ಹುಲಿಯಾಪೂರ ಗ್ರಾಮದ ಸರಕಾರಿ ಶಾಲೆ ಒಂದು ಹೈಟೆಕ್ ಶಾಲೆ
ಸರ್ಕಾರದ ಅನುದಾನ ಇಲ್ಲದೆ ದಾನಿಗಳ ಮೂಲಕ ಒಂದು ಸುಂದರ ಸ್ಮಾರ್ಟ್ ಕ್ಲಾಸ್...
Team Udayavani, Dec 2, 2022, 10:39 PM IST
ದೋಟಿಹಾಳ: ಮೆಣೇಧಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಯಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಷ್ಠಗಿ ತಾಲೂಕಿನ ಇತರೆ ಸರ್ಕಾರಿ ಶಾಲೆಗಳಿಗಿಂತ ಭಿನ್ನವಾಗಿದೆ.
ಈ ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರ ಉತ್ತಮ ಸಂಬಂಧದಿಂದ ಈ ಶಾಲೆ ಒಂದು ಮಾದರಿಯ ಶಾಲೆಯಾಗಲು ಉತ್ತಮ ಶಾಲೆಗೆ ಬೆಳೆಯಲು. ಈ ಶಾಲೆ ಕಾರಣವಾಗಿದೆ. ಈ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಸುಮಾರು 324 ವಿದ್ಯಾರ್ಥಿಗಳ ಅಭ್ಯಾಸ ಮಾಡುತ್ತಿದ್ದಾರೆ.
ಈ ಶಾಲೆಗೆ ಮಕ್ಕಳು ಬಹುತೇಕ ರೈತೋ ಪಿ ಜನರ ಮಕ್ಕಳಾಗಿದ್ದು ತಂತ್ರಜ್ಞಾನದ ಮಾಹಿತಿ ಇವರಿಗೆ ಗೊತ್ತಿಲ್ಲ ಆದರೂ ಕೂಡ ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರದಿಂದ ಯಾವುದೇ ಸರ್ಕಾರದ ಅನುದಾನ ಇಲ್ಲದೆ ದಾನಿಗಳ ಮೂಲಕ ಒಂದು ಸುಂದರ ಸ್ಮಾರ್ಟ್ ಕ್ಲಾಸ್ ಅನ್ನು ನಿರ್ಮಾಣ ಮಾಡಿ ಮಕ್ಕಳ ಡಿಜಿಟಲ್ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡಲು ಮುಂದಾಗಿರುವುದು ಒಂದು ಹೆಮ್ಮೆಯ ವಿಷಯವಾಗಿದೆ.
ಕೇವಲ ಕಾಸಿ ಶಾಲೆಗಳಿಗೆ ಮಾತ್ರ ತಂತ್ರಜ್ಞಾನಗಳನ್ನು ಬಳಸಿ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಕಂಡಿದ್ದೇವೆ ಆದರೆ ಕುಗ್ರಾಮದಲ್ಲಿ ಮಕ್ಕಳಿಗೂ ತಂತ್ರಜ್ಞಾನದ ಮೂಲಕ ಶಿಕ್ಷಣ ದೊರೆಯುತ್ತಿರುವುದು ನಮ್ಮ ತಾಲೂಕಿನ ಹೆಮ್ಮೆಯ ವಿಷಯವಾಗಿದೆ. ಈ ಕಾರ್ಯಕ್ಕೆ ಸಹ ತಮ್ಮ ಸ್ವಂತ ಹಣಗಳನ್ನ ಹಾಕಿ ಮಕ್ಕಳಿಗೆ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಲು ಕಾರಣರಾಗಿದ್ದಾರೆ.ಇದರ ಜೊತೆಗೆ ಮಾಹಿತಿ ತಂತ್ರಜ್ಞಾನ ಅರಿವು ಮಕ್ಕಳಲ್ಲಿ ಮೂಡಲಿ ಎಂಬ ಉದ್ದೇಶದಿಂದ ಈ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಸಿದ್ಧಪಡಿಸಿದ್ದೇವೆ.
ಶಿಕ್ಷಣ ಇಲಾಖೆಯ ಮಾರ್ಗದರ್ಶನ ಮೇರೆಗೆ ಇಲ್ಲಿಯ ಶಿಕ್ಷಕ ವೃಂದ ತಮ್ಮ ವೈಯಕ್ತಿಕ ಹಣ ಹಾಗೂ ಗ್ರಾಮಸ್ಥರದಲ್ಲಿ ಸರಕಾರಿ ನೌಕರಿ ಮಾಡುವ ವ್ಯಕ್ತಿಗಳ ಮೂಲಕ ಸುಮಾರು ಎರಡುವರೆ ಲಕ್ಷ ಹಣ ಸಂಗ್ರಹಣೆ ಮಾಡಿ, ಶಾಲಾ ಕೊಠಡಿಯಲ್ಲಿ ಅತ್ಯದ್ಭುತ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡಿದ್ದಾರೆ. ಆದರೆ ಅದು ಇನ್ನೂ ಉದ್ಘಾಟನೆಗೊಂಡಿಲ್ಲ ಉದ್ಘಾಟನೆ ಕೊಂಡ ಕೂಡಲೇ ಮಕ್ಕಳ ಬಳಕೆಗೆ ಮಕ್ಕಳ ಶಿಕ್ಷಣಕ್ಕೆ ಉಪಯೋಗಿಸಲಾಗುತ್ತದೆ ಎಂದು ಶಿಕ್ಷಕರು ತಿಳಿಸಿದರು.
