ಗೋಶಾಲೆಗಳ ನಿರ್ವಹಣೆಗೆ ಬೇಕಿದೆ ನೆರವು

ಟ್ರಸ್ಟ್‌ನಡಿ ಮುನ್ನಡೆದಿವೆ ನಾಲ್ಕು ಗೋ ಶಾಲೆ

Team Udayavani, Jan 11, 2021, 3:36 PM IST

Need assistance for maintenance

ಕೊಪ್ಪಳ: ಜಿಲ್ಲೆಯಲ್ಲಿ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನಾಲ್ಕು ಗೋ ಶಾಲೆಗಳು ಮುನ್ನಡೆಯುತ್ತಿದ್ದು, ಅವುಗಳ ನಿರ್ವಹಣೆಗೆ ಟ್ರಸ್ಟ್‌ಗಳು ಹರಸಾಹಸ ಪಡುವಂತಹ ಸ್ಥಿತಿ ಎದುರಾಗಿದೆ. ಗೋ ಶಾಲೆಗಳು ಸರ್ಕಾರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿವೆ. ಜಿಲ್ಲೆಯಲ್ಲಿ ಮಹಾವೀರ ಜೈನ ಗೋ ಶಾಲೆ, ಯಲಬುರ್ಗಾದ ಶ್ರೀ ಬಸವಲಿಂಗೇಶ್ವರ ಶ್ರೀಧರ ಮುರಡಿ ಹಿರೇಮಠ ಗೋಶಾಲೆ, ಕುಷ್ಟಗಿಯ ಜಯಮಾಲ ಜೈನ ಗೋ ಶಾಲೆ ಹಾಗೂ ಗಂಗಾವತಿ ತಾಲೂಕಿನ ಆನೆಗೊಂದಿಯ ದುರ್ಗಾಮಾತಾ ಗೋ ಶಾಲೆ ಟ್ರಸ್ಟ್‌ನಡಿ ಒಟ್ಟು 1625 ಗೋವುಗಳ ರಕ್ಷಣೆ ಮಾಡಿ ಸಾಕಾಣಿಕೆ ಮಾಡಲಾಗುತ್ತಿದೆ.

ಈ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪ್ರತಿವರ್ಷ ಗೋ ಶಾಲೆಯ ನಿರ್ವಹಣೆಗೆ ತಾವೇ ಹಣ ವಿನಿಯೋಗ ಮಾಡುತ್ತಿದ್ದಾರೆ. ನಿರ್ವಹಣೆಗೆ ಹೆಚ್ಚಿನ ಹೊರೆಯಾಗಿದ್ದರೂ ಟ್ರಸ್ಟ್‌ ಹಾಗೂ ಮಠಮಾನ್ಯಗಳು ದನಕರುಗಳ ಸಾಕಾಣಿಕೆ ಮುಂದುವರಿಸಿವೆ. ಪ್ರತಿ ಬೇಸಿಗೆ ವೇಳೆ ಗೋ ಶಾಲೆಗಳು ಮೇವಿಗೆ ತುಂಬ ತೊಂದರೆ ಎದುರಿಸುತ್ತವೆ. ಹಾಗಾಗಿ ಪೂರ್ವದಲ್ಲಿಯೇ ರೈತರಿಂದ ಮೇವಿನ ಗೂಡುಗಳನ್ನು ಖರೀದಿಸಿ ದನಗಳಿಗೆ ಸಂಗ್ರಹಣೆ ಮಾಡಿಟ್ಟುಕೊಳ್ಳುತ್ತಿವೆ. ಗೋವುಗಳ ನಿರ್ವಹಣೆಗೆ ಟ್ರಸ್ಟ್‌ ಹಾಗೂ ಮಠದ ಆಸ್ತಿಯು ವಿಶಾಲವಾಗಿವೆ.

ಕುಡಿಯಲು ನೀರಿನ ತೊಟ್ಟಿಯ ವ್ಯವಸ್ಥೆ ಸೇರಿದಂತೆ ಮೇವು ಕತ್ತರಿಸುವ ಯಂತ್ರವನ್ನೂ ಇಡಲಾಗಿದೆ. ಆದರೆ ನಿತ್ಯವು ಅವುಗಳಿಗೆ ಮೇವು ಹಾಕುವುದು, ಮಕ್ಕಳಂತೆ ಜೋಪಾನ ಮಾಡಬೇಕು. ಕೂಲಿ ಕಾರ್ಮಿಕರಿಂದ ನಿರ್ವಹಣೆ ಮಾಡಬೇಕಾಗಿದೆ.

