ಕುಷ್ಟಗಿ: ಫಿನಿಕ್ಸ್ ಚಲನಚಿತ್ರ; ಪೋಸ್ಟರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದ ಶಾಸಕ ಅಮರೇಗೌಡ ಪಾಟೀಲ


Team Udayavani, Nov 27, 2022, 2:35 PM IST

15

ಕುಷ್ಟಗಿ: ಅತ್ಯಂತ ಕಡಿಮೆ ಬಜೆಟ್, ಸಂಪೂರ್ಣ ಗ್ರಾಮೀಣ, ಕಾಡು ಪ್ರದೇಶ ಹಾಗೂ ದೈವಾರಾಧನೆ ಹಿನ್ನೆಲೆಯುಳ್ಳ ಕಾಂತಾರ ಸಿನಿಮಾ ಯಶಸ್ವಿಯಾದಂತೆ ಈ ಭಾಗದ ಯುವ ಪ್ರತಿಭೆಗಳು ಅಭಿನಯಿಸಿದ ಫಿನಿಕ್ಸ್ ಚಿತ್ರವೂ ಕೂಡ ಯಶಸ್ವಿಯಾಗಲಿ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹಾರೈಸಿದರು.

ಇಲ್ಲಿನ ಬಸವ ಭವನದಲ್ಲಿ ಶ್ರೀ ವೆಂಕಟೇಶ್ವರ ಸಿನಿ ಕ್ರಿಯೇಷನ್ಸ್ ಅರ್ಪಿಸುವ ಫಿನಿಕ್ಸ್ ಚಲನಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.

ಈ ಫಿನಿಕ್ಸ್ ಸಿನಿಮಾ ಮುಕ್ಕಾಲು ಭಾಗ ನಿರ್ಮಾಣಗೊಂಡಿದ್ದು, ಈ ಚಿತ್ರದ ತಾರಬಳಗದ ಪ್ರಮುಖ ನಟ ರಷೀದ್ ಮದ್ನಾಳ ಅಭಿನಯಿಸಿರುವುದು ಈ ಭಾಗಕ್ಕೆ ಅಚ್ಚರಿ ತರುವ ವಿಷಯವಾಗಿದೆ. ಈ ಯುವ ನಟನ ಸಾಹಸ ಮೆಚ್ಚುಗೆಯಾಗಿದೆ. ಸಿನಿಮಾ ನಿರ್ಮಾಣ ಈ ಭಾಗಕ್ಕೆ ಹೊಸತು, ಈ ಭಾಗದವರೇ ಅಭಿನಯಿಸಿರುವುದು ಎಂಬ ವಿಷಯ ಸಣ್ಣ ಮಾತಲ್ಲ ಎಂದರು.

ಬಳೂಟಗಿ ಗ್ರಾಮದ ಯುವ ಪ್ರತಿಭೆ ಈ ಸಿನಿಮಾದ ಮೂಲಕ ಮುನ್ನೆಲೆಗೆ ಬಂದಿರುವುದು ಈ ಭಾಗಕ್ಕೆ ಹೆಮ್ಮೆಯ ಸಂಗತಿ. ಸಿನಿಮಾ ಕ್ಷೇತ್ರದಲ್ಲಿ‌ ಎಷ್ಟೋ ನಿರ್ಮಾಪಕರು, ನಟರು ಕೈ ಸುಟ್ಟುಕೊಂಡಿದ್ದಾರೆ. ಎಷ್ಟೋ‌ ಚಿತ್ರಗಳು ಬಂದು ಕಾಣಲಾರದಂತೆ ಹೋಗಿವೆ. ಇಂದಿನದ್ದು ಇಂದೇ ಮರೆಯುವ ಈಗಿನ ಸಂದರ್ಭದಲ್ಲಿ ಸಮಾಜವನ್ನು ಸದೃಢಗೊಳಿಸುವ ಗ್ರಾಮೀಣ ಪ್ರದೇಶದ ಸೊಗಡು ಸಂಸ್ಕೃತಿ, ಸಂಸ್ಕಾರ ಹಿನ್ನೆಲೆಯ‌ ಸಿನಿಮಾ ಮಾಡಿದರೆ ಬಹಳಷ್ಟು ಜನ ನೋಡುತ್ತಾರೆ ಎನ್ನುವುದಕ್ಕೆ ಕಾಂತರ ಸಿನಿಮಾ ಆಗಿದ್ದು, ಅದರಂತೆ ಫಿನಿಕ್ಸ್ ಯಶಸ್ವಿಯಾಗಲಿ ಎಂದರು.

ಮದ್ದಾನೇಶ್ವರಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿದರು.