ಈ ಸ್ಮಾರ್ಟ್ ಕ್ಲಾಸ್ ಕೊಠಡಿಯೊಳಗೆ ನೆಲಹಾಸಿಗೆ ಟೈಲ್ಸ್ ಹೊಂದಿಸಲಾಗಿದೆ. ಒಂದು ಬೃಹದಾಕಾರದ ಎಲ್ ಇಡಿ ಟಿವಿ, ಕಂಪ್ಯೂಟರ್ ಅಳವಡಿಕೆ ಸೇರಿದಂತೆ ಒಳ ಹಾಗೂ ಹೊರ ಗೋಡೆಗಳಿಗೆ ಗಣಿತ, ವಿಜ್ಞಾನ, ಖಗೋಳ ಶಾಸ್ತ್ರ, ಸಮಾಜಕ್ಕೆ ಸಂಬಂಧಿಸಿದ ಫಲಕಗಳು, ಫ್ರೀಡಂ ಫೈಟರ್ಸ್, ಸೈಂಟಿಸ್ಟಗಳ ಭಾವಚಿತ್ರ, ಕ್ಷಿಪಣಿ ತಂತ್ರಜ್ಞಾನ ಕುರಿತ ಮಾಹಿತಿ, ನಿಸರ್ಗ ಸಂಪತ್ತು, ಪ್ರಾಣಿ ಸಂಪತ್ತು, ನಾಡಿನ ಐತಿಹಾಸಿಕ ಸ್ಥಳಗಳು, ಸ್ಮಾರಕಗಳು, ಗಣಿತ, ಗ್ರಾಮೀಣ ಸೊಗಡು ಸೂಸುವ ಹಳ್ಳಿಗಳ ಚಿತ್ರಣ, ಜಲ ಸಂರಕ್ಷಣೆ ಮಾಹಿತಿ, ಆಹಾರ ಸರಪಳಿ, ದಿಕ್ಸೂಚಿ, ಸಾರಿಗೆ ಪ್ರಕಾರಗಳ ಮಾಹಿತಿ ಹೀಗೆ ಹತ್ತು ಹಲವಾರು ಮಾಹಿತಿ ನೀಡುವ ಪೇಂಟಿಂಗ್ ಫಲಕಗಳನ್ನು ಒಳಗೊಂಡಿದೆ. ಈ ಎಲ್ಲಾ ಮಾಹಿತಿಗಳು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯುವಂತೆ ಮಾಡಲಾಗಿದೆ.
ಪ್ರತಿಯೊಂದು ಗ್ರಾಮದಲ್ಲೂ ಗ್ರಾಮಸ್ಥರು ಶಾಲೆಗಳಿಗೆ ಈ ರೀತಿ ಸಹಕಾರ ನೀಡಿದರೆ ಖಂಡಿತ ಸರ್ಕಾರಿ ಶಾಲೆಗಳು ಮಕ್ಕಳು ಕಾಶಿ ಶಾಲೆಯ ಮಕ್ಕಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬೆಳೆಯುತ್ತಾರೆ. ಇಂಥ ಕಾರ್ಯ ಪ್ರತಿಯೊಂದು ಶಾಲೆಯಲ್ಲಿ ನಡೆದರೆ ನಮ್ಮ ಗ್ರಾಮೀಣ ಮಕ್ಕಳು ತಂತ್ರಜ್ಞಾನವನ್ನು ಬೆಳೆಸಿಕೊಂಡು ತಂತ್ರಜ್ಞಾನಗಳ ಮೂಲಕ ಶಿಕ್ಷಣ ಪಡೆದು ಇನ್ನಷ್ಟು ಉನ್ನತ ಸ್ಥಾನ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಶಿಕ್ಷಣ ಪ್ರೇಮಿಗಳ ಅಭಿಪ್ರಾಯ.
ಈ ಶಾಲೆಯ ಮುಖ್ಯೋಪಾಧ್ಯಾಯ ವೀರಭದ್ರಯ್ಯ ಹೊಸಮಠ ಅವರು ಮಾತನಾಡಿ, ಈ ಸ್ಮಾರ್ಟ್ ಕ್ಲಾಸ್ ಮಾಡಲು ಮೊದಲು ನಮ್ಮ ಶಾಲೆಯ ಶಿಕ್ಷಕರು 10ಸಾವಿರ ರೂಪಾಯಿ ಸಂಗ್ರಹ ಮಾಡಿ, ನಂತರ ಗ್ರಾಮದಲ್ಲಿರುವ ಸರಕಾರಿ ನೌಕರಿಗೆ ಮಾಡುವವರಿಂದ 10 ಸಾವಿರ ದೇಣಿಗೆ ಪಡೆದು, ಕೇವಲ ಗ್ರಾಮಸ್ಥರ ಸಹಕಾರದಿಂದ ಇದನ್ನು ನಿರ್ಮಿಸಿದ್ದೇವೆ. ಅತಿ ಶೀಘ್ರದಲ್ಲಿ ಇದನ್ನು ಉದ್ಘಾಟನೆ ಮಾಡಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುತ್ತೇವೆ ಎಂದು ತಿಳಿಸಿದರು.
ವರದಿ: ಮಲ್ಲಿಕಾರ್ಜುನ ಮೆದಿಕೇರಿ, ದೋಟಿಹಾಳ.