ಇದನ್ನೂ ಓದಿ:ಗ್ರಾಮಗಳ ಸಮಗ್ರ ಅಭಿವೃದಿಗೆ ಶ್ರಮಿಸಿ: ಸಚಿವ ಪಾಟೀಲ

ತೀವ್ರ ಬರದಂತಹ ಸಂದರ್ಭದಲ್ಲಿ ಈ ಭಾಗದ ರೈತರು ಗೋವುಗಳನ್ನು ಕಸಾಯಿಖಾನೆಗೆ ಕೊಡಲು ಮನಸ್ಸು ಮಾಡದೇ ಇಂತಹ ಗೋ ಶಾಲೆಗಳಿಗೆ ಕೊಡುತ್ತಾರೆ. ಆದರೆ ಇಲ್ಲಿನ ಗೋ ಶಾಲೆಗಳು ಒಮ್ಮೆ ದನಗಳನ್ನು ಪಡೆದರೆ ಅವು ಗೋ ಶಾಲೆ ವಶವಾದಂತೆ, ಮಠಗಳಡಿ ನಡೆಯುವ ಗೋ ಶಾಲೆಗಳಿಂದ ಮಾತ್ರ ರೈತರಿಗೆ ಸಾಕಲು ದನಕರು ಕೊಡುವ ಪದ್ಧತಿ ಇದೆ. ಇನ್ನೂ ಸರ್ಕಾರವು ಈ ಹಿಂದೆಲ್ಲ ಗೋ ಶಾಲೆಗಳಲ್ಲಿ ಮೂಲಸೌಕರ್ಯಕ್ಕೆ ಅಂದಾಜು 10 ಲಕ್ಷ ರೂ. ನೆರವು ನೀಡುತ್ತಿತ್ತು. ಆದರೆ ಇತ್ತೀಚೆಗೆ ಗೋ ಶಾಲೆಗಳಿಗೆ ಅನುದಾನ ನೀಡುವುದು ಕಡಿಮೆಯಾಗಿದೆ. ನಮ್ಮಂತ ಗೋ ಶಾಲೆಗಳಿಗೆ ಸರ್ಕಾರ ನೆರವು ಹೆಚ್ಚು ನೀಡಿದರೆ ನಿರ್ವಹಣೆಗೆ ನೆರವಾಗುತ್ತದೆ. ಇಲ್ಲಿನ ನಿರ್ವಹಣೆಯನ್ನು ನೋಡುವ ರೈತರು ಸಹ ತಮ್ಮ ರಾಸುಗಳನ್ನು ಕಸಾಯಿಖಾನೆಗೆ ಕೊಡದೇ ಇಲ್ಲಿಯೇ ಬಂದು ಬಿಟ್ಟು ಹೋಗುತ್ತಾರೆ ಎಂದೆನ್ನುವ ಮಾತುಗಳು ಗೋ ಶಾಲೆ ನಿರ್ವಹಣೆ ಮಾಡುವವರಿಂದ ಕೇಳಿ ಬಂದಿದೆ.

ದತ್ತು ಕಮ್ಮಾರ

ಟಾಪ್ ನ್ಯೂಸ್

ವರದಕ್ಷಿಣೆ ಕಿರುಕುಳ: ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ-ಪತಿ ಅಪರಾಧಿ: ಕೇರಳ ಕೋರ್ಟ್

ವರದಕ್ಷಿಣೆ ಕಿರುಕುಳ: ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ-ಪತಿ ಅಪರಾಧಿ: ಕೇರಳ ಕೋರ್ಟ್

1-gfgdgdfg

ಶಿವಮೊಗ್ಗ: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

1-dfdfdsf

ಉಕ್ರೇನ್ ನಲ್ಲಿ ರಷ್ಯಾದ ಟ್ಯಾಂಕ್ ಕಮಾಂಡರ್‌ಗೆ ಜೀವಾವಧಿ ಶಿಕ್ಷೆ

ಜಮ್ಮು-ಕಾಶ್ಮೀರ: ಮೂವರು ಲಷ್ಕರ್ ಭಯೋತ್ಪಾದಕರ ಬಂಧನ, ಶಸ್ತ್ರಾಸ್ತ್ರ, ಸ್ಫೋಟಕ ವಶ

ಜಮ್ಮು-ಕಾಶ್ಮೀರ: ಮೂವರು ಲಷ್ಕರ್ ಭಯೋತ್ಪಾದಕರ ಬಂಧನ, ಶಸ್ತ್ರಾಸ್ತ್ರ, ಸ್ಫೋಟಕ ವಶ

ಉಡುಪಿ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಶಾಂತವೀರ್ ಶಿವಪ್ಪ ಅಧಿಕಾರ ಸ್ವೀಕಾರ

