ಗಂಗಾವತಿ: ಪೊಲೀಸರ ಮಿಂಚಿನ ಕಾರ್ಯಾಚರಣೆ; ಗಾಂಜಾ ಮಾರಾಟ ಮಾಡುತ್ತಿದ್ದ 6 ಯುವಕರ ಬಂಧನ
Team Udayavani, Feb 8, 2023, 10:18 PM IST
ಗಂಗಾವತಿ: ನಶೆ ಬರಿಸುವ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕರ ಕುರಿತು ಖಚಿತ ಮಾಹಿತಿ ಪಡೆದ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿ ಗಾಂಜಾ ಸಮೇತ ಆರೋಪಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಪ್ರಕರಣ ತಾಲೂಕಿನ ಸಾಣಾಪೂರ ಗ್ರಾಮದ ಲೇಕ್(ಕೆರೆ) ಹತ್ತಿರ ಬುಧವಾರ ನಡೆದಿದೆ.
ಸಚಿನ್ ಕಮಲಾಪೂರ,ಅಶ್ವೀನ್ ಹರಿಹರ ,ಕಿರಣ್ ರಾಜನಹಳ್ಳಿ ಹರಿಹರ,ನಿಖಿಲ್ ಹರಿಹರ,ಸುರೇಶ ಕಂಪ್ಲಿ ಹಾಗೂ ಪೂರ್ಣಚಂದ್ರ ನೆಕ್ಕಂಟಿ ಉಳಿಕ್ಯಾಳ ಕ್ಯಾಂಪ್ ಕಾರಟಗಿ ಇವರು ಬಂಧಿತರಾಗಿದ್ದಾರೆ. ಬಂಧಿತರಿಂದ 342 ಗ್ರಾಂ ಗಾಂಜಾ , ರೆನಾಲ್ಟ್ ಕಾರು, ಹೊಂಡಾ ಬೈಕ್ ಹಾಗೂ ಮೂರು ಸಾವಿರ ರೂ.ನಗದು ಹಣ ವಶಕ್ಕೆ ಪಡೆಯಲಾಗಿದೆ.ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸ್ಥಳಕ್ಕೆ ಗ್ರಾಮೀಣ ಸಿಪಿಐ ಮಂಜುನಾಥ,ಪೊಲೀಸ್ ಸಿಬ್ಬಂದಿಗಳಾದ ಶಿವಶರಣಪ್ಪಗೌಡ,ಮಲ್ಲೇಶ,ರಾಘವೇಂದ್ರ,ಮುತ್ತುರಾಜ್,ಸೈಯದ್, ಮಹಾಂತೇಶ,ಅಮರೇಶ ಹಾಗೂ ಪ್ರಭುಗೌಡ ಇದ್ದರು.
ಇದನ್ನೂ ಓದಿ: ಹೊಳಲ್ಕೆರೆಯಲ್ಲಿ ಮೊಳಗಲಿದೆ ಪ್ರಜಾಧ್ವನಿ… ಬಿಜೆಪಿ ನಾಯಕರಲ್ಲಿ ನಡುಕ