
ಲಾಕ್ ಡೌನ್ ನಡುವೆ ಅಕ್ರಮ ಮದ್ಯ ಮಾರಾಟ, 9 ಸನ್ನದುಗಳ ಅಮಾನತು ಆದೇಶ
Team Udayavani, Apr 12, 2020, 1:24 PM IST

ಕೊಪ್ಪಳ: ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಲಾಕ್ ಡೌನ್ ಇದ್ದರೂ ಅಕ್ರಮ ಮದ್ಯ ಮಾಡಿದ ಜಿಲ್ಲೆಯ 9 ಅಂಗಡಿಗಳ ಸನ್ನದು ಅಮಾನತು ಮಾಡಿ ಡಿಸಿ ಸುನೀಲ್ ಕುಮಾರ ಅವರು ಆದೇಶ ಮಾಡಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಹಲವು ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಲಾಕ್ ಡೌನ್ ಆದಾಗಿನಿಂದ ಈ ವರೆಗೂ ಜಿಲ್ಲೆಯ ಎಲ್ಲ ಬಾರ್ ಎಂಡ್ ರೆಸ್ಟೋರೆಂಟ್ ಸೇರಿದಂತೆ ಯಾವುದೇ ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡದಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು.
ಇದನ್ನು ಮೀರಿಯೂ ಕೆಲವು ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದ್ದು ಕಂಡುಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು 9 ಸನ್ನದು ಅಮಾನತು ಮಾಡಿದ್ದಾರೆ. ಅಲ್ಲದೆ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆಯೂ ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
