
ಮಾವು ಮೇಳ: 1.50 ಕೋಟಿ ವಹಿವಾಟು
Team Udayavani, May 20, 2019, 3:48 PM IST

ಕೊಪ್ಪಳ: ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ 12 ದಿನಗಳ ಕಾಲ ನಡೆದ ಮಾವು ಮೇಳದಲ್ಲಿ ಬರೊಬ್ಬರಿ 160 ಟನ್‌ಗೂ ಅಧಿಕ ಹಣ್ಣು ಮಾರಾಟ ಮಾಡುವ ಮೂಲಕ 1.50 ಕೋಟಿ ರೂ. ವಹಿವಾಟು ನಡೆಸಿದೆ. ಸತತ 3ನೇ ವರ್ಷ ಮೇಳ ನಡೆಸಿ ಯಶಸ್ವಿಯಾಗಿ ಗ್ರಾಹಕ-ರೈತರ ನಡುವಿನ ಕೊಂಡಿಯಾಗಿ ಕೆಲಸ ಮಾಡಿ ಎಲ್ಲರ ಗಮನ ಸೆಳೆದಿದೆ.
ಸಮಾರೋಪ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಮಾವು ಮೇಳ, ವಹಿವಾಟು ಬಗ್ಗೆ ಮಾಹಿತಿ ಪಡೆದರು. ಮೇಳದಲ್ಲಿ ಸ್ಥಾಪಿಸಿದ ಸ್ಟಾಲ್ಗಳನ್ನು ಹಾಗೂ ವಿವಿಧ ತಳಿಗಳ ಮಾವುಗಳನ್ನು ವೀಕ್ಷಿಸಿದರು. ಜಿಲ್ಲೆಯಲ್ಲಿ ಮಾವು ಮೇಳ ಯಶಸ್ವಿಯಾಗಿ ನಡೆಸಿದ ಇಲಾಖೆ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತೋಟಗಾರಿಕೆ ಇಲಾಖೆಯು ಮೂರು ವರ್ಷದಿಂದ ಮೇಳ ಆಯೋಜನೆ ಮಾಡುತ್ತಿದೆ. ಆರಂಭದಲ್ಲಿ ಜಿಲ್ಲೆಯ ಜನರಿಗೆ ಮೇಳದ ಬಗ್ಗೆ ಪರಿಚಯ ಇರಲಿಲ್ಲ. ಮೇಳದಲ್ಲಿ ಗ್ರಾಹಕ ಹಾಗೂ ರೈತರ ನಡುವೆ ನೇರದಪ್ರತಿ ವರ್ಷದಂತೆ ಈ ವರ್ಷವೂ ಮಾವು ಮೇಳವನ್ನು ಮೇ 8ರಂದು ಆರಂಭಿಸಿತ್ತು. ಸತತ 12 ದಿನ ನಡೆದ ಮೇಳದಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಮೇ 16ಕ್ಕೆ ಮೇಳವನ್ನು ಸಮಾರೋಪಗೊಳಿಸುವ ಉದ್ದೇಶ ಹೊಂದಿದ್ದ ಇಲಾಖೆಯು ಜನರ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೆ ಮೂರು ದಿನಗಳ ಕಾಲ ಮೇಳವನ್ನು ವಿಸ್ತರಣೆ ಮಾಡಿತ್ತು.
ಟಾಪ್ ನ್ಯೂಸ್
