
ಜೋಗೇರ ಮಹಿಳೆಯರ ಬದುಕಿಗೆ ಕಷ್ಟ ತಂದ ಕೋವಿಡ್ ಲಾಕ್ ಡೌನ್
Team Udayavani, Apr 23, 2020, 1:44 PM IST

ಗಂಗಾವತಿ: ಕೋವಿಡ್-19 ಸೋಂಕಿನ ಕಾರಣ ಬಹಳಷ್ಟು ಜನರ ಜೀವನ ದುಸ್ಥರವಾಗಿದೆ. ದಿನಗೂಲಿ ಮಾಡಿ ಬದುಕುತ್ತಿದ್ದ ಜನರು ಈಗ ಅನ್ನ ಆಹಾರಕ್ಕೆ ಕಷ್ಟ ಪಡುತ್ತಿದ್ದಾರೆ. ಗೃಹ ಮನೆ ಬಳಕೆ ವಸ್ತುಗಳನ್ನು ಮಾರಿ ಬದುಕು ನಡೆಸುವ ಜೋಗೇರ ಮಹಿಳೆಯರ ಕುಟುಂಬಗಳೂ ಈಗ ಕಷ್ಟದಲ್ಲಿವೆ.
ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಂಕುಮ, ಬಾಚಣಿಕೆ,ಬಳೆ, ರಿಬ್ಬನ್, ಹೆಣ್ಣು ಮಕ್ಕಳು ಬಳಕೆ ಮಾಡುವ ಸಾಮಾಗ್ರಿಗಳನ್ನು ಮಾರಾಟ ಮಾಡಿ ಬದುಕು ನಡೆಸಿ ಕುಟುಂಬ ಸಲಹುವ ಜೋಗೇರ ಮಹಿಳೆಯರು ಕೋವಿಡ್-19 ವೈರಸ್ ಲಾಕ್ ಡೌನ್ ಕಾರಣಕ್ಕಾಗಿ ಮನೆಯಿಂದ ಹೊರ ಬರಲಾಗದೇ ಬದುಕು ನಡೆಸುವುದು ಕಷ್ಟವಾಗಿದೆ.
ಗುರುವಾರ ರಾಜ್ಯದ ಕೆಲವೆಡೆ ಲಾಕ್ ಡೌನ್ ಕೊಂಚ ಕಡಿಮೆಯಾಗಿದ್ದರಿಂದ ಜೋಗೇರ ಮಹಿಳೆಯರು ಸಾಮಾನು ಹೊತ್ತು ವಾರ್ಡ್ ಗಳಲ್ಲಿ ಸಂಚಾರ ಮಾಡಿದರು. ತಮ್ಮ ಸಾಮಾಗ್ರಿಗಳನ್ನು ಮಾರಾಟ ಮಾಡಲು ಭೌತಿಕ ಅಂತರ ಕಾಪಾಡಿಕೊಂಡು ವ್ಯವಹಾರ ನಡೆಸುತ್ತಿರುವುದು ಕಂಡು ಬಂತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

NDA ಗೆ ಜೆಡಿಎಸ್ ಪಕ್ಷವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಶಾ, ನಡ್ಡಾ

Gokarna; ಸೆ. 26,27,28 ರಂದು ಪ್ರಧಾನಿ ಮೋದಿ ಹೆಸರಲ್ಲಿ ಮಹಾರುದ್ರಯಾಗ

Explainer:ಕ್ಷೇತ್ರ ಪುನರ್ ವಿಂಗಡಣೆಯಾದ್ರೆ ತಮಿಳುನಾಡು 8, ಕೇರಳಕ್ಕೆ 8ಲೋಕಸಭಾ ಸ್ಥಾನ ನಷ್ಟ

J&K; ಗೃಹಬಂಧನದಿಂದ ಬಿಡುಗಡೆ: ಕಣ್ಣೀರಿಟ್ಟ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್