Koppala: ಗಣೇಶ ಹಬ್ಬ ಆಚರಣೆ ಹಿನ್ನೆಲೆ: ಗಂಗಾವತಿಯಲ್ಲಿ ಮೂವರು ರೌಡಿಗಳ ಗಡಿಪಾರು
Team Udayavani, Sep 5, 2024, 9:18 AM IST
ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮೂವರು ರೌಡಿಶೀಟರ್ ಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ಗಡಿಪಾರು ಮಾಡಿ ಎಸಿ ಆದೇಶ ಹೊರಡಿಸಿದ್ದಾರೆ.
ಗಂಗಾವತಿ ನಗರದಲ್ಲಿ ಸೆ.07 ರಿಂದ ಗೌರಿ ಗಣೇಶ ಹಬ್ಬ ಹಾಗೂ ಸೆ. 16 ರಂದು ಈದ್ ಮಿಲಾದ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಗಂಗಾವತಿ ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿವೆ. ಗಂಗಾವತಿ ನಗರವು ಮತೀಯವಾಗಿ ಸೂಕ್ಷ್ಮ ನಗರವಾಗಿದೆ. ಸಣ್ಣ – ಪುಟ್ಟ ಗಲಾಟೆ ದೊಡ್ಡದಾಗಿ ಕೋಮು ಗಲಭೆ ಸ್ವರೂಪ ಪಡೆಯುವ ಸಾಧ್ಯತೆ ಇರುತ್ತವೆ. ಈ ಹಿನ್ನೆಲೆಯಲ್ಲಿ ಗಂಗಾವತಿ ನಗರ ಪೊಲೀಸ್ ಠಾಣೆ ರೌಡಿಗಳಾದ ಸಚಿನ ನಿಂಬಲಗುಂದಿ, ಸಂದೀಪ ತಂದೆ ಸಂಜೀವಪ್ಪ, ಅರ್ಬಜ್ ಖಾನ್ ತಂದೆ ಸರ್ದಾರಖಾನ್ ಇವರು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹಾಗೂ ಸಮಾಜ ಘಾತುಕ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಂಡು, ಕೃತ್ಯವೆಸಗುವ ಸಾಧ್ಯತೆ ಇರುತ್ತದೆ. ಗಣೇಶ ಹಬ್ಬದ ಮೆರವಣಿಗೆಯಲ್ಲಿ ಗುಂಪು ಕಟ್ಟಿಕೊಂಡು ಗಲಾಟೆ ಮಾಡುವ ಸಾಧ್ಯತೆ ಇರುತ್ತದೆ. ಈ ರೌಡಿಗಳ ಚಟುವಟಿಕೆ ನಿಯಂತ್ರಸಲು ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಈ ಮೂವರನ್ನು ಗಡಿಪಾರು ಮಾಡಬೇಕಾದ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಕಲಂ 54, 55 ಕರ್ನಾಟಕ ಪೊಲೀಸ್ ಕಾಯ್ದೆ 1963 ರಡಿ ಕೊಪ್ಪಳ ಎಸಿ ಅವರು ಸೆ.04 ರಿಂದ ಸೆ. 30ರ ವರೆಗೂ ಕೊಪ್ಪಳ ಜಿಲ್ಲೆಯಿಂದ ಕ್ರಮವಾಗಿ ಬೀದರ್ ಜಿಲ್ಲೆ, ಚಾಮರಾಜನಗರ ಜಿಲ್ಲೆ ಹಾಗೂ ಕೋಲಾರ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಮಾಡಿದ್ದಾರೆ.
ಇದನ್ನೂ ಓದಿ: Arrested: ಶಿವಾಜಿ ಪ್ರತಿಮೆ ಕುಸಿತ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿ ಜಯದೀಪ್ ಆಪ್ಟೆ ಬಂಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ
BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ
Valmiki Corporation Scam ಯತ್ನಾಳ್, ಜಾರಕಿಹೊಳಿ ನೇತೃತ್ವದ ತಂಡ ರಾಜಭವನಕ್ಕೆ
CM ಗಾದಿ ಆಕಾಂಕ್ಷಿಗಳ ಜತೆಗೆ ಸಿದ್ದರಾಮಯ್ಯ ಉಪಾಹಾರ ಕೂಟ
Nagamangala Riots: ಗಲಭೆ ಪೂರ್ವಯೋಜಿತ ಕೃತ್ಯ, ಗುಪ್ತಚರ ಇಲಾಖೆ ವೈಫಲ್ಯ ಸ್ಪಷ್ಟ: ಎಚ್‌ಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.