬೆಳೆಸುತ್ತೆ ಕ್ರೀಡೆ: ಸಂಸದ ಕರಡಿ