ಕಾರು ಅಪಘಾತ: ಅಯ್ಯಪ್ಪ ಸ್ವಾಮಿ ಮಾಲಾಧಾರಣೆಗೆ ತೆರಳುತ್ತಿದ್ದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ
Team Udayavani, Nov 30, 2022, 9:04 AM IST
ಗಂಗಾವತಿ: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಲು ಹಿರಿಯ ಅಯ್ಯಪ್ಪ ಸ್ವಾಮಿಗಳ ಜತೆ ಕಾರಿನಲ್ಲಿ ಹೊರಟಿದ್ದ ವ್ಯಕ್ತಿಯೊರ್ವರ ಕಾರು ಕಬ್ಬಿನ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಶ್ರೀರಾಮನಗರ ಮತ್ತು ಪ್ರಗತಿನಗರದ ಮಧ್ಯೆ ಇರುವ ಹಳ್ಳದ ಬಳಿಯ ಮುಖ್ಯ ರಸ್ತೆಯಲ್ಲಿ ಬುಧವಾರ ಬೆಳಗಿನ ಜಾವ 5;30 ಕ್ಕೆ ನಡೆದಿದ್ದು, ಮೃತಪಟ್ಟ ವ್ಯಕ್ತಿಯನ್ನು ಶ್ರೀ ರಾಮನಗರದ ದುರ್ಗಾಸ್ವೀಟ್ ಅಂಗಡಿಯ ಮಾಲೀಕ ನಾಗೇಶರಾವ್ (46) ಎಂದು ಗುರುತಿಸಲಾಗಿದೆ.
ಬುಧವಾರ ಬೆಳ್ಳಿಗ್ಗೆ ವಿದ್ಯಾನಗರದಲ್ಲಿರುವ ಸ್ವಾಮಿ ಅಯ್ಯಪ್ಪ ದೇಗುಲದಲ್ಲಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಲು ಹಿರಿಯ ಸ್ವಾಮಿಗಳ ಜತೆ ತಮ್ಮ ಕಾರಿನಲ್ಲಿ ಆಗಮಿಸುವ ಸಂದರ್ಭದಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಚಾಲನೆ ಮಾಡುತ್ತಿದ್ದ ನಾಗೇಶರಾವ್ ಸ್ಥಳದಲ್ಲಿಯೇ ಮೃತರಾಗಿದ್ದು ಅಂಜೂರಿಕ್ಯಾಂಪಿನ ಶೇಷಾದ್ರಿರಾವ್ ಹಾಗೂ ಸುರೇಶ್ ಅವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಧಾರಾವಿ ಪುನರ್‌ನಿರ್ಮಾಣಕ್ಕೆ ಗೌತಮ್ ಅದಾನಿ: 5,069 ಕೋಟಿ ರೂ. ಹೂಡಿಕೆ