ಚಲನಚಿತ್ರ ನಟ ಪ್ರತಾಪ ರೆಡ್ಡಿ ಬೆಂಗಳೂರು, ಜಿ.ಪಂ. ಮಾಜಿ ಸದಸ್ಯ ಕೆ.ಮಹೇಶ ಮಾತನಾಡಿ, ಫೀನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರಲಿ. ಸಿನೆಮಾದಲ್ಲಿ ಈ ಭಾಗದ ಕಲಾವಿದರು ಅಭಿನಯಿಸಿರುವುದು ಹೆಮ್ಮೆಯ ವಿಷಯವಾಗಿದ್ದು, ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದರು.

ನಿರ್ದೇಶಕ ಹೊಸೂರು ವೆಂಕಟ್, ಕಾಂಗ್ರೆಸ್ ಪಕ್ಷದ ಯುವ ಮುಖಂಡ, ಬಿಜೆಪಿ ಯುವ ಮುಖಂಡ, ಲಾಡ್ಲೆ ಮಷಾಕ್ ದೋಟಿಹಾಳ ಮಾತನಾಡಿ, ಬಳೂಟಗಿ ಗ್ರಾಮದ ಯುವ ಪ್ರತಿಭೆ ರಷೀದ್ ರಾಜೇಸಾಬ್ ಮದ್ನಾಳ, ರಕ್ಷಿತ್ ಹೆಸರಿನಲ್ಲಿ ಚಲನಚಿತ್ರ ಅಭಿನಯ ರಂಗಕ್ಕೆ ಕಾಲಿರಿಸಿದ್ದು, ನಮ್ಮ ಭಾಗದ ಯುವ ಪ್ರತಿಭೆಗಳಿಗೆ ಯಸಸ್ವಿಯಾಗಲಿ ಎಂದರು.

ಮಹಿಬೂಬ್ ಬಡಿಗೇರ ಪ್ರಾಸ್ತಾವಿಕ ಮಾತನಾಡಿ, ಮಹೇಶ ಎಚ್. ನಿರೂಪಿಸಿದರು.

ಟಾಪ್ ನ್ಯೂಸ್

1-sad-sad-d

64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ

swamiji ticket

ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ

Dark-circle

ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…

Kharge (2)

ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ

bel defence

ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಮಹತ್ವದ ಒಪ್ಪಂದ

ON CAMERA: ಮನೆ ಮೇಲೆ ಬಿದ್ದ ಖಾಸಗಿ ಲಘು ವಿಮಾನ; ಇಬ್ಬರು ಮಕ್ಕಳು ಪವಾಡಸದೃಶ ಪಾರು!

ON CAMERA: ಮನೆ ಮೇಲೆ ಬಿದ್ದ ಖಾಸಗಿ ಲಘು ವಿಮಾನ; ಇಬ್ಬರು ಮಕ್ಕಳು ಪವಾಡಸದೃಶ ಪಾರು!

1-w-ewwqe

ಝಾಕಿರ್‌ ನಾಯ್ಕನ ವಿಚಾರ ಒಮಾನ್ ನೊಂದಿಗೆ ಹಂಚಿಕೊಂಡಿದ್ದೇವೆ :ಅರಿಂದಮ್ ಬಾಗ್ಚಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-apc

ಭಾರತೀಯ ಸಂಸ್ಕೃತಿಯ ಪರಂಪರೆ ಆದಿ-ಅನಂತ…: ರಾಜ್ಯಪಾಲ ಗೆಹ್ಲೋಟ್

1-qweqw

ಕುಷ್ಟಗಿ:ಭಕ್ತ ಜನಸಾಗರದ ಮಧ್ಯೆ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವ

2–gangavathi

ಮೂರು ತಾಸಿಗೂ ಹೆಚ್ಚು ಬೈಕ್ ನೊಳಗೆ ಹೊಕ್ಕ ಹಾವು; ಬೈಕ್ ಮಾಲೀಕರ ಪರದಾಟ

1-sada-das-d

ಮದರಸಾಗಳನ್ನು ಮುಚ್ಚಬೇಕೆನ್ನುವ ಅಸ್ಸಾಂ ಸಿಎಂ ಹೇಳಿಕೆ ಖಂಡಿಸಿದ ಗಾಲಿ ರೆಡ್ಡಿ

5–gangavathi

ಕೇಸರಟ್ಟಿ ಹಣವಾಳ ರಸ್ತೆ ದುರಸ್ಥಿಗೆ ಆಗ್ರಹಿಸಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

1-sad-sad-d

64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ

swamiji ticket

ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ

Dark-circle

ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…

Kharge (2)

ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ

bel defence

ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಮಹತ್ವದ ಒಪ್ಪಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.