ಉಡುಪಿ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಶಾಂತವೀರ್ ಶಿವಪ್ಪ ಅಧಿಕಾರ ಸ್ವೀಕಾರ

ಐಪಿಎಲ್ ಪ್ಲೇ ಆಫ್ ಗೆ ವರುಣನ ಕಾಟ; ಗಾಳಿಗೆ ಹಾರಿ ಹೋಯ್ತು ಈಡನ್ ಗಾರ್ಡನ್ ನ ಹೊದಿಕೆ!

ಐಪಿಎಲ್ ಪ್ಲೇ ಆಫ್ ಗೆ ವರುಣನ ಕಾಟ; ಗಾಳಿಗೆ ಹಾರಿ ಹೋಯ್ತು ಈಡನ್ ಗಾರ್ಡನ್ ನ ಹೊದಿಕೆ!

siddanna

ಮೇಕೆದಾಟು ಪಾದಯಾತ್ರೆ : ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಸಮನ್ಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

ಶಿಕ್ಷಣದಿಂದ ಬದಲಾವಣೆ ಸಾಧ್ಯ: ಪರಶುರಾಮ

11

ನಾಯಕತ್ವ ಗುಣ ಬೆಳೆಸುತ್ತೆ ಕ್ರೀಡೆ: ಸಂಸದ ಕರಡಿ

10

ತಡೆಗೋಡೆಗೆ ಹಾನಿ, ಬ್ಯಾರೇಜ್‌ಗೆ ಅಪಾಯ!

5

ಯುಜಿಡಿ ಪೈಪ್ ಲೈನ್ ಗೆ ಖಾಸಗಿ ಲೇಔಟ್ ನ ಪೈಪ್ ಲೈನ್ ಜೋಡಣೆ : ಅಧಿಕಾರಿಗಳಿಂದ ತಡೆ

1–rwerewr

ಕುಷ್ಟಗಿ: ಎಂಎಸ್ ಐಎಲ್ ಮದ್ಯ ಮಳಿಗೆಯಲ್ಲಿ ಸಿಸಿ ಕ್ಯಾಮರಾ ಸಹಿತ ಕಳ್ಳತನ

MUST WATCH

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

ಹೊಸ ಸೇರ್ಪಡೆ

ಬಿಎಂಸಿ ಕೇಂದ್ರದ ಹಾಲು ಅಕ್ರಮ ಸಾಗಾಟ: ಗ್ರಾಮಸ್ಥರ ದಾಳಿ

ಬಿಎಂಸಿ ಕೇಂದ್ರದ ಹಾಲು ಅಕ್ರಮ ಸಾಗಾಟ: ಗ್ರಾಮಸ್ಥರ ದಾಳಿ

rain-damage-2

ಭಾರೀ ಮಳೆಗೆ ನೆಲ ಕಚ್ಚಿದ ಬೆಳೆ-ಜನರಿಗೆ ಆತಂಕ

19

ಗ್ರಾಪಂ ಉಪ ಚುನಾವಣೆ ಫಲಿತಾಂಶ ಪ್ರಕಟ

ಚುಂಚನಕಟ್ಟೆ ಸಕ್ಕರೆ ಕಾರ್ಖಾನೆ ಗುತ್ತಿಗೆಗೆ ಅನುಮೋದನೆ

ಚುಂಚನಕಟ್ಟೆ ಸಕ್ಕರೆ ಕಾರ್ಖಾನೆ ಗುತ್ತಿಗೆಗೆ ಅನುಮೋದನೆ

ವರದಕ್ಷಿಣೆ ಕಿರುಕುಳ: ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ-ಪತಿ ಅಪರಾಧಿ: ಕೇರಳ ಕೋರ್ಟ್

ವರದಕ್ಷಿಣೆ ಕಿರುಕುಳ: ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ-ಪತಿ ಅಪರಾಧಿ: ಕೇರಳ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.