
ಕುಷ್ಟಗಿ: ಸವದತ್ತಿಯ ವ್ಯಕ್ತಿ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆ
Team Udayavani, Nov 17, 2022, 9:17 PM IST

ಕುಷ್ಟಗಿ:ಸವದತ್ತಿ ತಾಲೂಕಿನಿಂದ ಅಂಬಾಮಠ ಕ್ಷೇತ್ರಕ್ಕೆ ಹೋಗಿದ್ದ ಭಕ್ತನೋರ್ವ ಕುಷ್ಟಗಿ ಬಸ್ ನಿಲ್ದಾಣದಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಜಬ್ಕಾಲ್ ಗ್ರಾಮದ ನಿವಾಸಿ 40 ವರ್ಷದ ಮಾರುತಿ ವಿಠ್ಠಪ್ಪ ಪೂಜಾರಿ ಎಂದು ಗೊತ್ತಾಗಿದೆ. ಮಾರುತಿ ಪೂಜಾರಿ, ಸಿಂಧನೂರು ತಾಲೂಕಿನ ಅಂಬಾಮಠ ಕ್ಷೇತ್ರಕ್ಕೆ ಹೋಗಿದ್ದ. ರಾತ್ರಿ ತಮ್ಮ ಸ್ವಗ್ರಾಮಕ್ಕೆ ವಾಪಸ್ಸಗಲು ಬಸ್ ನಿರೀಕ್ಷೆಯಲ್ಲಿ ಕುಷ್ಟಗಿ ಬಸ್ ನಿಲ್ದಾಣದಲ್ಲಿ ಪ್ರಯಣಿಕರ ಆಸನದಲ್ಲಿ ಮಲಗಿದ್ದ ಬೆಳಗಾದರೂ ಮೇಲೇಳದಿದ್ದಾಗ ಕೂಡಲೇ ಸ್ಥಳೀಯ ಪೊಲೀಸ ಠಾಣೆಗೆ ಮಾಹಿತಿ ನೀಡಿದರು.
ಆತನ ಜೇಬಿನಲ್ಲಿ ಆಧಾರ ಕಾರ್ಡ್ , ಮೊಬೈಲ್ ಸಂಖ್ಯೆಗಳನ್ನು ಆಧರಿಸಿ ಮಾಹಿತಿ ನೀಡಿದಾಗ, ಅವರ ಪತ್ನಿ, ಸಹೋದರರು ಆಗಮಿಸಿದ್ದಾರೆ. ಕುಷ್ಟಗಿ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅವರ ಕುಟುಂಬಕ್ಕೆ ಶವವನ್ನು ಹಸ್ತಾಂತರಿಸಲಾಯಿತು. ಪ್ರಕರಣ ಕುಷ್ಟಗಿ ಠಾಣೆಯಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಂಗಮರ ಕಲ್ಗುಡಿ ಚೆಕ್ ಪೋಸ್ಟ್ ಗೆ ಜಿ.ಪಂ. ಸಿಇಒ ಭೇಟಿ: ನಿರಂತರ ಪರಿಶೀಲನೆಗೆ ಸೂಚನೆ

ವಿರೋಧದ ಮಧ್ಯೆಯೂ ಪೈಪ್ ಹಾಕಿದ ಅಧಿಕಾರಿಗಳು; ಯುವಶಕ್ತಿ ಸಂಘದ ಹೋರಾಟಕ್ಕೆ ಜಯ

ಕೊಪ್ಪಳ: ಕೈ ಭದ್ರಕೋಟೆಯಾಗಿತ್ತು ಭತ್ತದ ನಾಡು ಗಂಗಾವತಿ

ಚುನಾವಣೆ ನೀತಿ ಸಂಹಿತೆ ಜಾರಿ ಸಂದರ್ಭದಲ್ಲಿ 4 ಲೀಟರ್ ಅಕ್ರಮ ಕಳ್ಳ ಭಟ್ಟಿ ಸರಾಯಿ ವಶ

ಗಂಗಾವತಿ: ಮಸೀದಿ ಸೇರಿ ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯ ಪ್ರಚಾರ; ಕೇಸ್ ದಾಖಲಿಸಲು ಸೂಚನೆ
MUST WATCH
ಹೊಸ ಸೇರ್ಪಡೆ

ಡೈರೆಕ್ಟರ್ ಜನರಲ್ ನೇವಲ್ ಆಪರೇಷನ್ಸ್ ಆಗಿ ಅತುಲ್ ಆನಂದ ಅಧಿಕಾರ ಸ್ವೀಕಾರ

ಕಲಬುರಗಿ ಗ್ರಾಮೀಣ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

ಬೈಂದೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಪ್ರಸ್ತಾಪ

ಜೈಲು ಶಿಕ್ಷೆ ವಿರುದ್ಧ ರಾಹುಲ್ ಗಾಂಧಿ ನಾಳೆ ಸೂರತ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